ನೀರು ಬಿಡಲು ಪಾಲಿಕೆ ಹಿಂದೇಟು

Team Udayavani, Mar 24, 2018, 10:55 AM IST

24-March-3.jpg

ಚೇಳಾಯಿರು: ಚೇಳಾಯಿರು ಎಂಆರ್‌ಪಿಎಲ್‌ ಪುನರ್ವಸತಿ ಕಾಲನಿ ಪ್ರದೇಶದಲ್ಲಿ ಸುಮಾರು 325ಕ್ಕೂ ಅಧಿಕ ಮನೆಗಳಿದ್ದು, ಮಹಾನಗರ ಪಾಲಿಕೆ ಈ ಪ್ರದೇಶಕ್ಕೆ ನೀರುಬಿಡಲು ಹಿಂದೇಟು ಹಾಕುತ್ತಿದೆ.

ಈ ಮನೆಗಳಿಗೆ ನೀರು ಪೂರೈಕೆಗೆ ಓವರ್‌ ಹೆಡ್‌ ಟ್ಯಾಂಕ್‌ ಇದ್ದು ಕಾಟಿಪಳ್ಳ ಮೂಲಕ ಮಹಾನಗರ ಪಾಲಿಕೆಯಿಂದ ನೀರು ಪೂರೈಸಲು ಪೈಪ್‌ಲೈನ್‌ ಅಳವಡಿಕೆಯಾಗಿದೆ. ಆದರೆ ಇಲ್ಲಿ ಅರ್ಧ ಟ್ಯಾಂಕ್‌ ಕೂಡ ನೀರು ತುಂಬುತ್ತಿಲ್ಲ. ಹೀಗಾಗಿ ಈ ಕಾಲನಿಯಲ್ಲಿ ನಿತ್ಯವೂ ನೀರಿನ ಸಮಸ್ಯೆ ಕಾಡುತ್ತಿದೆ.

ಚೇಳಾಯಿರಿನಲ್ಲಿ 1,300ಕ್ಕೂ ಅಧಿಕ ಮನೆಗಳಿದ್ದು, ಚೇಳಾಯಿರು ಹಾಗೂ ಮಧ್ಯದಲ್ಲಿ ಅಷ್ಟಾಗಿ ನೀರಿನ ಬವಣೆ ಇಲ್ಲ. ಆದರೂ ಈ ಕಾಲನಿಗೆ ಈ ಹಿಂದೆ ತೋಡಿದ ಬಾವಿಗಳು ಉಪಯೋಗವಾಗುತ್ತಿಲ್ಲ.

ಪೂರೈಕೆ ಸಮಸ್ಯೆ
ಚೇಳಾಯಿರು ಗ್ರಾಮಕ್ಕೆ ಅಲ್ಪ ದೂರದಲ್ಲಿ ಮೂಲ್ಕಿಗೆ ನೀರು ಸಾಗಿಸುವ ಪೈಪ್‌ಲೈನ್‌ ಅಳವಡಿಸಲಾಗಿದೆ. ಇದರ ಮೂಲಕವೂ ಈ ಗ್ರಾಮಕ್ಕೆ ನೀರು ಪೂರೈಸಿದರೆ ಸಮಸ್ಯೆ ಕಡಿಮೆಯಾಗುತ್ತಿತ್ತು. ಯೋಜನ ಬದ್ದವಿಲ್ಲದ ಪೂರೈಕೆಯ ಪರಿಣಾಮ ಇಲ್ಲಿನ ಜನ ನಿತ್ಯ ನೀರಿಗಾಗಿ ಕಷ್ಟಪಡುತ್ತಿದ್ದಾರೆ. ಚೇಳಾಯಿರು ಅಭಿವೃದ್ಧಿ ಹೊಂದುತ್ತಿದೆ. ಸಹಜವಾಗಿಯೇ ನೀರಿನ ಪೂರೈಕೆ ಒತ್ತಡವೂ ಹೆಚ್ಚುತ್ತಿದೆ. ಎಂಆರ್‌ ಪಿಎಲ್‌ ಕಾಲನಿಯ ನೀರಿನ ಸಮಸ್ಯೆ ಬಗೆಹರಿಸಲು 23 ಲಕ್ಷ ರೂ. ವೆಚ್ಚದಲ್ಲಿ ಬಾವಿ ತೋಡಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಗ್ರಾ.ಪಂ. ಅಧ್ಯಕ್ಷರು ಜಯಾನಂದ.

