ಕತೆ: ಗೌಡರ ಲೆಕ್ಕ

Team Udayavani, Mar 18, 2018, 6:00 AM IST

s-10.jpg

ರಸ್ತೆಯ ಮೇಲೆ ನಡೆದುಕೊಂಡು ಬರುತ್ತಿದ್ದ ನಿವೃತ್ತ ಮಾಸ್ತರರನ್ನು ಕಂಡು ಬೈಕ್‌ ಮೇಲೆ ಬರುತ್ತಿದ್ದ ಶಿವರಾಜ ನಿಂತು, “”ನಮಸ್ಕಾರ ಮಾಸ್ತರರೇ, ನಮಸ್ಕಾರ. ಬಿಸಲಾಗ ಹೊಂಟೀರಿ ಎಲ್ಲಿಗೆ?” ಎಂದು ಕೇಳಿದ. ಮಾಸ್ತರರು ನಿಂತು, “”ಹೊØ ಶಿವರಾಜ! ನಮಸ್ಕಾರಪ್ಪ! ಏನು ಹೊಸ ಸೈಕಲ್‌ ಮೋಟಾರು ಯಾವಾಗ ತಂಗಡಿಯಪ್ಪ?” ಎಂದು ಕೇಳಿದರು.

“”ನಿಮ್ಮ ಮಗಳು ಕೊಡಿಸ್ಯಾಳ ಮಾಸ್ಟ್ರೇ. ನಿಮಗ ಗೊತ್ತಿಲ್ಲೇನು…”
“”ಏನು ವರದಕ್ಷಿಣೆ…!”
“”ಛೆ… ಛೆ!” ಎಂದು ಬೈಕ್‌ ಆಫ್ ಮಾಡಿ ಕೆಳಗಿಳಿದ. ಶಿವರಾಜ ಬಿಳಿ ಲುಂಗಿ, ಬಿಳಿ ಅಂಗಿ ಹಾಕಿದ್ದ.
“”ನಿಮ್ಮ ಶಿಷ್ಯ ನಾನು! ವರದಕ್ಷಿಣೆ ತಗತಿನಾ? ಒಂದು ನಯಾಪೈಸೆಯನ್ನು ಬೀಗರಿಂದ ತಗಂಡಿಲ್ಲ. ಮೇಲಾಗಿ ನಾನು ಬಿ.ಎ. ಪಾಸಾಗಿದ್ದರೂ ರೈತನಾಗಿದ್ದೇನೆ. ನಿಮ್ಮ ಮಗಳಿಗೆ ಇನ್ನೂ ವರ್ಸ ಆಗಿಲ್ಲ ಮದುವೆಯಾಗಿ. ವರ್ಷದ ಒಳಗ ಟೀಚರ್‌ ನೌಕರಿ ಸಿಕ್ಕಿತು. ನಿಮ್ಮ ಗೊತ್ತದಲ್ಲ. ಮದುವಿಗೆ ಬಂದಿದ್ರಿ. ಅಕ್ಕಿಕಾಳು ಹಾಕಿ, ಆಶೀರ್ವಾದ ಮಾಡಿದ್ದೀರಿ…”

“”ಒಳ್ಳೆಯದಾಯ್ತು. ಬೇಶಿದ್ದೀರಿಲ್ಲ, ಅಷ್ಟು ಸಾಕು. ಅಂದಂಗ ಮಗಳಿಗೆ ಯಾವ ಶಾಲೆಯಲ್ಲಿ ಕೆಲ್ಸ….”
“ನಮ್ಮೂರಾಗ ಸೀಟ್‌ ಇರಲಿಲ್ಲಂತ! ಇಲ್ಲೇ ಹೊಸಹಳ್ಳಿಯಲ್ಲಿ ಸಿಕ್ಕದ. ಆ ಶಾಲೆಗೆ ಹೊಗ್ತಾಳ”
“”ಹೊಸಹಳ್ಳಿ! ಗೊತ್ತಾಯ್ತು ಬುಡು! ಚೆನ್ನಾಗಿ ಕಲಿಸು ಅಂತ ಹೇಳಿದೆ ಎಂದು ಹೇಳು”
“”ಅದೇನು ಕಲ್ಸದು ಬುಡ್ರಿ ಮಾಸ್ಟ್ರೇ. ಆ ಊರಿಗೆ ಹೋಗಿ, ಬರಲಿಕ್ಕೆ ಬಸ್ಸಿಲ್ಲ. ಇದ್ರೂ ಕಟ್‌ ಜರ್ನಿ ಮಾಡಬೇಕು. ಅದ್ಕ ನಿಮ್ಮ ಮಗಳೇ ಈ ಬೈಕ್‌ ಕೊಡಿಸ್ಯಾಳ. ನಾನೇ ಮುಂಜಾನೆ ಬೈಕ್‌ ಮ್ಯಾಲೆ ಕರಕಂಡು ಹೋಗ್ತಿನಿ. ಬುಟ್ಟು ಬರಿ¤àನಿ. ಸಂಜೆ ಹೋಗಿ ಕರಕಂಡು ಬರಿ¤àನಿ”

