ಪುಣೆ ಬಂಟರ ಭವನದ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ
Team Udayavani, Mar 20, 2018, 5:05 PM IST
ಪುಣೆ: ಪುಣೆಯಲ್ಲಿ ಬಹಳಷ್ಟು ವರ್ಷಗಳಿಂದ ನಮ್ಮದೇ ಒಂದು ಭವನ ಆಗಬೇಕೆಂಬ ಮಹದಾಸೆ ನಮ್ಮಲ್ಲಿತ್ತು. ಆದರೆ ಯಾವುದಕ್ಕೂ ಕಾಲ ಕೂಡಿಬರಬೇಕೆಂಬ ಮಾತಿನಂತೆ ಇಂದು ಸಂತೋಷ್ ಶೆಟ್ಟಿಯವರ ಸಾರಥ್ಯದಲ್ಲಿ ನಿಸ್ವಾರ್ಥವಾದ ಭಾವದೊಂದಿಗೆ ಕಾರ್ಯನಿರ್ವಹಿಸಿ ಸಮಾಜ ಬಾಂಧವರೆಲ್ಲರ ಸಹಕಾರದೊಂದಿಗೆ ನಮ್ಮದೇ ಭವನ ತಲೆಯೆತ್ತಿ ಲೋಕಾರ್ಪಣೆಗೆ ಸಜ್ಜುಗೊಂಡಿರುವುದು ಕೇವಲ ಪುಣೆ ಬಂಟರಿಗೆ ಮಾತ್ರವಲ್ಲ ಸಮಸ್ತ ಬಂಟಬಾಧವರ ಹೆಮ್ಮೆಯ ಸಂಕೇತವಾಗಿದೆ. ಬಂಟರ ಭವನ ಇದೊಂದು ಕೇವಲ ಭವನ ಮಾತ್ರವಲ್ಲ ನಮ್ಮ ಸಮಾಜದ ದೇಗುಲವಾಗಿದ್ದು ಸಮಾಜ ಬಾಂಧವರೆಲ್ಲರ ಆಸ್ಥೆಯ ಕೇಂದ್ರವಾಗಿ ಸುಸಜ್ಜಿತವಾಗಿ, ಸುಂದರವಾಗಿ ರೂಪುಗೊಂಡಿದೆ. ಬರುವ ಎಪ್ರಿಲ್ ತಿಂಗಳ 7 ಹಾಗೂ 8 ರಂದು ನಡೆಯಲಿರುವ ಭವನದ ಉದ್ಘಾಟನಾ ಸಮಾರಂಭಕ್ಕೆ ಸಮಸ್ತ ಬಂಟ ಬಾಧವರಿಗೆ ಆಮಂತ್ರಣ ಪತ್ರ ನೀಡಿ ಎಲ್ಲರನ್ನೂ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ
ಭಾಗಿಗಳಾಗುವಂತೆ ಮಾಡಬೇಕಾದ ಜವಾಬ್ದಾರಿ ನಮಗೆಲ್ಲರಿಗಿದೆ ಎಂದು ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಓಣಿಮಜಲು ಜಗನ್ನಾಥ ಬಿ. ಶೆಟ್ಟಿ ಅಭಿಪ್ರಾಯಪಟ್ಟರು.
