ಪಾಕ್ ಗೆ ಚೀನದ ಕ್ಷಿಪಣಿ ನಿಗಾ ವ್ಯವಸ್ಥೆ
Team Udayavani, Mar 23, 2018, 9:50 AM IST
ಹೊಸದಿಲ್ಲಿ: ಭಾರತದಲ್ಲಿ ಗುರುವಾರ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾದ ಬೆನ್ನಲ್ಲೇ, ನೆರೆಯ ದೇಶವಾದ ಪಾಕಿಸ್ಥಾನ, ಚೀನದಿಂದ ಕ್ಷಿಪಣಿ ನಿಗಾ ವ್ಯವಸ್ಥೆಯೊಂದನ್ನು ಖರೀದಿಸಿರುವುದು ಬೆಳಕಿಗೆ ಬಂದಿದೆ. ಹಾಂಕಾಂಗ್ ಮೂಲದ ‘ಸೌತ್ ಚೀನ ಮಾರ್ನಿಂಗ್ ಪೋಸ್ಟ್’ ಈ ಕುರಿತು ವರದಿ ಮಾಡಿದೆ. ವರದಿಯಲ್ಲಿ, ಈ ವ್ಯವಸ್ಥೆ ಖರೀದಿಗೆ ಪಾಕಿಸ್ಥಾನ ಕೊಟ್ಟಿರುವ ಹಣದ ಬಗ್ಗೆ ಮಾಹಿತಿ ನೀಡಲಾಗಿಲ್ಲ. ಆದರೂ ಈ ಹೊಸ ವ್ಯವಸ್ಥೆಯು ಪಾಕಿಸ್ಥಾನದ ಸೇನಾ ಆಧುನೀಕರಣ ವಿಚಾರದಲ್ಲಿ ಹೊಸ ಮೈಲುಗಲ್ಲು ಎಂದು ಬಣ್ಣಿಸಲಾಗಿದೆ. ಭಾರತೀಯ ರಕ್ಷಣಾ ವ್ಯವಸ್ಥೆಯ ಮೇಲೆ ಪಾಕಿಸ್ಥಾನ ತನ್ನ ಹದ್ದಿನ ಕಣ್ಣನ್ನು ಕೇಂದ್ರೀಕರಿಸಿದೆ ಎಂಬುದು ಆ ದೇಶದ ನಡೆಯಿಂದ ಮತ್ತಷ್ಟು ಸಾಬೀತಾಗಿದೆ.
ಸೇನೆ ನಿಯಂತ್ರಣ ಪಿಎಪಿ ವ್ಯಾಪ್ತಿಗೆ: ಭಾರತದ ಜತೆಗೆ ಹೊಂದಿಕೊಂಡಿರುವ ಗಡಿ ಸೇರಿದಂತೆ ಎಲ್ಲಾ ಅಂತಾರಾಷ್ಟ್ರೀಯ ಗಡಿಗಳಲ್ಲಿ ನಿಯೋಜಿತವಾಗಿದ್ದ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಾಂತೀಯ ಸೇನಾ ಸಿಬಂದಿಯನ್ನು ಪೀಪಲ್ಸ್ ಆರ್ಮ್ಸ್ ಪೊಲೀಸ್ ವ್ಯಾಪ್ತಿಗೆ ತರಲಾಗಿದೆ. ಈ ಮೂಲಕ ಆಡಳಿತ ಪಕ್ಷ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನದ ನೇರ ನಿಯಂತ್ರಣದಲ್ಲಿ ಸೇನಾ ಪಡೆ ಇರುವಂತೆ ಮಾಡಲಾಗಿದೆ.
ನಿಖರ ಗುರಿ ಸಾಧಿಸಿದ ಬ್ರಹ್ಮೋಸ್ ಕ್ಷಿಪಣಿ
ರಾಜಸ್ಥಾನದ ಪೋಖ್ರಾನ್ ನಲ್ಲಿ ಗುರುವಾರ ಬೆಳಗ್ಗೆ 8:42ಕ್ಕೆ ನಡೆಸಲಾದ ‘ಬ್ರಹ್ಮೋಸ್’ ಕ್ಷಿಪಣಿ ಪರೀಕ್ಷೆಯು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ‘ಗುರುವಾರ ಬೆಳಗ್ಗೆ ನಡೆಸಲಾದ ಫ್ಲೈಟ್ ಟೆಸ್ಟ್ನಲ್ಲಿ ಕ್ಷಿಪಣಿ ತನ್ನ ಗುರಿಯನ್ನು ಕರಾರುವಾಕ್ ಆಗಿ ಮುಟ್ಟಿತು. ಕ್ಷಿಪಣಿಯ ಈ ಕಾರ್ಯಕ್ಷಮತೆ, ರಾಷ್ಟ್ರೀಯ ಭದ್ರತೆಯನ್ನು ಬಲವಾಗಿಸಿದೆ” ಎಂದು ತಿಳಿಸಿದ್ದಾರೆ. ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ರಷ್ಯಾದ ಎನ್ಪಿಒ ಮ್ಯಾಶಿನೋಸ್ಟ್ರೋಯೇನಿಯಾ (ಎನ್ಪಿಒಎಂ) ಸಹಭಾಗಿತ್ವದಲ್ಲಿ ನಿರ್ಮಿಸಲಾಗಿರುವ ಬ್ರಹ್ಮೋಸ್ ಕ್ಷಿಪಣಿಯು ಕಳೆದ ವರ್ಷ ನಿರೀಕ್ಷೆ ಯಂತೆ 400 ಕಿ.ಮೀ. ದೂರವನ್ನು ಮುಟ್ಟಿತ್ತು. ಆ ಮೂಲಕ, ಭಾರತವು ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಂತಾಗಿತ್ತು. ಭಾರತಕ್ಕೆ ಈ ಅವಕಾಶ ತಂದುಕೊಟ್ಟ ಹೆಗ್ಗಳಿಕೆ ‘ಬ್ರಹ್ಮೋಸ್’ ನದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.