ಬಿಸಿಸಿಐ-ಐಸಿಸಿ ಮತ್ತೂಂದು ಸುತ್ತಿನ ಸಮರ


Team Udayavani, Mar 21, 2018, 10:35 AM IST

BCCI-Logo-New-600.jpg

ಮುಂಬಯಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ನಡುವೆ ಮತ್ತೂಂದು ಸುತ್ತಿನ ಸಮರಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ. ಜಗಳಕ್ಕೆ ಹೊಸ ಕಾರಣ ಇದುವರೆಗೆ ಏಕದಿನ ಮಾದರಿಯಲ್ಲಿ ನಡೆಯುತ್ತಿದ್ದ ಚಾಂಪಿಯನ್ಸ್‌ ಟ್ರೋಫಿಯನ್ನು ಟಿ20 ಮಾದರಿಗೆ ಬದಲಿಸಲು ಐಸಿಸಿ ಹೊರಟಿದ್ದು. ಇದಕ್ಕೆ ಬಿಸಿಸಿಐ ಬಲವಾದ ವಿರೋಧ ವ್ಯಕ್ತಪಡಿಸಿದೆ.

2021ರ ಚಾಂಪಿಯನ್ಸ್‌ ಟ್ರೋಫಿ ಭಾರತದಲ್ಲೇ ನಡೆಯಲಿದೆ. ಹೆಚ್ಚಿನ ಆದಾಯದ ದೃಷ್ಟಿಯಿಂದ ಈ ಕೂಟವನ್ನು ಟಿ20 ಮಾದರಿಗೆ ಬದಲಿಸಲು ಕೆಲ ರಾಷ್ಟ್ರಗಳು ಒಲವು ತೋರಿವೆ. ಇದಕ್ಕೆ ಸರಿಯಾಗಿ ಐಸಿಸಿ ಕೂಡ ಟಿ20 ಮಾದರಿ ಬಯಸುತ್ತಿದೆ. ಈ ವರ್ಷ ಸಹರಾಷ್ಟ್ರಗಳಿಗೆ ಆದಾಯ ಹಂಚಿಕೆ ಮಾಡಬೇಕಾದ ಸಂದರ್ಭದಲ್ಲಿ ಐಸಿಸಿಗೆ ಒಂದಷ್ಟು ನಷ್ಟವಾಗುತ್ತದೆ. ಇದನ್ನು ತುಂಬಿಕೊಳ್ಳಲು ಐಸಿಸಿ ಈ ದಾರಿಗೆ ಮೊರೆ ಹೊಕ್ಕಿದೆ. ಈ ಕೂಟವನ್ನು ಭಾರತದಲ್ಲಿ ನಡೆಸುವುದಕ್ಕೇ ಐಸಿಸಿಗೆ ಮನಸ್ಸಿರಲಿಲ್ಲ. ಕಾರಣ ಭಾರತದಲ್ಲಿ ಐಸಿಸಿ ಕೂಟಗಳಿಗೆ ಕೇಂದ್ರ ಸರಕಾರದ ತೆರಿಗೆ ವಿನಾಯಿತಿ ಇಲ್ಲ. ಇದು ಆದಾಯದ ಪ್ರಮಾಣವನ್ನು ತಗ್ಗಿಸುತ್ತದೆ. ಆದ್ದರಿಂದ ಇದೇ ರೀತಿಯ ಸಮಯವನ್ನು ಹೊಂದಿರುವ ಇತರೆ ರಾಷ್ಟ್ರಗಳಿಗೆ ಕೂಟವನ್ನು ಸ್ಥಳಾಂತರಿಸಲು ಐಸಿಸಿ ಯತ್ನಿಸಿತ್ತು. ಅದೂ ಕೂಡ ಬಿಸಿಸಿಐನ ವಿರೋಧದಿಂದ ನಿಂತುಹೋಗಿತ್ತು.

