ಕಲಾರಸಿಕರಿಗೆ ರಸದೌತಣ ನೀಡಿದ ಸುಮನಸಾ ರಂಗಹಬ್ಬ
Team Udayavani, Mar 23, 2018, 6:00 AM IST
(ಕಳೆದ ವಾರದಿಂದ)
ಗೋಕುಲ ನಿರ್ಗಮನ
ಕನ್ನಡದ ಮೇರು ಕವಿ ಪು.ತಿ.ನ. ಅವರ “ಗೋಕುಲ ನಿರ್ಗಮನ’ ಕೃತಿಯನ್ನು ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ರಂಗರೂಪಕ್ಕಿಳಿಸಿದವರು ಮಂಗಳೂರಿನ “ನಂದಗೋಕುಲ’ ತಂಡದವರು. ನಾಟಕದ ಬಹುಭಾಗ ಗೀತಗಾಯನದಲ್ಲಿ ಪ್ರಸ್ತುತಗೊಂಡಿದ್ದು ಕಿವಿಗಿಂಪಾದ ಸಂಗೀತ ಹಾಗೂ ಗಾಯನ ನಾಟಕಕ್ಕೆ ಕಳೆ ನೀಡಿತು. ಬೆಳಕಿನ ಕಣ್ಣು ಮುಚ್ಚಾಲೆಯಂತೂ ಒಂದು ಭ್ರಮಾಲೋಕವನ್ನೇ ಸೃಷ್ಟಿಸಿತು. ಗೋಪಿಕಾ ಸ್ತ್ರೀಯರೊಡನೆ ರಂಗಿನಾಟ ಆಡುತ್ತಿದ್ದ ಕೃಷ್ಣನನ್ನು ಬಲರಾಮ ಹಾಗೂ ಅಕ್ರೂರ ಬಲವಂತದಿಂದ ಗೋಕುಲದಿಂದ ಮಥುರಾ ಪಟ್ಟಣಕ್ಕೆ ಕರೆದೊಯ್ಯುವ ಜನಜನಿತವಾದ ಕಥೆ ಇದಾದರೂ ನಾಟಕದುದ್ದಕ್ಕೂ ನಿರ್ದೇಶಕನ ಚಾಕಚಕ್ಯತೆ ಹಾಗೂ ಸಂಕೇತಾನುಸರಣಿ ಗಮನಾರ್ಹವಾಗಿತ್ತು.
ಸುಮಾರು 35ಕ್ಕೂ ಹೆಚ್ಚಿನ ಕಲಾವಿದರೆಲ್ಲರೂ ಸ್ತ್ರೀಯರೇ (ಪುರುಷ ಪಾತ್ರ ಸೇರಿ) ಆಗಿದ್ದುದು ನಾಟಕದ ಲಾಲಿತ್ಯವನ್ನು ಹೆಚ್ಚಿಸಿತು.ಕೃಷ್ಣ ತನ್ನ ಪ್ರಾಣಸಖೀ ರಾಧೆ ಅದಕ್ಕಿಂತಲೂ ಪ್ರಾಣ ಪ್ರಿಯವಾದ ಕೊಳಲನ್ನು ತೊರೆದು ಗೋಕುಲದಿಂದ ನಿರ್ಗಮಿಸುವ ದೃಶ್ಯ ಹೃದಯಂಗಮವಾಗಿತ್ತು. ರಾಧಾ-ಕೃಷ್ಣರ ಪ್ರಣಯ ಪ್ರಸಂಗ, ಕೊಳಲಿನೊಂದಿಗೆ ರಾಧೆಯ ಹೋಲಿಕೆ, ವಿರಹ , ಬಲಭದ್ರನು ಕೃಷ್ಣನ ಪೌರುಷವನ್ನು ಜಾಗೃತಗೊಳಿಸಲು ಬಳಿಸಿದ ಮೊನಚಾದ ಮಾತುಗಳ ಕೂರಂಬುಗಳು ನಾಟಕದ ಒಟ್ಟಂದವನ್ನು ಹೆಚ್ಚಿಸಿದವು ಎನ್ನಲಡ್ಡಿಯಿಲ್ಲ. ಪ್ರಾರಂಭದಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ನಡೆದ ನಾಟಕ ಮುಂದೆ ತೀವ್ರತೆ ಪಡೆದುಕೊಂಡು ಪ್ರೇಕ್ಷಕರನ್ನು ರಂಜಿಸಿತು.
