ನವೀನ ಉದ್ಯಮಗಳಿಗೆ ಬೇಕಿದೆ ಅವಕಾಶ
Team Udayavani, Mar 22, 2018, 6:00 AM IST
ವಿಶೇಷ ಕೈಗಾರಿಕಾ ವಲಯಗಳನ್ನು ಹೊಂದುವ ಮೂಲಕ ಉದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಪಥದಲ್ಲಿರುವ ಕಾಪು ನವೀನ ಉದ್ದಿಮೆಗಳಿಗೆ ಪೂರಕ ವಾತಾವರಣ ಕಲ್ಪಿಸುವ ಆಕಾಂಕ್ಷೆ ಹೊಂದಿದೆ. ಈ ಮೂಲಕ ಇಲ್ಲಿನ ವಿದ್ಯಾವಂತ ಯುವಕರಿಗೆ, ದುಡಿವ ಕೈಗಳಿಗೆ ಇಲ್ಲೇ ಕೆಲಸ ನೀಡುವ ಮೂಲಕ ಅಭಿವೃದ್ಧಿಗೆ ಮತ್ತಷ್ಟು ಅವಕಾಶ ನೀಡುವ ಆಶಯ ಹೊಂದಿದೆ.
ಕಾಪು: ಉದ್ಯಮ ಕ್ಷೇತ್ರದ ಪ್ರಗತಿ ಅಭಿವೃದ್ಧಿಗೆ ರಹದಾರಿ. ಉದ್ಯೋಗ ಸೃಷ್ಟಿಯಿಂದ ಜೀವನ ಮಟ್ಟ ಸುಧಾರಣೆಗೂ ಕಾರಣವಾಗುತ್ತದೆ. ಕಾಪು ತಾಲೂಕಿನಲ್ಲೂ ಉದ್ಯಮ ಕ್ಷೇತ್ರ ಬೆಳೆಯುತ್ತಿದ್ದು ಮುಂದಿನ ದಿನಗಳಲ್ಲಿ ನವೀನ ಉದ್ಯಮಗಳಿಗೆ ಅವಕಾಶಗಳೂ ಲಭ್ಯವಾಗಬೇಕಿದೆ.
26,000 ಕೋ. ರೂ. ಬಂಡವಾಳ
ತಾಲೂಕಿನಲ್ಲಿ ಬೃಹತ್ ಉದ್ಯಮಗಳ ಸಾಲೇ ಇದೆ. ಉಡುಪಿ ಪವರ್ ಕಾರ್ಪೊರೇಷನ್, ಎಸ್‌ಇಝಡ್ (ಸುಜ್ಲಾನ್), ಪಾದೂರು ಕಚ್ಛಾ ತೈಲ ಸಂಗ್ರಹಣಾ ಘಟಕವಿದ್ದು ಇದರೊಂದಿಗೆ ನಂದಿಕೂರು ಕೈಗಾರಿಕಾ ವಲಯ, ಬೆಳಪು ಕೈಗಾರಿಕಾ ಪಾರ್ಕ್ ಮಂಜೂರಾಗಿದೆ. ಬೃಹತ್ ಕೈಗಾರಿಕೆಗಳಿಗಾಗಿ ತಾಲೂಕಿನಲ್ಲಿ 2,582 ಎಕರೆ ಭೂಮಿ ಹಸ್ತಾಂತರಿಸಲಾ ಗಿದೆ. ಸುಮಾರು 26,000 ಕೋ. ರೂ. ಬಂಡವಾಳ ಹೂಡಿಕೆ ಆಗಿದೆ ಎಂದು ಅಂದಾಜಿಸಲಾಗಿದೆ. ಮೀನುಗಾರಿಕೆಯೂ ಇಲ್ಲಿ ಪ್ರಮುಖವಾಗಿದ್ದು ಒಟ್ಟಾರೆ ಎಲ್ಲ ಉದ್ಯಮಗಳು 12 ಸಾವಿರದಷ್ಟು ಉದ್ಯೋಗಗಳನ್ನು ನೀಡಿವೆ.
