ಆರೋಗ್ಯವಂತ ಮಗುವಿಗಾಗಿ ಶಿಶು ಆಹಾರ ಕ್ರಮಗಳು


Team Udayavani, Mar 25, 2018, 6:00 AM IST

infant food styles for a healthy baby

ಆರೋಗ್ಯ ವೃದ್ಧಿಗಾಗಿ ಮತ್ತು ಅಪೌಷ್ಟಿಕತೆ ತಡೆಯಲು 2 ವರ್ಷದ ಒಳಗಿನ ಮಕ್ಕಳಿಗೆ ಸಮರ್ಪಕವಾದ ಆಹಾರ ನೀಡುವುದು ಅತ್ಯವಶ್ಯಕ. ಮಕ್ಕಳ ಬೆಳವಣಿಗೆಯೇ ಪೋಷಕಾಂಶದ ಸ್ಥಿತಿಯನ್ನು ಆಳೆಯುವ ಮೂಲ ಮಾನದಂಡವಾಗಿದೆ. ಮಗುವಿನಲ್ಲಿ ಮುಖ್ಯವಾಗಿ ಮೊದಲ ಎರಡು ವರ್ಷಗಳಲ್ಲಿ ಉತ್ತಮವಾದ ಪೋಷ‌ಕಾಂಶ ದೊರೆತಲ್ಲಿ, ಅದು ರೋಗ ನಿರೋಧಕ ಶಕ್ತಿಯನ್ನು ಪಡೆದು ಮುಂದೆ ದೀರ್ಘ‌ಕಾಲಿಕ ವ್ಯಾಧಿಯಿಂದ ಬಳಲುವ ಸಂಭವನೀಯತೆಗಳು ಕಡಿಮೆಯಾಗುತ್ತವೆ. ಅಸಮರ್ಪಕವಾದ ಆಹಾರ ಪೋಷಣೆಯಿಂದಾಗಿ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಅನೇಕ ರೋಗಗಳಿಗೆ ತುತ್ತಾಗಲು ದಾರಿಯಾಗುತ್ತದೆ.

ಮಗುವಿನ ಆಹಾರ ಕ್ರಮಗಳು 
ತಾಯಿ ಹಾಲು ಮಗುವಿಗೆ ಶ್ರೇಷ‌uವಾದ ಹಾಲು. ಎದೆಹಾಲು ಶಿಶುಗಳಿಗೆ ಶಕ್ತಿ ಹಾಗೂ ಪೋಷಕಾಂಶದ ಮೂಲವಾಗಿದೆ. ಇದು ಮಗುವಿಗೆ 6 ತಿಂಗಳಿನವರೆಗೆ ಅವಶ್ಯವಿರುವ ಪೌಷ್ಟಿಕಾಂಶವನ್ನು ಸಂಪೂರ್ಣವಾಗಿ ಪೂರೈಸುತ್ತದೆ. ಶಿಶು ಜನನವಾದ ಅನಂತರ ಮೊದಲಿಗೆ ಸ್ತನದಿಂದ ಸ್ರವಿಸಲ್ಪಡುವಂತಹ ದಪ್ಪವಾದ ಹಳದಿಯುಕ್ತ ಹಾಲಾದ ಕೊಲೊಸ್ಟ್ರಮ್‌ ತಪ್ಪದೇ ನೀಡಬೇಕು. ಈ ಕೊಲೊಸ್ಟ್ರಮ್‌ನಲ್ಲಿ ಬಿಳಿ ರಕ್ತಕಣಗಳು, ರೋಗ ನಿರೋಧಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದಲ್ಲದೆ, ಪ್ರೊಟೀನು, ಖನಿಜಾಂಶಗಳು ಮತ್ತು ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ನವಜಾತ ಶಿಶುಗಳಿಗೆ ಈ ಕೊಲೊಸ್ಟ್ರಮ್‌ ಹೊಂದಿದ ಹಾಲು ಸಿಗುವುದು ಬಹಳ ಮುಖ್ಯ.

