ಮೊದ್ಲನೆ ನೋಟ್ದಾಗೇ ನಿಂಗೆ ಬಿಧ್ದೋಗ್ಬಿಟ್ಟೆ!
Team Udayavani, Mar 20, 2018, 5:37 PM IST
ಸುಂದ್ರಿ, ನೀನು ನೋಡಾಕಂತೂ ಬಲು ಪಸಂದಾಗಿದಿಯಾ. ಕಾಲೇಜಿಗೆ ಬಂದ್ ಮೊದ್ಲ ದಿನವೇ ಹ್ಯಾಂಗೋ ನನ್ನ ನೋಟ ನಿನ್ನ ಮ್ಯಾಲೆ ಬಿದಿºಟ್ಟು, ಅದ್ಯಾಗೋ ನಿನ್ ಮ್ಯಾಲೆ ಇಷ್ಟ ಆಗಿ, ಒಂಥರಾ ಪಿರುತಿ ಶುರುವಾಗೈತಿ ಕಣಮ್ಮಿ. ಅದೇನು ಇಂಗ್ಲೀಸಲ್ಲಿ ಹೇಳ್ತಾರಲ್ಲ “ಲವ್ ಎಟ್ ಫಸ್ಟ್ ಸೈಟ್’ ಅಂತೇನೋ… ಹಾಗೆ. ನಾನು ಮೊದ್ಲನೇ ನೋಟ್ದಾಗೇ ನಿಂಗೆ ಬಿಧ್ದೋಗ್ ಬಿಟ್ಟೆ.
ಅದು ನಮ್ಮೂರ ಸಿದ್ದರಾಮೇಸ್ವರ ಬಸ್ನಾಗೆ ನೋಡಾªಂಗಿದಾ. ಅವಾಗಿಂದ ನಿನ್ನ ಕಂಡ್ರೆ ಅದೊಂತರಾ ಮರುಭೂಮಿಯಲ್ಲಿ ಮಳೆಬಿದ್ದು ಪೈರು ಬಂದಾಂಗ ಆಯ್ತದೆ ನೋಡು, ಹಂಗೇ ಆಗ್ತದೆ! ಮೊದೆÉà ನಾನೊಂಥರಾ ಸಾಧು ಹುಡ್ಗ. ನನೆY ಮೊದ್ಲಿಂದೂÉ ಪಿರುತಿ ಅಂದ್ರೆ ಏನಂತ ಗೊತ್ತಿಲ್ದಿರೋ ಹೊತ್ನಲ್ಲಿ ನೀನ್ ಪಾರಿವಾಳದಂಗ್ ಬಂದು ನನ್ ಹೃದಯ್ದಾಗ ಗೂಡು ಕಟ್ಟೋಕ್ ಸುರುಮಾಡಿದೀಯಾ.
ನಿನ್ ನೋಡಾªಗಿಂದ ಮನಸ್ಸಲ್ಲೀ ಏನೋ ಒಂಥರಾ ತಳಮಳ ಸುರುವಾಗೈತಿ. ರಾತ್ರಿ ಪೂರ ನಿಂದೇ ಕನಸು. ಓದಾಕ್ ಕುಂತೂÅ ನಿಂದೇ ಧ್ಯಾನ ಅನ್ನೋಂಗೆ ಆಗೈತಿ ನೋಡಮ್ಮಿ. ಕಾಲೇಜಾ°ಗೆ ನೀನ್ ಚಟ ಚಟ ಅಂತ ಆಡೋ ಮಾತು, ಪಟ ಪಟ ಅಂತ ಸದ್ದು ಮಾಡೋ ಆ ನಿನ್ ಕಣÅಪ್ಪೆ, ರೇಷ್ಮೆ ಎಳೆಯಂತಿರೋ ನಿನ್ ಜಡೆ, ಮಲ್ಲಿಗೆಯಂಥ ಮನಸ್ಸು…ಇದೆಲ್ಲ ಬ್ಯಾರೆ ಯಾರೂY ಇರ್ಲಿಕ್ಕಿಲ್ಲ ಅನ್ಸೆ„ತಿ.
