ನಿಶ್ವಿಕಾ ಬಿಝಿ ಹುಡುಗಿ
Team Udayavani, Mar 18, 2018, 7:30 AM IST
ಕನ್ನಡದ ನಾಯಕಿ ನಟಿಯರಿಗೆ ಅವಕಾಶ ಸಿಗೋದು ಕಡಿಮೆ ಎಂಬ ಮಾತು ಆಗಾಗ ಕೇಳಿಬರುತ್ತಲೇ ಇರುತ್ತವೆ. ಅದಕ್ಕೆ ಸರಿಯಾಗಿ ಕೆಲವೊಮ್ಮೆ ಒಂದು ಸಿನೆಮಾ ಒಪ್ಪಿಕೊಂಡ ನಟಿಯರು ಮತ್ತೆ ಕಾಣಸಿಗೋದೇ ಇಲ್ಲ. ಆದರೆ, ನಿಶ್ವಿಕಾ ನಾಯ್ಡು ಮಾತ್ರ ಆ ವಿಚಾರದಲ್ಲಿ ಅದೃಷ್ಟವಂತೆ. ಮೊದಲ ಸಿನೆಮಾ ರಿಲೀಸ್ ಆಗುವ ಮುನ್ನವೇ ಮತ್ತೆರಡು ಸಿನೆಮಾಗಳನ್ನು ಒಪ್ಪಿಕೊಂಡಿದ್ದಾರೆ. ಒಟ್ಟು ಮೂರು ಸಿನೆಮಾಗಳನ್ನು ಕೈಯಲ್ಲಿಟ್ಟುಕೊಂಡಿರುವ ನಿಶ್ವಿಕಾ ಈಗ ಯಾವ ಸಿನೆಮಾ ತನಗೆ ಬ್ರೇಕ್ ಕೊಡುತ್ತದೆ ಎಂದು ಕುತೂಹಲದೊಂದಿಗೆ ಎದುರು ನೋಡುತ್ತಿದ್ದಾರೆ. ನಿಶ್ವಿಕಾ ಪಕ್ಕಾ ಕನ್ನಡದ ಹುಡುಗಿ. ಅನೀಶ್ ತೇಜೇಶ್ವರ್ ನಾಯಕರಾಗಿರುವ ವಾಸು ಪಕ್ಕಾ ಲೋಕಲ್ ಎಂಬ ಸಿನೆಮಾಕ್ಕೆ ನಾಯಕಿಯಾಗುವ ಮೂಲಕ ನಿಶ್ವಿಕಾ ಹೆಸರು ಚಾಲ್ತಿಗೆ ಬಂತು. ಆ ಸಿನೆಮಾ ಬಿಡುಗಡೆಯಾಗುವ ಮುನ್ನ ನಿಶ್ವಿಕಾಗೆ ಸಿಕ್ಕಿದ್ದು ಅಮ್ಮಾ ಐ ಲವ್ ಯೂ. ಚಿರಂಜೀವಿ ಸರ್ಜಾ ನಾಯಕರಾಗಿರುವ ಈ ಚಿತ್ರದ ಚಿತ್ರೀಕರಣ ಕೂಡಾ ಮುಗಿದು ಹೋಗಿದೆ. ಈಗ ನಿಶ್ವಿಕಾ ಪಡ್ಡೆಹುಲಿ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಾಯಕರಾಗಿರುವ ಈ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ.
ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕೋರ್ಸ್ ಮುಗಿಸಿದ ಕೂಡಲೇ ನಿಶ್ವಿಕಾ ಮುಖಮಾಡಿ ದ್ದು ಮುಂಬೈನತ್ತ. ಅದು ನಟನಾ ತರಬೇತಿಗೆ. ಮುಂಬೈನಲ್ಲಿ ಒಂದು ವರ್ಷ ಆ್ಯಕ್ಟಿಂಗ್ ಕೋರ್ಸ್ ಕೂಡಾ ಮಾಡಿದ್ದಾರಂತೆ ನಿಶ್ವಿಕಾ. ಚಿತ್ರರಂಗಕ್ಕೇ ಬರಬೇಕೆಂಬ ಆಸೆಯಿಂದ ಇದ್ದ ನಿಶ್ವಿಕಾಗೆ ಈಗ ಕೈ ತುಂಬಾ ಸಿನೆಮಾ ಸಿಕ್ಕಿರೋದು ಖುಷಿ ತಂದಿದೆ. ಎಲ್ಲಾ ಓಕೆ, ಒಂದು ಸಿನೆಮಾನೂ ಬಿಡುಗಡೆ ಯಾಗುವ ಮುನ್ನ ಸಿನೆಮಾ ಮೇಲೆ ಸಿನೆಮಾ ಒಪ್ಪಿಕೊಳ್ಳಲು ಕಾರಣವೇನು ಎಂದು ನೀವು ಕೇಳಬಹುದು. “”ನಾನು ಒಪ್ಪಿಕೊಂಡಿರುವ ಮೂರು ಚಿತ್ರಗಳಲ್ಲೂ ನನ್ನ ಪಾತ್ರ ವಿಭಿನ್ನವಾಗಿದೆ. ವಾಸು ಸಿನೆಮಾದಲ್ಲಿ ನಾನು ಮೆಡಿಕಲ್ ಸ್ಟೂಡೆಂಟ್. ಬೋಲ್ಡ್ ಅಂಡ್ ಬಬ್ಲಿ ಪಾತ್ರ. ಇನ್ನು ಅಮ್ಮಾ ಐ ಲವ್ ಯೂ ಸಿನೆಮಾದಲ್ಲಿ ತುಂಬಾ ಸೆಟಲ್ಡ್ ಆಗಿರುವ ಪಾತ್ರ. ಯಾರ ಕೈಕೆಳಗೂ ಕೆಲಸ ಮಾಡದೇ ಸ್ವಂತ ಉದ್ಯೋಗ ಮಾಡಬೇಕೆಂದು ಕನಸು ಕಾಣುವ ಪಾತ್ರ. ಪಡ್ಡೆಹುಲಿ ಚಿತ್ರದಲ್ಲಿ ಕಾಲೇಜು ಹುಡುಗಿ. ಹೀಗೆ ನನಗೆ ಮೂರು ಸಿನೆಮಾಗಳಲ್ಲೂ ವಿಭಿನ್ನ ಪಾತ್ರ ಸಿಕ್ಕಿದೆ. ಈಗಾಗಲೇ ಎರಡು ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ” ಎನ್ನುತ್ತಾರೆ ನಿಶ್ವಿಕಾ. ಸಿನೆಮಾ ತೆರೆಕಂಡ ನಂತರ ಪ್ರೇಕ್ಷಕರು ತನ್ನ ಯಾವ ಪಾತ್ರವನ್ನು ಹೆಚ್ಚು ಇಷ್ಟಪಡುತ್ತಾ ರೆಂದು ನೋಡಿಕೊಂಡು ಮುಂದೆ ಪಾತ್ರಗಳನ್ನು ಆಯ್ಕೆ ಮಾಡುತ್ತಾ ರಂತೆ. ಅಂದ ಹಾಗೆ, ಮೂರು ಸಿನೆಮಾಗಳಲ್ಲೂ ನಿಶ್ವಿಕಾ ಆಡಿಷನ್ ಕೊಟ್ಟು ಆಯ್ಕೆಯಾಗಿದ್ದಂತೆ. ನಿಶ್ವಿಕಾಗೆ ನಟಿ ರಮ್ಯಾ ಎಂದರೆ ತುಂಬಾ ಇಷ್ಟವಂತೆ. “”ನಾನು ಏಕಾಏಕಿ ಮೂರು ಸಿನೆಮಾ ಒಪ್ಪಿಕೊಂಡಿರೋದರಿಂದ ಎಲ್ಲರಿಗೂ ಯಾರು ಈ ಹುಡುಗಿ ಎಂಬ ಕುತೂಹಲವಿದೆ. ನಾನು ಕೂಡಾ ಅವರ ನಂಬಿಕೆಯನ್ನು ಉಳಿಸಿಕೊಳ್ಳಬೇಕು” ಎನ್ನುತ್ತಾರೆ ನಿಶ್ವಿಕಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.