ಪ್ರವಾಸಿ ಬಸ್‌ಗಳೂ ಹೆಚ್ಚಿಸಲಿ ನಗರ ಸೌಂದರ್ಯ


Team Udayavani, Mar 18, 2018, 5:05 PM IST

18-March-22.jpg

ಮಂಗಳೂರಿನಲ್ಲಿ ಪ್ರವಾಸಿ ತಾಣಗಳು ಸಾಕಷ್ಟಿವೆ. ಆದರೆ, ಅಲ್ಲಿಗೆ ತೆರಳಲು ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ವರ್ಗ, ಸರಕಾರ ಕೊಂಚ ಗಮನಹರಿಸಬೇಕಿದೆ.

ಸರಕಾರದ ಮೂಲಕವೇ ಬಸ್‌, ಟ್ಯಾಕ್ಸಿ ವ್ಯವಸ್ಥೆಯಾದರೆ ಇದು ಪ್ರವಾಸಿಗರಿಗೆ ಸಾಕಷ್ಟು ಅನುಕೂಲಕರವಾಗುವುದು. ನಗರ ವ್ಯಾಪ್ತಿಯಲ್ಲೇ ಇರುವ ಹೆಚ್ಚಿನ ಪ್ರವಾಸಿ ತಾಣಗಳು ಕನಿಷ್ಠ 2- 3 ಕಿ.ಮೀ. ದೂರದಲ್ಲಿವೆ. ಇಂತಹ ಸಂದರ್ಭದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಬೇಕಾದರೆ ಆಟೋದಲ್ಲಿ ಕನಿಷ್ಠವೆಂದರೂ 150 ರೂ. ಖರ್ಚಾಗುತ್ತದೆ. ಅದೇ ಬಸ್‌ ಮೂಲಕ ತೆರಳಿದರೆ ಕೆಲವೊಂದು ಬಾರಿ ಸಾಕಷ್ಟು ದೂರ ನಡೆಯಬೇಕಾಗುತ್ತದೆ. ಇಲ್ಲಿ ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತದೆ. ದಿನದಲ್ಲಿ 3- 4 ಸ್ಥಳಗಳಿಗೆ ಹೋಗಿ ಬರುವಷ್ಟರಲ್ಲಿ ಸುಸ್ತಾಗಿರುತ್ತೇವೆ. 

ಅದೇ ಆಡಳಿತ ವ್ಯವಸ್ಥೆಯ ಮೂಲಕ ಇದಕ್ಕೊಂದು ವ್ಯವಸ್ಥೆ ಮಾಡಿದರೆ ರಾಜ್ಯ, ಹೊರರಾಜ್ಯ, ದೇಶ, ವಿದೇಶಗಳಿಂದ ಬರುವ ಸಾಕಷ್ಟು ಪ್ರವಾಸಿಗರಿಗೆ ಮಾತ್ರವಲ್ಲ ಸ್ಥಳೀಯ ಜನರಿಗೂ ಅನುಕೂಲವಾಗಲಿದೆ. ಮಾತ್ರವಲ್ಲದೇ ಇದರಿಂದ ಆಡಳಿತ ವ್ಯವಸ್ಥೆ ಆದಾಯವನ್ನೂ ಗಳಿಸಬಹುದು.

ಇನ್ನು ಈ ಪ್ರವಾಸಿ ಬಸ್‌ ಅಥವಾ ಟ್ಯಾಕ್ಸಿಗಳು ನೋಡಲು ಆಕರ್ಷಕವಾಗಿರಲಿ. ಅಂದರೆ ಧಾರ್ಮಿಕ ಕೇಂದ್ರಗಳಿಗೆ ತೆರಳುವ ವಾಹನಗಳನ್ನು ರಥದ ಮಾದರಿಯಲ್ಲಿ, ಬೀಚ್‌, ವಸ್ತು ಸಂಗ್ರಹಾಲಯ, ಉದ್ಯಾನವನಗಳಿಗೆ ತೆರಳುವ ವಾಹನಗಳನ್ನು ಕರಾವಳಿ ಜನರ ಸಂಸ್ಕೃತಿಯನ್ನು ಬಿಂಬಿ ಸುವ ಮಾದರಿಯಲ್ಲಿ ನಿರ್ಮಿಸಬಹುದು. ಇಲ್ಲವೇ ವಿವಿಧ ಬಣ್ಣ, ಪೈಟಿಂಗ್‌ ಗಳ ಮೂಲಕ ಈ ಬಸ್‌ ಅನ್ನು ಇತರೆ ಬಸ್‌ ಗಳಿಗಿಂತ ಭಿನ್ನವಾಗಿ ರೂಪಿಸಬಹುದು. ಈ ವಾಹ ನ ಗಳು 10 ರಿಂದ 20 ಮಂದಿ ಪ್ರವಾಸಿಗರನ್ನು ಒಯ್ದರೂ ಸಾಕು. ಇದರಿಂದ ಪ್ರವಾಸಿ ತಾಣಕ್ಕೆ ಹೋಗುವ ಜನರಿಗೆ ಈ ವಾಹನಗಳೇ ಹೆಚ್ಚಾಗಿ ಆಕರ್ಷಿಸಬಲ್ಲದು.

