ಮಂಗಳೂರಿಗೂ ಬೇಕಿದೆ ಸೈಕ್ಲಿಂಗ್‌ ಟ್ರೆಂಡ್‌ 


Team Udayavani, Mar 18, 2018, 4:22 PM IST

18-March-21.jpg

ಈಗ ಮಂಗಳೂರಲ್ಲೂ ಸೈಕಲ್‌ನತ್ತ ಆಕರ್ಷಿತರಾಗುವ ಯುವಜನರಿಗೇನೂ ಕಡಿಮೆಯಿಲ್ಲ. ಆದರೆ, ನಗರವನ್ನು ದೃಷ್ಟಿಯಲ್ಲಿರಿಸಿಕೊಂಡರೆ, ಇಲ್ಲಿ ಸೈಕಲನ್ನೇ ಪ್ರಮುಖ ಸಾರಿಗೆಯನ್ನಾಗಿ ಬಳಸುವುದಕ್ಕೆ ಪ್ರೇರಣೆ ನೀಡಬೇಕಾಗಿದೆ. ನಗರದೊಳಗೆ ಮಾಲಿನ್ಯದ ಪ್ರಮಾಣ ಕಡಿಮೆಗೊಳಿಸಲು, ಸುಲಭ ಮತ್ತು ಹೆಚ್ಚು ವೆಚ್ಚವಿಲ್ಲದ ಸಾರಿಗೆಯನ್ನಾಗಿ ಸೈಕಲ್‌ ಬಳಕೆ ಉತ್ತೇಜಿಸಬೇಕಿದೆ. ಇದಕ್ಕಾಗಿ ಮೂರು ವಿಧದ ಕಾರ್ಯಕ್ರಮಗಳನ್ನು ನಗರಾಡಳಿತ ಹಮ್ಮಿಕೊಳ್ಳಬಹುದು.

ಬಾಡಿಗೆ ಸೈಕಲ್‌ ಕೇಂದ್ರಗಳು
ಈಗಾಗಲೇ ಮೈಸೂರು ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಅತ್ಯಾಧುನಿಕ ಬಾಡಿಗೆ ಸೈಕಲ್‌ ಕೇಂದ್ರಗಳು ಸೂಪರ್‌ ಹಿಟ್‌ ಆಗಿವೆ. ಮೊಬೈಲ್‌ನಲ್ಲೇ ಸೈಕಲ್‌ ಬುಕ್‌ ಮಾಡಿ, ಮೊಬೈಲ್‌ನಲ್ಲೇ ಪಾವತಿ ಮಾಡುವ ವ್ಯವಸ್ಥೆ ಇದೆ. ಸೈಕಲನ್ನು ಪಡೆದು, ಬೇಕಾದ ಸ್ಥಳಕ್ಕೆ ತೆರಳಿ, ಅಲ್ಲೇ ಪಕ್ಕದಲ್ಲಿರುವ ಸೈಕಲ್‌ ಕೇಂದ್ರದಲ್ಲಿ ಸೈಕಲನ್ನು ಕೊಡುವ ವ್ಯವಸ್ಥೆ ಇದು. ಇದರಿಂದ ಖಾಸಗಿ ವಾಹನಗಳ ಭರಾಟೆ ತಪ್ಪುತ್ತದೆ. ಶಾಪಿಂಗ್‌, ನಿತ್ಯದ ಕೆಲಸದವರಿಗೆ ಸುಲಭವಾಗುತ್ತದೆ. ಪ್ರವಾಸಿಗರೂ ಇದರಿಂದ ನಗರ ಸೌಂದರ್ಯ ಸವಿಯಬಹುದು.

