ನಳಂದಾ ಮಹಾವಿದ್ಯಾಲಯದಲ್ಲಿ ಯುಗಾದಿ ಆಚರಣೆ
Team Udayavani, Mar 22, 2018, 10:35 AM IST
ಪೆರ್ಲ: ಪ್ರಕೃತಿಯಲ್ಲಿ ಚೈತನ್ಯ ತುಂಬಿ ತುಳುಕುವ ಕಾಲ ವಸಂತ ಋತು. ಅದರ ಆರಂಭದ ದಿನವನ್ನು ಹಿಂದುಗಳು ಯುಗಾದಿ ಹಬ್ಬವಾಗಿ ಆಚರಿಸುತ್ತಾರೆ ಎಂದು ಪೆರ್ಲ ನಳಂದಾ ಮಹಾವಿದ್ಯಾಲಯದ ಕಾರ್ಯನಿರ್ವಹಣಾಧಿಕಾರಿ ಕೆ. ಶಿವಕುಮಾರ್ ಅವರು ಹೇಳಿದರು. ಕಾಲೇಜಿನ ಯುಗಾದಿ ಹಬ್ಬದ ಆಚರಣೆಯಲ್ಲಿ ಶುಭವನ್ನು ಹಾರೈಸುತ್ತಾ ಗಣಿತ ಶಾಸ್ತ್ರವನ್ನು ಅವಲಂಬಿಸಿಕೊಂಡು ಜೋತಿಷ್ಯ ಶಾಸ್ತ್ರ ನಿಂತಿದೆ. ಅದನ್ನು ಹೊಂದಿಕೊಂಡು ಹಿಂದುಗಳ ಆಚರಣೆಗಳು ನಡೆಯುತ್ತವೆ. ಚೈತ್ರ ಮಾಸದ ಬಗೆಗೆ ಹಾಡದ ಕವಿಗಳಿಲ್ಲ. ಪ್ರಕೃತಿಯಲ್ಲಿ ಕೊರಡೂ ಕೊನರುತ್ತದೆ. ಮರಗಿಡಗಳು ಸಂಪದ್ಭರಿತವಾಗುತ್ತವೆೆ. ಪ್ರಕೃತಿಯ ಒಂದಂಗವಾದ ಮಾನವನಿಗೂ ಸುಖದ ಸಂಪತ್ತಿನ ಕಾಲ ಇದಾಗಿದೆ. ಆದುದರಿಂದ ಉತ್ತರ ಭಾರತದವರು ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ದಕ್ಷಿಣದವರಾದ ನಾವು ಸೌರಮಾನ ಯುಗಾದಿಯನ್ನು ವಿಶು ಎಂಬ ಹೆಸರಿನಲ್ಲಿ ಆಚರಿಸುತ್ತೇವೆ. ಚಂದ್ರ ಮತ್ತು ಸೂರ್ಯರೆಂಬ ಎರಡು ಆಕಾಶಕಾಯಗಳನ್ನು ಹೊಂದಿಕೊಂಡು ನಮ್ಮ ಬದುಕನ್ನು ನಡೆಸುತ್ತೇವೆ ಎಂದು ಯುಗಾದಿಯ ಮಹತ್ವವನ್ನು ತಿಳಿಸಿ ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿ ನಿರ್ವಹಿಸಿ, ಸಮರಸವೇ ಜೀವನ, ಕಷ್ಟ ಬಂದಾಗ ಕುಗ್ಗ ಬಾರದು, ಸುಖ ಬಂದಾಗ ಹಿಗ್ಗ ಬಾರದು. ಅವೆರಡೂ ಜತೆ ಜತೆಗಿರುತ್ತವೆ ಎಂದು ತಿಳಿಸಿ ಬಂದುದನ್ನು ಎದುರಿಸುವ ಶಕ್ತಿ ನಿಮಗೆ ಬರಲಿ ಎಂದು ಶುಭಹಾರೈಸಿ ಸಹೋದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಬೇವು ಬೆಲ್ಲವನ್ನು ಹಂಚಿದರು. ವಿದ್ಯಾರ್ಥಿ ನಾಯಕ ಅರ್ಪಿತ್ ಶುಭ ಹಾರೈಸಿದರು. ಉಪನ್ಯಾಸಕ ಕೆ. ಕೇಶವ ಶರ್ಮ ಸ್ವಾಗತಿಸಿದರು. ಶ್ರೀನಿಧಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್ ಮೂಲಕ ನಕ್ಸಲ್ ಸೋಮನ್ ವಿಚಾರಣೆ
Kasaragod: 300 ಪವನ್ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ
Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು
Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.