ಯಾರ್ರೀ ಅದು… ಹಾಡು ಸರಿಯಾಗಿ ಹೇಳ್ರೀ…
Team Udayavani, Mar 21, 2018, 5:13 PM IST
ಆಗ ನಾವು ಚಿಂತಾಮಣಿಯಲ್ಲಿದ್ದೆವು. ನನ್ನ ತಮ್ಮ ಇನ್ನೂ ಚಿಕ್ಕವನು. ಮನೆಯ ಪಕ್ಕದಲ್ಲಿ ಕಿರಾಣಿ ಶೆಟ್ಟರೊಬ್ಬರ ಮನೆಯಿತ್ತು. ಅವರ ಮನೆಯ ಹಾಲ್ನ ಕಿಟಕಿ ಹಾಗೂ ನಮ್ಮನೆ ಮುಂಬಾಗಿಲು ನೇರಾನೇರಾ. ಅವರ ಮನೆಯಲ್ಲಿ ಮದುವೆ ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಇದ್ದರು. ಅಲ್ಲಿ ಆಗಾಗ ವಧುಪರೀಕ್ಷೆ ನಡೆಯುತ್ತಲೇ ಇರುತ್ತಿತ್ತು. ಒಂದು ಭಾನುವಾರ ಅವರ ಮನೆಗೆ ಗಂಡಿನ ಕಡೆಯವರು ಬಂದಿದ್ದರು.
ರಜೆ ದಿನವಾದ್ದರಿಂದ ನಾವೆಲ್ಲ ಮನೆಯಲ್ಲೇ ಇದ್ದೆವು. ಆಗ ವಧುಪರೀಕ್ಷೆಯಲ್ಲಿ ಹಾಡು ಹೇಳಿಸುವ ಪರಿಪಾಠ ಇತ್ತಲ್ಲ, ಹೀಗಾಗಿ ವರನ ಕಡೆಯವರು ಹುಡುಗಿಗೆ ಹಾಡು ಹೇಳಲು ಹೇಳಿದರೇನೋ, ಅವಳು ಸಣ್ಣದನಿಯಲ್ಲಿ ಹಾಡುತ್ತಿದ್ದುದು ನಮಗೆ ಕೇಳಿಸುತ್ತಿತ್ತು. ಕಂಠ ಅಂಥ ಸುಶ್ರಾವ್ಯವಾಗೇನೂ ಇರಲಿಲ್ಲ. ಆದರೂ ಪಾಪ ಹೇಳಲೇಬೇಕಲ್ಲ. ನಾವೆಲ್ಲ ನಮ್ಮ ಮುಂಬಾಗಿಲ ಮರೆಯಲ್ಲಿ ಅವರಿಗೆ ಕಾಣದ ಹಾಗೆ ನಿಂತು ಹಾಡನ್ನು ಕೇಳುತ್ತಿದ್ದೆವು. ನಮ್ಮನಮ್ಮಲ್ಲೇ ಕೈ ಬಾಯಿ ಸನ್ನೆ ಮಾಡಿ ಮುಸಿಮುಸಿ ನಗುತ್ತಿದ್ದೆವು.
ಸದಾ ಮೌನವಾಗಿರುವ ನನ್ನ ತಮ್ಮನಿಗೆ ಆ ದಿನ ಹಾಡು ಕೇಳಿ ಏನನಿಸಿತೋ, “ರೀ ಯಾರ್ರೀ ಅದು? ಹಾಡು ಸರಿಯಾಗಿ ಹೇಳಕ್ಕೆ ಬರಲ್ವೇನ್ರೀ ನಿಮಗೆ?’ ಎಂದು ಜೋರಾಗಿ ಕೇಳಿಯೇಬಿಟ್ಟ! ಅವನ ಧ್ವನಿ ಕೇಳಿದ ಅಮ್ಮ ಗಾಬರಿಯಿಂದ ಅವನ ಬಾಯಿ ಮುಚ್ಚಿ ದೂರಕ್ಕೆ ಎಳೆದುಕೊಂಡು ಹೋಗಿದ್ದರು. ಅನಿರೀಕ್ಷಿತವಾದ ಈ ಆಘಾತದಿಂದ ನಾವು ಏನು ಮಾಡಬೇಕೆಂದು ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದೆವು. ಇವತ್ತಿಗೂ ಈ ಘಟನೆ ನೆನೆದರೆ ನಗು ಉಕ್ಕುತ್ತದೆ.
* ವೀಣಾ ರಾವ್, ಚಿಂತಾಮಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.