ಪ್ರತಿಷ್ಠಿತ ಪುಣೆ ಬಂಟರ ಭವನ ಉದ್ಘಾಟನೆಗೆ ದಿನಗಣನೆ


Team Udayavani, Mar 23, 2018, 2:58 PM IST

2203mum04.jpg

ಮುಂಬಯಿ: ಸಮಾಜದ ಹಿರಿಯರ ದೂರದೃಷ್ಟಿಯ ನಿಲುವಿನೊಂದಿಗೆ ಸಮಾಜ ಬಾಂಧವರ ಆಶೋತ್ತರಗಳನ್ನು ಪರಿಗಣಿಸಿ ಸಮಾಜ ಬಾಂಧವರನ್ನು ಒಗ್ಗೂಡಿಸುವ ಉದ್ದೇಶದೊಂದಿಗೆ ಸಾಮಾಜಿಕ, ಭಾಷಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ಸಾಧಿಸಲು 40 ವರ್ಷಗಳ  ಹಿಂದೆ ಪುಣೆ ಬಂಟರ ಸಂಘವನ್ನು ಸ್ಥಾಪಿಸಿದ್ದರು. ಸಂಘದ ಹಿರಿಯರ ದೂರದೃಷ್ಟಿಯ ಚಿಂತನೆ, ಯುವ ಕಾರ್ಯಕರ್ತರ ಉತ್ಸಾಹ, ಸಮಾಜ ಬಾಂಧವರ ಪ್ರೋತ್ಸಾಹದೊಂದಿಗೆ ಸಂಘವು ಕಾಲ ಕಾಲಕ್ಕೆ ನವನವೀನ ಪರಿಕಲ್ಪನೆಗಳ ಮೂಲಕ  ಪ್ರಗತಿಯ ಪಥದಲ್ಲಿ ಸಾಗಿ ಇಂದು ಈ ಸಂಸ್ಥೆ ದೇಶಾದ್ಯಂತ ಇರುವ ಅನ್ಯ ಬಂಟರ ಸಂಘಗಳ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ಗುರುತಿಸಿಕೊಳ್ಳುವತ್ತ  ಹೆಜ್ಜೆ ಇರಿಸಿದೆ.

ಹಲವಾರು ಸಮಾಜಮುಖೀ ಕಾರ್ಯಕ್ರಮಗಳ ಮೂಲಕ ಗಮನಸೆಳೆದಿರುವ ಈ ಸಂಘಕ್ಕೆ ಸ್ವಂತವಾದ ಸಾಂಸ್ಕೃತಿಕ  ಭವನವೊಂದನ್ನು ನಿರ್ಮಿಸಲು ಸಂಘದ ಮಾಜಿ ಅಧ್ಯಕ್ಷರುಗಳು, ಸಂಸ್ಥೆಯ ಹಿರಿಯರು ಬಹಳಷ್ಟು ಪ್ರಯತ್ನಪಟ್ಟರೂ ಯಾವುದಕ್ಕೂ ಸಮಯ ಕೂಡಿ ಬರಬೇಕು ಎಂಬಂತೆ ಇದೀಗ ಎಲ್ಲವೂ ಅನುಕೂಲ ಸಿಂಧುವಾಗಿ ಸುಯೋಗ ಒದಗಿ ಬಂದಿದ್ದು ಪುಣೆಯ ಸಮಾಜ ಬಾಂಧವರ ಹಾಗೂ ಸಂಘದ ಬಹುದಿನಗಳ ಕನಸಾದ ಬಂಟರ ಸುಸಜ್ಜಿತ ಭವನದ ನಿರ್ಮಾಣ ಕಾರ್ಯ ಸಂಘದ ಈಗಿನ  ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಇವರ ನೇತೃತ್ವದಲ್ಲಿ  ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವ ಐತಿಹಾಸಿಕ ಕ್ಷಣಕ್ಕೆ ಕ್ಷಣಗಣನೆ ಆರಂಭಗೊಂದಿರುವುದು ಸಮಸ್ತ ಬಂಟ ಬಾಂಧವರಿಗೆ ಹೆಮ್ಮೆಯ ಕ್ಷಣವಾಗಿದೆ.

