ಐಐಎಸ್‌ಸಿಯಲ್ಲಿ ಪ್ರಾಚೀನ ನಕ್ಷೆಗಳ ಪ್ರದರ್ಶನ
Team Udayavani, Mar 22, 2018, 12:22 PM IST
ಬೆಂಗಳೂರು: ಕಂಪ್ಯೂಟರ್, ಸ್ಯಾಟಲೈಟ್ ವ್ಯವಸ್ಥೆ, ಮೊಬೈಲ್, ಇಂಟರ್‌ನೆಟ್ ಸೇರಿದಂತೆ ಆಧುನಿಕ ಜಗತ್ತಿನ ಯಾವ ಸೌಲಭ್ಯ ಇಲ್ಲದ ಕಾಲದಲ್ಲಿ ಸೃಷ್ಟಿಯಾದ ಹಲವು ಬಗೆಯ ನಕ್ಷೆಗಳನ್ನು ನೋಡಿ, ಅದರ ಮಾಹಿತಿ ಪಡೆಯಬೇಕೇ? ಹಾಗಾದರೆ, ಮಲ್ಲೇಶ್ವರದಲ್ಲಿ ಇರುವ ಭಾರತೀಯ ವಿಜ್ಞಾನ ಸಂಸ್ಥೆಗೆ(ಐಐಎಸ್‌ಸಿ) ಭೇಟಿ ನೀಡಿ.
ಭಾರತಕ್ಕೆ ವಾಸ್ಕೋಡಗಾಮ ಬರುವ ಮೊದಲೇ ಚಿತ್ರಿಸಿರುವ ಭಾರತದ ನಕ್ಷೆ, ಭಕ್ತರು ಒಂದು ದೇವಸ್ಥಾನದಿಂದ ಇನ್ನೊಂದು ದೇವಸ್ಥಾನಕ್ಕೆ ಪಾದಯಾತ್ರೆ ಪಲ್ಲಕ್ಕಿ ಮೂಲಕ ಹೋಗುತ್ತಿದ್ದ ದಾರಿ, ಗಂಗೆ, ಯಮುನೆ ಸೇರಿದಂತೆ ವಿವಿಧ ನದಿ ಹರಿವು, ಇಸ್ಲಾಂ ಜಗತ್ತಿನ ಕುರಿತು ರಚನೆಯಾಗಿದ್ದ ಮೊದಲ ನಕ್ಷೆ, ಭಾರತ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಮೊಗಲರ ಸಾಮ್ರಾಜ್ಯ, ಭಾರತ-ಶ್ರೀಲಂಕದ ಸಂಬಂಧ, ಕಾಶ್ಮೀರದ ಕಣಿವೆಗಳು ಹೀಗೆ 74 ಬಗೆಯ ನಕ್ಷೆಯ ಪ್ರದರ್ಶನವನ್ನು ಐಐಎಸ್‌ಸಿ ಮುಖ್ಯ ಕಟ್ಟಡದ(ಆಡಳಿತ ಕಚೇರಿ) ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ಸಮಕಾಲಿನ ಅಧ್ಯಯನಗಳ ಕೇಂದ್ರ, ಆರ್ಕಿವ್ಸ್ ಮತ್ತು ಪಬ್ಲಿಕೇಷನ್ ಘಟಕ ಹಾಗೂ ಕಲಾಕೃತಿ ಆರ್ಚಿವ್ಸ್ ಸಹಯೋಗದಲ್ಲಿ “ಇಂಡಿಯಾ ಆನ್ ಅವರ್ ಮೈಂಡ್’ ಶೀರ್ಷಿಕೆಯಡಿ ಆಯೋಜಿಸಿರುವ ನಕ್ಷೆಗಳ ಪ್ರದರ್ಶನವು ಏ.18ರವರೆಗೆ ಇರುತ್ತದೆ. ಪ್ರತಿದಿನ ಬೆಳಗ್ಗೆ 11ರಿಂದ ಸಂಜೆ 5ರ ವರೆಗೂ ಸಾರ್ವಜನಿಕರಿಗೆ ಮುಕ್ತ ಅವಕಾಶ ಇರುತ್ತದೆ. ಜತೆಗೆ ಎಲ್ಲಾ ನಕ್ಷೆಯ ಬಗ್ಗೆಯೂ ಮಾಹಿತಿಯನ್ನು ಅದರ ಪಕ್ಕದಲ್ಲೇ ಬರೆದು ಹಾಕಲಾಗಿದೆ.
ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾಹಿತಿ ಹೊಂದಿರುವ ಪುಸ್ತಕದ ಮೂಲಕ ನಕ್ಷೆಯ ವಿವರವನ್ನು ತಿಳಿಸಲಾಗುತ್ತದೆ ಎಂದು ಐಐಎಸ್ಸಿ ಸಮಕಾಲಿನ ಅಧ್ಯಯನಗಳ ಕೇಂದ್ರದ ಪ್ರಾಧ್ಯಾಪಕ ಡಾ.ಉದಯ್ ಬಾಲಕೃಷ್ಣನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಶ್ವದ ಬೇರೆ ಬೇರೆ ದೇಶಗಳ ಸಂಶೋಧಕರು, ಇತಿಹಾಸ ತಜ್ಞರು ಮಾಡಿರುವ ಮೂಲ ನಕ್ಷೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಹೈದರಬಾದ್‌ನ ಕಲಾಕೃತಿ ಆರ್ಚಿವ್ಸ್‌ನ ಪ್ರಶಾಂತ್ ಲಾಹೋಟಿ ಅವರು ಇದನ್ನು ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ನೀಡಿದರು. ಐಐಎಸ್‌ಸಿ ಆರ್ಕಿವ್ಸ್ ಮತ್ತು ಪಬ್ಲಿಕೇಷನ್ ಘಟಕದ ಮುಖ್ಯಸ್ಥ ಪ್ರೊ.ಕೌಶಿಲ್ ವರ್ಮಾ, ಐಐಎಸ್‌ಸಿ ಸಹಾಯಕ ರಿಜಿಸ್ಟ್ರಾರ್ ವೀರಣ್ಣ ಕಮ್ಮಾರ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.