ರಥಯಾತ್ರೆ
ರಂಗಹಬ್ಬದ ಸಮಾರೋಪ ರೂಪದಲ್ಲಿ ಏಳನೆಯ ಕಲಾಕುಸುಮವಾಗಿ ಕೊಡವೂರು “ಸುಮನಸಾ’ ತಂಡದವರಿಂದ ರವೀಂದ್ರನಾಥ ಟಾಗೋರರ ಕೃತಿ ಆಧಾರಿತ “ರಥಯಾತ್ರೆ’ ನಾಟಕ ಗುರುರಾಜ್ ಮಾರ್ಪಳ್ಳಿ ಇವರ ನಿರ್ದೇಶನದಲ್ಲಿ ಮೂಡಿಬಂತು. ನಾಟಕದಲ್ಲಿ ಪ್ರಧಾನವಾಗಿ ಅಂದಿನ ಕಾಲದಲ್ಲಿರಬಹುದಾದ ಇಂದಿನ ಕಾಲಕ್ಕೆ ಅಪ್ರಸ್ತುತವೆನಿಸುವ ಅಸ್ಪಶ್ಯತೆಯನ್ನು ವೈಭವೀಕರಿಸಲಾಗಿದೆ. ಇನ್ನುಳಿದ ವಿಷಯಗಳಲ್ಲೂ ಬದಲಾವಣೆ ಅನಿವಾರ್ಯ ಎನ್ನುವ ಆಶಯವನ್ನು ನಾಟಕದುದ್ದಕ್ಕೂ ಬಿಂಬಿಸಲಾಗಿದೆ.
ಮಹಾಕಾಲನ ರಥವನ್ನು ಸಂಕೇತವಾಗಿರಿಸಿಕೊಂಡು ಬದಲಾದ ಸನ್ನಿವೇಶದಲ್ಲಿ ವಿವಿಧ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ ವರ್ತಮಾನಕ್ಕೆ ಸ್ಪಂದಿಸಿ ಮುನ್ನಡೆಯ ಬೇಕಾದ ಅನಿವಾರ್ಯತೆಯನ್ನು ನಾಟಕದಲ್ಲಿ ಪ್ರತಿಪಾದಿಸಲಾಗಿದೆ. ಕಥೆಯನ್ನು ನಿರೂಪಿಸಲು ಒಬ್ಬ ನಿರೂಪಕ, ಅವನೊಂದಿಗೆ ಮೇಳದವರು ಮತ್ತು ವಚನ ಸಾಹಿತ್ಯದ ಭರಪೂರ ಬಳಕೆ ನಾಟಕದ ಪರಿಪೂರ್ಣತೆಗೆ ಮೆರುಗು ನೀಡಿದವು. ಪ್ರಮುಖ ಪಾತ್ರಗಳಾದ ಮಂತ್ರಿ, ಶೆಟ್ಟಿ, ದಲಿತ ನಾಯಕರ ಪಾತ್ರ ನಿರ್ವಹಣೆ ಗಮನಾರ್ಹವಾಗಿತ್ತು. ಒಳ್ಳೆಯ ಸಂಗೀತ, ಹಿನ್ನಲೆ ಗಾಯನ ಹಾಗೂ ಹಿತಮಿತ ಬೆಳಕು ನಾಟಕವನ್ನು ಇನ್ನಷ್ಟು ಎತ್ತರಕ್ಕೇರಿಸಿತು.
ವಿವಿಧ ಅಭಿರುಚಿಯ ವಿಭಿನ್ನ ಕಥಾ ವಸ್ತುಗಳನ್ನೊಳಗೊಂಡ ನಾಟಕೋತ್ಸವ ಮನರಂಜನೆ ನೀಡುವುದರೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿ ಸಫಲವಾಯಿತು.
ಜನನಿ ಭಾಸ್ಕರ್ ಕೊಡವೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.