ಅಲ್ಲದೇ ಈ ಬಸ್‌ ಗಳಿಗೆ ಮುಖ್ಯ ರಸ್ತೆಯನ್ನು ಬಿಟ್ಟು ಒಳದಾರಿಗಳಲ್ಲಿ ಸಂಚರಿಸುವ ವ್ಯವಸ್ಥೆ ಮಾಡಿಕೊಡಬೇಕು. ಇದರಿಂದ ನಗರದ ಟ್ರಾಫಿಕ್‌ ಕಿರಿಕಿರಿಯಿಂದ ಪಾರಾಗಬಹುದು. ತಿರುಪತಿಗೆ ಹೋಗಿದ್ದರೆ ಅಲ್ಲಿ ಗಮನ ಸೆಳೆಯುವುದು ರಥದ ಮಾದರಿಯ ಬಸ್‌ ಗಳು. ತಿರುಪತಿಯಿಂದ ತಿರುಮಲೈಗೆ ಹೋಗುವ ಸಾಕಷ್ಟು ಬಸ್‌ ಗಳು ಇದೇ ರೀತಿಯಲ್ಲಿವೆ. ನೋಡಲು ಆಕರ್ಷಕವಾಗಿರುವ ಈ ಬಸ್‌ ಗಳಲ್ಲಿ ಒಂದು ಬಾರಿಯಾದರೂ ಸುತ್ತಾಡಬೇಕು ಎಂಬ ಮನಸ್ಸಾಗದೇ ಇರಲಾರದು. ಅಂತೆಯೇ ಇದೇ ಮಾದರಿ ಯನ್ನೂ ನಾವೂ ಅನುಸರಿಸಬಹುದಲ್ಲವೇ..?

 ವಿದ್ಯಾ ಕೆ. ಇರ್ವತ್ತೂರು

ಟಾಪ್ ನ್ಯೂಸ್

Vijayendra (2)

MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

lakshmi hebbalkar

Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್

10

BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್‌ ʼಛಾವಾʼ; ರಿಲೀಸ್‌ ಡೇಟ್‌ ಮುಂದೂಡಿಕೆ?

7-

ಹುಂಡಿ ಒಡೆದು ನಗದು ದೋಚಿ ಪರಾರಿಯಾದ ದುಷ್ಕರ್ಮಿಗಳು; ಎರಡು ಪ್ರತ್ಯೇಕ ಘಟನೆ ದಾಖಲು

1-qwwqewq

Udupi; ಬಜೆ ಡ್ಯಾಂ ಬಳಿ ಶಿಲಾಯುಗದ ನಿಲಿಸುಗಲ್ಲು ಪತ್ತೆ

US Result: ಡೊನಾಲ್ಡ್‌ ಟ್ರಂಪ್  ಗೆ‌ ಮತ್ತೊಮ್ಮೆ‌ ಅಧ್ಯಕ್ಷ ಪಟ್ಟ; ಪ್ರಧಾನಿ ಮೋದಿ ಅಭಿನಂದನೆ

US Result: ಡೊನಾಲ್ಡ್‌ Trumpಗೆ‌ ಮತ್ತೊಮ್ಮೆ‌ ಅಧ್ಯಕ್ಷ ಪಟ್ಟ; ಪ್ರಧಾನಿ ಮೋದಿ ಅಭಿನಂದನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

KPTCL ಕಾಮಗಾರಿ ಅವಾಂತರ; ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣ ಬಳಿ ಅಪಾಯ

4

Mangaluru-ಕಾಸರಗೋಡಿಗೆ ‘ಅಶ್ವಮೇಧ’ ಬಸ್‌

3

Bajpe: ಹಳ್ಳಿಯ ತೋಡು, ಗದ್ದೆ, ತೋಟಗಳನ್ನೂ ಬಿಡದ ಪ್ಲಾಸ್ಟಿಕ್‌!

ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

10

Katpadi: ಅಂಚಿಗೆ ಬ್ಯಾರಿಕೇಡ್‌ ಇರಿಸಿ ರಿಬ್ಬನ್‌ ಅಳವಡಿಕೆ

Vijayendra (2)

MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ

8-

Kalaburagi: ಕಾರು- ಪಿಕಪ್ ಡಿಕ್ಕಿ: ಇಬ್ಬರು ಸಾವು

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

9

Padubidri: ಹೆಜಮಾಡಿ ಬಂದರು ಮೀನಮೇಷ ಎಣಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.