ಸುರತ್ಕಲ್‌ನಲ್ಲಿ ಜನಾರ್ಶೀವಾದ ಯಾತ್ರೆ: ಭಾರೀ ಜನಸ್ತೋಮ


Team Udayavani, Mar 21, 2018, 10:10 AM IST

21-March-2.jpg

ಸುರತ್ಕಲ್‌ : ಸುರತ್ಕಲ್‌ ಜನಾರ್ಶೀವಾದ ಯಾತ್ರೆಗೆ ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಜಮಾಯಿಸಿದ್ದರು.

4 ಗಂಟೆ ಸುಮಾರಿಗೆ ಆಗಮಿಸಿದ ರಾಹುಲ್‌ ಗಾಂಧಿ ಜನರತ್ತ ಕೈ ಬೀಸಿ ನೇರವಾಗಿ ವೇದಿಕೆಯತ್ತ ತೆರಳಿದರು. ಸ್ಥಳೀಯ ಕಾಂಗ್ರೆಸ್‌ ಮುಖಂಡರನ್ನು ಶಾಸಕ ಮೊಯಿದಿನ್‌ ಬಾವಾ ಅವರು ರಾಹುಲ್‌ ಅವರಿಗೆ ಪರಿಚಯ ಮಾಡಿಕೊಟ್ಟರು. ಕೆಲವು ಸ್ಥಳೀಯ ಕಾಂಗ್ರೆಸ್‌ ಮುಖಂಡರಿಗೆ ರಾಹುಲ್‌ ಅವರನ್ನು ಹತ್ತಿರಲ್ಲಿ ಕಾಣುವ ಭಾಗ್ಯ ದೊರೆಯಲಿಲ್ಲ.

ಸುರತ್ಕಲ್‌ನಲ್ಲಿ ಜನಾಶೀರ್ವಾದ ಯಾತ್ರೆ ಸಂದರ್ಭ ರಾಹುಲ್‌ ಮಾತನಾಡಲಿದ್ದಾರೆ ಎಂದು ಪೂರ್ವ ನಿರ್ಧಾರ ಆಗಿರಲಿಲ್ಲ. ರೋಡ್‌ ಶೋಗೆ ಮಾತ್ರ ಸೀಮಿತವಾಗಿತ್ತು. ಆದರೆ ಬಳಿಕ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರ ಜತೆ ಶಾಸಕ ಮೊದಿನ್‌ ಬಾವಾ ಚರ್ಚಿಸಿ ರಾಹುಲ್‌ 15 ನಿಮಿಷ ಮಾತನಾಡುವ ಕುರಿತಂತೆ ನಿರ್ಧರಿಸಲಾಯಿತು.

ಒಂದೇ ದಿನದಲ್ಲಿ ತಯಾರಿ!
ರಾಹುಲ್‌ ಅವರು ಸುರತ್ಕಲ್‌ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂಬುದೇ ಸ್ಥಳೀಯ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಲು ಕಾರಣವಾಯಿತು. ಮಂಗಳವಾರ ಮಧ್ಯಾಹ್ನವೇ ಸುರತ್ಕಲ್‌ ಪೇಟೆಯಲ್ಲಿ ಕಾರ್ಯಕರ್ತರು ಜಮಾಯಿಸಿ ರಾಹುಲ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಮೊದಿನ್‌ ಬಾವಾ ಪರ ಘೋಷಣೆ ಕೂಗುತ್ತಿದ್ದರು. ಸುರತ್ಕಲ್‌ ನಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮುಖ್ಯಮಂತ್ರಿ ಹಾಗೂ ರಾಹುಲ್‌ ಶ್ಲಾಘಿಸುತ್ತಿದ್ದಂತೆ ಕಾರ್ಯಕರ್ತರು ಮತ್ತಷ್ಟು ಘೋಷಣೆ ಕೂಗಿದರು. ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಮುಖಂಡರು, ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳು, ವಿವಿಧ ಉಪ ಘಟಕದ ಪದಾ ಧಿಕಾರಿಗಳು ಭಾಗವಹಿಸಿದ್ದರಲ್ಲದೆ ನಾಲ್ಕು ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಭಾಗವಹಿಸಿದ್ದರು.

