ಅಕ್ಕಲ್‌ಕೋಟೆಯಲ್ಲಿ ಸ್ವಾಮಿ ಸಮರ್ಥರ ಜನ್ಮ ದಿನಾಚರಣೆ
Team Udayavani, Mar 21, 2018, 4:31 PM IST
ಸೊಲ್ಲಾಪುರ: ಶ್ರೀ ಸ್ವಾಮಿ ಸಮರ್ಥರ ಜನ್ಮ ದಿನ ನಿಮಿತ್ತ ಮಹಾರಾಷ್ಟ್ರ-ಕರ್ನಾಟಕ ಹಾಗೂ ಆಂಧ್ರ ಸೇರಿದಂತೆ ದೇಶದ ಮೂಲೆ-ಮೂಲೆಗಳಿಂದ ಬಂದಿರುವ ಲಕ್ಷಾಂತರ ಭಕ್ತರು ಸೋಮವಾರ ಅಕ್ಕಲ್‌ಕೋಟೆಯ ಸ್ವಾಮಿ ಸಮರ್ಥರ ದರ್ಶನ ಪಡೆದರು. ಬೆಳಗ್ಗೆ 5ರಿಂದ ಮಂದಿರದ ಪುರೋಹಿತ ಮೋಹನ್ ಮಹಾರಾಜರು ಸಮರ್ಥರಿಗೆ ಕಾಕಡಾರತಿಯ ಮೂಲಕ ಮಹಾಪೂಜೆಯನ್ನು ನೆರವೇರಿಸಿದರು. ಅನಂತರ ಸ್ವಾಮಿ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಯಿತು.
ಬೆಳಗ್ಗೆ 5 ರಿಂದ ಸರದಿಯಲ್ಲಿ ನಿಂತುಕೊಂಡು ಶ್ರೀ ಸ್ವಾಮಿ ಸಮರ್ಥ ಜಯ ಜಯ ಸ್ವಾಮಿ ಸಮರ್ಥ ಎಂದು ನಾಮಸ್ಮರಣೆಗೈಯುತ್ತ ದರ್ಶನ ಪಡೆದರು. ವಿಠuಲನ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ಸಾಲಾಗಿ ನಿಂತ ಭಕ್ತರ ಜಯ ಘೋಷಣೆಗಳು ಮುಗಿಲು ಮುಟ್ಟಿದ್ದವು. ಪೂರ್ವಾಹ್ನ 10ರಿಂದ ಮಧ್ಯಾಹ್ನ 12ರ ವರೆಗೆ ಮಂದಿರದ ಜ್ಯೋತಿಬಾ ಮಂಟಪದಲ್ಲಿ ದೇವಸ್ಥಾನ ವಿಶ್ವಸ್ತೆ ಉಜ್ವಲಾತಾಯಿ ಸರ್ದೇಶ್‌ಮುಖ್ ಇವರ ನೇತೃತ್ವದಲ್ಲಿ ಸತ್ಸಂಗ ಕಾರ್ಯಕ್ರಮ ನಡೆದಿದ್ದು ಸಮರ್ಥರಿಗೆ ಪುಷ್ಪಹಾರ ಅರ್ಪಿಸಿದರು. ತದನಂತರ ತೊಟ್ಟಿಲು ಉತ್ಸವ ನೆರವೇರಿತು. ಭಜನೆ ಹಾಗೂ ಆರತಿಯೊಂದಿಗೆ ಸಮರ್ಥರ ಜನ್ಮೋತ್ಸವ ಭಕ್ತಿ-ಭಾವದಿಂದ ಅದ್ದೂರಿಯಾಗಿ ಆಚರಿಸಲಾಯಿತು. ಮೈಂದರ್ಗಿ ರಸ್ತೆಯಲ್ಲಿರುವ ಭಕ್ತ ನಿವಾಸದಲ್ಲಿ ಭಕ್ತರಿಗಾಗಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಅಪರಾಹ್ನ 4ರಿಂದ ಪುಣೆಯ ಮಿಲಿಂದ್ ಪೋತದಾರ ಹಾಗೂ ಸಂಗಡಿಗರಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಂದಿರ ಸಮಿತಿಯ ಕಾರ್ಯದರ್ಶಿ ಆತ್ಮಾರಾವ ಘಾಟಗೆ, ವಿಶ್ವಸ್ತ ವಿಲಾಸರಾವ್ ಪುಟಾಣೆ, ಮಹೇಶ ಗೋಗಿ, ಶ್ರೀನಿವಾಸ ಇಂಗಳೆ, ಪ್ರದೀಪ ದಿಂಡೋಳೆ, ಬಾಳಾ ಸಾಹೇಬ ಘಾಟಗೆ, ಅಕ್ಷಯ ಸರ್ದೇಶ್‌ಮುಖ್, ಶ್ರೀಪಾದ ಸರ್ದೇಶ್‌ಮುಖ್, ಶಿವಶರಣ ಅಚಲೇರ, ಸ್ವಾಮಿನಾಥ ಲೋಣಾರಿ, ಸಂಜಯ ಪವಾರ, ಅಮರ್ ಪಾಟೀಲ್, ಮಹಾದೇವ ತೇಲಿ, ಸಂಜಯ ಪಾಠಕ್, ದೀಪಕ್ ಜರಿಪಟಕೆ, ರಾಮಚಂದ್ರ ಸಮಾಣೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಸ್ವಾಮಿ ಸಮರ್ಥರ ಪ್ರಕಟದಿನ ನಿಮಿತ್ತ ಹೊರ ರಾಜ್ಯಗಳಿಂದ ಬರುವ ಭಕ್ತರಿಗಾಗಿ ವಸತಿಗೃಹ, ಕುಡಿಯುವ ನೀರು, ಶೌಚಾಲಯ, ಆರೋಗ್ಯ ಹೀಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಅಲ್ಲದೇ ದೇವಸ್ಥಾನದ ಪರಿಸರದಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Belve: ಸ್ನಾನಕ್ಕೆಂದು ನದಿಗಿಳಿದಿದ್ದ ಇಬ್ಬರು ಬಾಲಕರು ನೀರುಪಾಲು
Bengaluru: ಚಕ್ರ ವಾಹನಗಳು, ಮನೆ ಕಳ್ಳತನ: ಮೂವರು ಆರೋಪಿಗಳ ಬಂಧನ
Bellary; ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರ್.ಅಶೋಕ್
Belagavi: ವಕ್ಫ್ ಹೋರಾಟ ಮಾಡುವುದು ತಪ್ಪಾ..: ವಿಜಯೇಂದ್ರ ದೂರಿನ ಬಗ್ಗೆ ಯತ್ನಾಳ್ ಮಾತು
Koppala: ತೊಗರಿ ಬೆಳೆ ಕಟಾವಿಗೆ ಬಂತು ಯಂತ್ರ; 14 ಕ್ವಿಂಟಲ್ ಸಾಮರ್ಥ್ಯದ ಕಂಟೇನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.