ಭವನಕ್ಕೆ ಶಂಕುಸ್ಥಾಪನೆ : ಕಳೆದ ಆರು  ವರ್ಷಗಳ ಮೊದಲು  ಅಂದಿನ ಅಧ್ಯಕ್ಷರಾದ ಸದಾನಂದ ಶೆಟ್ಟಿಯವರ ಅಧ್ಯಕ್ಷತೆಯ ಅವಧಿಯಲ್ಲಿ  ಶಂಕುಸ್ಥಾಪನೆಗೊಂಡ ಭವನದ ಕಾರ್ಯವನ್ನು ನಂತರದ ಅಧ್ಯಕ್ಷ ಸ್ಥಾನವನ್ನಲಂಕರಿಸಿದ ಹಿರಿಯರಾದ  ಜಗನ್ನಾಥ ಶೆಟ್ಟಿಯವರ ಕಾಲದಲ್ಲಿ  ಮುಂದುವರಿಸಿ  ಭವನದ ಕಾರ್ಯಕ್ಕೆ ವೇಗ ನೀಡಿ ತಳಮಹಡಿ ಹಾಗೂ ಪ್ರಥಮ ಮಹಡಿಯ ನಿರ್ಮಾಣ ಕಾರ್ಯವನ್ನು ಮಾಡಲಾಯಿತು. ಅವರು ಸಂಘದ ಭವನಕ್ಕೆ ಬಲುದೊಡ್ಡ ಮೊತ್ತದ ದೇಣಿಗೆಯನ್ನು ಪ್ರಕಟಿಸಿ ಯಾವುದೇ ಹಂತದಲ್ಲಿ ನಿರ್ಮಾಣ ಕಾರ್ಯ ನಿಲ್ಲಬಾರದೆಂದು ಕೆಲಸಕ್ಕೆ ವೇಗ ನೀಡಿದರು. ಈ ಸಂದರ್ಭ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಸಂತೋಷ್‌ ವಿ. ಶೆಟ್ಟಿಯವರನ್ನು ನೇಮಿಸಿ ಜವಾಬ್ದಾರಿಯನ್ನು ಹೆಗಲಿಗೇರಿಸಲಾಯಿತು.  ತದನಂತರದ ಕಾರ್ಯಾವಧಿಯಲ್ಲಿ 2014ರಲ್ಲಿ ಸರ್ವಸಮ್ಮತದ ನಿಲುವಿನಂತೆ ಎಲ್ಲರ ಒತ್ತಾಸೆಯಂತೆ ಸಂಘದ ಅಧ್ಯಕ್ಷ ಸ್ಥಾನವನ್ನು ಪಾದರಸದಂತಹ ವ್ಯಕ್ತಿತ್ವವನ್ನು ಹೊಂದಿದ ಸಂತೋಷ್‌ ಶೆಟ್ಟಿಯವರಿಗೆ ವಹಿಸಲಾಯಿತು.

ಜವಾಬ್ದಾರಿಯುತ ಕಾರ್ಯದಿಂದ ಭವನ ನಿರ್ಮಾಣ: ಅಧ್ಯಕ್ಷರಾದ ಕ್ಷಣದಿಂದಲೇ ಈ ದೊಡ್ಡ ಜವಾಬ್ದಾರಿಯನ್ನು ಸವಾಲಾಗಿ ಸ್ವೀಕರಿಸಿದ ಸಂತೋಷ್‌ ಶೆಟ್ಟಿಯವರು ಸಮಾಜ ಬಾಂಧವರಿಗೆ ದೇಗುಲದಂತಿರುವ ಈ ಭವನವನ್ನು ನಿರ್ಮಿಸಿಯೇ ಸಿದ್ಧ ಎನ್ನುವ ಸಂಕಲ್ಪದೊಂದಿಗೆ ತನ್ನನ್ನು ಹಗಲಿರುಳು ತೊಡಗಿಸಿಕೊಂಡು ತನ್ನ ವ್ಯಾಪಾರ ವಹಿವಾಟುಗಳನ್ನು ಬದಿಗಿರಿಸಿ ಸಂಘದ ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿ ಹಾಗೂ ಹಿರಿಯರ ಮಾರ್ಗದರ್ಶನದೊಂದಿಗೆ, ಸಮಿತಿ ಸದಸ್ಯರ ಒಮ್ಮತದೊಂದಿಗೆ ದಿನದಿನವೂ ಹೊಸ ಹೊಸ ಯೋಜನೆ, ನವನವೀನ ಪರಿಕಲ್ಪನೆಯೊಂದಿಗೆ ವಿವಿಧ ಚತುರೋಪಾಯಗಳಿಂದ  ಪುಣೆಯಲ್ಲದೆ, ಊರು, ಮುಂಬಯಿ, ಬೆಂಗಳೂರು ಸೇರಿದಂತೆ ಸಮಾಜದ ಗಣ್ಯಾತಿ ಗಣ್ಯರುಗಳನ್ನು ಸಂಪರ್ಕಿಸಿ ದೇಣಿಗೆಗಳನ್ನು ಪಡೆದು ಬೆಟ್ಟದಷ್ಟಿರುವ ಸವಾಲನ್ನು ಸಾಧಿಸುವಲ್ಲಿ ಸಫಲತೆಯನ್ನು ಕಂಡಿರುತ್ತಾರೆ.