“ನಿನೂ ಕೆಲ್ಸ ಕೊಟ್ಟಾಳು ಅನ್ನೂ! ಇರ್ಲಿ ಅದೇನೂ ಧಾವತಿ ಕೆಲ್ಸ ಅಲ್ಲ ಬುಡು. ಊರಾಗ ಖಾಲಿ ಕುಂತು ಹೊತ್ತು ಕಳೆವುದಕ್ಕಿಂತ ಈ ಕೆಲ್ಸ ಮಾಡಿದ್ರ ತಪ್ಪೇನದ?” ಮಾಸ್ತಾರ ಹೇಳಿ ಹೋಗಲು ನೋಡಿದರು.

“”ಮಾಸ್ತಾರ್ರೆ, ಅಲ್ರಿ, ಕೆಲ್ಸಕ್ಕ ಜಲ್ದಿ ಹೋಗಿ ಬಿಡಬೇಕ್ರಿ. ತಟಗ ತಡಾದ್ರ ಆ ಹೆಡ್‌ ಮಾಸ್ತಾರ ಅರಚತಾನ. ಒಂಬತ್ತಕ್ಕ ಹೋಗಿ ನಿಂತಬೇಕು. ಸಂಜಿಮುಂದ ಐದು ಗಂಟೆ ಆಗ್ತದ. ದಿನಾ ಹೋಗಿ ಬರಬೇಕಲ್ರಿ. ಇದ್ಯಾವನು ಮಾಡ್ಯಾನು?”
“”ಸಂಬಳ ಕೊಡ್ತಾರಲ್ಲಪ್ಪ, ಸಂಬಳ”
“”ಏನು ಸಂಬಳ ಬುಡ್ರೀ. ಬೈಕ್‌ ಲೋನ್‌ ಮಾಡ್ಸಿದ್ದೀನಿ. ಮನ್ಯಾಗಿನ ಖೋಲಿ ದುರಸ್ತಿ ಮಾಡ್ಸು ಅಂತ ಗಂಟು ಬಿದ್ದಳು. ಹೌಸ್‌ ಲೋನು ಮಾಡ್ಸಿ ಕಟಿಸಿದ್ದೀನಿ. ಈಗ ನೋಡಿದ್ರ ಸಂಬಳದಾಗ ಲೋನು ಮುರಕಂತಾರ. ಈಕಿ ಕೈಗೆ ಏನು ಬರ್ತಾದ ಮಣ್ಣು?”

