ಪಂಪಿಂಗ್ ಸ್ಟೇಶನ್‌ಗೆ ನಿರಂತರ ವಿದ್ಯುತ್
Team Udayavani, Mar 22, 2018, 9:00 AM IST
ಉಡುಪಿ: ಸ್ವರ್ಣಾ ನದಿಯಿಂದ ನೀರು ಪೂರೈಕೆಯಾಗುವ ಬಜೆ ಅಣೆಕಟ್ಟು ಬಳಿ ಇರುವ ಪಂಪಿಂಗ್ ಸ್ಟೇಶನ್‌ಗೆ ದಿನದ 24 ಗಂಟೆಯೂ ನಿರಂತರ ವಿದ್ಯುತ್ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ವ್ಯತ್ಯಯ ಆಗಬಾರದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಕೆಪಿಟಿಸಿಎಲ್ ಮತ್ತು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಾ. 21ರಂದು ತಾ.ಪಂ. ಸಭಾಂಗಣದಲ್ಲಿ ಮೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳ ಸಭೆಯಲ್ಲಿ ಮಾತ ನಾಡಿದ ಸಚಿವರು, ‘ಪಂಪಿಂಗ್ ಸ್ಟೇಶನ್‌ಗೆ 1 ಗಂಟೆ ವಿದ್ಯುತ್ ವ್ಯತ್ಯಯವಾದರೂ ನಗರದಲ್ಲಿ 3-4 ದಿನ ನೀರಿನ ಸಮಸ್ಯೆ ಉಂಟಾಗುತ್ತದೆ. ನಿರಂತರ ವಿದ್ಯುತ್ ಪೂರೈಕೆ ಯಾಗ ಬೇಕೆಂಬ ಉದ್ದೇಶದಿಂದ ಮಣಿಪಾಲ ಪವರ್ ಸ್ಟೇಶನ್ ನಿಂದ ಬಜೆವರೆಗೆ ಎಕ್ಸ್‌ಪ್ರೆಸ್ ಕಾರಿಡಾರ್ ನಿರ್ಮಿಸಲಾಗಿದೆ. ಹಾಗಾಗಿ ಹಿರಿಯಡಕ ಮತ್ತು ಮಣಿಪಾಲದ ಲೈನ್‌ಗಳೆರಡರ ಪೈಕಿ ಒಂದನ್ನು ಪರ್ಯಾಯವಾಗಿ ಬಳಸಿಕೊಳ್ಳಬೇಕು. ಒಂದು ವೇಳೆ ನೆಲದಡಿ ಕೇಬಲ್ (ಯುಜಿ ಕೇಬಲ್) ಹಾಕಬೇಕಾದರೆ ಅದಕ್ಕೆ ಕೂಡಲೇ ಅಂದಾಜು ಪಟ್ಟಿ ಸಿದ್ಧ ಮಾಡಿಕೊಡಿ. ಅನುದಾನ ಒದಗಿಸುತ್ತೇನೆ’ ಎಂದು ಹೇಳಿದರು.
ಸಮನ್ವಯಕ್ಕೆ ಸೂಚನೆ: “ಮೆಸ್ಕಾಂ, ಕೆಪಿ ಟಿಸಿಎಲ್ ಮತ್ತು ನಗರಸಭೆ ಸಮನ್ವಯದಿಂದ ಕಾರ್ಯ ನಿರ್ವಹಿಸ ಬೇಕು. ಸಮಸ್ಯೆಗಳೇನಿದ್ದರೆ ನನ್ನ ಗಮನಕ್ಕೂ ತರಬೇಕು’ ಎಂದು ಸಚಿವರು ತಿಳಿಸಿದರು. ಕಾಂಕ್ರೀಟ್ ಕಾಮಗಾರಿ ನಡೆಯಬೇಕಾಗಿರುವ ರಸ್ತೆಗಳಲ್ಲಿ ಕಂಬಗಳ ತೆರವು ಬಾಕಿ ಇದ್ದರೆ ಅದನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಸಚಿವರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು. ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಪೌರಾ ಯುಕ್ತ ಮಂಜುನಾಥಯ್ಯ, ಮೆಸ್ಕಾಂ ಸೂಪರಿಂಟೆಂಡೆಂಟ್ ಶರತ್‌ಚಂದ್ರ ಪಾಲ್ ಉಪಸ್ಥಿತರಿದ್ದರು.
ರಾಜರು ಅಂದುಕೊಂಡಿದ್ದೀರಾ…?
ಕೆಪಿಟಿಸಿಎಲ್ ಅಧಿಕಾರಿಗಳ ಕೆಲವು ಉತ್ತರಗಳಿಂದ ತೀವ್ರ ಅಸಮಾಧಾನಗೊಂಡ ಸಚಿವ ಪ್ರಮೋದ್ ಅವರು ‘ನಿಮ್ಮ ನಡುವೆ ಸಮನ್ವಯತೆ ಇಲ್ಲ. ನೀವು ಜನರ ಮುಂದೆ ಹೋಗುವುದಿಲ್ಲ. ಮೀಟಿಂಗ್‌ಗಳಿಗೂ ಬರುವುದಿಲ್ಲ. ನಿಮ್ಮನ್ನು ನೀವು ರಾಜರು ಅಂದುಕೊಂಡಿದ್ದೀರಾ?’ ಎಂದು ಪ್ರಶ್ನಿಸಿದರು. ಕೆಪಿಟಿಸಿಎಲ್‌ನ ಕಾರ್ಯಪಾಲಕ ಎಂಜಿನಿಯರ್ ಓರ್ವರ ಬದಲು ಸಹಾಯಕ ಎಂಜಿನಿಯರ್ ಸಭೆಗೆ ಹಾಜರಾಗಿದ್ದುದನ್ನು ಗಮನಿಸಿದ ಸಚಿವರು ಆ ಅಧಿಕಾರಿಯನ್ನು ಕೂಡ ತರಾಟೆಗೆ ತೆಗೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.