ಮುಂಬಯಿ ಶೇರು: ಮುಂದುವರಿದ ಕುಸಿತ; 69 ಅಂಕ ನಷ್ಟ
Team Udayavani, Mar 19, 2018, 10:54 AM IST
ಮುಂಬಯಿ : ಜಾಗತಿಕ ಶೇರು ಪೇಟೆಗಳಲ್ಲಿನ ದೌರ್ಬಲ್ಯ ಮತ್ತು ಭಾರತದ ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ.2ರಷ್ಟು ಏರಿ 13.5 ಶತಕೋಟಿ ಡಾಲರ್ ಮಟ್ಟಕ್ಕೆ ಬೆಳೆದಿರುವ ಕಳವಳಕಾರಿ ವಿದ್ಯಮಾನದ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 10.30ರ ಹೊತ್ತಿಗೆ 69.44 ಅಂಕಗಳ ನಷ್ಟಕ್ಕೆ ಗುರಿಯಾಗಿ 33,106.56 ಅಂಕಗಳ ಮಟ್ಟಕ್ಕೆ ಕುಸಿಯಿತು.
ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 31.60 ಅಂಕಗಳ ನಷ್ಟಕ್ಕೆ ಗುರಿಯಾಗಿ 10,163.60 ಅಂಕಗಳ ಮಟ್ಟಕ್ಕೆ ಜಾರಿತು. ಸೆನ್ಸೆಕ್ಸ್ ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ 741.94ಅಂಕಗಳ ನಷ್ಟಕ್ಕೆ ಗುರಿಯಾಗಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಕೋಲ್ ಇಂಡಿಯಾ, ಏಶ್ಯನ್ ಪೇಂಟ್ಸ್, ಅದಾನಿ ಪೋರ್ಟ್, ಹೀರೋ ಮೋಟೋ ಕಾರ್ಪ್, ಟಾಟಾ ಸ್ಟೀಲ್, ಬಜಾಜ್ ಆಟೋ, ವಿಪ್ರೋ ಶೇ.3ರಷ್ಟು ಕುಸಿದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಎಚ್ ಡಿ ಎಫ್ ಸಿ, ಮಾರುತಿ ಸುಜುಕಿ, ಲಾರ್ಸನ್, ರಿಲಯನ್ಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.