ತಾಯಿಯ ಎದೆ ಹಾಲಿನಲ್ಲಿ ಕೊಬ್ಬು, ಕಾಬೊìಹೈಡ್ರೇಟುಗಳು, ಪ್ರೊಟೀನು, ವಿಟಮಿನ್‌ಗಳು, ಖನಿಜಗಳು, ನೀರಿನ ಅಂಶ ಸೇರಿವೆ. ಇವು ಸುಲಭವಾಗಿ ಜೀರ್ಣವಾಗುತ್ತದೆ. ಶಿಶುವಿನ ಜೀವರಕ್ಷಕ ವ್ಯವಸ್ಥೆಗೆ ಪೂರಕವಾಗಬಲ್ಲ ಜೈವಿಕ ಕ್ರಿಯಾಶೀಲ ಅಂಶಗಳೂ ಎದೆ ಹಾಲಿನಲ್ಲಿದ್ದು, ಮಗುವಿಗೆ ಸೋಂಕುಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ಜತೆಗೆ ಇವು ಜೀರ್ಣಕ್ರಿಯೆ, ದೇಹಕ್ಕೆ ಪೋಷಕಾಂಶಗಳ ಹೀರಿಕೆ ಪ್ರಕ್ರಿಯೆಯಲ್ಲಿ ಕೂಡ ನೆರವಾಗುತ್ತವೆ. ಯೋಗ್ಯವಾದ ಭಂಗಿಯಲ್ಲಿ ಶಿಶುವಿಗೆ ದಿನದಲ್ಲಿ  8ರಿಂದ 12 ಬಾರಿ ಎದೆ ಹಾಲನ್ನು ಉಣಿಸಬೇಕು. ಗಂಟೆಯ ಪ್ರಕಾರ ಮಗುವಿಗೆ ಹಾಲುಣಿಸುವ ಬದಲಾಗಿ ಮಗುವಿಗೆ ಬೇಕೆನಿಸಿದಾಗ ಎದೆ ಹಾಲು ನೀಡಬೇಕು. ಮಗುವು ನಿಯಮಿತವಾಗಿ ತೂಕವನ್ನು ಹೆಚ್ಚಿಸಿಕೊಳ್ಳುತ್ತಾ, ದಿನದಲ್ಲಿ 6ರಿಂದ 8 ಬಾರಿ ಹಾಸಿಗೆ ಒದ್ದೆ ಮಾಡುತ್ತಿದ್ದರೆ, ಅದು ಸರಿಯಾದ ಪ್ರಮಾಣದಲ್ಲಿ ಹಾಲು ಸೇವಿಸುತ್ತದೆ ಎಂದು ಅರ್ಥ. ತಾಯಿ ಅಥವಾ ಮಗುವಿಗೆ ಅಸೌಖ್ಯವಿದ್ದರೂ ಎದೆ ಹಾಲು ನೀಡುವುದನ್ನು ನಿಲ್ಲಿಸಬಾರದು.

ಮಗುವಿಗೆ 6 ತಿಂಗಳವರೆಗೆ ಕೇವಲ ತಾಯಿಯ ಎದೆ ಹಾಲು ಮಾತ್ರ ನೀಡಬೇಕು. ಬೇರೆ ಯಾವುದೇ ರೀತಿಯ ಆಹಾರವನ್ನು ನೀಡಬಾರದು. ನೀರನ್ನು ಕೂಡ ನೀಡಬಾರದು. ತಾಯಿಯ ಎದೆಹಾಲಿನಲ್ಲಿಯೇ ಮಗುವಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ನೀರಿನಾಂಶ ಇರುವುದರಿಂದ ನೀರನ್ನು ಪ್ರತ್ಯೇಕವಾಗಿ ನೀಡುವ ಆವಶ್ಯಕತೆ ಇರುವುದಿಲ್ಲ. ಎದೆ ಹಾಲು ಕಡಿಮೆ ಇರುವ ತಾಯಂದಿರು ಶಿಶು ತಜ್ಞರ ಸಲಹೆಯ ಮೇರೆಗೆ ಮಾರುಕಟ್ಟೆಯಲ್ಲಿ ದೊರಕುವ ಸಿದ್ಧ ಶಿಶುಹಾಲಿನ ಪುಡಿಯನ್ನು ನೀಡಬೇಕು. ತಾಯಿಯು ದಿನಕ್ಕೆ 600-800 ಮಿ.ಗ್ರಾಂನಷ್ಟು ಹಾಲನ್ನು ಉತ್ಪಾದಿಸುತ್ತಾಳೆ.ಈ ಸಮಯದಲ್ಲಿ ತಾಯಿಯು ತನ್ನ ಶರೀರದಿಂದ ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ಕಳೆದುಕೊಳ್ಳುವುದರಿಂದ ಹೆಚ್ಚಿನ ಆಹಾರವನ್ನು ಸೇವಿಸುವುದು ಅತ್ಯವಶ್ಯಕ.

