ಐಸಿಸಿ ಅರ್ಹತಾ ಕೂಟ: ವಿಶ್ವಕಪ್‌ಗೆ ಅರ್ಹತೆ ಸನಿಹ ವೆಸ್ಟ್‌ಇಂಡೀಸ್‌


Team Udayavani, Mar 21, 2018, 10:20 AM IST

WI-Zim-20-3.jpg

ಹರಾರೆ: ಮಾರ್ಲಾನ್‌ ಸಾಮ್ಯುಯೆಲ್ಸ್‌ ಮತ್ತು ಶೈ ಹೋಪ್‌ ಅವರ ಉಪಯುಕ್ತ ಆಟದಿಂದಾಗಿ ವೆಸ್ಟ್‌ಇಂಡೀಸ್‌ ತಂಡವು ಐಸಿಸಿ ವಿಶ್ವಕಪ್‌ ಅರ್ಹತಾ ಕೂಟದ ಸೂಪರ್‌ ಸಿಕ್ಸಸ್‌ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವಿನಿಂದ ವೆಸ್ಟ್‌ಇಂಡೀಸ್‌ ಸೂಪರ್‌ ಸಿಕ್ಸಸ್‌ ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿ ಆರಂಕ ಪಡೆದು ಅಗ್ರಸ್ಥಾನದಲ್ಲಿದೆ. ಜಿಂಬಾಬ್ವೆ ಮತ್ತು ಸ್ಕಾಟ್ಲೆಂಡ್‌ ತಲಾ ಐದಂಕ ಹೊಂದಿದೆ. ಸೂಪರ್‌ ಸಿಕ್ಸಸ್‌ ಹಂತದ ಅಂತಿಮ ಲೀಗ್‌ ಪಂದ್ಯದಲ್ಲಿ  ವೆಸ್ಟ್‌ಇಂಡೀಸ್‌ ತಂಡವು ಸ್ಕಾಟ್ಲೆಂಡ್‌ ತಂಡವನ್ನು ಎದುರಿಸಲಿದ್ದರೆ ಜಿಂಬಾಬ್ವೆ ತಂಡವು ಯುಎಇ ವಿರುದ್ಧ ಆಡಲಿದೆ. ಯುಎಇ ವಿರುದ್ಧ ಗೆದ್ದರೆ ಮಾತ್ರ ಜಿಂಬಾಬ್ವೆಗೆ ವಿಶ್ವಕಪ್‌ಗೆ ಅರ್ಹತೆ ಗಳಿಸುವ ಅವಕಾಶವಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ತಂಡವು ಬ್ರೆಂಡನ್‌ ಟಯ್ಲರ್‌ ಅವರ ಭರ್ಜರಿ ಶತಕದಿಂದಾಗಿ ಸರಿಯಾಗಿ 50 ಓವರ್‌ಗಳಲ್ಲಿ 289 ರನ್ನಿಗೆ ಆಲೌಟಾಯಿತು. 124 ಎಸೆತ ಎದುರಿಸಿದ ಟಯ್ಲರ್‌ 138 ರನ್‌ ಗಳಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. 20 ಬೌಂಡರಿ ಬಾರಿಸಿದ ಅವರು 2 ಸಿಕ್ಸರ್‌ ಸಿಡಿಸಿದ್ದರು. ಆರಂಭಿಕ ಸೊಲೋಮನ್‌ ಮಿರ್‌ (45) ಮತ್ತು ಸೀನ್‌ ವಿಲಿಯಮ್ಸ್‌ 34 ರನ್‌ ಗಳಿಸಿದರು. ಬಿಗು ದಾಳಿ ಸಂಘಟಿಸಿದ ಜಾಸನ್‌ ಹೋಲ್ಡರ್‌ 35 ರನ್ನಿಗೆ 4 ವಿಕೆಟ್‌ ಕಿತ್ತರೆ ಕೆಮರ್‌ ರೋಚ್‌ 55 ರನ್ನಿಗೆ 3 ವಿಕೆಟ್‌ ಪಡೆದರು.

ಗೆಲ್ಲಲು 290 ರನ್‌ ಗಳಿಸುವ ಸವಾಲು ಪಡೆದ ವೆಸ್ಟ್‌ಇಂಡೀಸ್‌ ತಂಡವು ಕ್ರಿಸ್‌ ಗೇಲ್‌ ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಇನ್ನೋರ್ವ ಆರಂಭಿಕ ಎವಿನ್‌ ಲೂಯಿಸ್‌ ಸಹಿತ ಶೈ ಹೋಪ್‌ ಮತ್ತು ಮಾರ್ಲಾನ್‌ ಸಾಮ್ಯುಯೆಲ್ಸ್‌ ಅವರ ಉಪಯುಕ್ತ ಆಟದಿಂದಾಗಿ 49 ಓವರ್‌ಗಳಲ್ಲಿ 6 ವಿಕೆಟಿಗೆ 290 ರನ್‌ ಪೇರಿಸಿ ಜಯಭೇರಿ ಬಾರಿಸಿತು. ಇದು ಏಕದಿನ ಇತಿಹಾಸದಲ್ಲಿ ವೆಸ್ಟ್‌ಇಂಡೀಸ್‌ ತಂಡ ಚೇಸ್‌ ಮೂಲಕ ಗೆದ್ದ ಗರಿಷ್ಠ ಮೊತ್ತದ ಐದನೇ ಗೆಲುವು ಆಗಿದೆ. ಲೂಯಿಸ್‌ 64, ಹೋಪ್‌ 76 ಮತ್ತು ಸಾಮ್ಯುಯೆಲ್ಸ್‌ 86 ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ 50 ಓವರ್‌ಗಳಲ್ಲಿ 289 (ಬ್ರೆಂಡನ್‌ ಟಯ್ಲರ್‌ 138, ಸೊಲೋಮನ್‌ ಮಿರ್‌ 45, ಸೀನ್‌ ವಿಲಿಯಮ್ಸ್‌ 34, ಹೋಲ್ಡರ್‌ 35ಕ್ಕೆ 4, ರೋಶ್‌ 55ಕ್ಕೆ 3); ವೆಸ್ಟ್‌ಇಂಡೀಸ್‌ 49 ಓವರ್‌ಗಳಲ್ಲಿ 6 ವಿಕೆಟಿಗೆ 290 (ಲೂಯಿಸ್‌ 64, ಹೋಪ್‌ 76, ಸಾಮ್ಯುಯೆಲ್ಸ್‌ 86, ಮುಝರಬಾನಿ 36ಕ್ಕೆ 2).

ಟಾಪ್ ನ್ಯೂಸ್

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!

bjp-congress

BJP vs Congress ; ಕೇಸ್‌ ಮೇಲೆ ಕೇಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI: ಇಂದು ಬಿಸಿಸಿಐ ವಾರ್ಷಿಕ ಸಭೆ

BCCI: ಇಂದು ಬಿಸಿಸಿಐ ವಾರ್ಷಿಕ ಸಭೆ

028

IPL players: ಐಪಿಎಲ್‌ ಆಟಗಾರರಿಗೆ ಬಂಪರ್‌ ಸಂಭಾವನೆ

1-reee

Vinoo Mankad Trophy: ರಾಜ್ಯ ತಂಡಕ್ಕೆ ಬ್ರಹ್ಮಾವರದ ರೋಹಿತ್‌

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.