ಹಿಂದೂ ಧರ್ಮದಲ್ಲಿ”ವೀರಶೈವ – ಲಿಂಗಾಯತ ‘
Team Udayavani, Mar 20, 2018, 6:40 AM IST
ಬೆಂಗಳೂರು: ರಾಜ್ಯ ಸರ್ಕಾರ ಲಿಂಗಾಯತ -ವೀರಶೈವಕ್ಕೆ ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿದೆ. ಆದರೆ ವೀರಶೈವ- ಲಿಂಗಾಯತ ಹಿಂದೂ ಧರ್ಮದ ಭಾಗವಾಗಿದೆ ಎಂದು ಸಂವಿಧಾನ ಹೇಳುತ್ತದೆ ಕಾನೂನು ತಜ್ಞರು ಅಭಿಪ್ರಾಯಿಸುತ್ತಾರೆ.
ಸಂವಿಧಾನದ ಕಲಂ 29 ಮತ್ತು 30 ರಲ್ಲಿ ಲಿಂಗಾಯತ ಹಿಂದೂ ಧರ್ಮದ ಭಾಗವೆಂದು ಉಲ್ಲೇಖೀಸಲಾಗಿದೆ. ಇದನ್ನಾಧರಿಸಿ ಹಲವು ಬಾರಿ ವಿಧಾನಸಭೆ ಅಧಿವೇಶನಗಳಲ್ಲಿ ಚರ್ಚೆಗಳು ಸಹ ನಡೆದಿವೆ ಎಂದು ಹೈಕೋರ್ಟ್ನ ಹಿರಿಯ ವಕೀಲ ಎಂ.ಬಿ.ನರಗುಂದ ಅಭಿಪ್ರಾಯಿಸುತ್ತಾರೆ.ಹಿಂದೂ ಕಾನೂನಿನ, ಹಿಂದೂ ವಿವಾಹ ಕಾಯ್ದೆ 1955 ರ ಕಲಂ 20 ರಲ್ಲಿ ವೀರಶೈವ – ಲಿಂಗಾಯತವನ್ನು ಹಿಂದೂ ಧರ್ಮದ ಭಾಗವೆಂದೇ ವಿಶ್ಲೇಷಿಸಲಾಗಿದೆ. ಅದರಂತೆ ಹಿಂದೂ ಸಕ್ಸೇಶನ್ ಕಾಯ್ದೆ 1956 ರಲ್ಲಿ ವೀರಶೈವ- ಲಿಂಗಾಯತ ಹಿಂದೂ ಧರ್ಮದಲ್ಲಿ ಸೇರಿದೆ ಎಂದು ಪರಿಗಣಿಸಲ್ಪಟ್ಟಿದೆ. ಹಿಂದೂ ಮೈನಾರಿಟಿ ಕಾಯ್ದೆಯಲ್ಲೂ ಹಿಂದೂ ಧರ್ಮದ ಭಾಗವೆಂದು ಲಿಂಗಾಯತ ಸಮುದಾಯವನ್ನು ಪ್ರಸ್ತಾಪಿಸಲಾಗಿದೆ.
ಹೈಕೋರ್ಟ್ನ ಮತ್ತೂಬ್ಬ ಹಿರಿಯ ನ್ಯಾಯವಾದಿ ಪ್ರಮೀಳಾ ನೇಸರ್ಗಿ ಸಹ ವೀರಶೈವ- ಲಿಂಗಾಯತರನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ವೀರಶೈವರ ಮತ್ತು ಲಿಜಂಗಾಯತರ ಆಚಾರ ಹಾಗೂ ವಿಚಾರ ಹಿಂದೂ ಧರ್ಮದ ಪದ್ಧತಿ ಪ್ರಕಾರವೇ ಇದೆ ಎಂದು ಸಚಿವ ಸಂಪುಟ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.