ಮಕ್ಕಳಿಗಾಗಿ ಬೇಸಿಗೆ ದಿರಿಸುಗಳು
Team Udayavani, Mar 23, 2018, 7:30 AM IST
ಮಾರ್ಚ್ ತಿಂಗಳು ಆರಂಭವಾಗುತ್ತಿದ್ದಂತೆಯೇ ಬಿರು ಬೇಸಿಗೆಯ ದಿನಗಳೂ ಕೂಡ ಆರಂಭವಾ ಗುತ್ತವೆ. ಸುಡುವ ಬೇಸಿಗೆಯ ಬೇಗೆಯನ್ನು ತಡೆಯಲು ಮತ್ತು ಕಡಿಮೆಗೊಳಿಸಿಕೊಳ್ಳಲು ಹರಸಾಹಸ ಮಾಡುವ ನಾವುಗಳು ಬೇಸಿಗಾಗಿಯೇ ಕೆಲವು ಪೂರ್ವ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತೇವೆ. ಬೇಸಿಗೆಯಲ್ಲಿ ತಲೆದೋರುವ ಕೆಲವು ಆರೋಗ್ಯದ ಸಮಸ್ಯೆಗಳನ್ನು ಬಾರದಂತೆ ತಡೆಯಲು ಕೆಲವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಬೇಸಿಗೆಗೆ ಸೂಕ್ತವಾದ ಆಹಾರಪದಾರ್ಥಗಳನ್ನು ಹೇಗೆ ಬಳಸುತ್ತೇವೆಯೋ ಹಾಗೆಯೇ ನಾವು ಧರಿಸುವ ದಿರಿಸುಗಳೂ ಕೂಡ ಬೇಸಿಗೆಯ ಬೇಗೆಯನ್ನು ಹೆಚ್ಚಿಸದೆ ತಗ್ಗಿಸುವಂತಿರಬೇಕು. ನಾವು ಧರಿಸುವ ಬಟ್ಟೆಗಳು ನಮ್ಮ ಚರ್ಮದ ಆರೋಗ್ಯಕ್ಕೆ ಪೂರಕವಾಗಿರಬೇಕಾದುದು ಅನಿವಾರ್ಯವೆನಿಸುತ್ತದೆ. ವೈಜ್ಞಾನಿಕವಾಗಿ ಕಪ್ಪುಬಣ್ಣವು ಎಲ್ಲ ಕಿರಣಗಳನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದ್ದು ತನ್ಮೂಲಕ ಉಷ್ಣಾಂಶವನ್ನು ಹೆಚ್ಚಿಸುವುದರಿಂದ ಬೇಸಿಗೆಯಲ್ಲಿ ಆದಷ್ಟು ಕಪ್ಪು ಬಣ್ಣದ ದಿರಿಸನ್ನು ಬಳಸದೇ ಇರುವುದು ಸೂಕ್ತ ಎನ್ನಲಾತ್ತದೆ. ಹೀಗೆ ಬೇಸಿಗೆಯಲ್ಲಿ ಬಟ್ಟೆಗಳನ್ನು ಆಯ್ಕೆ ಮಾಡುವಾಗ ಮತ್ತು ತೊಡುವಾಗ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಒಳಿತು. ಅದರಲ್ಲಿಯೂ ಚಿಕ್ಕಮಕ್ಕಳಿಗೆ ಬೇಸಿಗೆಯಲ್ಲಿ ಬಳಸುವ ಬಟ್ಟೆಗಳು ಅವರ ತ್ವಚೆಯ ಮೇಲೆ ಪರಿಣಾಮವನ್ನು ಬೀರುವುದರಿಂದ ಬಹಳ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿರುತ್ತದೆ. ಬೇಸಿಗೆಯ ದಿನಗಳಲ್ಲಿ ಬಟ್ಟೆಗಳಿಂದ ಮಕ್ಕಳಿಗೆ ಉಂಟಾಗುವ ಕಿರಿಕಿರಿ ಸಾಮನ್ಯವಾದುದು. ಇಂಥ ಸಮಸ್ಯೆಗಳನ್ನು ತಡೆಗಟ್ಟಲು ಮಕ್ಕಳ ಬಟ್ಟೆಗಳು ಸೂಕ್ಷ¾ವಾಗಿ ಆಯ್ಕೆ ಮಾಡಲಾಗಿರಬೇಕಾಗುತ್ತದೆ.