ಭವನಕ್ಕೆ ಹೊಳಪು ನೀಡಿದವರು : ಪುಣೆ ಬಂಟರ ಸಂಘದ ಭವನ ನಿರ್ಮಾಣದಲ್ಲಿ ಮುಖ್ಯ ಆರ್ಕಿಟೆಕ್ಟರ್‌  ಸಾತ್‌ ಭಾಯ್‌ ಅವರು ಸಂಪೂರ್ಣ ಒಳವಿನ್ಯಾಸದ ಜವಾಬ್ದಾರಿ ವಹಿಸಿ ಕಾರ್ಯ ನಿರ್ವಹಿಸಿದ್ದರು. ಇವರೊಂದಿಗೆ ಮುಂಬಯಿಯ ಖ್ಯಾತ  ಆರ್ಕಿಟೆಕ್ಟರ್‌ ಫೆಕೇಡ್‌  ಇಂಟೀರಿಯರ್‌ನ  ಭರತ್‌ ಶೆಟ್ಟಿ, ಶಮಾ ಎಂಟರ್‌ಪ್ರೈಸಸ್‌ನ ಪ್ರಕಾಶ್‌ ಕುಲಕರ್ಣಿ, ರಾಹುಲ್‌ ಜವೇರಿ, ಸೈಟ್‌ ಕೋ ಆರ್ಡಿನೇಟರ್‌ ಮಿಲಿಂದ್‌ ಜಾಧವ್‌, ಇಲೆಕ್ಟ್ರಿಕ್‌  ಪ್ಲಂಬಿಂಗ್‌ ಪ್ರಿಸೆಂಟ್‌ ಗ್ರೂಪ್‌ನ   ಸಂದೇಶ್‌ ಪೂಜಾರಿ, ಕಿಚನ್‌ ಎಕ್ಸ್‌ಪರ್ಟ್‌ ಎಂ. ಎ. ದಾರುವಾಲಾ, 3ಡಿ ವಾಕ್‌ ಥ್ರೋ ವಿಜಯ್‌ ಶೆಟ್ಟಿ, ಸುಂದರ ಶೆಟ್ಟಿ, ಸತೀಶ್‌ ಫಿಸ್ಕೆ, ಪ್ರಶಾಂತ್‌ ಶೆಟ್ಟಿ ಹಾಗೂ ಸುಕುಮಾರ್‌ ಶೆಟ್ಟಿ ಇವರು ಸಹಕರಿಸಿದ್ದರು.

