“ಚಿಂಟು’ ಹೋಯ್ತು “ಬಿಲ್ಲಿ’ ಬಂತು!
Team Udayavani, Mar 23, 2018, 7:30 AM IST
ಐದಾರು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಬೆಕ್ಕಿನ ಸಂತತಿ ಇತ್ತು. ಹಾಗಂತ ಜಾಸ್ತಿಯೇನಲ್ಲ. ಒಂದು ಬೆಕ್ಕು ಮತ್ತು ಅದರ ಗಂಡು ಮರಿ. ಆ ಮುದ್ದಾದ ಮರಿಗೆ “ಚಿಂಟು’ ಅಂತ ನಾಮಕರಣ ಮಾಡಿದ್ದೆವು. ಬೆಳಿಗ್ಗೆಯೆಲ್ಲ ರಾತ್ರಿ ಪಾಳಿಯರ ತರಹ ಸುಖನಿದ್ರೆ ಮಾಡಿ ಸಂಜೆಯಾದ ಮೇಲೆ ಅದರ ಕೆಲಸ ಶುರುಮಾಡುವ, ಹುಲಿರಾಯನ ತಮ್ಮ ಅಂತ ಹೇಳಿಸಿಕೊಳ್ಳುವ ಆ ಮರಿಯಂತೂ ನನಗೆ ತುಂಬಾನೆ ಅಚ್ಚುಮೆಚ್ಚು. ನನಗಂತೂ ಅದು ಮಾಡುವ ಚೇಷ್ಟೆ-ತುಂಟಾಟವನ್ನು ನೋಡ್ತಾ ಇರುವಾಗ ಸಮಯದ ಅರಿವೇ ಆಗುತ್ತಿರಲಿಲ್ಲ. ಅದರ ಹೆಸರನ್ನು ಕರೆದಾಗ ಎಷ್ಟೇ ದೂರದಲ್ಲಿದ್ದರೂ ಓಡಿಬಂದು ನಾನು ಹಾಕುವ ತಿಂಡಿಯನ್ನು ಶಿಸ್ತಾಗಿ ತಿನ್ನುವುದನ್ನು ನೋಡಲಿಕ್ಕೆ ಎಷ್ಟು ಚೆನ್ನ. ಇನ್ನು ಅದರ ವರ್ಣವಂತೂ ಆಚೆ ಶ್ವೇತವೂ ಅಲ್ಲ, ಇಚೆ ಕರಿಯೂ ಅಲ್ಲ . ಎರಡು ಸಮನಾಗಿ ಭಾಗ ಮಾಡಿದಂತೆ ದ್ವಿವರ್ಣದಿಂದ ಕೂಡಿದ ಆ ಮಾರ್ಜಾಲವನ್ನು ನೋಡಲಿಕ್ಕೆ ಎರಡು ಕಣ್ಣು ಸಾಲದು. ಅದರ ಅಮ್ಮ ನಮ್ಮ ಮನೆಯಲ್ಲಿ ಹೆಚ್ಚು ವಾಸಿಸದಿದ್ದರೂ ಈ ಮರಿ ನಮ್ಮೊಂದಿಗೆ ತುಂಟಾಟವಾಡುತ್ತಾ ಕಾಲ ಕಳೆಯುತ್ತಿತ್ತು.
