ಇದು ಐತಿಹಾಸಿಕ ಅವಿಸ್ಮರಣಿಯ ದಿನ: ಎಂ.ಬಿ.ಪಾಟೀಲ್
Team Udayavani, Mar 20, 2018, 6:55 AM IST
ಬೆಂಗಳೂರು: “900 ವರ್ಷಗಳ ಇತಿಹಾಸ ಇರುವ ಧರ್ಮಕ್ಕೆ ಮಾನ್ಯತೆ ನೀಡಬೇಕೆಂದು ನಾವು ಹೋರಾಟ ನಡೆಸಿದ್ದೆವು. ನಮ್ಮ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಿದೆ. ಇದರಿಂದ ನಮಗೆಲ್ಲರಿಗೂ ಖುಷಿ ಕೊಟ್ಟಿದೆ’
-ಇದು, ಪ್ರತ್ಯೇಕ ಧರ್ಮ ವಿಚಾರದಲ್ಲಿ ಹೋರಾಟ ಮಾಡಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರ ನುಡಿ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ದಿನ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಬಹುಜನರ ಆಶಯ ಮತ್ತು ಹೋರಾಟಕ್ಕೆ ಬೆಲೆ ನೀಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು. ಸಂದರ್ಶನ ಸಾರಾಂಶ:
ಲಿಂಗಾಯತ ಅಲ್ಪ ಸಂಖ್ಯಾತ ಮಾನ್ಯತೆಗೆ ಹೋರಾಡಿದ್ದೀರಿ ಸಂಪುಟದ ತೀರ್ಮಾನ ನಿಮಗೆ ಖುಷಿ ಕೊಟ್ಟಿದಿಯಾ ?
ಸಂತೋಷವಾಗಿದೆ. ಲಿಂಗಾಯತ 1881ರ ವರೆಗೂ ಸ್ವತಂತ್ರ ಧರ್ಮವಾಗಿಯೇ ಇತ್ತು. ಮೈಸೂರಿನ ದಿವಾನರಾಗಿದ್ದ ಸಿ. ರಂಗಾಚಾರುಲು ಅವರು, ಈ ಧರ್ಮವನ್ನು ಹಿಂದೂ ಧರ್ಮದಲ್ಲಿ ಸೇರಿಸಿ ಶೂದ್ರರ ಪಟ್ಟಿಯಲ್ಲಿ ಸೇರಿಸಿದ್ದರು. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಇದೀಗ ಈಡೇರಿದಂತಾಗಿದೆ.
ವೀರಶೈವರನ್ನು ಬಿಟ್ಟು ಪ್ರತ್ಯೇಕ ಧರ್ಮದ ಮಾನ್ಯತೆಗೆ ಹೋರಾಟ ಮಾಡಿದ್ದೀರಿ, ಈಗ ವೀರಶೈವ ಸೇರಿಸಿದ್ದರಿಂದ
ನಿಮಗೇನು ಪ್ರಯೋಜನ ಆಯ್ತು ?
ನೋಡಿ ನಾವು ಮೊದಲಿನಿಂದಲೂ ಬಸವ ತತ್ವ ಅನುಸರಿಸುವವರೆಲ್ಲರೂ ಲಿಂಗಾಯತರು ಅಂತ ಹೇಳಿಕೊಂಡು ಬಂದಿದ್ದೇವೆ. ಬಸವಣ್ಣನನ್ನು ಒಪ್ಪಿಕೊಳ್ಳುವ ವೀರಶೈವರೂ ಲಿಂಗಾಯತರ ಒಂದು ಭಾಗ ಅಂತ ಹೇಳಿದ್ದೇವೆ. ನ್ಯಾ. ನಾಗಮೋಹನ್ ದಾಸ್ ಸಮಿತಿ ಕೂಡ ಬಸವ ತತ್ವ ಅನುಸರಿಸುವ ವೀರಶೈವರನ್ನೂ ಲಿಂಗಾಯತಕ್ಕೆ ಸೇರಿಸಿಕೊಳ್ಳಬಹುದು ಎಂದು ಶಿಫಾರಸ್ಸು ಮಾಡಿದೆ. ತಜ್ಞರ ಸಮಿತಿ ವರದಿಯನ್ನೇ ಸಂಪುಟ ಸರ್ವಾನುಮತದಿಂದ ಒಪ್ಪಿದೆ.
ಅಲ್ಪ ಸಂಖ್ಯಾತರ ಮಾನ್ಯತೆಯಿಂದ ಯಾವ ರೀತಿ ಮೀಸಲಾತಿ ಸೌಲಭ್ಯ ಸಿಗುತ್ತದೆ ?
ನಮಗೆ ಯಾವುದೇ ಮೀಸಲಾತಿ ಸೌಲಭ್ಯಕ್ಕಾಗಿ ನಾವು ಹೋರಾಟ ಮಾಡಿಲ್ಲ. ನಾವು ಬಸವಣ್ಣನ ತತ್ವ ವಿಶ್ವ ಮಟ್ಟಕ್ಕೆ ಬೆಳೆಯಬೇಕೆಂದು ಬಯಸುತ್ತೇವೆ. ಅದಕ್ಕಾಗಿ ನಮ್ಮ ಧರ್ಮಕ್ಕೆ ಮಾನ್ಯತೆ ನೀಡುವಂತೆ ಮನವಿ ಮಾಡಿಕೊಂಡಿದ್ದೆವು. ಇನ್ನು ಮುಂದೆ ಲಿಂಗಾಯತ ಧರ್ಮ ಬೌದಟಛಿ ಧರ್ಮದಂತೆ ಜಾಗತಿಕ ಧರ್ಮವಾಗಿ ಬೆಳೆದು ವಿಶ್ವಕ್ಕೆ ಬಸವಣ್ಣನ ತತ್ವಗಳನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತದೆ.