ಸೈಕಲ್‌ ರಸ್ತೆ
ಸೈಕಲ್‌ಗ‌ಳಿಗೆ ಸಾಮಾನ್ಯ ರಸ್ತೆಗಳ ಪಕ್ಕದಲ್ಲೇ ಅನುಕೂಲ ಮಾಡಿಕೊಡುವುದು. ಇದಕ್ಕೆ ಸಾಮಾನ್ಯ ರಸ್ತೆಗಳಲ್ಲೇ ಸೈಕಲ್‌ ಬಳಸಲು ಮಾರ್ಕ್‌ ಮಾಡುವುದು, ಅವಕಾಶವಿದ್ದೆಡೆ ಪ್ರತ್ಯೇಕ ಸೈಕಲ್‌ ಪಥಗಳನ್ನೂ ನಿರ್ಮಿಸಬಹುದು. ಇದರಿಂದ ಸೈಕಲ್‌ ಬಳಸುವವರು ಟ್ರಾಫಿಕ್‌ ಮಧ್ಯೆಯೂ ನಿರಾತಂಕವಾಗಿ ಸೈಕಲ್‌ ಬಳಸಲು ಸಾಧ್ಯವಾಗುತ್ತದೆ.

ಮೋಟಾರ್‌ ಫ್ರೀ ಜೋನ್‌
ವಾರದಲ್ಲೊಂದು ದಿನ ಸೈಕಲ್‌ ಡೇ, ಮೋಟಾರ್‌ ಫ್ರೀ ಜೋನ್‌ ಎಂದು ನಿರ್ದಿಷ್ಟ ರಸ್ತೆಗಳಲ್ಲಿ ವಾಹನಗಳ ಬಳಕೆಯನ್ನು ನಿಷೇಧಿಸುವುದು, ಪ್ರವಾಸಿ ಸ್ಥಳಗಳಲ್ಲಿ ಸೈಕಲ್‌, ಬ್ಯಾಟರಿ ಸ್ಕೂಟರ್‌, ಕಾರುಗಳಿಗೆ ಮಾತ್ರ ಅವಕಾಶ ಮಾಡಿಕೊಡ ಬೇಕು. ಜತೆಗೆ ವಾರಕ್ಕೊಮ್ಮೆ ಸೈಕಲ್‌ ಬಳಸುವಂತೆ (ಸೈಕಲ್‌ ಡೇ)ಗೆ ಆಡಳಿತ ಮನಸ್ಸು ಮಾಡಬೇಕಿದೆ. ಇದರಿಂದ ಟ್ರಾಫಿಕ್‌ ಕಿರಿಕಿರಿ ತಪ್ಪುತ್ತದೆ.

ಬೆಂಗಳೂರಿನಲ್ಲಿ ಈಗಾಗಲೇ ಪ್ರಮುಖ ಸಾರ್ವಜನಿಕ ರಜಾದಿನಗಳಂದು ಮತ್ತು ರವಿವಾರಗಳಂದು ಕಬ್ಬನ್‌ ಪಾರ್ಕ್ ನಲ್ಲಿ ಮೋಟಾರ್‌ ಫ್ರೀ ಜೋನ್‌ ಮಾಡಲಾಗುತ್ತದೆ. ಆ ದಿನ ವಾಹನಗಳು ಪಾರ್ಕ್‌ ಒಳಗೆ ಸಂಚರಿಸುವುದಕ್ಕೆ ಅವಕಾಶವಿಲ್ಲ. ಕಾಲ್ನಡಿಗೆ ಅಥವಾ ಸೈಕಲ್‌, ಯುನಿಸೈಕಲ್‌ಗ‌ಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಪ್ರಶಾಂತ, ನೆಮ್ಮದಿಯ ವಾತಾವರಣ ನಿರ್ಮಿಸಿಕೊಟ್ಟಂತಾಗುತ್ತದೆ.

 ಈಶ

ಟಾಪ್ ನ್ಯೂಸ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

courts

Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sandalwood: ತೆರೆಮೇಲೆ ʼಅನಾಥʼನ ಕನಸು

Sandalwood: ತೆರೆಮೇಲೆ ʼಅನಾಥʼನ ಕನಸು

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.