ಬೇಡುವ ಭಕ್ತರ ಆರೋಗ್ಯದೇವ ಜಾಯವಾಡಗಿ ಶಿವಪ್ಪ ಮುತ್ಯಾ
Team Udayavani, Mar 17, 2018, 3:59 PM IST
ಹೂವಿನಹಿಪ್ಪರಗಿ: ಪಟ್ಟಣದಿಂದ 5 ಕಿ.ಮೀ. ಅಂತರದಲ್ಲಿರುವ ಜಾಯವಾಡಗಿ ಶಿವಶರಣ ಶಿವಪ್ಪ ಮುತ್ಯಾನ ಐಕ್ಯ ತಾಣ ವಿಜಯಪುರ ಜಿಲ್ಲೆಯಲ್ಲಿಯೇ ಐಕ್ಯ ತಾಣವಾಗಿದೆ. ಸೋಮನಾಥ ಮತ್ತು ಶಿವಪ್ಪ ಮುತ್ಯಾನ ಕಟ್ಟಿಯ ಜಾತ್ರಾ ಮಹೋತ್ಸವವು ಮಾ. 17ರಿಂದ ಆರು ದಿನಗಳ ಕಾಲ ಅತಿ ವಿಜೃಂಭಣೆಯಿಂದ ಜರುಗುವುದು. ಯುಗಾದಿ ಪಾಡ್ಯ ಮಾ.18 ರಂದು ರಥೋತ್ಸವ ನಡೆಯುವುದು.
ಹಿನ್ನೆಲೆ: ಜಾಯವಾಡಗಿ ಗ್ರಾಮದಲ್ಲಿ ಸುಮಾರು 157 ವರ್ಷಗಳ ಹಿಂದೆ ಇಲ್ಲಿ ಕಾಲಗರ್ಭದಲ್ಲಿ ಹೂತು ಹೋದ ಶಿವಪ್ಪ ಮುತ್ಯಾನ ಚೇತನದ ಆಗೋಚರ ದೈವಿಶಕ್ತಿ ಜಾಯವಾಡಗಿ ಗ್ರಾಮದಲ್ಲಿ ಮತ್ತೆ ಚೇತನಗೊಂಡು ಭಾವಿಕರ ಆಶೋತ್ತರಗಳನ್ನು ನೀಗಿಸುವ ಪುಣ್ಯಕ್ಷೇತ್ರವಾಗಿದೆ.
ಶಿವಪ್ಪ ಮುತ್ಯಾನ ಐಕ್ಯತಾಣದಲ್ಲಿ ಯಾವದೋ ಆಗೋಚರ ದೈವಿಶಕ್ತಿ ಇರಬೇಕು. ಈಗ ಗುರು ಶಿಷ್ಯರು ಲಿಂಗೈಕ್ಯರಾಗಿದ್ದು,
ಇವರ ಭಕ್ತರು ಇಬ್ಬರಿಗೂ ತಲಾ ಒಂದು ದೇವಾಲಯಗಳನ್ನು ನಿರ್ಮಿಸಿ ಸ್ಮರಣೆ ಮಾಡುತ್ತಿದ್ದಾರೆ. ಯಾಕೆಂದರೆ ಲಕ್ಷಗಟ್ಟಲೇ ಜನ, ಜಾನುವಾರುಗಳು ಪ್ರತಿ ಅಮಾವ್ಯಾಸೆಗೊಮ್ಮೆ ಬಂದು ತಮಗಾದ ನೋವಿನ ತೊಂದರೆಯನ್ನು ಶಿವಪ್ಪ ಮುತ್ಯಾನ ಕಟ್ಟೆಗೆ ಸುತ್ತು ಹಾಕಿ ನಿವಾರಣೆ ಹೊಂದುವ ವೈಚಿತ್ರಯಮಯವಾದ ಭಕ್ತಿ ಭಾವನೆ ಕಾಣಬಹುದು. ಈ ಒಂದು ಜನ, ಜಾನುವಾರುಗಳು ತೊಂದರೆ ನೀಗಬೇಕಾದರೆ ಸಾಮಾನ್ಯ ಮಾತಲ್ಲ. ಹೀಗಾಗಿ ಜಾಗೃತೆಯ ತಾಣವಾಗಿ ಜನ, ಜಾನುವಾರು ಸಂಕಷ್ಟಗಳನ್ನು ನಿವಾರಣೆಗೊಳಿಸುವ ಪುಣ್ಯ ತಾಣವಾಗಿದೆ.