ಕ್ಲಾಸ್ನಾಗೆ ಎಲ್ಲರ ಕಣ್ಣು ಪಾಠ ಮಾಡೋ ಬೋರ್ಡ್ ಮ್ಯಾಲೇ ಇದ್ರೆ, ನನ್ ಕಣ್ ಮಾತ್ರ ನಿನ್ ಮ್ಯಾಲೆ ಇರೆ¤çತಿ. ಇತ್ತೀಚೆY ಯಾಕೋ ನನ್ ಮನಸ್ಸು ಒಂತರಾ ಚಿಟ್ಟೆಯಂಗ್ ಖುಸಿಯಾಗಿ ಇರಕ್ಕತೈತಿ. ನಮ್ ಕಾಲೇಜ್ ಕಾಂÂಪಸ್ ತುಂಬಾ ಏಸೊಂದ್ ಹುಡ್ಗಿàರು ಚೆಂದವಾಗಿರೋ ಜೀನ್ಸ್ ಪ್ಯಾಂಟ್, ಟೀಶರ್ಟ್ ಹಾಕ್ಕೊಂಡು, ಚೋಟುದ್ದ ಜಡೆ ಬಿಡ್ಕೊಂಡು, ಮುಖದ್ ತುಂಬಾ ಪೌಡ್ರು,
ಲಿಪ್ಟಿಕ್ ಮೆತ್ಕೊಂಡು ಎಲ್ಲಾ ಹುಡುಗ್ರು ನನ್ನೆ ನೋಡ್ಲಿ ಅಂತಾ ಕ್ಲಾಸ್ ಇಲೆªà ಇದ್ರು ಸುಮ್ಮನೆ ಸುತ್ತುತ್ತಿದ್ರೂ, ಅವರ್ಯಾರು ನನ್ ಕಣ್ಣಿಗೆ ಬೀಳಿÉಲ್ಲ ನೋಡಮ್ಮಿ. ನನೆY ನಿನ್ ಮ್ಯಾಲೇ ಎಷ್ಟೊಂದು ಪಿರುತಿ ಮೂಡೈತೆ ಅನ್ನೋದ್ ಅಲ್ಲೇ ಗೊತ್ತಾಯ್ತದೆ. ಮರುಭೂಮಿಯಂಗ್ ಇದ್ª ನನ್ ಚಿಕ್ಕ ಹೃದಯ್ದಾಗ ಬೆಳೆಬಿತ್ತಿ ಫಸಲು ತಗೀಯಾಕೆ ಹೊರಟಿದ್ದೀಯಾ ಅನ್ಸುಸೆôತಿ.
ಇತ್ತೀಚೆY ಅದೇನೈತೋ ಏನೋ ನಮ್ ಕಾಲೇಜಾ°ಗ್ ಮಾಡೋ ಗಣಿತ, ಇಂಗ್ಲೀಸು ಎಲ್ಲಾನೂ ತಲಿ ಒಳಗ ಹೋಗ್ಲಿಕ್ಕತೈತಿ. ಅದೇನು ಮೇಷ್ಟ್ರು ಮಾಡಿದ್ ಪವಾಡನೋ ಅಥವಾ ನೀನ್ ಮಾಡ್ತಿರೋ ಪವಾಡನೋ ಒಂದೂ ತಿಳಿವಲುª. ನಿಂಗೊತ್ತ ?ಆ ಬ್ರಹ್ಮದೇವ ಮೊದೆÉà ಜೋಡಿನಾ ದೇವಲೋಕಾªಗೆ ಪಿಕ್ಸ್ ಮಾಡಿರ್ತಾ ನಂತೆ. ಅದೇನೇ ಆದ್ರೂ ನನ್ ಅರಮನಿಯಾಗ್ ನೀನೇ ರಾಣಿಯಾಗ್ಬೇಕು ಅನ್ನೋದೇ ನನ್ ಕೊನಿ ಆಸೆ.
* ರಘು. ಕೆ.ಜಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.