ಮತ್ತೂಂದು ಬ್ಯಾಂಕಿಂಗ್‌ ವಂಚನೆ ಪ್ರಕರಣ ಬಯಲು

Team Udayavani, Mar 22, 2018, 6:00 AM IST

27.jpg

ಚೆನ್ನೈ: ಸ್ವರ್ಣೋದ್ಯಮಿಗಳಾಗಿರುವ ನೀರವ್‌ ಮೋದಿ, ಮೆಹೂಲ್‌ ಚೋಸ್ಕಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ವಂಚಿಸಿದ ಬಳಿಕ ಮತ್ತೂಂದು ಚಿನ್ನಾಭರಣ ಮಳಿಗೆ ಎಸ್‌ಬಿಐ ಸೇರಿದಂತೆ 14 ಬ್ಯಾಂಕ್‌ಗಳಿಗೆ 1 ಸಾವಿರ ಕೋಟಿ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಚೆನ್ನೈನ ಟಿ.ನಗರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಾನಿಷ್ಕ ಗೋಲ್ಡ್‌ ಪ್ರೈ.ಲಿಮಿಟೆಡ್‌ ಎಂಬ ಸಂಸ್ಥೆ ಮಾಡಿರುವ ಮೋಸದ ವಿರುದ್ಧ ತನಿಖೆ ನಡೆಸುವಂತೆ ಸಿಬಿಐಗೆ ಎಸ್‌ಬಿಐ ಜನವರಿಯಲ್ಲಿ ಮನವಿ ಮಾಡಿಕೊಂಡಿತ್ತು. ಭೂಪೇಶ್‌ ಕುಮಾರ್‌ ಜೈನ್‌ ಮತ್ತು ಅವರ ಪತ್ನಿ ನೀತಾ ಜೈನ್‌ ಅವರೇ ಈ ಕಂಪೆನಿಯ ಪ್ರವರ್ತಕರಾಗಿದ್ದಾರೆ. ಸದ್ಯ ಅವರು ಮಾರಿಷಿಯಸ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ.

ಕೇಸು ದಾಖಲಿಸಿದ ಸಿಬಿಐ: ಹದಿನಾಲ್ಕು ಬ್ಯಾಂಕ್‌ಗಳಿಗೆ ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಕಾನಿಷ್ಕಾ ಗೋಲ್ಡ್‌ ಪ್ರೈ.ಲಿ ವಿರುದ್ಧ ಸಿಬಿಐ ಬುಧವಾರ ಕೇಸು ದಾಖಲಿಸಿಕೊಂಡಿದೆ. ಜತೆಗೆ ಚೆನ್ನೈ ಸೇರಿದಂತೆ ಹಲವೆಡೆ ಶೋಧ ಕಾರ್ಯಾಚರಣೆ ನಡೆಸಿದೆ. 

ಯಾವುದಿದು ಕಂಪೆನಿ?”ಕ್ರಿಜ್‌’ ಎಂಬ ಬ್ರಾಂಡ್‌ ನೇಮ್‌ನಲ್ಲಿ ಚಿನ್ನದ ಆಭರಣಗಳನ್ನು ಕಂಪೆನಿ ಉತ್ಪಾದಿಸುತ್ತಿತ್ತು. ಅದನ್ನು ವಿತರಕರ ಮೂಲಕ 2014ರ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಿತ್ತು. 2015ರಲ್ಲಿ ತನ್ನ ವಹಿವಾಟಿನ ಮಾದರಿಯನ್ನು ಬದಲಿಸಿತ್ತು.

2017ರ ನ.11ರಂದು ಈ ಸಂಸ್ಥೆ ಹಣಕಾಸು ವಂಚನೆ ನಡೆಸಿದೆ ಎಂದು ಎಸ್‌ಬಿಐ ಮೊದಲ ಬಾರಿಗೆ ಆರ್‌ಬಿಐಗೆ ವರದಿ ಸಲ್ಲಿಸಿತ್ತು. ಅದರ ಜತೆಗೆ ಇತರ ಬ್ಯಾಂಕ್‌ಗಳೂ ವರದಿ ನೀಡಿವೆ. 

