ಮಾ. 26ರ ವರೆಗೆ ನೋಂದಣಿ ಸ್ಥಗಿತ; ಹೊಸ ವಾಹನ ಮಾಲಕರಿಗೆ ಸಂಕಷ್ಟ
Team Udayavani, Mar 21, 2018, 10:59 AM IST
ಮಹಾನಗರ : ಮಂಗಳೂರು, ಬಂಟ್ವಾಳ, ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನೋಂದಣಿ ವಿಭಾಗದಲ್ಲಿ ‘ವಾಹನ- 4’ ಸಾಫ್ಟ್ವೇರ್ ಅನುಷ್ಠಾನದ ಹಿನ್ನೆಲೆಯಲ್ಲಿ ಸೋಮವಾರದಿಂದ ವಾಹನ ನೋಂದಣಿಯೇ ಸ್ಥಗಿತಗೊಂಡಿದೆ. ಒಂದು ವಾರ ಕಾಲ ಸಾಫ್ಟ್ ವೇರ್ ಅಳವಡಿಕೆ ಕಾರ್ಯ ನಡೆಯಲಿದೆ. ಹೀಗಾಗಿ ಹೊಸ ವಾಹನಗಳ ನೋಂದಣಿಗೆ ಇನ್ನೂ ಒಂದು ವಾರ ಕಾಯಬೇಕಾಗಿದೆ.
ಆರ್‌ಟಿಒ ಕಚೇರಿಯನ್ನು ಸಾರ್ವಜನಿಕ ಸ್ನೇಹಿ ಹಾಗೂ ಪೇಪರ್‌ಲೆಸ್ ಮಾಡುವ ಹಿನ್ನೆಲೆಯಲ್ಲಿ ‘ವಾಹನ- 4’ ಸಾಫ್ಟ್ವೇರ್ ಅನುಷ್ಠಾನಕ್ಕೆ ತರಲಾಗುತ್ತಿದೆ. ಮಾ. 19ರಂದು ಮಾತ್ರ ವಾಹನ ನೋಂದಣಿಗೆ ಸಂಬಂಧಿಸಿದ ಎಲ್ಲ ವಿಧದ ಶುಲ್ಕ, ದಂಡ, ತೆರಿಗೆ ಸ್ವೀಕಾರ ಸಹಿತ ಆರ್ ಟಿಒ ಕಚೇರಿಯ ಖಜಾನೆ ವಿಭಾಗದ ಕಾರ್ಯವನ್ನು ಹಾಗೂ ಆನ್‌ಲೈನ್ ಅರ್ಜಿ ಸ್ವೀಕರಿಸುವುದನ್ನು ನಿಲ್ಲಿಸಲಾಗುವುದು ಎಂದು ಮಂಗಳೂರು ಆರ್‌ಟಿಒ ಕಚೇರಿಯು ತಿಳಿಸಿತ್ತು.
ಹೀಗಾಗಿ ಮಾ. 20ರ ಅನಂತರ ಕಚೇರಿಯ ಖಜಾನೆ ವಿಭಾಗಗಳನ್ನು ಆರಂಭಿಸುವ ಬಗ್ಗೆ ವಿಶ್ವಾಸವಿತ್ತು. ಆದರೆ, ಮಾ. 26ರ ವರೆಗೆ ಯಾವುದೇ ವಾಹನ ನೋಂದಣಿ ಮಾಡುವಂತಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆಯಿಂದ ಮಂಗಳವಾರ ನಗರದ ಆರ್‌ಟಿಒ ಕಚೇರಿಗೆ ಸ್ಪಷ್ಟ ನಿರ್ದೇಶನ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರ ಆರ್‌ಟಿಒ ಕಚೇರಿಯಲ್ಲಿ ಹೊಸ ವಾಹನಗಳ ನೋಂದಣಿ ಕಾರ್ಯ ನಡೆಯುವುದಿಲ್ಲ. ಆದರೆ, ಡಿಎಲ್ ಹಾಗೂ ಎಲ್‌ಎಲ್‌ಆರ್ ಪಡೆಯುವವರಿಗೆ ಆರ್ ಟಿಒ ಖಜಾನೆ ತೆರೆದಿರುತ್ತದೆ.
ವಾಣಿಜ್ಯ ಕ್ಷೇತ್ರಕ್ಕೆ ತೊಂದರೆ
ಈಗ ಆರ್ಥಿಕ ವರ್ಷದ ಕೊನೆ(ಮಾರ್ಚ್ ಕೊನೆ)ಯಲ್ಲಿ ಇದ್ದೇವೆ. ಈ ಕಾಲದಲ್ಲಿ ಸಾಫ್ಟ್ವೇರ್ ಅಳವಡಿಕೆಯ ನೆಪದಲ್ಲಿ ವಾಹನ ನೋಂದಣಿಯನ್ನು ಸ್ಥಗಿತಗೊಳಿಸುವುದರಿಂದ ವಾಣಿಜ್ಯ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಈಗಾಗಲೇ ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ವತಿಯಿಂದ ರಾಜ್ಯ ಸಾರಿಗೆ ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೆ, ಈ ಮನವಿಯನ್ನು ಪುರಸ್ಕರಿಸದ ಸಾರಿಗೆ ಇಲಾಖೆ ಹೊಸ ಸಾಫ್ಟ್ವೇರ್ ಅಳವಡಿಕೆಗೆ ಮುಂದಾಗಿದೆ.