ಸಣ್ಣ ಕೈಗಾರಿಕೆಗೆ ಒತ್ತು
ತಾಲೂಕಿನ 30 ಗ್ರಾಮಗಳಲ್ಲಿ ಸುಮಾರು 700 ಸಣ್ಣ ಉದ್ಯಮಗಳಿದ್ದು, ಇವುಗಳಿಗೆ ಸುಮಾರು 500 ಕೋ.ರೂ. ಬಂಡವಾಳ ಹೂಡಲಾಗಿದೆ. ಹೋಲೋ ಬ್ಲಾಕ್ ಇಂಡಸ್ಟ್ರಿ, ಗೇರು ಬೀಜ ಕಾರ್ಖಾನೆಗಳು, ಐಸ್ ಪ್ಲಾಂಟ್, ಶೀಥಲೀಕರಣ ಘಟಕಗಳು, ಫ್ಲೆ$çವುಡ್ ಇಂಡಸ್ಟ್ರಿ, ಮರೈನ್ ಇಂಡಸ್ಟ್ರಿಗಳು ಕಾರ್ಯಾಚರಿಸುತ್ತಿದ್ದು ಮುಂದಿನ ದಿನ ಗಳಲ್ಲಿ ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ, ಕೃಷಿ ಸಂಬಂಧಿತ ಕೈಗಾರಿಕೆಗಳು, ಮೌಲ್ಯ ವರ್ಧನೆ ಕೇಂದ್ರಗಳು, ನವೀನ ಉದ್ಯಮ ಗಳು, ಆಹಾರ ಉತ್ಪನ್ನ ತಯಾರಿಕಾ ಘಟಕ, ಎಂಜಿನಿಯರಿಂಗ್ ವರ್ಕ್ಸ್, ಆಟೋ ಮೊಬೈಲ್, ಬಟ್ಟೆ ಉದ್ದಿಮೆಗಳಿಗೆ ಇಲ್ಲಿ ವಿಫುಲ ಅವಕಾಶಗಳಿವೆ.
ಅಭಿವೃದ್ಧಿಗೆ ಪೂರಕ ಕೈಗಾರಿಕಾ ವಲಯ
ಪಡುಬಿದ್ರಿ ವಿಶೇಷ ಆರ್ಥಿಕ ವಲಯ
ಪಡುಬಿದ್ರಿಯಲ್ಲಿ ಎಸ್‌ಇಝಡ್ ಮತ್ತು ನಾನ್ ಎಸ್‌ಇಝಡ್ – ವಿಶೇಷ ಆರ್ಥಿಕ ವಲಯ ಸ್ಥಾಪನೆಗಾಗಿ ಸರಕಾರ ಕೆಐಎಡಿಬಿ ಮೂಲಕವಾಗಿ 642 ಎಕರೆ ಭೂಮಿಯನ್ನು ಒದಗಿಸಿದೆ. ಇದರಲ್ಲಿ ಆಕ್ಸಿನ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ (ಸುಜ್ಲಾನ್) ಕಂಪನಿ ಗಾಳಿಯಂತ್ರ ನಿರ್ಮಾಣ ಘಟಕವಿದ್ದು, 1500 ಕೋಟಿ ರೂ. ಹೂಡಿಕೆ ಮಾಡಲಾಗಿದೆ.
ನಂದಿಕೂರು ಕೈಗಾರಿಕಾ ವಲಯ
ಪಡುಬಿದ್ರಿ – ಕಾರ್ಕಳ ಹೆದ್ದಾರಿಯ ನಡುವೆ ಬರುವ ನಂದಿಕೂರಿನಲ್ಲಿ ಕೈಗಾರಿಕಾ ವಲಯವಿದ್ದು ಇದಕ್ಕಾಗಿ 90 ಎಕರೆ ಭೂಮಿಯನ್ನು ಕೆಎಐಡಿಬಿ ಮೂಲಕವಾಗಿ ಸಿದ್ಧಪಡಿಸಲಾಗಿದೆ. ಈಗಾಗಲೇ ಸುಮಾರು 30 ರಿಂದ 35 ಕೈಗಾರಿಕೆಗಳು ಸ್ಥಾಪನೆಗೆ ನೋಂದಾವಣೆ ಮಾಡಿಕೊಂಡಿದ್ದು, ಮತ್ತಷ್ಟು ಕಂಪೆನಿಗಳು ನೋಂದಾವಣೆಯ ಸಿದ್ಧತೆಯಲ್ಲಿವೆ.
ಬೆಳಪು ಕೈಗಾರಿಕಾ ಪಾರ್ಕ್
ಬೆಳಪು ಗ್ರಾಮದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆಗಾಗಿ 68 ಎಕರೆ ಭೂಮಿಯನ್ನು ಕೆಎಐಡಿಬಿ ಮೂಲಕವಾಗಿ ಮೀಸಲಿರಿಸಲಾಗಿದೆ. ಕೈಗಾರಿಕಾ ಪಾರ್ಕ್‌ಗಾಗಿ ಮೀಸಲಿಟ್ಟಿರುವ ಪ್ರದೇಶದಲ್ಲಿ ಈಗಾಗಲೇ 10 ಕೋ. ರೂ. ವೆಚ್ಚದಲ್ಲಿ ರಸ್ತೆ ಸಹಿತ ಮೂಲ ಸೌಕರ್ಯಗಳ ಜೋಡಣಾ ಕಾರ್ಯ ನಡೆದಿದ್ದು, ಕೈಗಾರಿಕೆಗಳ ಸ್ಥಾಪನೆಗಾಗಿ ಅರ್ಜಿ ಸೀÌಕಾರ ಪ್ರಕ್ರಿಯೆಯೂ ಪ್ರಾರಂಭಗೊಂಡಿದೆ.