ಚಳಿಗಾಲ ಮತ್ತು ಮಳೆಗಾಲದಲ್ಲಿ ಮಕ್ಕಳನ್ನು ಬೆಚ್ಚಗಿಡಲು ಸ್ವೆಟರುಗಳು, ಟೋಪಿಗಳನ್ನು ಹೇಗೆ ಬಳಸುತ್ತೇವೆಯೋ ಹಾಗೆಯೇ ಬೇಸಿಗೆಯಲ್ಲಿ ಬಳಸುವ ಮಕ್ಕಳ ದಿರಿಸುಗಳು ಮಕ್ಕಳನ್ನು ಆರಾಮದಾಯಕವಾಗಿರಿಸುವಲ್ಲಿ ಸಹಾಯಕವಾಗುವಂತಿರಬೇಕು. ತಾಯಂದಿರು ಮಕ್ಕಳ ಬಟ್ಟೆಗಳ ಬಗೆಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ.
ಡೈಲಿವೇರ್ ಬೇಸಿಗೆ ದಿರಿಸುಗಳು
ಫ್ರಾಕುಗಳು: ಪುಟಾಣಿ ಹೆಣ್ಣುಮಕ್ಕಳಿಗೆ ಬೇಸಿಗೆಗೆ ಸೂಕ್ತವೆನಿಸುವ ದಿರಿಸುಗಳಲ್ಲಿ ಫ್ರಾಕುಗಳು ಅದರಲ್ಲಿಯೂ ಕಾಟನ್ ಫ್ರಾಕುಗಳು ಮೊದಲನೆಯದು. ಕಾಟನ್ ಬಟ್ಟೆಗಳು ಸೆಕೆಯೆನಿಸುವುದಿಲ್ಲವಾದ್ದರಿಂದ ಕಾಟನ್ ಫ್ರಾಕುಗಳಲ್ಲಿ ಮಕ್ಕಳು ಆರಾಮದಾಯಕ ಅನುಭವವನ್ನು ಪಡೆಯುತ್ತಾರೆ. ಚಿಕ್ಕ ತೋಳುಗಳುಳ್ಳ ಅಥವಾ ಸ್ಲಿವ್ಲ್ ಸ್ ಫ್ರಾಕುಗಳು ಹೆಚ್ಚು ಸೂಕ್ತವೆನಿಸುತ್ತವೆ.
ಟೀಶರ್ಟುಗಳು: ಬೇರೆ ಬಗೆಯ ಶರ್ಟುಗಳಿಗಿಂತ ಮಕ್ಕಳಿಗೆ ಟೀಶರ್ಟುಗಳು ಬೇಸಿಗೆಗೆ ಸೂಕ್ತವಾದುದು. ಗಾಢ ಬಣ್ಣಗಳನ್ನು ಆಯ್ದುಕೊಳ್ಳದಿರುವುದು ಹೆಚ್ಚು ಸೂಕ್ತವಾದುದು. ಟೀಶರ್ಟುಗಳು ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳೂ ಕೂಡ ಧರಿಸಬಹುದಾದ್ದರಿಂದ ಬಗೆ ಬಗೆಯ ಬಾಟಮ…ವೇರುಗಳೊಂದಿಗೆ ಧರಿಸಿಕೊಳ್ಳಬಹುದು. ಸ್ಲಿವ್ಲ್ ಸ್ ಟೀಶರ್ಟುಗಳು ಬೇಸಿಗೆಗೆ ಹೆಚ್ಚು ಸೂಕ್ತವಾದುದು.
ಸನ್ ಡ್ರೆಸ್ಸುಗಳು: ಇವುಗಳ ಹೆಸರೇ ಹೇಳುವಂತೆ ಬೇಸಗೆ ಕಾಲಕ್ಕಾಗಿಯೇ ತಯಾರಾದ ದಿರಿಸುಗಳಾಗಿವೆ. ಸಾಮಾನ್ಯವಾಗಿ ಸ್ಲಿವ್ಲ್ ಸ್ ಆಗಿರುವ ಈ ಬಗೆಯ ದಿರಿಸುಗಳು ಫ್ರಾಕುಗಳಂತೆಯೇ ಇರುತ್ತವೆ ಮತ್ತು ಬಹಳ ಹಗುರವಾಗಿರುತ್ತವೆ. ಹಾಗಾಗಿ ಇವುಗಳು ನಿಮ್ಮ ಮಕ್ಕಳಿಗೆ ಹಿತಕರವೂ ಆರಾಮದಾಯಕವೂ ಆದವಾಗಿವೆ.
