ಸುವರ್ಣ ಸಾಧಕರ ಸಮಾಜ ಸೇವೆ ಇಂಗಿತ


Team Udayavani, Mar 19, 2018, 11:42 AM IST

suvarna.jpg

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಜನರ ಆರ್ಥಿಕ ಬಲವರ್ಧನೆಗಾಗಿ ನವೋದ್ಯೋಗ ಸ್ಥಾಪನೆ. ನಿರುದ್ಯೋಗಿ ಹಾಗೂ ಉನ್ನತ ಶಿಕ್ಷಣ ಪಡೆದವರಿಗೆ ಮಾರ್ಗದರ್ಶನ ನೀಡಿ ಉದ್ಯೋಗ ಪಡೆಯಲು ಪ್ರೇರಣೆ. ಎಂಎಸ್‌ಎಂಇ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಮಾರ್ಗದರ್ಶನ.

ಇದು ಪ್ರತಿಷ್ಠಿತ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಸಂಸ್ಥೆಯ 43ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಸಾಧಕರು ವ್ಯಕ್ತಪಡಿಸಿದ ಸಾಮಾಜಿಕ ಕಳಕಳಿಯ ಆಶಯ. ಬನ್ನೇರುಘಟ್ಟ ರಸ್ತೆಯ ಐಐಎಂಬಿ ಆವರಣದಲ್ಲಿ ಶನಿವಾರ ಸಂಜೆ ಬಯಲು ಸಭಾಂಗಣದಲ್ಲಿ ನಡೆದ 43ನೇ ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಪಡೆದವರು ಅತ್ಯುನ್ನತ ಸಾಧನೆಗೈದ ಸಂಭ್ರಮದಲ್ಲಿ ಬೀಗಿದರು. 

ಪಿಜಿಪಿಪಿಎಂ ಕಾರ್ಯಕ್ರಮದಲ್ಲಿ ಬೆಸ್ಟ್‌ ಅಕಾಡೆಮಿಕ್‌ ಪರ್‌ಫಾರ್ಮೆನ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದ 27 ವರ್ಷದ ರಿಚಾ ವಲೇಚಾ, “ಐಐಎಂಬಿಯಲ್ಲಿ ಕಲಿತ ಜ್ಞಾನದಿಂದ ನನ್ನ ಶಿಕ್ಷಣಕ್ಕೆ ಪೂರ್ಣರೂಪ ಪಡೆದಂತಾಯಿತು. ಒಂದು ವರ್ಷದ ಅವಧಿಯಲ್ಲಿ ಶೈಕ್ಷಣಿಕವಾಗಿ ಮಾತ್ರವಲ್ಲದೇ ವೃತ್ತಿಪರವಾಗಿಯೂ ಸಾಕಷ್ಟು ಕಲಿತಿದ್ದೇನೆ.

ಆರ್ಥಿಕ ಒಳಗೊಳ್ಳುವಿಕೆ ಬಗೆಗಿನ ಜ್ಞಾನ ವಿಸ್ತಾರವಾಗಿದ್ದು ಆಸಕ್ತಿಕರವಾಗಿತ್ತು. ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಎಎಚ್‌ಎಲ್‌ನ ಅಧಿಕಾರಿಗಳು, ಆರೋಗ್ಯ, ಶಿಕ್ಷಣ ಕ್ಷೇತ್ರ ತಜ್ಞರೊಂದಿಗೆ ನಡೆಸಿದ ಸಂವಾದ ಉಪಯುಕ್ತವಾಗಿತ್ತು. ಆ ಮೂಲಕ ನಮ್ಮ ಚಿಂತನಾ ವ್ಯಾಪ್ತಿ ವಿಸ್ತಾರವಾಯಿತು,’ ಎಂದು ಹೇಳಿದರು.