ಬಂಟ ಭೂಷಣ ಮೂಲ್ಕಿ ಸುಂದರರಾಮ ಶೆಟ್ಟಿ ಅವರಿಗೆ ವಿಶೇಷ ಗೌರವ : ಭವನದಲ್ಲಿ ಸಮಾಜವನ್ನುದ್ಧರಿಸಿದ ಮಹಾನ್‌  ಸಮಾಜೋದ್ಧಾರಕ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಒಂದು ಹೊಸ ಜೀವನದ ಅವಕಾಶಗಳನ್ನು ಒದಗಿಸಿ ಬಡವರ ಆಶಾಕಿರಣವಾಗಿದ್ದ ಬಂಟ ಭೂಷಣಪ್ರಾಯ ವಿಜಯ ಬ್ಯಾಂಕಿನ ಸಂಸ್ಥಾಪಕ ಮೂಲ್ಕಿ ಸುಂದರರಾಮ ಶೆಟ್ಟಿ ಯವರನ್ನು ಗೌರವಿಸುವ ಅವರ ಪುತ್ಥಳಿ, ಸಮಾಜದ ಸ್ಥಾನಮಾನವನ್ನು ಉನ್ನತ ಸ್ಥಾನಕ್ಕೇರಿಸಿದ ಜಸ್ಟಿಸ್‌ ಕೆ.ಎಸ್‌. ಹೆಗ್ಡೆಯವರ ಮೂರ್ತಿ ಹಾಗೂ ಮಹಾರಾಷ್ಟ್ರ ಮತ್ತು  ಕರ್ನಾಟಕ ರಾಜ್ಯಗಳ ಸ್ನೇಹ ಬಾಂಧವ್ಯವನ್ನು ಪ್ರತಿಪಾದಿಸುವ ಕಲ್ಪನೆಯಂತೆ   ಕರ್ಮಭೂಮಿಯಾಗಿರುವ ಮಹಾರಾಷ್ಟ್ರದ ಮಣ್ಣಿಗೆ  ಗೌರವ ನೀಡುವ ಸಲುವಾಗಿ ಮಹಾರಾಷ್ಟ್ರದ ಆರಾಧ್ಯದೇವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಭವನದಲ್ಲಿ ಅನಾವರಣಗೊಳಿಸುವ ಚಿಂತನೆ ನಿಜಕ್ಕೂ ದಾರ್ಶನಿಕವಾಗಿದೆ.   ಇದರೊಂದಿಗೆ ಆಕರ್ಷಕವಾಗಿ ಕಲಾತ್ಮಕವಾಗಿ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಮಂಗಳೂರಿನಿಂದಲೇ ಮರ ಮಟ್ಟುಗಳನ್ನು ತಂದು ನಿರ್ಮಿಸಿದ ಚಾವಡಿ ಭವನದ ಅಂದವನ್ನು ಮತ್ತಷ್ಟು ಹೆಚ್ಚಿಸಿರುವುದು ಸುಳ್ಳಲ್ಲ.

ಭವಿಷ್ಯದ ಯೋಜನೆಗಳು : ಸಂಘದ ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿಯವರ ದೊಡ್ಡ ಮೊತ್ತದ ದೇಣಿಗೆ ಹಾಗೂ ಆಶೀರ್ವಾದ, ಮಾಜಿ ಅಧ್ಯಕ್ಷರುಗಳ ಉದಾರ ದೇಣಿಗೆ, ಸಂಘದ ಪದಾಧಿಕಾರಿಗಳ, ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ಹಾಗೂ ದಕ್ಷಿಣ ಪ್ರಾದೇಶಿಕ ಸಮಿತಿಗಳ ಸಹಕಾರ ಪುಣೆಯ, ಊರ ಹಾಗೂ ಮುಂಬಯಿ ದಾನಿಗಳ ನೆರವಿನೊಂದಿಗೆ ಈ ಭವನ ರೂಪುಗೊಂಡಿದೆ.  ನಾನೊಬ್ಬ ಕೇವಲ ನಿಮಿತ್ತ ಮಾತ್ರವಾಗಿ ಸಂಘದ ನಿಸ್ವಾರ್ಥ ಸೇವಕನಂತೆ ಕಾರ್ಯನಿರ್ವಹಿಸಿದ್ದು, ದೈವ ದೇವರ ಅನುಗ್ರಹದೊಂದಿಗೆ ನಿರ್ಮಾಣ ಕಾರ್ಯ ಸಾಧ್ಯವಾಗಿದೆ ಎಂದು ಯಾವುದೇ ರೀತಿಯ ಅಹಂನ್ನು ಬೆಳೆಸಿಕೊಳ್ಳದೆ ಹೆಮ್ಮೆಯಿಂದ ಹೇಳುತ್ತಿರುವ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರು ಭವಿಷ್ಯದಲ್ಲಿ  ಸಮಾಜಮುಖೀ ಚಿಂತನೆಗಳನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಕಾರ್ಯರೂಪಕ್ಕೆ ತರಲು ಕಲ್ಪವೃಕ್ಷ ಎನ್ನುವ  ಸಾಮಾಜಿಕ, ಶೈಕ್ಷಣಿಕ, ಆರೋಗ್ಯ  ಸೇವೆಗಳನ್ನು  ಸಮಾಜ ಬಾಂಧವರಿಗೆ ಒದಗಿಸುವ ನಿಟ್ಟಿನಲ್ಲಿ  ಹೊಸ ಯೋಜನೆಯನ್ನು  ಆರಂಭಿಸುವ ಕನಸನ್ನು ಹೊಂದಿ¨ªಾರೆ.