ಲಿಂಗಾಯತರಿಗೆ ಅಲ್ಪ ಸಂಖ್ಯಾತ ಮಾನ್ಯತೆ ದೊರೆತರೆ, ಅಲ್ಪ ಸಂಖ್ಯಾತರ ಮೀಸಲಾತಿಗೆ ತೊಂದರೆ ಆಗುವುದಿಲ್ಲವೇ ?
ನಾವು ಸ್ವಷ್ಟವಾಗಿ ಹೇಳುತ್ತೇವೆ. ಈಗಿರುವ ಅಲ್ಪ ಸಂಖ್ಯಾತರ ಮೀಸಲಾತಿಯಲ್ಲಿ ಸಾಸಿವೆ ಕಾಳಿನಷ್ಟು ಮೀಸಲಾತಿಯನ್ನು ಪಡೆದುಕೊಳ್ಳುವುದಿಲ್ಲ. ಈಗ ಲಿಂಗಾಯತರು ಪ್ರವರ್ಗ 3ಬಿ ಯಲ್ಲಿದ್ದಾರೆ. ಅದೇ ವರ್ಗದಲ್ಲಿ ಮುಂದುವರಿಯಲಿದ್ದಾರೆ. ಕೇಂದ್ರ ಸರ್ಕಾರ ಅಲ್ಪ ಸಂಖ್ಯಾತರ ಮಾನ್ಯತೆ ನೀಡಿದ ಮೇಲೆ ಅದೆಲ್ಲ. ನಮಗೆ ಬಸವ ತತ್ವ ವಿಶ್ವ ಮಟ್ಟದಲ್ಲಿ ಪ್ರಚಾರ ಆಗಬೇಕು ಅನ್ನುವುದಷ್ಟೇ ಮುಖ್ಯ.
ಕೇಂದ್ರ ಸರ್ಕಾರ ಒಪುತ್ತದೆ ಎನ್ನುವ ಭರವಸೆ ಇದೆಯಾ ?
ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಮಾನ್ಯತೆ ನೀಡಿ ಕೇಂದ್ರಕ್ಕೆ ಶಿಫಾರಸು ಮಾಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರವೂ ಒಪ್ಪುತ್ತದೆ ಎಂಬ ನಂಬಿಕೆ ಇದೆ. ಬಿಜೆಪಿಯವರೂ ಕೂಡ ಇದಕ್ಕೆ ಯಾವುದೇ ಕಾರಣಕ್ಕೂ ವಿರೋಧ ಮಾಡುವುದಿಲ್ಲ ಎಂದು ನಂಬಿದ್ದೇವೆ.
ವೀರಶೈವ ಸ್ವಾಮೀಜಿಗಳು ಸರ್ಕಾರದ ತೀರ್ಮಾನವನ್ನು ವಿರೋಧಿಸುತ್ತಿದ್ದಾರಲ್ಲ?
ನಮ್ಮಲ್ಲಿ ಸಣ್ಣಪುಟ್ಟ ಸೈದ್ದಾಂತಿಕ ಭಿನ್ನಾಭಿಪ್ರಾಯಗಳಿದ್ದವು. ನಾವು ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುತ್ತೇವೆ. ವಿರೋಧ ಮಾಡುವವರಿಗೂ ಮನವರಿಕೆ ಮಾಡಿಕೊಡುತ್ತೇವೆ. ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶೀವ ಶಂಕರಪ್ಪ ಸ್ವಾಗತಿಸಿದ್ದಾರೆ. ಅವರು ಸ್ವಾಗತಿಸಿದ ಮೇಲೆ ಯಡಿಯೂರಪ್ಪ, ಸಿದ್ದಗಂಗಾ ಶ್ರೀಗಳು ಎಲ್ಲರೂ ಒಪ್ಪುತ್ತಾರೆ ಎನ್ನುವ ವಿಶ್ವಾಸ ಇದೆ.
ಸರ್ಕಾರದ ತೀರ್ಮಾನ ರಾಜಕೀಯವಾಗಿ ಹೇಗೆ ಲಾಭ ಆಗುತ್ತೆ ?
ನಮಗೆ ರಾಜಕೀಯ ಲಾಭ ನಷ್ಟದ ಪ್ರಶ್ನೆ ಇಲ್ಲ. ನಮ್ಮ ಹೋರಾಟ ಇದ್ದಿದ್ದು, ಪ್ರತ್ಯೇಕ ಧರ್ಮದ ಮಾನ್ಯತೆಗೆ . ನಾವು ರಾಜಕಿಯ ಲಾಭಕ್ಕಾಗಿ ಈ ಹೋರಾಟ ಮಾಡಿರಲಿಲ್ಲ.
ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ?
ಆ ರೀತಿ ಏನೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ಅಂತಿಮ ತೀಮಾನ
ತೆಗೆದುಕೊಂಡಿದ್ದಾರೆ. ಇದರಲ್ಲಿ ಯಾವುದೇ ಧರ್ಮ ಒಡೆಯುವ ಪ್ರಶ್ನೆ ಬರುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್ ಇಳುವರಿ!
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.