ಆರ್ಥಿಕ ಬಲಕ್ಕೆ ಸ್ಟಾರ್ಟ್‌ಅಪ್‌: ಈ ಹಿಂದೆ ಡೇಟಾ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಎರಡು ವರ್ಷ ಕೆಲಸ ಮಾಡಿದ್ದು, ನಂತರ ಮೂರೂವರೆ ವರ್ಷ ಸಾರ್ವಜನಿಕ ನೀತಿ ನಿರೂಪಣೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದೆ. ಐಐಎಂಬಿಯಿಂದ ಚಿನ್ನದ ಪದಕ ಪಡೆದಿರುವುದಕ್ಕೆ ಖುಷಿಯಾಗಿದೆ.

ಮುಂದೆ ಅಲ್ಪಾವಧಿಯಲ್ಲಿ ಇನ್ಫೋಸಿಸ್‌ನಲ್ಲಿ ಸಲಹೆಗಾರಳಾಗಿ ಕಾರ್ಯ ನಿರ್ವಹಿಸುತ್ತೇನೆ. ದೀರ್ಘಾವಧಿಯಲ್ಲಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಆರ್ಥಿಕ ಬಲವರ್ಧನೆಗಾಗಿ ಸ್ಟಾರ್ಟ್‌ಅಪ್‌ ಆರಂಭಿಸಿ ಸಮಾಜ ಸೇವೆ ಸಲ್ಲಿಸುವ ಗುರಿ ಇದೆ ಎಂದು ಹೇಳಿದರು.

ದಿನಕ್ಕೆ ಮೂರು ಗಂಟೆ ನಿದ್ರೆ: ಪಿಜಿಪಿಇಎಂನಲ್ಲಿ ಬೆಸ್ಟ್‌ ಆಲ್‌ ರೌಂಡ್‌ ಪರ್‌ಫಾರ್ಮೆನ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದ ರಾಜಸ್ತಾನದ ಸುನೀಲ್‌ ಕುಮಾರ್‌ ವಾಯಾ ಸದ್ಯ ಬಾಷ್‌ ಕಂಪನಿಯಲ್ಲಿ ಹಿರಿಯ ಪ್ರಧಾನ ವ್ಯವಸ್ಥಾಪಕರಾಗಿದ್ದಾರೆ (ಹಣಕಾಸು, ಕಾರ್ಯತಂತ್ರ). “ಕಲಿಕೆ ನಿರಂತರ ಪ್ರಕ್ರಿಯೆ ಎಂಬ ಕಾರಣಕ್ಕೆ ಐಐಎಂಬಿಯಲ್ಲಿ ಕೋರ್ಸ್‌ ಸೇರಿದೆ.

ಇಲ್ಲಿನ ತಜ್ಞರ ಕಲಿಕಾ ವಿಧಾನ, ಜ್ಞಾನದಿಂದಾಗಿ ಹಣಕಾಸು ಜ್ಞಾನದ ಜತೆಗೆ ವ್ಯವಹಾರ ತಜ್ಞತೆಯನ್ನು ಪಡೆದಿದ್ದೇನೆ. ಕೆಲಸ, ಕೋರ್ಸ್‌ ಒಟ್ಟಿಗೆ ನಡೆದಿದ್ದರಿಂದ ಬಹಳ ಕಾಲ ನಿತ್ಯ ಮೂರು ಗಂಟೆಯಷ್ಟೇ ನಿದ್ರೆಯಾಗುತ್ತಿತ್ತು ಎಂದು ತಿಳಿಸಿದರು. ಉಳಿದಂತೆ ಇಪಿಜಿಪಿ ಕಾರ್ಯಕ್ರಮದಲ್ಲಿ ಬೆಸ್ಟ್‌ ಆಲ್‌ ರೌಂಡ್‌ ಪರ್‌ಫಾರ್ಮೆನ್ಸ್‌ ವಿಭಾಗದಲ್ಲಿ ಜಿಗರ್‌ ದೋಷಿ ಚಿನ್ನದ ಪದಕ,