ಪುಣೆಯ ತುಳು-ಕನ್ನಡಿಗರಿಗೆ ಮೊದಲ ಆದ್ಯತೆ : ಈ ನಮ್ಮ ಸಾಂಸ್ಕೃತಿಕ ಭವನವು ಕೇವಲ ಬಂಟ ಸಮಾಜ ಬಾಂಧವರಿಗಲ್ಲದೆ ಪುಣೆಯಲ್ಲಿರುವ ಎಲ್ಲ ತುಳು-ಕನ್ನಡಿಗರಿಗೂ ಅಭಿಮಾನದ ಭವನವಾಗಿದ್ದು ಇದರಿಂದ ಎಲ್ಲರಿಗೂ ಉಪಯೋಗವಾಗಲಿದೆ. ಇಲ್ಲಿ  ಪ್ರತಿಯೊಬ್ಬ ಜನಸಾಮಾನ್ಯರಿಂದ ಹಿಡಿದು ಬಡವ ಬಲ್ಲಿದರೆಂಬ ಭೇದವೆನಿಸದೆ ಎಲ್ಲರಿಗೂ ಸೇವೆ ನೀಡಲಾಗುವುದು. 

ಬಡ ವರ್ಗದವರಿಗೆ ಇಲ್ಲಿ ಮದುವೆಗಳನ್ನು ನಡೆಸಲು ಅತೀ ಕಡಿಮೆ ಖರ್ಚಿನಲ್ಲಿ  ಸ್ಥಳಾವಕಾಶ ನೀಡಲಾಗುವುದು. ಅಂತೆಯೇ ಬಡವರಿಗೆ, ಹೊಟೇಲ್‌  ಕಾರ್ಮಿಕರಿಗೆ ಭವಿಷ್ಯದಲ್ಲಿ ಜೀವನ ನಿರ್ವಹಣೆಗಾಗಿ  ಬಡ್ಡಿ ರಹಿತ  ಸಾಲ ನೀಡಿಕೆ, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು, ತುಳುನಾಡಿನ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲಾಪ್ರಕಾರಗಳ ಉಳಿವಿಗೆ ಕಾರ್ಯಕ್ರಮಗಳ ಆಯೋಜನೆ ಇತ್ಯಾದಿ ಹಲವಾರು ಯೋಜನೆಗಳು ಸಂಘದ ಮುಂದಿದೆ. ಈ  ಬಗ್ಗೆ ಸಮಿತಿಯೊಂದನ್ನು ರಚಿಸಿ ಮುಂದಡಿಯಿಡಲಾಗುವುದು ಎಂಬುದು ಸಂತೋಷ್‌ ಶೆಟ್ಟಿಯವರ ಮನದಾಳದ ಮಾತಾಗಿದೆ.

ಸಾಧನೆಯ ಹಿಂದಿನ ರೂವಾರಿ ಅಧ್ಯಕ್ಷ ಸಂತೋಷ್‌ ಶೆಟ್ಟಿ : ಜಗನ್ನಾಥ ಶೆಟ್ಟಿಯವರ ಅವಧಿಯಲ್ಲಿ  ಸಂಘದ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ  ಸಿಕ್ಕಿದ ಅವ ಕಾಶವನ್ನು ನಿಭಾಯಿಸಿದ್ದ ಅವರು ಅನಂತರ ಎಲ್ಲರ ಅಪೇಕ್ಷೆಯಂತೆ ಸಂಘದ ಸಾರಥ್ಯವನ್ನು ವಹಿಸಿಕೊಂಡ ಕ್ಷಣದಿಂದಲೇ ನಿಸ್ವಾರ್ಥ ಭಾವದೊಂದಿಗೆ ಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡು ಭವನದ ಪೂರ್ಣರೀತಿಯ ನೀಲನಕ್ಷೆಯನ್ನು ತಯಾರಿಸಿ ಕಾರ್ಯ ಪ್ರವೃತ್ತರಾದರು. ಸಂಘದ ಸನ್ನದ್ಧ ಸ್ಥಿತಿಯಲ್ಲಿ ಸಹಕಾರ ನೀಡುವ ಕಾರ್ಯಕಾರಿ ಸಮಿತಿಯ ಬೆಂಬಲ, ಮಹಿಳಾ ವಿಭಾಗ ಹಾಗೂ ಎರಡು ಪ್ರಾದೇಶಿಕ ಸಮಿತಿಗಳ ಒಮ್ಮತದ ಸಹಕಾರದೊಂದಿಗೆ ಹೊಸ ಹೊಸ ಕಾರ್ಯಯೋಜನೆಗಳ ಮೂಲಕ  ಸಮಾಜದ ಗಣ್ಯಾತಿಗಣ್ಯ ದಾನಿಗಳನ್ನು ಸಂಪರ್ಕಿಸಿ ದೇಣಿಗೆಯನ್ನು ಸ್ವೀಕರಿಸಿ ಆರ್ಥಿಕ ಕ್ರೂಢೀಕರಣವನ್ನು ಮಾಡುತ್ತಾ ಭವನದ ನಿರ್ಮಾಣದ ಪ್ರತಿಯೊಂದು ವಿಭಾಗದಲ್ಲಿಯೂ ಯಾವುದೇ ಕುಂದು ಕೊರತೆಗಳಾಗದಂತೆ ಪ್ರತಿಯೊಂದು ವಿಭಾಗಗಳಿಗೂ ಪರಿಣಿತ ತಜ್ಞರನ್ನು ಸಂಪರ್ಕಿಸಿ   ಹಿರಿಯರೊಂದಿಗೆ ಸಮಾಲೋಚಿಸಿ ಭವನದ ನಿರ್ಮಾಣದ ಕಾರ್ಯವನ್ನು ಸಮರ್ಥ ರೀತಿಯಲ್ಲಿ ನಿಭಾಯಿಸಿದ ಹೆಗ್ಗಳಿಕೆ ಅವರ¨ªಾಗಿದೆ.