ಮುತ್ಯಾನ ತಪೋಬಲದಿಂದ ಅವನ ಅಂತರವಾಣಿ, ಅಂತರಜ್ಞಾನ ಅಥವಾ ಅಂತರಸ್ಪೂರ್ತಿ ಜನ-ಮನ ಆಕರ್ಷಿಸಿ ಅವರಿಗಾದ ತೊಂದರೆ ಮತ್ತು ಯಾತನೆಯ ನೀಗುವ ದೈವಿಶಕ್ತಿ.
ಶಿವಪ್ಪ ಮುತ್ಯಾ ಪಡೆದುಕೊಂಡಿದ್ದರಿಂದಲೇ ಜನ ಶರಣರಲ್ಲಿ ವಿಶ್ವಾಸವಿಟ್ಟು ಭಕ್ತಿ, ಭಾವದಿಂದ ಬೇಡಿಕೊಂಡು ಗ್ರಾಮದ ಸುತ್ತಮುತ್ತಲಿನ ರೈತರ ದನಕರುಗಳಿಗೆ ಯಾವುದಾದರೂ ರೋಗ ಬಂದರೆ ರೈತರು ಅವುಗಳನ್ನು ಮುತ್ಯಾನ ದೇವಾಲಯಕ್ಕೆ ತಂದು ತುಪ್ಪ ಎರೆದು ಹೋಗುತ್ತಾರೆ. ಇದರಿಂದ ಪ್ರಾಣಿಗಳಿಗೆ ಬಂದ ರೋಗವು ಶೀಘ್ರ ವಾಸಿಯಾಗುತ್ತದೆ. ಇದು ಇಲ್ಲಿನ ವೈಶಿಷ್ಟಕ್ಕೆ ಉದಾಹರಣೆ.
ಇದಕ್ಕಾಗಿ ಕ್ಷೇತ್ರಕ್ಕೆ ದೂರದ ಊರುಗಳಿಂದ ಭಕ್ತರು ದಂಡು ದಂಡಾಗಿ ಬಂದು ಹುಣ್ಣು ಗಡ್ಡೆ, ಗರಸುಗಳ ಯಾತನೆಯಿಂದ ನಿವಾರಣೆ ಹೊಂದುತ್ತಾರೆ. ಆ ಒಂದು ದೈವಿಶಕ್ತಿ ಸಹಜ ಪಡೆದಿದ್ದನೆಂಬುವುದಕ್ಕೆ ಅಲ್ಲಿ ನೆರೆಯುವ ಜನಸ್ತೋಮವೇ ಸಾಕ್ಷಿಯಾಯಾಗಿದೆ.
ಭಾವೈಕ್ಯ ಪ್ರತೀಕ: ಗುರು ಶಿಷ್ಯರ ಸಮ್ಮಿಲನವಾದ ಸುಕ್ಷೇತ್ರ ಜಾಯವಾಡಗಿ ಸಮಾನತೆ ಹಾಗೂ ಭಾವೈಕ್ಯತೆ ಪ್ರತೀಕವಾಗಿದೆ. ಈ ದೇವಾಲಯಗಳು ಕೇವಲ ಹಿಂದೂಗಳಿಗೆ ಸೀಮಿತವಾಗಿಲ್ಲ.