ಸ್ನಾತಕೋತ್ತರ ಪದವಿ ಕಾರ್ಯಕ್ರಮದಲ್ಲಿ (ಪಿಜಿಪಿ) ಪ್ರತೀಕ್‌ ಆನಂದ್‌ ಪ್ರಥಮ ರ್‍ಯಾಂಕ್‌, ಮೆಹ್ತಾ ಉಮಾಂಗ್‌ ಅಮಿತ್‌ ದ್ವಿತೀಯ ರ್‍ಯಾಂಕ್‌ ಹಾಗೂ ವಿ.ವಾಗೀಶ್‌ ಬೆಸ್ಟ್‌ ಆಲ್‌ರೌಂಡ್‌ ಪರ್‌ಫಾರ್ಮೆನ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಪಿಜಿಪಿಇಎಂ ಕಾರ್ಯಕ್ರಮದಲ್ಲಿ ಗೌರವ್‌ ಕುಮಾರ್‌ ಹಾಗೂ ಇಪಿಜಿಪಿ ಕಾರ್ಯಕ್ರಮದಲ್ಲಿ ಪ್ರಗ್ಯಾ ದಾಲಿಯಾ ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ.

ಇದೇ ಮೊದಲ ಬಾರಿ ಪದವಿ ಪ್ರದಾನ: ಎರಡು ವರ್ಷದ ಸ್ನಾತಕೋತ್ತರ ಪದವಿ ಕೋರ್ಸ್‌ನಡಿ ಐಐಎಂಬಿ ಇದೇ ಮೊದಲ ಬಾರಿ ಪದವಿ ಪ್ರದಾನ ಮಾಡಿದೆ. ಒಟ್ಟು 406 ಮಂದಿ ಈ ಕೋರ್ಸ್‌ನಡಿ ಪದವಿ ಪಡೆದಿದ್ದಾರೆ. ಈ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಐಐಎಂಬಿ ನಿರ್ದೇಶಕ ಪ್ರೊ.ಜಿ.ರಘುರಾಂ, ಈ ಹಿಂದೆ ಈ ಕೋರ್ಸ್‌ನಲ್ಲಿ ಡಿಪ್ಲೋಮಾ ಪದವಿ ನೀಡಲಾಗುತ್ತಿತ್ತು.

ಇದೇ ಮೊದಲ ಬಾರಿಗೆ ಪದವಿ ನೀಡಲಾಗುತ್ತಿದೆ. ಕಳೆದ ತಿಂಗಳಷ್ಟೇ ನಿಯಮಾನುಸಾರ ಮಂಜೂರಾತಿಗಳನ್ನು ಪಡೆಯಲಾಗಿದೆ. ಐಐಎಂ ಕಾಯ್ದೆಯಡಿ ಐಐಎಂಬಿ ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂಬ ಮಾನ್ಯತೆ ಪಡೆದಿದೆ. ಇದರಿಂದ ಆಡಳಿತ ಮಂಡಳಿಯು ನಿರ್ದೇಶಕರ ನೇಮಕ, ಆಡಳಿತ ಮಂಡಳಿ ಸದಸ್ಯರ ನೇಮಕ ಸೇರಿದಂತೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಹುದಾಗಿದೆ ಎಂದು ಹೇಳಿದರು.

ಮ್ಯಾನೇಜ್‌ಮೆಂಟ್‌ ಕ್ಷೇತ್ರಕ್ಕೆ ಬರುವವರು ದೀರ್ಘಾವಧಿ ಗುರಿ ಹೊಂದಿ, ಅದನ್ನು ತಲುಪಲು ಸದಾ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ತಾವು ಕೈಗೊಳ್ಳುವ ನಿರ್ಧಾರಗಳು ಮೌಲ್ಯಾಧಾರಿತ ವ್ಯವಹಾರದ ಮೇಲೆ ಅವಲಂಬಿತವಾಗಿರಬೇಕು.
-ಅಜಯ್‌ ಪಿರಾಮಲ್‌, ಪಿರಾಮಲ್‌ ಹಾಗೂ ಶ್ರೀರಾಮ್‌ ಗ್ರೂಪ್‌ ಅಧ್ಯಕ್ಷ

ಟಾಪ್ ನ್ಯೂಸ್

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

16-uv-fusion

Discipline: ಬದುಕಿನಲ್ಲಿ ಶಿಸ್ತಿರಲಿ

15-

Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

14-uv-fusion

Mother: ಅಮ್ಮನ ಜೀವನವೇ ಆದರ್ಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.