ಭವನ ನಿರ್ಮಾಣಕ್ಕೆ ಪುಣೆಯಾದ್ಯಂತ ಇರುವ ಬಂಟ ಸಮಾಜ ಬಾಂಧವರಲ್ಲದೆ  ಮುಂಬಯಿ, ಬೆಂಗಳೂರು, ಊರ ಹಲವಾರು ಸಮಾಜದ  ಗಣ್ಯ ಉದ್ಯಮಿಗಳು ಭವನದ ಕಾರ್ಯವನ್ನು ವೀಕ್ಷಿಸಿ ಅಧ್ಯಕ್ಷರ ಕಾರ್ಯಕ್ಷಮತೆಯನ್ನು ಮೆಚ್ಚಿದರಲ್ಲದೆ ದೊಡ್ಡ ಮೊತ್ತದ ದೇಣಿಗೆಯನ್ನೂ ನೀಡಿ ಪ್ರೋತ್ಸಾಹಿಸಿರುವುದು ಸಂತೋಷ್‌ ಶೆಟ್ಟಿಯವರ ನಿಸ್ವಾರ್ಥ ಶ್ರಮಕ್ಕೆ  ಸಂದ ಗೌರವವಾಗಿದೆ. ಪುಣೆಯ  ಎÇÉಾ ಸಮಾಜ ಬಾಂಧವರ ಮನೆ-ಮನೆಗಳನ್ನು ಸಂದರ್ಶಿಸಿ ಸಂಘದ ಭವನದ ಬಗ್ಗೆ ತಿಳಿಸಿ ದೇಣಿಗೆ ಸಂಗ್ರಹಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ವಿದ್ಯಾರ್ಥಿ ಜೀವನದÇÉೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿಯವರು ಸಂಘದ ಈ ಉನ್ನತ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಸಮಾಜಬಾಂಧವರ ಪ್ರಶಂಸೆಗೆ ಪಾತ್ರರಾಗಿ¨ªಾರೆ. ಸಂಘದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಉತ್ತರ ಹಾಗೂ ದಕ್ಷಿಣ ಪ್ರಾದೇಶಿಕ ಸಮಿತಿಗಳನ್ನು ರಚಿಸಿದ್ದಲ್ಲದೆ ಯುವಕರನ್ನು ಸಂಘದತ್ತ ಸೆಳೆಯಲು ಯುವ ವಿಭಾಗವನ್ನೂ ಆರಂಭಿಸಿ ಸಂಘದಲ್ಲಿ ಸದಸ್ಯರ ಸಂಖ್ಯೆಯನ್ನು ನಿರೀಕ್ಷೆಗೂ ಮೀರಿ ಹೆಚ್ಚಿಸಿ¨ªಾರೆ.

