ಗೋರೆಗಾಂವ್ ಕರ್ನಾಟಕ ಸಂಘದ 60ನೇ ನಾಡಹಬ್ಬದ ಸಮಾರೋಪ
Team Udayavani, Mar 22, 2018, 4:50 PM IST
ಮುಂಬಯಿ: ಇಲ್ಲಿ ನಡೆಯುತ್ತಿರುವ ನಾಡಹಬ್ಬ ಇದು ಕನ್ನಡದ ನಾಡಹಬ್ಬ. ಕನ್ನಡಕ್ಕಾಗಿ ಹಂಬಲಿಸುವ ನಾವೆಲ್ಲರೂ ಕನ್ನಡದ ಮನಸ್ಸುಗಳು. ಭಾಷೆಯು ನಮ್ಮಲ್ಲಿರುವುದನ್ನು ಇನ್ನೊಬ್ಬರಿಗೆ ತಿಳಿಸುವ ಮಾಧ್ಯಮ. ನಮ್ಮ ಕನ್ನಡ ಭಾಷೆಯ ಲಿಪಿಯು ಜಗತ್ತಿನಲ್ಲೇ ಸುಂದರವಾದ ಲಿಪಿಯಾಗಿದೆ ಎಂದು ವೇದಮೂರ್ತಿ ಹರಿನಾರಾಯಣ ದಾಸ ಆಸ್ರಣ್ಣರು ನುಡಿದರು.
ಮಾ. 18 ರಂದು ಮಲಾಡ್ ಪಶ್ಚಿಮದ ಬಜಾಜ್ ಹಾಲ್‌ನಲ್ಲಿ ನಡೆದ ಗೋರೆಗಾಂವ್ ಕರ್ನಾಟಕ ಸಂಘದ ವಜ್ರಮಹೋತ್ಸವದ ಉದ್ಘಾಟನೆ ಮತ್ತು ವಾರ್ಷಿಕ ನಾಡಹಬ್ಬದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಇವರು, ಸಂಸ್ಕೃತವು ಸುಂದರ ಭಾಷೆಯಾಗಿದ್ದು ಕನ್ನಡ ಭಾಷೆ ಮತ್ತು ಅದರ ಶ್ರೇಷ್ಠತೆಯೆ ಅತೀ ಅಮೂಲ್ಯ. ಲಿಪಿಗಳ ರಾಣಿ ಕನ್ನಡ. ಈ ಸುಂದರವಾದ ಲಿಪಿಯನ್ನು ಹೊಂದಿದ ಭಾಷೆಯನ್ನು ಆಡುವವರು ನಾವು. ಅತೀ ಅಧಿಕ ಜ್ಞಾನಪೀಠ ಪ್ರಶಸ್ತಿಯು ಕನ್ನಡ ಭಾಷೆಯ ಸಾಹಿತಿಗಳಿಗೆ ಸಿಕ್ಕಿದೆ. ಅರುವತ್ತು ತುಂಬಿದ ಈ ಕನ್ನಡ ಸಂಘವನ್ನು ಮೇಲೆತ್ತುವಲ್ಲಿ ನಿಮ್ಮೆಲ್ಲರ ಪಾತ್ರ ಹಿರಿದಾದದ್ದು. ಇದನ್ನು ಇನ್ನೂ ಮೆಲಕ್ಕೆತ್ತಬೇಕಾದುದು ನಿಮ್ಮೆಲ್ಲರ ಕರ್ತವ್ಯ ಎಂದರು.
