ಮಗನ ಸ್ಪರ್ಧೆಗೆ ಅವಕಾಶ ಕಲ್ಪಿಸುವೆ
Team Udayavani, Mar 20, 2018, 12:42 PM IST
ತಿ.ನರಸೀಪುರ: ನಾಲ್ಕು ದಶಕಗಳ ಕಾಲ ರಾಜಕೀಯ ಜೀವನ ನೀಡಿದ ಮೈಸೂರು ಜಿಲ್ಲೆ ಜನರನ್ನು ಬಿಟ್ಟು ಹೋಗಲು ಮನಸ್ಸಿಲ್ಲ, ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರದಲ್ಲಿ ಕಾರ್ಯಕರ್ತರ ಒತ್ತಾಯ ಮತ್ತು ಮುಖಂಡರ ಒತ್ತಾಯದಂತೆ ಪುತ್ರ ಸುನೀಲ್ ಬೋಸ್ ಸ್ಪರ್ಧೆಗೆ ಅವಕಾಶ ಕಲ್ಪಿಸುತ್ತೇನೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.
ತಾಲೂಕು ಪಂಚಾಯಿತಿ ನೂತನ ಅಧ್ಯಕ್ಷ ಆರ್.ಚಲುವರಾಜು ಅವರಿಂದ ಮೈಸೂರಿನ ವಿಜಯನಗರದಲ್ಲಿರುವ ನಿವಾಸದಲ್ಲಿ ಸನ್ಮಾನ ಹಾಗೂ ಕೃತಜ್ಞತೆಯನ್ನು ಸ್ವೀಕರಿಸಿದ ನಂತರ ಮುಖಂಡರು ಹಾಗೂ ಕಾರ್ಯಕರ್ತರು ಅಹವಾಲು ಆಲಿಸಿ ಮಾತನಾಡಿದ ಸಚಿವರು, ರಾಜ್ಯದ ಹಾಸನ ಜಿಲ್ಲೆಯ ಮೀಸಲು ಕ್ಷೇತ್ರಗಳು ಸೇರಿದಂತೆ 16 ಪ್ರಮುಖ ಮೀಸಲು ಕ್ಷೇತ್ರಗಳಲ್ಲಿ
ಎಲ್ಲಿ ಬೇಕಾದರೂ ಸ್ಪರ್ಧಿಸಲು ಆ ಭಾಗದ ಮುಖಂಡರು ಒತ್ತಡ ಹೇರುತ್ತಿದ್ದರಾದರೂ ಹಣವಿಲ್ಲದ ಸಂದರ್ಭದಲ್ಲಿ ಹಣ ಮತ್ತು ಅಧಿಕಾರ ಎರಡನ್ನೂ ನೀಡಿದ ಜಿಲ್ಲೆಯ ಜನರನ್ನು ಬಿಟ್ಟು ಹೋಗಲು ಮನಸ್ಸಿಲ್ಲ, ಬೆಂಗಳೂರು ನಗರದ ಸಿ.ವಿ.ರಾಮನ್ ಕ್ಷೇತ್ರದಲ್ಲಿ ಸ್ಪರ್ಧಿಸಲ್ಲ, ಸ್ಪರ್ಧೆಗೆ ಯಾವುದೇ ಕ್ಷೇತ್ರವನ್ನು ಇನ್ನೂ ಆಯ್ಕೆ ಮಾಡಿಕೊಂಡಿಲ್ಲವೆಂದು ಸಚಿವರು ಸ್ಪಷ್ಟಪಡಿಸಿದರು.
ಸಿಎಂ ನಾಯಕತ್ವ ಬಲಪಡಿಸುವೆ: ಮುಂದಿನ ಅವಧಿಗೂ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದರಿಂದ ಮತ್ತೆ ಸಚಿವನಾಗಲು ಚುನಾವಣೆಯಲ್ಲಿ ಗೆಲ್ಲಬೇಕಿಲ್ಲ. ಕೇಳಮನೆ ಬದಲು ಮೇಲ್ಮನೆ ಸದಸ್ಯನಾಗಿ ಮತ್ತೆ ಸಚಿವರಾಗುತ್ತೇನೆ.
ಪ್ರಸಕ್ತ ಚುನಾವಣೆಯಲ್ಲಿ ಸುನೀಲ್ ಬೋಸ್ ಅಭ್ಯರ್ಥಿಯಾಗಬೇಕೆಂದು ಕ್ಷೇತ್ರದ ಜನರು ಅಪೇಕ್ಷೆಪಟ್ಟಿರುವುದರಿಂದ ನರಸೀಪುರದಲ್ಲಿ ಆತನೆ ಅಭ್ಯರ್ಥಿಯಾಗಿ ಈ ಬಾರಿ ಕಣಕ್ಕಿಳಿಯಲಿದ್ದಾರೆ. ಅವನನ್ನು ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರು ಮತ್ತು ಮುಖಂಡರ ಮೇಲಿದೆ. ಚುನಾವಣೆಗೆ ಸ್ಪರ್ಧೆ ಇಲ್ಲವಾಗಿದ್ದರಿಂದ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರೊಟ್ಟಿಗೆ ದುಡಿಯುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಬಲಪಡಿಸುತ್ತೇನೆ ಎಂದರು.