ತಾತ್ಕಾಲಿಕ ಕೌಂಟರ್ ತೆರೆದರೆ ಸಹಕಾರಿ
ಹೊಸ ಸಾಫ್ಟ್ವೇರ್ ಅಳವಡಿಕೆ ಮಾಡುವುದು ಸ್ವಾಗತಾರ್ಹ. ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವುದು ಸಾರಿಗೆ ಇಲಾಖೆಯ ಜವಾಬ್ದಾರಿಯಾಗಿತ್ತು. ಹಳೆ ಕ್ರಮದಂತೆ ನೋಂದಣಿ ಮಾಡಿಸುತ್ತಿರುವ ಸಂದರ್ಭದಲ್ಲಿಯೇ ಪ್ರತ್ಯೇಕವಾಗಿ ಹೊಸ ಸಾಫ್ಟ್ವೇರ್ ವ್ಯವಸ್ಥೆಯನ್ನು ಅಳವಡಿಸಿದ್ದರೆ ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯವಾಗುವುದು ಕಡಿಮೆ ಆಗುತ್ತಿತ್ತು ಅಥವಾ ತಾತ್ಕಾಲಿಕವಾಗಿ ಒಂದು ಕೌಂಟರ್ ತೆರದು ಸಾಫ್ಟ್ ವೇರ್ ಅಳವಡಿಕೆ ನಡೆಸಿದರೂ ಉಪಯೋಗವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಸದ್ಯದ ಮಾಹಿತಿ ಪ್ರಕಾರ ಹೊಸ ನೋಂದಣಿ ಒಂದು ವಾರ ನಡೆಯುವುದು ಅನುಮಾನ.
ಮಂಗಳೂರು ನಗರದ ಸ್ಥಿತಿ
ಈಗ ಮಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿ ಮಂಗಳೂರು ಹಾಗೂ ಬಂಟ್ವಾಳ ತಾಲೂಕು ಸೇರಿ 6.54 ಲಕ್ಷ ವಾಹನಗಳು ನೋಂದಣಿಯಾಗಿವೆ. ಇದರಲ್ಲಿ 3.22 ಲಕ್ಷ ದ್ವಿಚಕ್ರ ವಾಹನಗಳು, 12,000 ಸಾರಿಗೆ ವಾಹನಗಳು. ದಿನವೊಂದಕ್ಕೆ 150 ದ್ವಿಚಕ್ರ ವಾಹನಗಳು, 30 ಲಘು ವಾಹನಗಳು ನೋಂದಣಿಯಾಗುತ್ತಿವೆ.
ಮಾ. 27ರಿಂದ ಹೊಸ ಸಾಫ್ಟ್ ವೇರ್
‘ವಾಹನ-4’ ಸಾಫ್ಟ್ವೇರ್ ಅನುಷ್ಠಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗ ಡಿಎಲ್ ಹಾಗೂ ಎಲ್‌ಎಲ್ ಆರ್ ಹೊರತುಪಡಿಸಿ ವಾಹನ ನೋಂದಣಿಯನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸಾರಿಗೆ ಇಲಾಖೆಯ ಕೇಂದ್ರ ಕಚೇರಿಯ ಸೂಚನೆಯ ಮೇರೆಗೆ ಮಾ. 26ರ ವರೆಗೆ ನೋಂದಣಿ ನಡೆಯುವುದಿಲ್ಲ. ಮಾ. 27ರಿಂದ ಆರ್ ಟಿಒ ಕಚೇರಿಯಲ್ಲಿ ವಾಹನ- 4 ಸಾಫ್ಟ್ ವೇರ್ ಅನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗುವುದು.
– ಜಿ.ಎಸ್. ಹೆಗಡೆ,
ಪ್ರಾದೇಶಿಕ ಸಾರಿಗೆ ಆಯುಕ್ತರು (ಪ್ರಭಾರ)
ಮಂಗಳೂರು
ಆಟೋಮೊಬೈಲ್ ಕ್ಷೇತ್ರಕ್ಕೆ ಹೊಡೆತ
‘ವಾಹನ-4’ ಸಾಫ್ಟ್ವೇರ್ ಅನುಷ್ಠಾನ ನೆಪದಿಂದ ಈ ಆರ್ಥಿಕ ವರ್ಷದ ಕೊನೆಯ ಅವಧಿಯಲ್ಲಿ ವಾಹನ ನೋಂದಣಿ ಸ್ಥಗಿತಗೊಳಿಸಿರುವುದು ವಾಣಿಜ್ಯ ದೃಷ್ಟಿಯಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹೊಸ ವ್ಯವಸ್ಥೆಯಿಂದ ಉಪಕಾರ ಆಗುವುದಾದರೂ ಕೆಲಸ ಸ್ಥಗಿತದಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಬಹಳಷ್ಟು ಕೆಟ್ಟ ಪರಿಣಾಮ ಎದುರಾಗಲಿದೆ.
– ಶಶಿಧರ ಪೈ,
ಮಾರೂರು, ಪದಾಧಿಕಾರಿ,
ಆಟೋಮೊಬೈಲ್ ಡೀಲರ್ಸ್
ಅಸೋಸಿಯೇಶನ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Artificial Intelligence: ಎಐ ಯುಗದಲ್ಲಿ ನಾವು ನೀವು?
Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್ ಟೈಮ್ ಎಷ್ಟು?
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.