ಗೌರವ ಅತಿಥಿಯಾಗಿ ಮೊಗವೀರ ಮಹಾಜನ ಸಂಘ ಬಗ್ವಾಡಿ ಹೋಬಳಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಸುಚಿತ್ರಾ ಸಂತೋಷ್ ಪುತ್ರನ್ ಆಗಮಿಸಿದ್ದರು. ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾದ ರಮೇಶ್ ಕೆ. ಶೆಟ್ಟಿ ಪಯ್ನಾರು ಸ್ವಾಗತಿಸಿದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಮೀನಾ ಬಿ. ಕಾಳಾವರ ಉಪಸ್ಥಿತರಿದ್ದರು. ಅತಿಥಿಗಳನ್ನು ಸುಚಿತ್ರಾ ಸಂತೋಷ್ ಶೆಟ್ಟಿ ಮತ್ತು ಸುಮತಿ ಆರ್. ಶೆಟ್ಟಿ ಪರಿಚಯಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರವಿತ್ತು ಗೌರವಿಸಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ದತ್ತಿನಿಧಿ ಪ್ರಶಸ್ತಿಯನ್ನಿತ್ತು ಅಭಿನಂದಿಸಲಾಯಿತು. ಮಕ್ಕಳ ಹೆಸರನ್ನು ಸರಿತಾ ಸುರೇಶ್ ನಾಯಕ್, ಸುಚಲತಾ ಪೂಜಾರಿ, ಸುಮಿತ್ರಾ ಕುಂದರ್ ಹಾಗೂ ದಾನಿಗಳ ಹೆಸರನ್ನು ಪ್ರತಾಪ್ ಕೋಟ್ಯಾನ್ ವಾಚಿಸಿದರು.
ಉದ್ಯಮಿ ಪ್ರಕಾಶ್ ಎನ್. ಶೆಟ್ಟಿಯವರನ್ನು ವಸಂತಿ ಶೆಟ್ಟಿಯವರು ಪರಿಚಯಿಸಿದರು, ಸಂಘದ ಜೊತೆ ಕಾರ್ಯದರ್ಶಿ ಶಿವಾನಂದ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಗುಣೋದಯ ಐಲ್ ಅವರು ವಂದಿಸಿದರು.
ಈ ಸಮಾರಂಭಕ್ಕೆ ಆಗಮಿಸಲು ನಾನು ಬಹಳ ಅಭಿಮಾನದಿಂದ ಒಪ್ಪಿರುವೆನು. ಹಿಂದೆ ನನ್ನ ತಾಯಿ ಈ ಸಂಘದಲ್ಲಿ ಕ್ರಿಯಾಶೀಲರಾಗಿದ್ದರು. ಆದುದರಿಂದ ನನಗೂ ಗೋರೆಗಾಂವ್ ಕರ್ನಾಟಕ ಸಂಘಕ್ಕೂ ನಿಕಟ ಸಂಬಂಧವಿದೆ. ಮಹಿಳೆಯರಿಗೆ ಪುರುಷರಂತೆ ಉತ್ತಮ ಶಿಕ್ಷಣವನ್ನು ನೀಡುವುದರೊಂದಿಗೆ ಸಮಾನತೆಯನ್ನು ಕಾಪಾಡಬೇಕಾಗಿದೆ. ವಿದೇಶದಲ್ಲಿನ ಮಹಿಳೆಯರಂತೆ ಇಲ್ಲಿನ ಮಹಿಳೆಯರು ಕೂಡ ಇನ್ನೂ ಶ್ರಮಜೀವಿಗಳಾಗಬೇಕು. ಕೆಲವು ಸಂಘಟನೆಗಳು ಹುಟ್ಟಿ ಅಲ್ಪಾವಧಿಯÇÉೇ ನಿಂತು ಹೋಗುತ್ತಿದ್ದು, ಈ ಸಂಘವು 60 ವರ್ಷಗಳನ್ನು ಪೂರೈಸಿದ್ದು ಅಭಿಮಾನದ ಸಂಗತಿಯಾಗಿದೆ
– ಸುಚಿತ್ರಾ ಸಂತೋಷ್ ಪುತ್ರನ್ (ಕಾರ್ಯಾಧ್ಯಕ್ಷೆ : ಮೊಗವೀರ ಮಹಾಜನ ಸಂಘ ಬಗ್ವಾಡಿ ಹೋಬಳಿ).
ಚಿತ್ರ-ವರದಿ:ಈಶ್ವರ ಎಂ. ಐಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
Desi Swara@150: ಪೊಲೇಂಡ್ ಕನ್ನಡಿಗರು ಸಂಘದ ಅದ್ದೂರಿ ಉದ್ಘಾಟನೆ
Desi Swara@150: ನವವಿಂಶತಿ ನೃತ್ಯ ಹಬ್ಬದಲ್ಲಿ ದ್ವಿದಳದ ಸತ್ರಿಯ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.