ಸುರತ್ಕಲ್‌ ಪೇಟೆಯಲ್ಲಿ ಕಾಂಗ್ರೆಸ್‌ನ ಬಂಟಿಂಗ್ಸ್‌ ಹಾಗೂ ಪತಾಕೆಗಳಿಂದ ಸಂಪೂರ್ಣ ಕಾಂಗ್ರೆಸ್‌ ಮಯವಾಗಿತ್ತು. ಇತ್ತ ರಸ್ತೆ ಮಧ್ಯೆ ವೇದಿಕೆ ನಿರ್ಮಾಣ ಮಾಡಿದ್ದಕ್ಕಾಗಿ ಬಿಜೆಪಿ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಮೇಲ್ಸೇತುವೆಯಲ್ಲಿ ಸಂಚಾರ 
ರಾಜ್ಯದ ಎಐಡಿಜಿಪಿ ಕಮಲ್‌ ಪಂತ್‌ ಅವರು ಭದ್ರತೆಯ ನೇತೃತ್ವ ವಹಿಸಿದ್ದರು. ಸುರತ್ಕಲ್‌ ಕಾರ್ಯಕ್ರಮದ ಸಂದರ್ಭ ಕೆಳಭಾಗದ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿ ಸಲಾಗಿತ್ತು. ಎಲ್ಲ ವಾಹನಗಳು ಹೆದ್ದಾರಿಯ ಮೇಲ್ಸೇತುವೆಯಲ್ಲಿ ಹೋಗುವಂತೆ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಟ್ರಾಫಿಕ್‌ ಜಾಂ ರಾಹುಲ್‌ ಸುರತ್ಕಲ್‌ ಬಿಟ್ಟು ತೆರಳುವವರೆಗೂ ಇತ್ತು. ಸುರತ್ಕಲ್‌ ಕೃಷ್ಣಾಪುರ ಕಡೆ ತೆರಳುವ ವಾಹನಗಳನ್ನು ಒಳರಸ್ತೆಯಾಗಿ ಬಿಡಲಾಯಿತು. 

ಟಾಪ್ ನ್ಯೂಸ್

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

Kollywood:‌ ಲೇಡಿ ಸೂಪರ್‌ ಸ್ಟಾರ್‌ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್‌ ದಾಖಲು

Kollywood:‌ ಲೇಡಿ ಸೂಪರ್‌ ಸ್ಟಾರ್‌ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್‌ ದಾಖಲು

75752

Max Movie: ಅಂತೂ ಬಂದೇ ಬಿಡ್ತು ʼಮ್ಯಾಕ್ಸ್‌ʼ ರಿಲೀಸ್‌ ಡೇಟ್..‌ ಫ್ಯಾನ್ಸ್‌ ಖುಷ್

Revanna

Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್

Mangaluru: ಸ್ಪ್ಯಾಮ್ ಕರೆ ಪತ್ತೆಗೆ ಎಐ ತಂತ್ರಜ್ಞಾನ ಬಳಕೆ; ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

13-

Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

1-reeeeeeeeee

CSI ದಕ್ಷಿಣ ಪ್ರಾಂತ್ಯದ ಸಭಾಪಾಲಕರಾಗಿದ್ದ ರೆವರೆಂಡ್ ಜಾನ್ ಬೆನೆಡಿಕ್ಟ್ ನಿಧನ

Kollywood:‌ ಲೇಡಿ ಸೂಪರ್‌ ಸ್ಟಾರ್‌ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್‌ ದಾಖಲು

Kollywood:‌ ಲೇಡಿ ಸೂಪರ್‌ ಸ್ಟಾರ್‌ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್‌ ದಾಖಲು

12-sagara

Sagara: ವಿದ್ಯುತ್ ಟ್ರಾನ್ಸ್‌ ಫಾರ್ಮರ್‌ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.