“”ಹಂಗ ಬಾಳ್ವೆ ಅಂದ್ರ”
“”ಅದ್ರಾಗ ಸೀರೆ ಮ್ಯಾಲೆ ಸೀರೆ ತಗಂತಾಳ. ದಿನಾ ಒಂದು ಬ್ಯಾರೆದೇ ಸೀರೆ ಉಟುಗಂಡು ಹೋಗಬೇಕಂತ. ಇಪ್ಪತ್ತು ಸೀರೆ ಇದ್ದಾವು. ಆದ್ರೂ ಸಾಲವು” ಅಂತಾಳ ಶಿವರಾಜ.
“”ನಿನY ನೌಕರಿ ಇಲ್ಲ. ಅದು ಗೊತ್ತಾಗದಿಲ್ಲ”
“”ಅದ್ಕ ನಾನಂತೀನಿ. ದಿನ ಯಾಕ ಶಾಲಿಗೆ ಹೋಗಬೇಕು? ವಾರದಾಗ ಎರಡು ಸಲ ಹೋಗಿ, ವಾರದ ಸಹಿ ಮಾಡಿ ಬಂದ್ರಾಯ್ತು ಅಂತ…”
“”ಹೆ ತಮ್ಮ, ಹೊಲಕ್ಕ ದಿನ ಹೋಗದಿದ್ರ ನಡಿತದ. ಅದು ಮಕ್ಕಳ ಶಾಲೆ. ನಿತ್ಯ ಕಲಿಸಬೇಕು. ಸಂಬಳ ಯಾಕ ಕೊಡ್ತಾರೇಳು? ದಡ್ಡ! ನಾಡ ದಡ್ಡ!” ಅಂತ ಬಯ್ದರು.
“”ಮಾಸ್ಟ್ರೇ, ನಮ್ಮ ಹೊಲಗಳಲ್ಲಿ ನಾನೇ ಕೆಲ್ಸ ಮಾಡ್ತೀನೇನು? ಮಾಡಸ್ತೀನಿ. ಹಂಗ ಹೆಡ್‌ಮಾಸ್ಟ್ರೆ ಈಕೆ ಬರಲಿಲ್ಲಂದ್ರ ಮಕ್ಕಳಿಗೆ ಸಾಲಿ ಕಲಿಸಲಿ ಏನಂತಿ! ಆತನಿಗೇ ಐನೂರನೋ, ಸಾವಿರನೋ ಕೊಟ್ರಾಯ್ತು”

“”ಗೌಡ್ರು ಮಗ ನೀನು. ನಿನ್ಗೆ ಮಾತ್ರ ಇಂಥ ಆಲೋಚನ ಹೋಳಿತಾವ ನೋಡು”
“”ಹೆಡ್‌ಮಾಸ್ಟ್ರೆಗೆ ಈ ಕೆಲ್ಸ ಬ್ಯಾಡಂದ್ರೂ ಸರಿ. ನಿಮ್ಮ ಮಗಳ ಜತೆಗೆ ಶಾಲೆಲ್ಲಿ ಕಲಿಸುವ ಟೀಚರ್‌ ಇನ್ನೂ ಐದಾರ್‌ ಮಂದಿ ಇ¨ªಾರ. ಅವುರಿಗೆ ಹೇಳಿದ್ರೆಂಗ? ವಾರದಾಗ ಮೂರು ಸಲ ಈಕೆ ಬರ್ತಾಳ. ಇನ್ನೂ ಮೂರು ದಿನ ನೀವೇ ಅಡ್ಜಸ್ಟ ಮಾಡ್ರೀ” ಅಂತ.
“”ಕೇಸ್‌ ಆದ್ರೆಂಗೋ ಮಾರಾಯ?”
“”ಎಂ.ಎಲ್‌.ಎ. ನಮ್ಮ ಅಪ್ಪಗ ದೋಸ್ತಾ. ಊರ ಓಟುಗಳನ್ನೆಲ್ಲ ಹಾಕಿಸಿವಿ. ನೋಡ್ಕಂತಾನ ಬುಡ್ರಿ”
“”ನಾನು ಬರಿ¤àನಿ. ಗೌಡ್ರ ಲೆಕ್ಕ ನಮಗ್ಯಾಕ” ಎಂದು ಮುಂದ ನಡದರೂ, “ಮಕ್ಕಳ ಭವಿಷ್ಯ ಏನು?’ ಅಂದದ್ದು ಕೇಳಿಸಿಕೊಂಡು, “”ಮಾಸ್ತಾರಗ ಬದುಕಕೂ ಬರಲಿಲ್ಲ” ಎಂದು ಶಿವರಾಜ ಬೈಕ್‌ ಮ್ಯಾಲೆ ಕುಂತು ಊರ ಕಡೆ ನಡೆದ.

ಅಮರೇಶ ನುಗಡೋಣಿ

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.