ಮಾ. 18ರಂದು ಎಫ್‌ಸಿ ರೋಡ್‌ನಲ್ಲಿರುವ ತಮ್ಮ ಕಚೇರಿಯ ಕಾನ್ಪರೆನ್ಸ್ ಹಾಲ್‌ನಲ್ಲಿ ಯುಗಾದಿ ಹಬ್ಬದ ಶುಭಾಶಯವನ್ನು ನೀಡುತ್ತಾ, ಪುಣೆ ಬಂಟರ ಸಂಘದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಭವನದ ಉದ್ಘಾಟನಾ ಸಮಾರಂಭದ ಅಯಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ ಇಂದು ಮನಸ್ಸಿಗೆ ಬಹಳಷ್ಟು ಖುಷಿಯನ್ನು ನೀಡುವ ಸಂದರ್ಭವಾಗಿದ್ದು ನಮ್ಮದೇ ಆದ ಈ ಭವನವನ್ನು ಯಾವುದೇ ರೀತಿಯ ಕುಂದುಕೊರತೆಗಳಿರದಂತೆ ಸರ್ವಾಂಗಸುಂದರವಾಗಿ, ಸುಸಜ್ಜಿತವಾಗಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೆಲ್ಲರ ಶ್ರಮದಿಂದ ಹಾಗೂ ದಾನಿಗಳೆಲ್ಲರ ಉದಾರ ದೇಣಿಗೆಯಿಂದ ನಿರ್ಮಿಸಿ ಇತಿಹಾಸದಲ್ಲಿ ದಾಖಲಾಗುವಂತೆ ಮಾಡಿ ಪುಣೆ ಬಂಟರ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ನಮ್ಮ ಸಂಘದ ಮೇಲೆ ಎಲ್ಲರೂ ನಮ್ಮದೇ ಸಂಘವೆಂಬ ಅಭಿಮಾನ, ಪ್ರೀತಿಯನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಸಂಘವನ್ನು ಇನ್ನಷ್ಟು ಸಮಾಜ ಮುಖೀಯಾಗಿ ಬೆಳೆಸಬೇಕಾಗಿದೆ. ದೈವ ದೇವರ ಅನುಗ್ರಹದೊಂದಿಗೆ ಲೋಕಾರ್ಪಣಾ ಸಮಾರಂಭ ಅಭೂತಪೂರ್ವ ಯಶಸ್ಸನ್ನು ಕಾಣಲಿ. ಎಲ್ಲರೊ ಉತ್ಸಾಹದಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡು ಸಹಕಾರ ನೀಡಿ ಬೆಂಬಲಿಸಿ ನನ್ನ ಪೂರ್ಣ ಸಹಕಾರ, ಆಶೀರ್ವಾದ ನಿಮ್ಮೊಂದಿಗಿದೆ ಎಂದರು.
ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಮೊದಲಿಗೆ ಸ್ವಾಗತಿಸಿ ಮಾತನಾಡಿ, ಯುಗಾದಿಯ ಈ ಪುಣ್ಯ ಪರ್ವಕಾಲದಲ್ಲಿ ನಮ್ಮ ಭವನದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರವನ್ನು ನಮ್ಮೆಲ್ಲರ ಅಭಿಲಾಷೆಯಂತೆ ನಮ್ಮ ಸಂಘದ ಭವನದ ಅತೀ ದೊಡ್ಡ ದಾನಿ, ಸಂಘದ ಶಕ್ತಿಯಾಗಿ, ಪ್ರೇರಣೆಯಾಗಿ ನಮ್ಮೆಲ್ಲ ಕಾರ್ಯಗಳಿಗೆ ಬಲ ತುಂಬಿ ಪ್ರೋತ್ಸಾಹಿಸಿದ ಹಿರಿಯರಾದ ಸಂಘದ ಗೌರವಾಧ್ಯಕ್ಷರಾದ ಜಗನ್ನಾಥ ಶೆಟ್ಟಿಯವರ ಶುಭ ಹಸ್ತದಿಂದ ಬಿಡುಗಡೆಗೊಳಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಬಹಳಷ್ಟು ದಿನಗಳಿಂದ ಎಲ್ಲರೊಂದಿಗೆ ಚರ್ಚಿಸಿ ಹಲವಾರು ವಿಚಾರಗಳನ್ನು ಮನಗಂಡು ಸಂಘಕ್ಕೆ ದೇಣಿಗೆ ನೀಡಿದ ಮಾಹಾದಾನಿಗಳನ್ನು