ವೈವಿಧ್ಯಮಯ ಕಾರ್ಯಕ್ರಮಗಳಿಗೆ ಒತ್ತು 

ನಮ್ಮ ತುಳುಭಾಷೆ, ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನವಿರಿಸಿಕೊಂಡಿರುವ ಇವರು ವಾರ್ಷಿಕೋತ್ಸವ ಸಂದರ್ಭಗಳಲ್ಲಿ ತುಳು-ಕನ್ನಡ ಭಾಷೆಗೆ  ವಿಶೇಷ ಆದ್ಯತೆ ನೀಡುತ್ತಾರೆ. ಅಲ್ಲದೆ  ತುಳುನಾಡಿನ ಯಕ್ಷಗಾನ, ನಾಟಕ, ಕಲಾಪ್ರಕಾರಗಳಿಗೆ  ಪ್ರೋತ್ಸಾಹ, ಬಡ ವಿದ್ಯಾರ್ಥಿಗಳಿಗೆ  ಶೈಕ್ಷಣಿಕ ನೆರವು, ಕ್ಯಾನ್ಸರ್‌ ತಪಾಸಣೆ ಕ್ಯಾಂಪಿನ ಆಯೋಜನೆ, ಪಂಢರಾಪುರ ಯಾತ್ರಾರ್ಥಿ ವಾರಕರಿಗಳಿಗೆ ಹಣ್ಣುಹಂಪಲು ವಿತರಣೆ, ಕ್ರೀಡಾಕೂಟ ಆಯೋಜನೆ ಸೇರಿದಂತೆ ವರ್ಷವಿಡೀ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ  ತೊಡಗಿಸಿಕೊಳ್ಳುವ ಇವರ ದಕ್ಷತೆ, ಕಾರ್ಯಕ್ಷಮತೆ, ದೂರ ದರ್ಶಿತ್ವದ ಗುಣಗಳಿಂದಾಗಿಯೇ ಪುಣೆ ಬಂಟರ ಸಂಘದ ಭವನದ ಕನಸು ನನಸಾಗುತ್ತಿರುವುದು ಎಲ್ಲ ಬಂಟ ಬಾಂಧವರಿಗೆ ಅಭಿಮಾನದ ಸಂಗತಿಯಾಗಿದೆ.