ಚಿನ್ನಾಭರಣ ಸಂಸ್ಥೆಯನ್ನು 2017ರ ಮಾರ್ಚ್‌ ನಲ್ಲಿ ಎಸ್‌ಬಿಐ ದಿವಾಳಿ ಎಂದು ಘೋಷಿಸಿತ್ತು. 2017ರ ಏಪ್ರಿಲ್‌ ವೇಳೆ ಕಾನಿಷ್ಕ ಸಂಸ್ಥೆ ಸಾಲ ಪಡೆದುಕೊಂಡ ಎಲ್ಲಾ 14 ಬ್ಯಾಂಕ್‌ಗಳಿಗೆ ಸಾಲ ಮರು ಪಾವತಿ ಮಾಡುವುದನ್ನು ನಿಲ್ಲಿಸಿತ್ತು. ಸಂಸ್ಥೆಯ ಪ್ರವರ್ತಕರನ್ನು ಸಂಪರ್ಕಿಸಲು ವಿಫ‌ಲಗೊಂಡ ಎಲ್ಲಾ ಬ್ಯಾಂಕ್‌ಗಳು ಅದೇ ವರ್ಷದ ಮೇ 25ರಂದು  ಟಿ.ನಗರದಲ್ಲಿರುವ ಚಿನ್ನಾಭರಣ ಸಂಸ್ಥೆಯ ಪ್ರಧಾನ ಕಚೇರಿಗೆ ಭೇಟಿ ನೀಡಿದವು. ಅಲ್ಲಿ ಯಾವುದೇ ವಾಣಿಜ್ಯಿಕ ಚಟುವಟಿಕೆ ಕಂಡುಬರಲಿಲ್ಲ. 

ಅದೇ ದಿನ ಎಸ್‌ಬಿಐ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳಿಗೆ ಪತ್ರ ಬರೆದಿದ್ದ ಭೂಪೇಶ್‌ ಕುಮಾರ್‌ ಜೈನ್‌ ನಕಲಿ ದಾಖಲೆಗಳನ್ನು ನೀಡಿ ವಂಚಿಸಿದ್ದನ್ನು ಒಪ್ಪಿಕೊಂಡಿದ್ದರು. ಹೀಗಾಗಿ ಕಂಪೆನಿಯ ಇತರ ಶಾಖೆಗಳಿಗೆ ಭೇಟಿ ನೀಡಿದಾಗ ಅವುಗಳಿಗೆ ಬೀಗ ಹಾಕಲಾಗಿತ್ತು. ಈ ಬಗ್ಗೆ ಮಾತನಾಡಿರುವ ಮದ್ರಾಸ್‌ ಜ್ಯುವೆಲ್ಲರ್ಸ್‌ ಆ್ಯಂಡ್‌ ಡೈಮಂಡ್‌ ಮರ್ಚೆಂಟ್ಸ್‌ ಎಸೋಸಿಯೇಷನ್‌ನ ಪ್ರತಿನಿಧಿ 2017ರ ಮೇನಲ್ಲೇ ಕಾನಿಷ್ಕ ಕಂಪೆನಿ ನಷ್ಟ ಹೊಂದಿದ್ದರಿಂದ ವಹಿವಾಟು ಸ್ಥಗಿತಗೊಳಿಸಿತ್ತು ಎಂದು ಹೇಳಿದ್ದಾರೆ. 

2007ರಿಂದಲೇ ಸಾಲ ಕೊಟ್ಟ ಬ್ಯಾಂಕ್‌ಗಳು
ಕಾನಿಷ್ಕಾ ಕಂಪೆನಿಗೆ 2007ರಿಂದಲೇ ಸಾಲ ನೀಡಿರುವ ಬಗ್ಗೆ ದಾಖಲೆ ಗಳಿಂದ ದೃಢಪಟ್ಟಿದೆ. ವರ್ಷಗಳು ಕಳೆದಂತೆ ಬ್ಯಾಂಕ್‌ಗಳೂ ಕೂಡ ಅದಕ್ಕೆ ನೀಡಲಾಗುತ್ತಿದ್ದ ಸಾಲದ ಮಿತಿಯನ್ನೂ ಹೆಚ್ಚಿಸಿದ್ದವು. ಸಾಲದ ಮತ್ತು ದುಡಿಯುವ ಬಂಡವಾಳದ ಮಿತಿಯನ್ನೂ ಹೆಚ್ಚಿಸಲಾಗಿತ್ತು. 2012ರಲ್ಲಿ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಗುಂಪು ಮೆಟಲ್‌ ಗೋಲ್ಡ್‌ ಲೋನ್‌ ಮೂಲಕ ನಿರ್ದಿಷ್ಟ ಬ್ಯಾಂಕ್‌ಗಳಿಂದ ಅಥವಾ ಮುಕ್ತ ಮಾರುಕಟ್ಟೆಯಿಂದ ಚಿನ್ನ ಖರೀದಿಗೂ ಅವಕಾಶ ಮಾಡಿಕೊಟ್ಟಿದ್ದವು.

ಟಾಪ್ ನ್ಯೂಸ್

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.