ಧಾರಣಾ ಸಾಮರ್ಥ್ಯ ಅಧ್ಯಯನವಾಗಲಿ
ಕಾಪು ಕೈಗಾರಿಕೆಗಳ ವಿರುದ್ಧ ಸುದೀರ್ಘ ಹೋರಾಟದ ಇತಿಹಾಸ ಹೊಂದಿದೆ. ಇಲ್ಲಿ ಮತ್ತಷ್ಟು ಉದ್ಯಮಗಳಿಗೆ ಅವಕಾಶವಿದ್ದರೂ, ಅದಕ್ಕೂ ಇಲ್ಲಿನ ಧಾರಣಾ ಸಾಮರ್ಥ್ಯ ಬಗ್ಗೆ ಅಧ್ಯಯನವಾಗಬೇಕು. ಅದಕ್ಕೆ ಪೂರಕ ವಾದಂತೆ ನೀಲನಕ್ಷೆ ರೂಪಿಸಬೇಕು. ಪರಿಸರಕ್ಕೆ ಸಹ್ಯವಾದ ಪೂರಕ ಉದ್ಯಮಗಳನ್ನು ರೂಪಿಸಲು ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಬೇಕಿದೆ.
ಆಗಬೇಕಾದ್ದೇನು?
– ಸ್ಥಳೀಯರಿಗೆ ಕೈಗಾರಿಕಾ ವಲಯ ಗಳಲ್ಲಿ ಸ್ಟಾರ್ಟ್ ಅಪ್ ಸ್ಥಾಪನೆಗೆ ಕೈಗಾರಿಕಾ ವಲಯದಲ್ಲಿ ಅವಕಾಶ
– ಕಾಪುವಿನಲ್ಲಿ ರಫ್ತುಗೆ ಅವಕಾಶ ನೀಡು ವಂತೆ ಕಾರ್ಗೋ ಹಬ್ ಸ್ಥಾಪನೆ
- ಮಂಗಳೂರು ಬಂದರಿಗೆ ಸಂಪರ್ಕಿ ಸುವಂತೆ ಇಲ್ಲಿನ ಕೈಗಾರಿಕಾ ವಲಯ ಗಳಿಗೆ ಪ್ರತ್ಯೇಕ ರೈಲ್ವೇ ಸಂಪರ್ಕ
– ಹೆಜಮಾಡಿ ಬಂದರು ಅಭಿವೃದ್ಧಿ, ಬಂದರಲ್ಲಿ ಪ್ರತ್ಯೇಕ ಕಾರ್ಗೋ ಹಬ್ ನಿರ್ವಹಣೆಗೆ ಅವಕಾಶ
– ಮಂಗಳೂರು ವಿಮಾನ ನಿಲ್ದಾಣ ಸುಲಭ ಸಂಪರ್ಕಕ್ಕೆ ಎಕ್ಸ್‌ಪ್ರೆಸ್ ವೇ.
ಪ್ಲಸ್ ಪಾಯಿಂಟ್!
3 ಕೈಗಾರಿಕಾ ವಲಯ ಹೊಂದಿರುವ ಕಾಪು ಮಂಗಳೂರಿಗೆ ಹತ್ತಿರವಾಗಿರು ವುದು ಬೆಳೆಯಲು ಕಾರಣವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಬಂದರಿಗೆ ಹತ್ತಿರದ ಸಂಪರ್ಕ ಬೆಳವಣಿಗೆಗೆ ಪೂರಕ ವಾಗಿದೆ. ಆದರೆ ಈ ವ್ಯವಸ್ಥೆಗಳು ಮತ್ತಷ್ಟು ಸುಧಾರಣೆಯಾಗಬೇಕಾದ ಅಗತ್ಯ ವಿದೆ. ಕೈಗಾರಿಕಾ ಕೇಂದ್ರವಾಗಿ ಯಶಸ್ವಿಯಾಗಬೇಕಾದರೆ, ರಫ್ತುಗೆ ಪೂರಕ ಅವಕಾಶಗಳು ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರಕಾರ ಮುಂದಡಿಯಿಡ ಬೇಕಿದೆ. ತಾ| ಸ್ಥಾಪನೆ ಪ್ರಕ್ರಿಯೆ ಜತೆಗೆ ಇಲ್ಲಿಗೆ ಕೈಗಾರಿಕಾ ಇಲಾಖೆ ಬರಲಿದ್ದು, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರೂ ನೇಮಕವಾಗಲಿದ್ದಾರೆ.
ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ ಪ್ರಗತಿಯ ಗತಿ ಗುರುತಿಸುವ ಪ್ರಯತ್ನ. ಕಾಪು ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ ನಮ್ಮ ವಾಟ್ಸಾಪ್ ನಂಬರ್ 91485 94259ಗೆ ಕಳಿಸಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು ಹಾಗೂ ಭಾವಚಿತ್ರವಿರಲಿ.
– ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.