ಹೃದಯದಲ್ಲೇ ಉಳಿಯುವ ಶಿಕ್ಷೆ ವಿಧಿಸಲಾಗಿದೆ!


Team Udayavani, Mar 20, 2018, 5:37 PM IST

hrudaya.jpg

ನನಗೆ ಅರ್ಥವಾಗಿರುವಂತೆ, ನನಗೆ ಗೊತ್ತಿರುವಂತೆ ನಿನ್ನ ಎದೆಯೊಳಗೂ ಪ್ರೀತಿಯ ಹೂ ಅರಳಿದೆ. ಆದರೆ, ಹಾಗಂತ ನೀನು ಹೇಳಿಕೊಂಡಿಲ್ಲ. ನಾನು, ಯಾವುದೇ ಮುಚ್ಚುಮರೆಯಿಲ್ಲದೆ ನನ್ನ ಮನದ ಮಾತುಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದೇನೆ!

ಪೆದ್ದು, ಅದ್ಯಾವಾಗ ನಿನ್ನ ಕಡೆಗೆ ನನ್ನ ಮನಸ್ಸು ಅರಿವಿಲ್ಲದೆ ಜಾರಿತೋ, ನನಗೇ ಗೊತ್ತಿಲ್ಲ! ಮನದಲ್ಲಿ ಹೇಳಲಾಗದ ಸಿಹಿಯಾದ ಸಂಕಟ. ಯಾವಾಗ ನೋಡಿದರೂ ಮೊಗದಲ್ಲಿ ಮರೆಯಾಗದ ಸಣ್ಣ ಮುಗುಳು. ನಂಗೆ ಅಚ್ಚರಿ ಅದರ ಕುರಿತು! ಈ ನಗು ಮುಖದಲ್ಲಿ ಸದಾ ಸದಾ ಸದಾ ಇರುವುದಾದರೂ ಹೇಗೆ ಎಂಬ ಗುಟ್ಟನ್ನು ಈವರೆಗೂ ನನಗೆ ಹೇಳಿ ಕೊಡದಿರುವ ಕುರಿತು ಸಣ್ಣ ತಕರಾರಿದೆ.

ಜಸ್ಟ್‌ ಆ ನಿನ್ನ ಬಿಂದಾಸ್‌ ನಗೆಯಿಂದಲೇ ಯೂನಿವರ್ಸಿಟಿಯ ಹಸಿರಂತೆ, ನನ್ನನ್ನು ಪಟ್ಟನೆ ಚುಂಬಕ ಶಕ್ತಿಯಂತೆ ಹಿಡಿದೆಳೆದು ಬಿಟ್ಟೆಯಲ್ಲ ಈ ತಪ್ಪಿಗೆ ಯಾವತ್ತಿಗೂ ಕ್ಷಮೆಯಿಲ್ಲ. ಪಟಪಟನೆ ಅರಳು ಹುರಿದಂತೆ ಮಾತನಾಡುವ ಆ ನಿನ್ನ ಗುಣ, ನಿನ್ನ ಮಗುತನ, ಹತ್ತು ನಿಮಿಷಕ್ಕೊಮ್ಮೆ ಸಾರಿ ಅನ್ನುವ ಮುಗ್ಧತೆ, ಎಲ್ಲರಿಗೂ ಒಳಿತು ಬಯಸೋ ಗುಣ… ಹೇಳ್ತಾ ಹೋದಂಗೆ ಪಟ್ಟಿ ಉದ್ದ ಆಗುತ್ತೆ.

ನಾ ಸೋತಿದ್ದು ಬಲಗಡೆಯ ಕಣ್ಣಂಚಿನ ಪಕ್ಕದ ಸಣ್ಣ ಮಚ್ಚೆಗೋ, ಆ ನಿನ್ನ ಕುರುಚಲು ಗಡ್ಡಕ್ಕೋ ಅದನ್ನೂ ನೀನೇ ವಿವರಿಸಬೇಕು. ಪ್ರೀತಿ-ಪ್ರೇಮ ಪುಸ್ತಕದ ಬದನೆಕಾಯಿ ಅಂತಿದ್ದವಳನ್ನು, ಇದ್ಯಾವುದೂ ನಂಗಿಷ್ಟ ಆಗೋಲ್ಲ ಅನ್ನುವವವಳನ್ನು ಪ್ರೇಮದ ಬಲೆಗೆ ಕೆಡವಿದ್ದು ನೀನು ಮಾಡಿರುವ ದೊಡ್ಡ ಅಪರಾಧ. ಅದ್ಕೆ ನಿಂಗೆ, ನನ್ನನ್ನು ಯಾವತ್ತೂ ಬಿಟ್ಟು ಹೋಗಬಾರದು ಅನ್ನುವ,

