ನೋ ಬ್ಯಾಗ್ ಡೇ: ಕಾಡಿಗೆ ಚಾರಣ, ಬೃಹತ್ ವೃಕ್ಷ ದರ್ಶನ
Team Udayavani, Mar 23, 2018, 11:51 AM IST
ಕೆಯ್ಯೂರು: ನೋ ಬ್ಯಾಗ್ ಡೇ ಅಂಗವಾಗಿ ಮಕ್ಕಳನ್ನು ಕಾಡಿಗೆ ಚಾರಣ ಕರೆದೊಯ್ದು, ಪರಿಸರ ಪ್ರೀತಿ ಬೆಳೆಸುವ ಕೆಲಸವನ್ನು ಕೆಯ್ಯೂರಿನ ಸರಕಾರಿ ಪ್ರೌಢಶಾಲೆ ಮಾಡಿದೆ.
ಶಾಲೆಯಿಂದ ಸುಮಾರು 6 ಕಿ.ಮೀ. ದೂರದ ಕಣಿಯಾರು ಕಾಡಿಗೆ 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳನ್ನು ಹೊರ ಸಂಚಾರಕ್ಕೆ ಕರೆದೊಯ್ಯಲಾಗಿತ್ತು. ಕಾಡಿನ ಮಧ್ಯೆ ಶತಮಾನಗಳಷ್ಟು ಹಳೆಯದಾದ ಬೃಹತ್ ಮರವೊಂದನ್ನು ವೀಕ್ಷಿಸುವುದು ಇದರ ಉದ್ದೇಶವಾಗಿತ್ತು. ಅರಣ್ಯ ಇಲಾಖೆ ಸಿಬಂದಿ ಶಂಕರ್ ಅವರ ನೇತೃತ್ವದಲ್ಲಿ ಸಾಗಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಕಾಡಿನ ಸಹಜ ಸೌಂದರ್ಯವನ್ನು ಸವಿಯುತ್ತಾ 11 ಗಂಟೆ ಸುಮಾರು ಆ ಮರದ ಬಳಿ ತಲುಪಿದರು. ಇಷ್ಟೊಂದು ದೊಡ್ಡ ಗಾತ್ರದ ಮರವನ್ನು ನೋಡಿ ಅಚ್ಚರಿ ಪಡುತ್ತಲೇ ತಾವು ತಂದ ತಿಂಡಿ-ತಿನಿಸುಗಳನ್ನು ಸವಿದು ದಣಿವಾರಿಸಿಕೊಂಡರು. ಕಾಡುಬಳ್ಳಿಗಳಲ್ಲಿ ಜೀಕಿ ಖುಷಿಪಟ್ಟರು. ಮಧ್ಯಾಹ್ನದ ವೇಳೆ ಎಲ್ಲರೂ ಮರಳಿ ಶಾಲೆಗೆ ತಲುಪಿದರು.
ಮುಖ್ಯೋಪಾಧ್ಯಾಯ ವಿನೋದ್ ಕುಮಾರ್ ಕೆ.ಎಸ್., ಶಿಕ್ಷಕರಾದ ಎಲ್. ಎಚ್. ಗೌಂಡಿ, ಸುಮಿತ್ರಾ ಕೆ., ಜೆಸ್ಸಿ ಪಿ.ವಿ., ನಳಿನಿ ಡಿ., ಸರೋಜಮ್ಮ , ಕಚೇರಿ ಸಿಬಂದಿ ರಾಕೇಶ್ ಇದ್ದರು. ಶಿಕ್ಷಕರಾದ ಜಗದೀಶ್ ಜಿ.ಎಂ., ಸೌಮ್ಯಾ ಶೆಟ್ಟಿ ಹಾಗೂ ಇಂದಿರಾ ಪಿ. ಅವರು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ ಪರೀಕ್ಷಾ ಸಿದ್ಧತೆಯಲ್ಲಿ ಸಹಕರಿಸಿದರು.
ಎಷ್ಟು ದೊಡ್ಡ ಮರ!
ಕಣಿಯಾರು ಕಾಡಿನಲ್ಲಿದ್ದ ಬೃಹತ್ ಮರವನ್ನು ವಿದ್ಯಾರ್ಥಿಗಳು ಪರಸ್ಪರ ಕೈಗಳನ್ನು ಜೋಡಿಸಿ ಸುತ್ತುವರಿದರು. ಒಟ್ಟು 24 ವಿದ್ಯಾರ್ಥಿಗಳ ಕೈಗಳು ಜೋಡಿದ ಮೇಲೆ ಕಾಂಡವನ್ನು ಸುತ್ತುವರಿಯಲು ಸಾಧ್ಯವಾಯಿತು. ಸಮೀಪದಲ್ಲೇ ಇದೇ ಜಾತಿಯ ವಿಶಾಲ ಮರಗಳೂ ಇದ್ದವು. ಈ ಮರದ ಕಾಂಡದ ಬಾಗಿದ ರಚನೆಯ ನಡುವೆ ಒಂದು ಕೊಠಡಿಯಷ್ಟು ಜಾಗ ಇರುವುದು ವಿಶೇಷ.
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.