ಫೋಕಸ್‌ ಇದ್ದರೆ ಸಕ್ಸಸ್‌ ಗ್ಯಾರಂಟಿ


Team Udayavani, Mar 21, 2018, 5:39 PM IST

21-March-12.jpg

ಏಕಾಗ್ರತೆಯ ಮಹತ್ವ ವಿದ್ಯಾರ್ಥಿ ದೆಸೆಯಲ್ಲಿಯೇ ಅರ್ಥವಾಗೋದು. ಪರೀಕ್ಷಾ ಕಾಲದಲ್ಲಿ ಏನನ್ನೂ ಗಮನವಿಟ್ಟು ಓದಲು ಸಾಧ್ಯವಾಗುತ್ತಿಲ್ಲ ಎಂದಾಗ ವಿದ್ಯಾರ್ಥಿಗಳಲ್ಲಿ ಆತಂಕ ಆರಂಭವಾಗುತ್ತದೆ. ಚೆನ್ನಾಗಿಯೇ ಪೂರ್ವ ತಯಾರಿ ಮಾಡಿದ್ದರೂ ಅಂತಿಮ ಕ್ಷಣದಲ್ಲಿ ಪರೀಕ್ಷೆ ಬರೆಯುವಾಗ ಏಕಾಗ್ರತೆ ಇಲ್ಲವೆಂದಾಗ ಗಾಬರಿಯಾಗಿ ಉತ್ತರಗಳು ಮರೆತು ಹೋಗಬಹುದು. ಹೀಗಾಗಿ ವಿದ್ಯಾರ್ಥಿಗಳು ಏಕಾಗ್ರತೆಯ ಮೇಲೆ ನಿಯಂತ್ರಣ ಸಾಧಿಸಬೇಕಾದದ್ದು ತುಂಬಾ ಅಗತ್ಯ.

ವಿದ್ಯಾರ್ಥಿಗಳಿಗೆ ಶಿಕ್ಷಕರು, ಹೆತ್ತವರು ಪದೇ ಪದೇ ಹೇಳುವ ಉತ್ತಮ ಕಲಿಕಾ ಮಾರ್ಗವೆಂದರೆ ಏಕಾಗ್ರತೆ. ಆ ಏಕಾಗ್ರತೆಯ ಸಾಧನೆ ಸುಮ್ಮನೆ ಬರುವುದಿಲ್ಲ. ಅದು ಸಿದ್ಧಿಸುವುದು ಧ್ಯಾನದಿಂದ. ಏಕಾಗ್ರತೆಯಿಂದ ಧ್ಯಾನ ಸಿದ್ಧಿಸುತ್ತದೆ. ಧ್ಯಾನದಿಂದ ಏಕಾಗ್ರತೆ ವೃದ್ಧಿಸುತ್ತದೆ. ಈ ಧ್ಯಾನ ಮತ್ತು ಏಕಾಗ್ರತೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಎಲ್ಲರಿಗೂ ಬೇಕು.

ಚದುರಿಹೋದ ಸೂರ್ಯರಶ್ಮಿಗಳನ್ನು ಮಸೂರದ ಮೂಲಕ ಕೇಂದ್ರೀಕರಿಸಿ ಶಾಖವನ್ನು, ಬೆಂಕಿಯನ್ನು ಉಂಟು ಮಾಡುವಂತೆ ಮನಸ್ಸಿನ ಚದುರಿದ ಶಕ್ತಿಗಳನ್ನು ಒಂದೆಡೆ ಸೇರಿಸುವುದೇ ಏಕಾಗ್ರತೆ.