ಶಿಶುಗಳಿಗಾದರೆ ಕಾಟನ್ ಬಟ್ಟೆಗಳಿಂದ ತಯಾರಿಸಲಾದ ತೆಳುವಾದ ಜಬಲಾಗಳು ಸೂಕ್ತವಾದುದು. ಬೇಸಿಗೆಯಲ್ಲಿ ನಿತ್ಯ ಬಳಕೆಯಲ್ಲಿ ಆದಷ್ಟು ನ್ಯಾಪಿಗಳ ಬಳಕೆಯನ್ನು ನಿಯಮಿತಗೊಳಿಸಿದರೆ ಒಳಿತು. ಬೆವರುವಿಕೆಯಿಂದ ಶಿಶುಗಳ ಕಾಲಿನ ಸಂದಿಗಳಲ್ಲಿ ರಾಷಸ್ ಆಗುವ ಸಾಧ್ಯತೆಯಿರುತ್ತದೆ. ಶಿಶುಗಳಿಗೆ ಸ್ನಾನವಾದ ನಂತರ ಚೆನ್ನಾಗಿ ಪೌಡರನ್ನು ಹಾಕುವುದು ಒಳಿತಾಗಿದೆ. ಚಿಕ್ಕ ಶಾಟ್ಸುìಗಳನ್ನು ಬಳಸಬಹುದು. ಬೇಬಿ ಸೂಟುಗಳನ್ನು ಬಳಸಿದಾಗ ಶಿಶುಗಳು ಆರಾಮದಾಯಕ ಅನುಭವವನ್ನು ಅನುಭವಿಸುತ್ತವೆ.
ಇನ್ನು ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಹಗುರವಾದ ಬಟ್ಟೆಗಳಿಂದ ತಯಾರಿ ಸಲಾದ ಜಂಪ್ ಸೂಟ…ಗಳನ್ನೇ ಆಯ್ಕೆ ಮಾಡಿ ಮಕ್ಕಳಿಗೆ ಹಾಕುವುದು ಒಳ್ಳೆಯದು. ಅವುಗಳಲ್ಲೂ ಆದಷ್ಟು ಶಾರ್ಟ್ ಜಂಪ್ ಸೂಟುಗಳು ಸೂಕ್ತವೆನಿಸುತ್ತವೆ. ಮಾರುಕಟ್ಟೆಯಲ್ಲಿ ಬಹಳ ವಿಧಗಳ ಫ್ಯಾಷನೇಬಲ… ಫ್ರಾಕುಗಳು ಲಭ್ಯವಿದೆ. ಬಗೆಬಗೆಯ ಬಣ್ಣಗಳಲ್ಲೂ ಸಿಗುತ್ತವಾದ್ದರಿಂದಲೂ ಆಯ್ಕೆಗೆ ವಿಪುಲ ಅವಕಾಶವಿರುವುದರಿಂ ದಲೂ ಹೆಣ್ಣುಮಕ್ಕಳಿಗೆ ಒಪ್ಪುವಂತಹ ಬಣ್ಣದ ಫ್ರಾಕುಗಳನ್ನು ಖರೀದಿಸಿ ತೊಡಿಸಬಹುದಾಗಿದೆ. ಪ್ಯಾಂಟ…-ಶರ್ಟುಗಳಿಗಿಂತ ಹೆಣ್ಣುಮಕ್ಕಳಿಗೆ ಸಡಿಲವಾಗಿರುವ ಮ್ಯಾಕ್ಸಿ ಮತ್ತು ಮಿನಿ ಸ್ಕರ್ಟುಗಳನ್ನು ಬಳಸಬಹುದು. ಗಂಡುಮಕ್ಕಳಿಗಾದರೆ ಶರ್ಟುಗಳು ಮತ್ತು ಸ್ಲಿವ್ಲ್ ಸ್ ಶರ್ಟುಗಳು ಆರಾಮದಾಯಕವೆನಿಸುತ್ತವೆ. ಇವುಗಳೂ ಸಹ ಮಾರುಕಟ್ಟೆಯಲ್ಲಿ ವಿವಿಧ ಮಾದರಿ ಹಾಗೂ ಬಣ್ಣಗಳಲ್ಲಿ ದೊರೆಯುತ್ತವೆ.
ಬೇಸಿಗೆಯಲ್ಲಿ ನಿಮ್ಮ ಮಕ್ಕಳನ್ನು ತಯಾರುಗೊಳಿಸುವಲ್ಲಿ ಸಹಾಯಕವಾಗಬಲ್ಲ ಅಂಶಗಳು:
. ಆದಷ್ಟು ಸಡಿಲವಾದ ದಿರಿಸುಗಳನ್ನೇ ಮಕ್ಕಳಿಗೆ ಹಾಕುವುದು.
. ಹೆಣ್ಣುಮಕ್ಕಳಿಗೆ ಭಾರವಾದ ಆಭರಣಗಳನ್ನು ಮತ್ತು ಅಗತ್ಯಕ್ಕಿಂತ ಹೆಚ್ಚು ಆಭರಣಗಳನ್ನು ತೊಡಿಸದಿರುವುದು.
. ಸರಳವಾದ ಮೇಕಪ್ ಮಾಡುವುದು.