2021ರ ಕೂಟ ಇದೇ ಮಾದರಿಯಲ್ಲಿರಬೇಕು ಎನ್ನುವುದು ಬಿಸಿಸಿಐ ಇಂಗಿತ. ಬಿಸಿಸಿಐನ ಮಾಜಿ ಅಧ್ಯಕ್ಷ ದಿವಂಗತ ಜಗಮೋಹನ್‌ ದಾಲ್ಮಿಯಾ ಅವರ ಕೂಸು ಈ ಕೂಟ. 2021ರಂದು ಅವರ ಐದನೇ ವರ್ಷದ ಪುಣ್ಯತಿಥಿ ಇರುವುದರಿಂದ ಈ ಕೂಟದ ಸ್ವರೂಪ ಯಥಾ ಸ್ಥಿತಿಯಲ್ಲಿರಬೇಕೆನ್ನುವುದು ನಮ್ಮ ಆಗ್ರಹ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಗಮನಿಸಬೇಕಾದ ಸಂಗತಿಯೆಂದರೆ ಈ ಕೂಟದ ಫೈನಲ್‌ ಪಂದ್ಯ ದಾಲ್ಮಿಯಾ ಜನ್ಮಸ್ಥಳ ಕೋಲ್ಕತಾದಲ್ಲಿ ನಡೆಯುವ ಸಾಧ್ಯತೆಯಿದೆ.

2017ರಲ್ಲಿ ಬಿಸಿಸಿಐಗೆ ಹೀನಾಯ ಸೋಲು!
2017ರಲ್ಲಿ ಬಿಸಿಸಿಐ ಮತ್ತು ಐಸಿಸಿ ನಡುವೆ ಭಾರೀ ಪ್ರಮಾಣದಲ್ಲಿ ಕದನ ನಡೆದಿತ್ತು. ಮಾಮೂಲಿಯಾಗಿ ಐಸಿಸಿಯನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದ ಬಿಸಿಸಿಐ 2017ರ ಎಪ್ರಿಲ್‌ನಲ್ಲಿ ಅವಮಾನ ಅನುಭವಿಸಿತು. ಐಸಿಸಿಯ ಆಡಳಿತಾತ್ಮಕ ಸ್ವರೂಪ ಬದಲಾವಣೆ, ಬಿಗ್‌ ಥ್ರಿà ಆದಾಯ ನೀತಿ ಹಂಚಿಕೆ ರದ್ದತಿ, 2 ಹಂತದ ಟೆಸ್ಟ್‌ ಸರಣಿ ಆರಂಭಕ್ಕೆ ಬಿಸಿಸಿಐ ವಿರೋಧಿಸಿತ್ತು. ಆದರೆ ಶ್ರೀಲಂಕಾ ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರಗಳು ಬಿಸಿಸಿಐ ವಿರುದ್ಧ ನಿಂತವು. ಅನಿವಾರ್ಯವಾಗಿ ಐಸಿಸಿ ತೀರ್ಮಾನವನ್ನು ಬಿಸಿಸಿಐ ಒಪ್ಪಿಕೊಳ್ಳಲೇಬೇಕಾಯಿತು. ಅಚ್ಚರಿಯ ಸಂಗತಿಯೆಂದರೆ ತನ್ನ ಪರ ನಿಲ್ಲುತ್ತವೆಂದು ಬಿಸಿಸಿಐ ಭಾವಿಸಿದ್ದ ಬಾಂಗ್ಲಾದೇಶ, ಜಿಂಬಾಬ್ವೆಗಳು ರಾಷ್ಟ್ರಗಳೂ ಕೈಕೊಟ್ಟವು. ಅಲ್ಲಿಯವರೆಗೆ ವರ್ಷಕ್ಕೆ 3 ಸಾವಿರ ಕೋಟಿ ರೂ. ಇದ್ದ ಬಿಸಿಸಿಐ ಆದಾಯ ಏಕಾಏಕಿ 1920 ಕೋಟಿ ರೂ.ಗೆ ಇಳಿಯಿತು. ಕಡೆಗೆ ಮಾತುಕತೆಯ ಮೂಲಕ ಈ ಮೊತ್ತ 2,500 ಕೋಟಿ ರೂ.ಗೇರಿಸಲು ಐಸಿಸಿ ಒಪ್ಪಿದ್ದರಿಂದ ಜಗಳ ನಿಂತು ಹೋಯಿತು.

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಸಂಚಾರ: ಬಿಸಿಸಿಐ ನಿಂದ ತೀವ್ರ ಖಂಡನೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.