ಇದನ್ನು ಹೇಳಲು, ಕೇಳಲು ಚಂದ. ಆದರೆ ಈ ಮಟ್ಟದ ಏಕಾಗ್ರತೆಯನ್ನು ಸಾಧಿಸುವುದು ಹೇಗೆ? ಭಗವದ್ಗೀತೆಯಲ್ಲಿ ಕೃಷ್ಣನಿಗೆ ಅರ್ಜುನ ಕೇಳಿದ ಪ್ರಶ್ನೆಯೂ ಇದೆ. ಇದಕ್ಕೆ ನೇರ, ಸರಳ ಉತ್ತರ- ಪ್ರಯತ್ನದಿಂದ. ಮತ್ತೆ ಮತ್ತೆ ಅಭ್ಯಾಸ ಮಾಡುವುದರಿಂದ. ಇಂದಿನ ವಿದ್ಯಾಭ್ಯಾಸದಲ್ಲಿ ಮಕ್ಕಳಿಗೆ ಬಹುತೇಕ ಎಲ್ಲ ವಿಚಾರಗಳನ್ನು ಕಲಿಸಲಾಗುತ್ತದೆ. ಆದರೆ ಏಕಾಗ್ರತೆ, ಧ್ಯಾನದ ಮಹತ್ವವನ್ನು ಬಿಟ್ಟು.ಉಸಿರಾಟವನ್ನು ಗಮನಿಸುವುದು ಅತ್ಯಂತ ಸರಳ ಏಕಾಗ್ರತಾ ಮಾರ್ಗ. ಉಸಿರು ನಮ್ಮ ಪ್ರಾಣ. ಹೀಗಾಗಿ ಅದನ್ನು ನಿಯಂತ್ರಿಸಬಲ್ಲೆವಾದರೆ ನಮ್ಮ ಇಡೀ ದೇಹ ಮತ್ತು ಮನಸ್ಸಿನ  ಮೇಲೆ ನಾವು ಹತೋಟಿ ಪಡೆದಂತೆ.

ಉಸಿರಾಟವನ್ನು ನಿಯಂತ್ರಿಸಿ
ಎಲ್ಲರಲ್ಲೂ ಉಸಿರಾಟ ಎನ್ನುವುದು ಅಪ್ರಜ್ಞಾಪೂರ್ವಕ ಕ್ರಿಯೆಯಾಗಿ ಬಿಟ್ಟಿದೆ. ಆದರೆ ಅದನ್ನೇ ಗಮನವಿಟ್ಟು ಮಾಡಿದರೆ ಏಕಾಗ್ರತೆಯನ್ನು ಸಾಧಿಸಬಹುದು ಮತ್ತು ಧ್ಯಾನದ ಸ್ಥಿತಿಯನ್ನು ತಲುಪಬಹುದು. ಧ್ಯಾನವೆಂಬುದು ಏಕಾಗ್ರತೆಯ ಫ‌ಲಿತ. ಅದೊಂದು ಘನೀಕೃತ ಏಕಾಗ್ರತೆ. ಮನಸ್ಸಿನ ತೆರೆಗಳು ನಿಂತು ನಿಶ್ಚಲ ಸಮುದ್ರವಾದಂತೆ ಅದು. ಚಲನೆಯ ಎಲ್ಲ ಶಕ್ತಿಯು ಸಾರಸಂಗ್ರಹ ಹೊಂದಿದಂತೆ. ಇಂಥ ಧ್ಯಾನಶೀಲ ಮನಸ್ಸಿಗೆ ಏನನ್ನೂ ಸಾಧಿಸುವುದು ಸುಲಭ. ವಿದ್ಯಾರ್ಥಿ ದೆಸೆಯಲ್ಲಿ ಪರೀಕ್ಷೆ, ನೌಕರಿ ಸಂದರ್ಶನ, ಸಂಸಾರ ಹೀಗೆ ಬದುಕಿನ ಪ್ರತಿಯೊಂದು ಹಂತಗಳಲ್ಲೂ ಗೆಲುವು ಪಡೆಯಬಹುದು. ಏಕಾಗ್ರತೆಯನ್ನು ಸಾಧಿಸುವ ವ್ಯವಧಾನವಿದ್ದರೆ ಮಾತ್ರ.

 ರಘು ವಿ., ಬೆಂಗಳೂರು

ಟಾಪ್ ನ್ಯೂಸ್

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

1-ssss

J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.