ಅಶುದ್ಧ  ನೀರು
ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಈ ಭಾಗಕ್ಕೆ ಮೂರು ಲಕ್ಷ ಲೀಟರ್‌ ನೀರು ಪೂರೈಸುವುದು ಕಷ್ಟ ಎನ್ನಲಾಗುತ್ತಿದೆ. ಈ ಕಾಲನಿಗೆ ನೀರು ಪೂರೈಕೆಗೆ ಬೋರ್‌ವೆಲ್‌ ಅಳವಡಿಸಲಾಗಿದೆ. ಇಲ್ಲಿ ದಿನಕ್ಕೆ ಅರ್ಧದಿಂದ 1 ಗಂಟೆಗಳ ಕಾಲ ನೀರು ಬರುತ್ತದೆ. ಆದರೆ ನೀರು ಅಷ್ಟೊಂದು ಶುದ್ಧ ಇರುವುದಿಲ್ಲ. 22 ವರ್ಷಗಳಿಂದಲೂ ಈ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಇಲ್ಲಿನ ಗ್ರಾಮಸ್ಥರು  ತಿಳಿಸಿದ್ದಾರೆ.

ಬೋರ್‌ವೆಲ್‌ ನೀರು ಅನಿವಾರ್ಯ
ನೇತ್ರಾವತಿ ನೀರು ಪೂರೈಕೆಗೆ ಪಂಪ್‌ ಹೌಸ್‌ ಸಹಿತ ವ್ಯವಸ್ಥೆ ಮಾಡಿ ಪಾಲಿಕೆಗೆ ನಿರ್ವಹಣೆಗೆ ಬಿಟ್ಟು ಕೊಟ್ಟಿತ್ತು. 3 ಲಕ್ಷ ಲೀಟರ್‌ ನಿತ್ಯ ಬಿಡಬೇಕು ಎಂಬ ಒಪ್ಪಂದವೂ ಆಗಿತ್ತು. ಆದರೆ 50 ಸಾವಿರ ಲೀಟರ್‌ವರೆಗೆ ಬಿಡಲು ಮಾತ್ರ ಪಾಲಿಕೆ ಶಕ್ತವಾಗಿದೆ. ಇದರ ನಡುವೆ ಕಾಲನಿಗೆ ಬಿಡುವ ನೀರು ಕಾಟಿಪಳ್ಳ, ಕೃಷ್ಣಾಪುರ ಪ್ರದೇಶಕ್ಕೂ ಟ್ಯಾಪಿಂಗ್‌ ಮಾಡಲಾಗುತ್ತದೆ. ಆದ್ದರಿಂದ ಬೋರ್‌ವೆಲ್‌ ನೀರು ನೀಡುವುದು ನಮಗೆ ಅನಿವಾರ್ಯವಾಗಿದೆ. ಪಾಲಿಕೆಯಿಂದ 2 ದಿನಗಳಿಗೊಮ್ಮೆ ನೀರು ಬರುತ್ತದೆ. ಈಗ 23 ಲಕ್ಷ ರೂ. ವೆಚ್ಚದಲ್ಲಿ ಬಾವಿ ತೋಡಿ ನೀರು ಪೂರೈಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.
-ವೇಣು ವಿನೋದ್‌ ಶೆಟ್ಟಿ, ನಿರ್ವಸಿತರ ಹೋರಾಟ ಸಮಿತಿಯ ಮಾಜಿ ಅಧ್ಯಕ್ಷ 

ಲಕ್ಷ್ಮೀ ನಾರಾಯಣ ರಾವ್‌

ಟಾಪ್ ನ್ಯೂಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.