ಪರಿಗಣಿಸಿ ಅದರೊಂದಿಗೆ ಸಮಾಜದ ವಿವಿಧ ಸಾಧಕರನ್ನು ಮನಗಂಡು ಅಂತಿಮವಾಗಿ ನಿರ್ಧಾರಗಳನ್ನು ತೆಗೆದುಕೊಂಡು ಈ ಆಮಂತ್ರಣ ಪತ್ರಿಕೆಯನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಆಮಂತ್ರಿತ ಅತಿಥಿಗಳೆಲ್ಲರನ್ನೂ ಸತತವಾಗಿ ಸಂಪರ್ಕಿಸಿ ಅವರ ಒಪ್ಪಿಗೆಯನ್ನು ಪಡೆದುಕೊಂಡು ಆಮಂತ್ರಣ ಪತ್ರಿಕೆಯನ್ನು ಅಂತಿಮ ಗೊಳಿಸಲಾಗಿದೆ. ಇದೀಗ ದೇಣಿಗೆ ನೀಡಿದ ಸಮಸ್ತ ದಾನಿಗಳನ್ನು ಆಮಂತ್ರಿಸುವುದಲ್ಲದೆ ಪುಣೆಯ ಸಮಾಜ ಬಾಂಧವರೆಲ್ಲರಿಗೂ ಆಮಂತ್ರಣಪತ್ರ ನೀಡಿ ಸಮಾರಂಭದಲ್ಲಿ ಭಾಗಿಗಳಾಗುವಂತೆ ಮಾಡುವ ಬಲುದೊಡ್ಡ ಜವಾಬ್ದಾರಿ ಸಂಘದ ಎಲ್ಲಾ ಕಾರ್ಯಕರ್ತರಿಗಿದ್ದು ಪ್ರತಿಯೊಬ್ಬರೂ ಈಗಿಂದಲೇ ಆಮಂತ್ರಣ ಪತ್ರ ವಿತರಿಸುವ ಕಾರ್ಯ ಆಗಬೇಕಾಗಿದೆ. ಈಗಾಗಲೇ ಸಮಾರಂಭದ ಸಿದ್ಧತೆಗೆ ನೇಮಕಗೊಳಿಸಿದ ವಿವಿಧ ಸಮಿತಿಗಳಿಗೆ ಜವಾಬ್ದಾರಿಗಳನ್ನು ಹಂಚುವ ಕಾರ್ಯವಾಗಿದ್ದು ಸೀಮಿತ ಅವಧಿಯಲ್ಲಿ ಎಲ್ಲಾ ಸಿದ್ಧತಾ ಕಾರ್ಯಗಳು ನಡೆಯಬೇಕಿದೆ. ಸಮರೋಪಾದಿಯಲ್ಲಿ ನಮ್ಮ ಕೆಲಸಗಳು ಆಗಬೇಕಿದೆ. ಎಲ್ಲರೂ ಉತ್ಸಾಹದಿಂದ ಅಭಿಮಾನದಿಂದ ಸಹಕಾರ ನೀಡಿ ಎಂದರು.
ಈ ಸಂದರ್ಭ ಜಗನ್ನಾಥ ಶೆಟ್ಟಿಯವರಿಗೆ ಸಂಘದ ಭವನದ ಕಾರ್ಯಗಳು ಪೂರ್ಣಗೊಳ್ಳುತ್ತಿರುವ ಬಗ್ಗೆ, ಉದ್ಘಾಟನಾ ಸಮಾರಂಭದ ಆಮಂತ್ರಿತ ಅತಿಥಿಗಳ ಬಗ್ಗೆ, ಸಮಾರಂಭವನ್ನು ಯಶಸ್ವಿಗೊಳಿಸಲು ರಚಿಸಲಾದ ಸಮಿತಿಗಳು, ಎರಡು ದಿವಸಗಳ ಕಾಲ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ವಿಸ್ತೃತವಾಗಿ ತಿಳಿಸಿದರು. ಸಂಘದ ಭವನದ ಮುಂದಿನ ಕಾರ್ಯಯೋಜನೆಗಳ ಬಗ್ಗೆಯೂ ಚರ್ಚಿಸಲಾಯಿತು.
ಈ ಸಂದರ್ಭ ನಿವೃತ್ತ ಐ. ಜಿ. ಜಯಾನಂದ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಗೌರವ ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಶಶೀಂದ್ರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ವಿವೇಕಾನಂದ ಶೆಟ್ಟಿ ಆವರ್ಸೆ, ಶ್ರೀನಿವಾಸ ಶೆಟ್ಟಿ, ಗಣೇಶ್ ಶೆಟ್ಟಿ, ರಂಜಿತ್ ಶೆಟ್ಟಿ, ಪ್ರಶಾಂತ ಶೆಟ್ಟಿ ಹೆರ್ಡೆಬೀಡು, ಪ್ರಾದೇಶಿಕ ಸಮಿತಿ ಪದಾಧಿಕಾರಿಗಳಾದ ಗಣೇಶ್ ಪೂಂಜಾ, ವಸಂತ್ ಶೆಟ್ಟಿ ಯುವ ವಿಭಾಗದ ಪ್ರಫುಲ್ ಶೆಟ್ಟಿ, ದಯಾನಂದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.