ಪಿಲಾರುಕಾನ: ತ್ಯಾಜ್ಯ ತೊಟ್ಟಿಯಾಗಿದೆ ದೇವರಕಾಡು !
Team Udayavani, Mar 22, 2018, 7:05 AM IST
ಶಿರ್ವ: ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ಪಿಲಾರುಕಾನ ರಕ್ಷಿತಾರಣ್ಯದ ನಡುವೆ ಹಾದು ಹೋಗುವ ಆತ್ರಾಡಿ-ಶಿರ್ವ-ಬಜಪೆ ರಾಜ್ಯ ಹೆದ್ದಾರಿಯ ಬದಿಯ ಪಿಲಾರುಕಾನ ಮಹಾಲಿಂಗೇಶ್ವರ ದೇವರ ಕಾಡು ಎಂದು ಪ್ರಸಿದ್ಧಿ ಪಡೆದ ಈ ಸ್ಥಳ ಈಗ ತ್ಯಾಜ್ಯದ ತೊಟ್ಟಿಯಾಗಿದೆ !
ಪ್ರಧಾನ ಮಂತ್ರಿಯವರ ಸ್ವತ್ಛ ಭಾರತ -ಸ್ವಸ್ಥ ಭಾರತ ಪರಿಕಲ್ಪನೆಯಲ್ಲಿ ಸ್ವತ್ಛತೆಗೆ ಆದ್ಯತೆ ನೀಡದೆ ರಸ್ತೆ ಬದಿ ಕಸ ರಾಶಿ ಹರಡಲಾಗಿದೆ. ಯಾರೋ ರಾತ್ರಿ ಅಥವಾ ಮುಂಜಾನೆ ಕಸ ತಂದು ಸುರಿಯುತ್ತಿದ್ದು. ಅದನ್ನು ನಾಯಿ, ನರಿ, ಹಂದಿಗಳು ರಸ್ತೆಗೆ ಎಳೆದು ತಂದು ತಿನ್ನುವುದರಿಂದ ಪರಿಸರವಿಡೀ ದುರ್ವಾಸನೆಯಿಂದ ಕೂಡಿದ್ದು ಸಾರ್ವ ಜನಿಕರು ಮೂಗು ಮುಚ್ಚಿ ಓಡಾಡು ವಂತಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಕಸ ತ್ಯಾಜ್ಯ ಒಟ್ಟಾಗಿ ಕೊಳೆತು ದುರ್ನಾತ ಬೀರುತ್ತಿದ್ದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಅರಣ್ಯ ಪಾಲಕರು ಇದು ದೇವರ ಕಾಡು, ಇಲ್ಲಿ ಕಸ ಎಸೆಯಬೇಡಿ ಎಂದು ಎಚ್ಚರಿಕೆ ಫಲಕ ಹಾಕಿದರೂ (ಅ)ನಾಗರಿಕರು ಕಿವಿಗೊಡುತ್ತಿಲ್ಲ. ತಮ್ಮದೇ ಊರಿನ ಶುಚಿತ್ವ ಕಾಪಾಡುವಲ್ಲಿ ಸಾರ್ವಜನಿಕರ, ಗ್ರಾಮಸ್ಥರ ಸಹಕಾರ ಅತೀ ಅಗತ್ಯವಾಗಿದೆ.
-ಆಲ್ವಿನ್ ದಾಂತಿ ಪೆರ್ನಾಲು, ಶಿಕ್ಷಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivanna; ಡಿ.24ರಂದು ಅಮೆರಿಕಾದಲ್ಲಿ ಶಿವರಾಜಕುಮಾರ್‌ಗೆ ಸರ್ಜರಿ
BBK11: ಬಿಗ್‌ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಫೈಯರ್ ಬ್ರ್ಯಾಂಡ್ ಚೈತ್ರಾ
ಬಗೆಹರಿಯದ ಆಸ್ತಿ ವಿವಾದ: ದಯಾಮರಣ ಕೋರಿ ಪ್ರಧಾನಿ, ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ
Udupi: ಗೀತೆ ಜತೆಗಿದ್ದರೆ ಕೃಷ್ಣನೇ ಇದ್ದ ಶ್ರೀ ಭದ್ರೇಶದಾಸ್
Year Ender: 10 ಗೆಲುವು.., ಒಂದಷ್ಟು ಸೋಲು..: ಇಲ್ಲಿದೆ ಬಾಲಿವುಡ್ ಬಾಕ್ಸಾಫೀಸ್ ರಿಪೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.