ಮುಸ್ಲಿಮರೂ ಭೇಟಿ ನೀಡಿ ದೇವಾಲಯಕ್ಕೆ ತುಪ್ಪ ನೀಡುತ್ತಾರೆ. ತಮ್ಮ ಕುಟುಂಬ ಸದಸ್ಯರಿಗೆ ಅನಾರೋಗ್ಯ ಕಾಡುತ್ತಿದ್ದರೆ (ದೇಹದಲ್ಲಿ ಗಡ್ಡೆ, ಕಿವಿ ಸೋರುವಿಕೆ ಸೇರಿದಂತೆ ಇನ್ನೀತರ ಅನಾರೋಗ್ಯ) ದೇವಾಲಯದಲ್ಲಿ ಸಿಗುವ ತುಪ್ಪವನ್ನು ತೆಗೆದುಕೊಂಡು ಹೋಗಿ ಗಾಯದ ಮೇಲೆ ಲೇಪನ ಮಾಡುತ್ತಾರೆ. ನಿಷ್ಠೆಯಿಂದ ಗುರು ಶಿಷ್ಯರಿಗೆ ಹರಕೆ ಇಡುತ್ತಾರೆ. ಇದರಿಂದ ತಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕುತ್ತದೆ ಎಂಬ ಪ್ರತೀತಿಯಿದೆ.
ಜಾತ್ರೆಯಲ್ಲಿ ಏನೇನು: ರಾಜ್ಯದ ಹಾಗೂ ಹೊರ ರಾಜ್ಯದಿಂದ ಲಕ್ಷಗಟ್ಟಲೇ ಭಕ್ತರು ಜಾತ್ರೆಗೆ ಆಗಮಿಸುವರು. ಜಾತ್ರಾ ನಿಮಿತ್ತ ನಾಟಕ, ಕೃಷ್ಣ ಪಾರಿಜಾತ, ಜಾನುವಾರುಗಳ ಪ್ರದರ್ಶನ. ಯುಗಾದಿ ದಿನದಂದು ರಥೋತ್ಸವ, ದನಗಳ ಜಾತ್ರೆ, ಭಾರವಾದು ಗುಂಡು , ಸಂಗ್ರಾಣಿ ಕಲ್ಲು, ಭಾರವಾದ ಚೀಲ ಎತ್ತುವ ಶಕ್ತಿ ಪ್ರದರ್ಶನ, ಜಂಗೀ ಕುಸ್ತಿಗಳು ಸೇರಿದಂತೆ ಭಕ್ತಿ ಭಾವದ ಸಲೀಲ ಸಂಗಮವಾಗಿ ಹಲವಾರು ರಚನ್ಮಾತಕ ಕಾರ್ಯಕ್ರಮ ಈ ತಾಣದಲ್ಲಿ ನಡೆಯುತ್ತವೆ. ಇಂದು ಈ ಭಕ್ತಿ ಭಾವನಳಿಸುವ ಈ ವಿಜ್ಞಾನ ಯುಗದಲ್ಲಿ ಭಕ್ತಿ ಭಾಗದ ಕೃಷಿ ತಾಣದಲ್ಲಿ ನಡೆಯಬೇಕಾದರೆ ಶಿವಪ್ಪ ಮುತ್ಯಾನ ಆತ್ಮ ಒಲುಮೆಯ ವೈಚಿತ್ರಮಯವಾದ ದೈವಿಶಕ್ತಿಯಾಗಿದೆ.
ಗುರುರಾಜ ಕನ್ನೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Vijayapura: ವಕ್ಫ್ ವಿರುದ್ಧ ಹಲವು ಮಠಾಧೀಶರ ನೇತೃತ್ವದಲ್ಲಿ ಹೋರಾಟ
Waqf Issue: ಲ್ಯಾಂಡ್ ಟೆರರಿಸಂ, ಲ್ಯಾಂಡ್ ಜಿಹಾದ್ ನಿಂದ ಬಚಾವಾಗಬೇಕು: ಶೋಭಾ ಕರಂದ್ಲಾಜೆ
Waqf Property: ಬೊಮ್ಮಾಯಿ ಕಾಲದಲ್ಲೂ ವಕ್ಫ್ ಆಸ್ತಿ ತೆರವಿಗೆ ಹೇಳಿದ್ರು: ಸಚಿವ ಜಮೀರ್
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.