ಗೆದ್ದ “ಸಿಟ್ಟಲ್ಲಿ ಬಾಂಗ್ಲನ್ನರು ಬಾಗಿಲನ್ನೇ ಪುಡಿ ಮಾಡಿದರು!
Team Udayavani, Mar 18, 2018, 7:10 AM IST
ಕೊಲಂಬೊ: ಶುಕ್ರವಾರ ಶ್ರೀಲಂಕಾ ವಿರುದ್ಧ ರೋಚಕವಾಗಿ ತ್ರಿಕೋನ ಟಿ20 ಫೈನಲ್‌ಗೇರಿರುವ ಬಾಂಗ್ಲಾದೇಶ ಹಲವು ವಿವಾದಗಳನ್ನು ಮೈಮೇಲೆಳೆದುಕೊಂಡಿದೆ. ಪಂದ್ಯದ ವೇಳೆ ನಾಯಕ ಶಕೀಬ್ ಹಸನ್ ತಂಡವನ್ನೇ ಪಂದ್ಯದಿಂದ ಹಿಂದಕ್ಕೆ ಕರೆಸಿಕೊಳ್ಳಲು ಯತ್ನಿಸಿದ್ದು, ಬದಲೀ ಆಟಗಾರ ನೂರುಲ್, ಲಂಕಾ ನಾಯಕ ತಿಸರ ಜೊತೆಗೆ ವಾಗ್ವಾದ ನಡೆಸಿದ್ದು ಸಾಲದೆಂಬಂತೆ ಬಾಂಗ್ಲಾ ಆಟಗಾರರು ಡ್ರೆಸಿಂಗ್ ಕೊಠಡಿಯ ಬಾಗಿಲನ್ನೇ ಪುಡಿಪುಡಿ ಮಾಡಿದ್ದಾರೆ. ಪಂದ್ಯದ ಅಂತಿಮ ಹಂತದಲ್ಲಿ ನಡೆದ ಜಗಳದ ಕಾವು ಉಳಿಸಿಕೊಂಡಂತಿದ್ದ ಆಟಗಾರರು ಗೆದ್ದ ನಂತರ ಈ ಕೃತ್ಯ ನಡೆಸಿದ್ದಾರೆ. ಯಾರು ಮಾಡಿದ್ದಾರೆನ್ನುವುದನ್ನು ಪತ್ತೆ ಮಾಡಲು ತನಿಖೆ ಶುರು ಮಾಡಲಾಗಿದೆ.
ಪುಡಿಪುಡಿಯಾಗಿ ಬಿದ್ದ ಗಾಜಿನ ಬಾಗಿಲೆದುರು ಇದ್ದ ಮೆಟ್ಟಿಲಲ್ಲಿ ಬಾಂಗ್ಲಾ ಆಟಗಾರರು ಧಡಧಡನೆ ಕೆಳಗೋಡಿ ಹೋಗಿದ್ದು ಸಿಸಿಟೀವಿಯಲ್ಲಿ ದಾಖಲಾಗಿದೆ. ಇದರ ವಿರುದ್ಧ ಸ್ವತಃ ಶ್ರೀಲಂಕಾ ಸರ್ಕಾರ ತನಿಖೆಗೆ ತೀರ್ಮಾನಿಸಿದೆ. ಈ ನಷ್ಟದ ಮೊತ್ತವನ್ನು ತುಂಬಿಕೊಡಲು ಬಾಂಗ್ಲಾ ಕ್ರಿಕೆಟ್ ಮಂಡಳಿ ಮುಂದಾಗಿದೆ. ಘಟನೆಗೆ ಕಾರಣವಾದ ಆಟಗಾರ ಕೆಲ ಪಂದ್ಯಗಳ ಮಟ್ಟಿಗೆ ನಿಷೇಧಗೊಳ್ಳುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.