. ಜರ್ಕಿನ್, ಕೋಟುಗಳು, ಶ್ರಗ್ಗುಗಳ ಬಳಕೆಯನ್ನು ಆದಷ್ಟು ಕಡಿತಗೊಳಿಸುವುದು.
. ಗಾಢಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡದೆ ತೆಳುವಾದ ಬಣ್ಣಗಳ ಬಟ್ಟೆಗಳನ್ನು ಆಯ್ದುಕೊಂಡು ಬಳಸುವುದು.
. ಹೆಣ್ಣುಮಕ್ಕಳಿಗಾದರೆ ತಲೆಕೂದಲನ್ನು ಪೋನಿ ಕಟ್ಟುವುದು ಅಥವಾ ತುರುಬುಗಳನ್ನು ಹಾಕುವುದರಿಂದ ಹೆಚ್ಚು ಸೆಕೆಯೆನಿಸುವುದಿಲ್ಲ.
.ಗಂಡುಮಕ್ಕಳಿಗಾದರೆ ಬೇಸಿಗೆಯಲ್ಲಿ ಕೂದಲುಗಳನ್ನು ಕಾಲಕಾಲಕ್ಕೆ ಆದಷ್ಟು ಚಿಕ್ಕದಾಗಿ ಕತ್ತರಿಸುವುದರ ಮೂಲಕ ಕೂದಲುಗಳ ಸೂಕ್ತ ನಿರ್ವಹಣೆ ಮಾಡುವುದು.
.ಆದಷ್ಟು ಕಾಟನ್, ಮಲ…, ಸ್ಪನ್‌ಗಳಂತಹ ಮೆತ್ತಗಿನ ಬಟ್ಟೆಗಳಿಂದ ತಯಾರಿಸಿದ ಬಟ್ಟೆಗಳನ್ನೇ ಬಳಸುವುದು.
.ಟೈಟ್ ಜೀನ್ಸ್ ಅಥವ ಜೆಗ್ಗಿಂಗ್ಸ್ಗಳನ್ನು ಬಳಸುವುದರ ಬದಲು ಕಾಟನ್ ಲೆಗ್ಗಿಂಗ್ಸ್ ಅಥವ ಪೈಜಾಮ ಪ್ಯಾಂಟುಗಳಿಗೆ ಆದ್ಯತೆಯನ್ನು ನೀಡುವುದು.
.ಹೆಣ್ಣುಮಕ್ಕಳಿಗಾದರೆ ಕೂದಲುಗಳು ಮುಖಕ್ಕೆ ಬಾರದಂತೆ ಹೇರ್‌ಬ್ಯಾಂಡುಗಳನ್ನು ಹಾಕುವುದು.
.ಬೇಸಿಗೆಗೆ ಸೂಕ್ತವೆನಿಸುವ ಚಪ್ಪಲಿಗಳನ್ನೇ ಬಳಸುವುದು. ಶೂಗಳು ಮತ್ತು ಸಾಕ್ಸುಗಳ ಬಳಕೆಯನ್ನು ದೂರವಿರಿಸುವುದು.
.ಬೇಕೆನಿಸಿದಲ್ಲಿ ಕ್ಯಾನ್ವಾಸ್ ಅಥವಾ ಡೆನಿಮ… ಶೂಗಳನ್ನು ಬಳಸಬಹುದು.
. ಕಾಲರುಗಳಿಲ್ಲದ ಮತ್ತು ಹೈ-ನೆಕ್ ಇಲ್ಲದೇ ಇರುವಂಥ ಬಟ್ಟೆಗಳನ್ನು ಬಳಸದಿರುವುದು.
ತೀರಪ್ರದೇಶಗಳಲ್ಲಿ ಅತಿ ಹೆಚ್ಚಿನ ಸೆಕೆ ಇರುವುದರಿಂದ ಮಕ್ಕಳ ದಿರಿಸುಗಳ ಬಗೆಗೆ ವಿಶೇಷ ಕಾಳಜಿ ಮತ್ತು ಆಸಕ್ತಿಯನ್ನು ತೆಗೆದುಕೊಳ್ಳುವುದು ಅತ್ಯಂತ ಆವಶ್ಯಕವಾದುದಾಗಿದೆ. ಬೇಸಿಗೆ ದಿರಿಸುಗಳು ಮಾರುಕಟ್ಟೆಯಲ್ಲಿ ವಿವಿಧ ಬಗೆಗಳಲ್ಲಿ ದೊರೆಯುವುದರಿಂದ ನೀವೂ ಕೂಡ ಬರುತ್ತಿರುವ ಸಮ್ಮರ್‌ಗೆ ಉತ್ತಮ ರೀತಿಯ ತಯಾರಿಯನ್ನು ಮಾಡಿಕೊಳ್ಳಿ.
ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.