ಇನ್ನು ಎಲ್ಲಾ ವಿಷಯದಲ್ಲೂ ಒಳ್ಳೆಯದರೊಂದಿಗೆ ಕೆಟ್ಟದ್ದೂ ಇರುವ ಹಾಗೆ ಕೆಲವೊಮ್ಮೆ ಈ ಚಿಂಟುವೂ ನಮಗೆ ಕೋಪ ತರಿಸುತ್ತಿತ್ತು. ನಾವು ಸಸ್ಯಾಹಾರಿಯಾದ ಕಾರಣ, ಒಮ್ಮೊಮ್ಮೆ ಅದು ಕಪ್ಪೆ , ಸುಣ್ಣ ಮೀನನೆಲ್ಲಾ ಕಚ್ಚಿ ತರುವಾಗ ಅದನ್ನ ಹೊರಗೆ ಹಾಕುವ ಕೆಲಸವೇ ಸಾಕೆನಿಸುತ್ತಿತ್ತು. ಇನ್ನು ಒಂದ್ಸಲ ಅಪರೂಪಕ್ಕೆ ಮನೆಬಾಗಿಲಿಗೆ ಬರುವ ಕಾಕರಾಜ, ತನ್ನ ಹಿಂಡಿನೊಂದಿಗೆ ಒಮ್ಮೆ ಮನೆಯ ಹತ್ತಿರ ಬಂದು ಒಂದೇ ಸಮನೆ ಕೂಗುತ್ತಿತ್ತು. ಏನಾಯಿತೆಂದು ಹಿತ್ತಲ ಬಳಿ ಹೋಗಿ ನೋಡಿದಾಗ ಇದು ನಮ್ಮ ಚಿಂಟೂವಿನ ಕಿತಾಪತಿಯೆಂದು ತಿಳಿಯಿತು. ಪಾಪ, ಯಾವುದೋ ಒಂದು ಕಾಗೆಯನ್ನು ಕಚ್ಚಿ ನಮ್ಮ ಮನೆಯ ಹಿಂದುಗಡೆ ತಂದ ಪರಿಣಾಮವೇ ಇದು ಎಂದು ಸ್ಪಷ್ಟವಾಗಿ, ಅದನ್ನ ಓಡಿಸಲಿಕ್ಕೆ ಹರಸಾಹಸವೇ ಪಡಬೇಕಾಯಿತು.
ಹೀಗೆ ಅದು ತನ್ನ ಕುಚೇಷ್ಟೆಯಿಂದ ನಮ್ಮೆಲ್ಲರ ಮುದ್ದುಮರಿಯಾಗಿತ್ತು. ಆದರೆ ಈ ಖುಷಿ ತುಂಬಾ ದಿನವಿರಲಿಲ್ಲ. ಒಂದು ಸಲ ಏನಾಯಿತೋ, ಹತ್ತಾರು ದಿನ ಸರಿಯಾಗಿ ತಿನ್ನದೇ, ಮಲಗಿದ್ದಲ್ಲೇ ಮಲಗಿರುತ್ತಿತ್ತು. ಹಾಗೆ ಒಂದು ದಿನ ಅದು ನಮ್ಮನ್ನೆಲ್ಲ ಅಗಲಿತು.
ಇದಾದ ಬಳಿಕ ನಮ್ಮ ಮನೆಯಲ್ಲಿ ಬೆಕ್ಕಿನ ಪ್ರವೇಶ ಇರಲಿಲ್ಲ. ಆದರೆ ಇತ್ತೀಚೆಗೆ ನನ್ನ ತಮ್ಮ ಹಠ ಮಾಡಿದ್ದಕ್ಕೆ ಅಪ್ಪ ಒಂದು ಬೆಕ್ಕಿನ ಮರಿಯನ್ನು ತಂದೇ ಬಿಟ್ಟರು. ಇದಕ್ಕೆ “ಬಿಲ್ಲಿ’ ಅಂತ ಹೆಸರಿಟ್ಟೆವು. ಚಿಂಟುಗೆ ಹೋಲಿಸಿದರೆ ಇದು ಬೇರೆ ಲಿಂಗವಾದರೂ ಅಂದರೆ ಹೆಣ್ಣುಮರಿಯಾದರೂ, ಬಣ್ಣ ಅದರದ್ದೇ ಆದ್ದರಿಂದ ನನಗಂತೂ ತುಂಬಾನೇ ಖುಷಿಯಾಯಿತು. ಇದು ಕೂಡ ಸಣ್ಣ ಮರಿಯಾದ್ದರಿಂದ ಚಿಂಟೂವಿನ ತರಹ ಚೇಷ್ಟೆಯನ್ನು ಮಾಡಿ ನಮಗೆ ಖುಷಿ ತರಿಸುತ್ತೆ. ಒಟ್ಟಾರೆಯಾಗಿ ನನ್ನ ತಮ್ಮನಿಂದ ಪುನಃ ನಮ್ಮ ಮನೆಗೆ ಬೆಕ್ಕಿನ ಪ್ರವೇಶ ಆಯಿತು.
ನಾಗರತ್ನ ಶೆಣೈ ಎಕ್ಸಲೆಂಟ್ ಪಿಯು ಕಾಲೇಜು, ಸುಣ್ಣಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.