ಆಜೀವ ಪರ್ಯಂತ ನನ್ನ ಹೃದಯದಲ್ಲಿ ನೆಲೆಸುವ ಪ್ರೀತಿಪೂರ್ವಕ ಶಿಕ್ಷೆಯನ್ನು ನೀಡಲಾಗುತ್ತಿದೆ. ಇದಕ್ಕೆ ಮುತ್ತಿನ ದಂಡ ತೆರುತ್ತೇನೆ ಎಂದರೂ ಖಂಡಿತಾ ಬಿಡುಗಡೆ ಇಲ್ಲ. ನೀನು ಹಾಗಿರಬೇಕು, ಹೀಗಿರಬೇಕು ಎಂದು ನಾನು ಯಾವತ್ತೂ ಕಂಡೀಷನ್ಸ್‌ ಹಾಕೋಲ್ಲ. ಆದರೆ ನೀನು ಎಲ್ಲೇ ಇದ್ದರೂ ಮುಂಜಾನೆ ನಾನು ಕಣಿºಡುವ ಮುನ್ನ ನಿನ್ನ ಗುಡ್‌ ಮಾರ್ನಿಂಗ್‌ ಮೆಸೇಜು ನನ್ನ ಮೊಬೈಲಿನ ಇನ್‌ಬಾಕ್ಸ್‌ನಲ್ಲಿ ಕುಳಿತಿರಬೇಕು.

ರಾತ್ರಿ ನೀನು ಗುಡ್‌ನೈಟ್‌ ಹೇಳಿದ ಮೇಲೆಯೇ ನಾನು ಮಲಗೋದು. ನನ್ನೆಲ್ಲ ಆಸೆ ಕನಸುಗಳಿಗೆ ನೀ ಸ್ಫೂರ್ತಿಯಾಗಿ, ಜೊತೆಗೆ ಆಸರೆಯಾಗಿ ನಿಲ್ಲಬೇಕು ಅನ್ನೋದು ನನ್ನಾಸೆ. ಇದೆಲ್ಲವನ್ನೂ ನಿನ್ನ ಹತ್ರ ಹೇಳ್ಬೇಕು. ಆದ್ರೆ ಹೇಗೆ ಹೇಳಬೇಕು ಅನ್ನೋದೇ ಗೊಂದಲ ನನಗೆ. ನಾನು ಗಮನಿಸಿರುವಂತೆ, ನನಗೆ ಅರ್ಥವಾಗಿರುವಂತೆ ನಿನ್ನ ಮನಸ್ಸಲ್ಲಿಯೂ ಪ್ರೀತಿ ಇದೆ.

ಆದರೆ ನೀನು ಹೇಳ್ತಿಲ. ಅದಕ್ಕೇ ನಾನೇ ಧೈರ್ಯ ಮಾಡಿ ಪತ್ರ ಬರೆದಿದ್ದೀನಿ. ಇದನ್ನ ನೋಡಿದ ತಕ್ಷಣನಾದ್ರೂ ಬಂದು ಒಪ್ಪಿಕೊಳ್ಳುವ ಧೈರ್ಯ ಮಾಡು. ನಿನ್ನಿಷ್ಟದ ನೀಲಿ ಬಣ್ಣದ ಚೂಡಿದಾರ್‌ ಧರಿಸಿ ಯೂನಿವರ್ಸಿಟಿ ಅಂಗಳದಲ್ಲಿ ನಾನು ಕಾಯ್ತಾ ಇರ್ತಿನಿ. ಬೇಗ ಬಾ. ಜಾಸ್ತಿ ಕಾಯಿಸಬೇಡ..

 ಇಂತಿ ನಿನ್ನ ತರ್ಲೆ ಹುಡುಗಿ
* ರಾಜೇಶ್ವರಿ ಲಕ್ಕಣ್ಣವರ

ಟಾಪ್ ನ್ಯೂಸ್

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.