ಸುಸಜ್ಜಿತ  ಭವನದ ವೈಶಿಷ್ಟ  

ಮುಂಬಯಿ -ಬೆಂಗಳೂರು ಮಹಾಮಾರ್ಗವು ಪುಣೆಯಿಂದ ಹಾದು ಹೋಗುತ್ತಿದ್ದು, ಆ ಮಹಾಮಾರ್ಗಕ್ಕೆ ತಾಗಿಕೊಂಡೆ ಬಾರ್ಣೇ  ಎಂಬಲ್ಲಿ ಒಂದು ಎಕರೆ ಪ್ರದೇಶದಲ್ಲಿ ಇದೀಗ ಸುಮಾರು 50 ಕೋ. ರೂ. ಬೆಲೆಬಾಳುವ ಸಂಕೀರ್ಣವಾಗಿದ್ದು 30 ಕೋ. ರೂ. ಗಳ ವೆಚ್ಚದಲ್ಲಿ ಸುಂದರವಾದ ಬಂಟರ ಭವನ ತಲೆಯೆತ್ತಿ ನಿಂತಿದೆ.  ಅತ್ಯಾಧುನಿಕ ತಂತ್ರಜ್ಞಾನ, ಸುಸಜ್ಜಿತ, ಆಕರ್ಷಕ ವಿನ್ಯಾಸಗಳಿಂದ ಕಲಾತ್ಮಕವಾಗಿ ನಿರ್ಮಾಣಗೊಂಡಿರುವ  ಈ ಭವನದಲ್ಲಿ 1,200 ಆಸನಗಳುಳ್ಳ ಭವ್ಯಾಕರ್ಷಕ ಸಭಾಗೃಹ, ಪ್ರತಿ 200 ಆಸನಗಳುಳ್ಳ ಎರಡು ಕಿರು ಸಭಾಗೃಹ, ಎಂಟು ಸುಸಜ್ಜಿತ ಸೌಕರ್ಯಗಳನ್ನೋಳಗೊಂಡ ಕೊಠಡಿಗಳು, ಒಂದು ಸುಂದರವಾದ ಆಡಳಿತ ಕಚೇರಿ, ಎರಡು ವಿಐಪಿ ಕೊಠಡಿಗಳು, ಸೂಕ್ತವಾದ ವಾಹನ ಪಾರ್ಕಿಂಗ್‌ ವ್ಯವಸ್ಥೆ, ಕ್ಯಾಟರಿಂಗ್‌ ವ್ಯವಸ್ಥೆಗಾಗಿ ಸಮರ್ಪಕ ಅಡುಗೆ ಕೋಣೆ, ಭವನವನ್ನು ಪ್ರವೇಶಿಸುವಂತೆಯೇ  ಸುಮಾರು 2,000 ಚದರ ಅಡಿ ವಿಸ್ತೀರ್ಣವುಳ್ಳ ತುಳುನಾಡಿನ ಸಂಸ್ಕೃತಿಯನ್ನು ಸಾರುವ ಮನಮೋಹಕ ಚಾವಡಿ ಸ್ವಾಗತಿಸಲು ಸಜ್ಜಾಗಿದ್ದು, ಅದಕ್ಕೆ ತಾಗಿಕೊಂಡೇ ಡೈನಿಂಗ್‌ ಹಾಲ್‌, ಎದುರಿಗೆ ಗುರು ನಿತ್ಯಾನಂದ ಸ್ವಾಮಿಗಳ ಭವ್ಯ ಮೂರ್ತಿ, ಶ್ರೀ  ಕ್ಷೇತ್ರ ಕಟೀಲಿನ ದುರ್ಗಾಪರಮೇಶ್ವರಿ ಅಮ್ಮನವರ ಮಂಟಪ, ಮಹಾಗಣಪತಿ ದೇವರ ಮಂಟಪ ಸಹಿತ ಸಾಂಸ್ಕೃತಿಕ, ಆಧ್ಯಾತ್ಮಿಕ, ಸಾಮಾಜಿಕ ವಿಚಾರಗಳೂ ಸಹಿತ ಸರ್ವಾಂಗ ಸುಂದರವಾಗಿ ಬಂಟರ ಸಾಂಸ್ಕೃತಿಕ ಭವನ ನಿರ್ಮಾಣಗೊಂಡು ಪುಣೆ ಬಂಟರ ಇತಿಹಾಸದಲ್ಲಿ ಹೊಸ ಮೈಲುಗಲ್ಲನ್ನು ನೆಟ್ಟಿದೆ. ಪುಣೆ ಬಂಟರ ಭವನ (ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಕೇಂದ್ರ) ದಲ್ಲಿ ಮಹಾದಾನಿಗಳ ದೇಣಿಗೆಯನ್ನಾಧರಿಸಿ ಭವನ, ಚಾವಡಿ, ಸಭಾ ಭವನ, ಪಾರ್ಕಿಂಗ್‌, ಮಿನಿ ಸಭಾಂಗಣಗಳು, ಎಸ್ಕಲೇಟರ್‌ ಮೊದಲಾದ ಪ್ರತಿಯೊಂದು ವಿಭಾಗಕ್ಕೆ ದಾನಿಗಳ ಹೆಸರನ್ನು ನೀಡಲಾಗಿದ್ದಲ್ಲದೆ ದಾನಿಗಳ ಫೋಟೋಗಳನ್ನೂ ಆಕರ್ಷಕವಾಗಿ ಭವನದಲ್ಲಿ ಅಳವಡಿಸಲಾಗಿದೆ.

ಪುಣೆ ಬಂಟರ ಭವನದ ಉದ್ಘಾಟನಾ ಸಮಾರಂಭವು  ಎ. 7 ಮತ್ತು ಎ. 8ರಂದು ಗಣ್ಯ ಅತಿಥಿಗಳ  ಉಪ ಸ್ಥಿತಿಯೊಂದಿಗೆ  ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಹಾಗೂ ಗೌರವಾಧ್ಯಕ್ಷ ಜಗನ್ನಾಥ ಬಿ. ಶೆಟ್ಟಿಯವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿದೆ. ಎ. 7ರಂದು ಬೆಳಗ್ಗೆ 9ಕ್ಕೆ ಶ್ರೀ  ಕ್ಷೇತ್ರ  ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮಭೂಷಣ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಭವನವನ್ನು ಉದ್ಘಾಟಿಸಲಿ¨ªಾರೆ.

ಲೇಖಕ : ಕಿರಣ್‌ ಬಿ. ರೈ ಕರ್ನೂರು ಪುಣೆ

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.