ಕ್ಷೇತ್ರಾಭಿವೃದ್ಧಿಗೆ ಬೆಂಬಲಿಸಿ: ಕ್ಷೇತ್ರ ಮರುವಿಂಗಡಣೆ ನಂತರದ ನರಸೀಪುರ ಕ್ಷೇತ್ರದಲ್ಲಿ ಕೋಮು ಸಂಘರ್ಷಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಜಾತ್ಯತೀತ ಹಾಗೂ ಪûಾತೀತವಾಗಿ ಶೇ.90 ಅಭಿವೃದ್ಧಿ ಕೆಲಸವನ್ನು ಮಾಡಿದ್ದು, ಶೇ.10 ಬಾಕಿಯಿದೆ.
ಈಗ ಕ್ರೀಯಾ ಯೋಜನೆ ರೂಪಿಸಿ, ಅನುದಾನ ಮಂಜೂರು ಮಾಡಿದರೂ ಚುನಾವಣೆ ಮುಗಿದ ಬಳಿಕ ನರಸೀಪುರ ಸಂಪೂರ್ಣ ಅಭಿವೃದ್ಧಿಗೊಂಡ ಕ್ಷೇತ್ರವಾಗಲಿದೆ. ಕ್ಷೇತ್ರದ ಎಲ್ಲಾ ಜನರನ್ನು ಸಮಾನತೆಯ ಭಾವನೆಯಿಂದ ಕಂಡಿರುವುದರಿಂದ ಎಲ್ಲಾ ವರ್ಗದ ಮುಖಂಡರು ಚುನಾವಣೆಯಲ್ಲಿ ಬೆಂಬಲವನ್ನು ನೀಡಬೇಕೆಂದು ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮನವಿ ಮಾಡಿದರು.
ಕಾಂಗ್ರೆಸ್ ಸೇರಿದ ತಾಪಂ ಸದಸ್ಯರು: ತಾಲೂಕಿನ ಕಿರಗಸೂರು ತಾಪಂ ಕ್ಷೇತ್ರದ ಪಕ್ಷೇತರ ಸದಸ್ಯ ಎಂ.ರಮೇಶ್ ಹಾಗೂ ಹೆಗ್ಗೂರು ಕ್ಷೇತ್ರದ ಜೆಡಿಎಸ್ ಸದಸ್ಯ ಹೆಚ್.ಜವರಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಇಬ್ಬರಿಗೂ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಗುಲಾಬಿ ಹೂವಿನ ಹಾರ ಹಾಕಿ ಅಭಿನಂದಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಬನ್ನೂರು ಪಟ್ಟಣದ ಗಂಗಮತಸ್ಥರ ಮುಖಂಡ ಕಂಬು(ಸುಕನ್ಯ) ಅವರು ಕೂಡ ಕಾಂಗ್ರೆಸ್ ಬೆಂಬಲಿಸುವುದಾಗಿ ಸಚಿವರಿಗೆ ವಾಗ್ಧಾನ ನೀಡಿದರು.
ಜಿಪಂ ಸದಸ್ಯ ಮಂಜುನಾಥನ್, ಮೈಮುಲ್ ಮಾಜಿ ನಿರ್ದೇಶಕ ಕೇತುಪುರ ಪ್ರಭಾಕರ, ತಾ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ಸದಸ್ಯರಾದ ಕೆ.ಎಸ್.ಗಣೇಶ, ಕೆಬ್ಬೆ ರಂಗಸ್ವಾಮಿ, ಹೆಚ್.ಎನ್.ಉಮೇಶ, ಮಾಜಿ ಸದಸ್ಯರಾದ ಕೆ.ಜಿ.ವೀರಣ್ಣ, ಕೇತಳ್ಳಿ ಮಹದೇವಪ್ಪ, ದರಖಾಸ್ತು ಸಮಿತಿ ಸದಸ್ಯ ಕೆ.ಸಿ.ಮಹದೇವು,
ಅಹಿಂದ ಯುವ ಘಟಕದ ಜಿಲ್ಲಾಧ್ಯಕ್ಷ ಜೆ.ಅನೂಪ್‌ಗೌಡ, ಮುಖಂಡರಾದ ಮರಡೀಪುರ ಗೋಪಾಲ್, ದೊಡ್ಡಮುಲಗೂಡು ಸ್ವಾಮಿಗೌಡ, ಕಲಿಯೂರು ಸಿದ್ದರಾಜು, ಕೆಬ್ಬೆಹುಂಡಿ ಮಹೇಶ, ರಂಗಸಮುದ್ರ ರಮೇಶ, ಆಪ್ತ ಸಹಾಯಕ ಬಸವರಾಜು ಹಾಗೂ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.