ವೃದ್ಧೆಗೆ ಥಳಿಸುತ್ತಿರುವ ದೃಶ್ಯ ವೈರಲ್: ಮೊಮ್ಮಗಳ ವಿರುದ್ಧ ಕೇಸು ದಾಖ
Team Udayavani, Mar 20, 2018, 10:10 AM IST
ಕಣ್ಣೂರು: ನಗರದಲ್ಲಿ 90ರ ಹರೆಯದ ವೃದ್ಧೆಯೊಬ್ಬಳನ್ನು ಆಕೆಯ ಮೊಮ್ಮಗಳು ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದನ್ನನುಸರಿಸಿ ಪೊಲೀಸರು ಪ್ರಕರಣವೊಂದನ್ನು ದಾಖಲಿಸಿದ್ದಾರೆ. ವೃದ್ಧೆಯ ಮೊಮ್ಮಗಳು ದೀಪಾ (40) ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಕೇಸು ದಾಖಲಿಸಲಾಗಿದೆ. ಕಲ್ಯಾಣಿ ಎಂದು ಗುರುತಿಸಲಾಗಿರುವ ವೃದ್ಧೆಯನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ವಿಡಿಯೋದಲ್ಲಿ ವೃದ್ಧೆಯನ್ನು ಥಳಿಸುತ್ತಿರುವಂತೆಯೇ ಆಕೆ ರೋದಿಸುವ ದೃಶ್ಯವಿದೆ. ನೆರೆಮನೆಯ ಮಹಿಳೆಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ವಿಡಿಯೋವನ್ನು ಗಣನೆಗೆ ತೆಗೆದುಕೊಂಡು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ತನ್ನ ಮೊಮ್ಮಗಳು ತನ್ನನ್ನು ದಿನಾ ಥಳಿಸುತ್ತಾಳೆ ಮತ್ತು ತನ್ನ ಮೈಯಿಡೀ ಗಾಯಗಳಾಗಿವೆ ಎಂದು ವೃದ್ಧೆ ಅಳುತ್ತಾ ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.