ಪೂರಕ ಆಹಾರ
6 ತಿಂಗಳ ಬಳಿಕದ ಅವಧಿಯಲ್ಲಿ ಮಗುವಿನ ಬೆಳವಣಿಗೆಯ ಗತಿಯು ಸ್ವಲ್ಪ$ ನಿಧಾನವಾಗಿ ಸಾಗುತ್ತದೆ. ಆದರೆ, ಈ ಸಂದರ್ಭದಲ್ಲಿ ಮಗುವಿನ ಆರೋಗ್ಯವನ್ನು ಕಾಪಾಡುವಲ್ಲಿ ಪೋಷಕಾಂಶಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮಗುವಿಗೆ 6 ತಿಂಗಳ ಬಳಿಕವೇ ಪೂರಕ ಆಹಾರವನ್ನು ನೀಡಲು ಪ್ರಾರಂಭಿಸಬೇಕು. 6 ತಿಂಗಳ ಬಳಿಕ ತಾಯಿಯ ಎದೆ ಹಾಲಿನಲ್ಲಿ ದೊರಕುವ ಪೌಷ್ಟಿಕಾಂಶಗಳು ಮಗುವಿನ ಬೆಳವಣಿಗೆಗೆ ಸಾಕಾಗುವುದಿಲ್ಲ. ಆದ್ದರಿಂದ ಮಗುವಿಗೆ ತಾಯಿಯ ಎದೆ ಹಾಲಿನೊಂದಿಗೆ ಚಿಕ್ಕ ಪ್ರಮಾಣದಲ್ಲಿ ಬೇಯಿಸಿದ ಧಾನ್ಯ, ತರಕಾರಿ ಮತ್ತು ಆಯಾ ಕಾಲದಲ್ಲಿ ಸಿಗುವ ಹಣ್ಣುಗಳನ್ನು ಹಿಸುಕಿ ಮೆದು ಮಾಡಿ ನೀಡಬೇಕು. 6 ತಿಂಗಳಿನಲ್ಲಿ ದಿನಕ್ಕೆ ಒಂದು ಸಲ ಆಹಾರ ಕೊಡಲು ಪ್ರಾರಂಭಿಸಬೇಕು. ಬಳಿಕ ನಿಧಾನವಾಗಿ ಹೆಚ್ಚು ಸಲ ಕೊಡಲು ಪ್ರಾರಂಭ ಮಾಡಿ 9 ತಿಂಗಳ ವೇಳೆ ಕನಿಷ್ಠ  3 ಸಲ ಆಹಾರ ನೀಡಬೇಕು. 9 ರಿಂದ 11 ತಿಂಗಳವರೆಗೆ ದಿನಕ್ಕೆ 4 ಬಾರಿ ಮತ್ತು 1 ರಿಂದ 2 ವರ್ಷದವರೆಗೆ ಮಗುವಿಗೆ ದಿನಕ್ಕೆ 5 ಬಾರಿ ಆಹಾರ ನೀಡಬೇಕು.

– ದ್ವಿದಳ ಧಾನ್ಯಗಳು, ಬೇಳೆ ಕಾಳುಗಳುಗಳನ್ನು ಸೇರಿಸಿ ಹಾಲಿನಲ್ಲಿ ಮಾಡಿದ ಮಣ್ಣಿಯನ್ನು ತಿನ್ನಿಸಬಹುದು
– ಬೇಯಿಸಿದ ಆಲೂಗಡ್ಡೆ, ಕ್ಯಾರೆಟ್‌, ಇತ್ಯಾದಿ ತರಕಾರಿಗಳು, ಬಾಳೆಹಣ್ಣು, ಪಪ್ಪಾಯ, ಮಾವಿನ ಹಣ್ಣುಗಳನ್ನು ಮೆದು ಮಾಡಿಕೊಡಬಹುದು.
– ಪ್ರತೀ ದಿನ ಮನೆಯಲ್ಲಿ ಮಾಡುವ ತಿಂಡಿಗಳಾದ ಇಡ್ಲಿ, ದೋಸೆ, ಉಪ್ಪಿಟ್ಟು ಇವುಗಳನ್ನು ನೀಡಬಹುದು.
– ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ತೆಳುವಾದ ಆಹಾರವನ್ನು ನೀಡಿ ನಿಧಾನವಾಗಿ ದಪ್ಪಆಹಾರವನ್ನು ಹೆಚ್ಚು ಬಾರಿ ನೀಡಬೇಕು.
– ಮಗುವಿನ ಮೆದುಳು ಮತ್ತು ಶರೀರದ ಬೆಳವಣಿಗೆಗ ಕಬ್ಬಿಣಾಂಶ ತುಂಬಾ ಸಹಕಾರಿಯಾಗಿದೆ. ಆದ್ದರಿಂದ ಕಬ್ಬಿಣಾಂಶ ಜಾಸ್ತಿ ಇರುವ ಹಸಿರು ಸೊಪ್ಪು ತರಕಾರಿಗಳು, ಮೊಳಕೆ ಬರಿಸಿದ ಕಾಳುಗಳು, ಮೊಟ್ಟೆ, ಮಾಂಸ ಇವುಗಳನ್ನು ನೀಡಬೇಕು.
– ಆಹಾರದಲ್ಲಿ ಕಬ್ಬಿಣಾಂಶವನ್ನು ಜೀರ್ಣಿಸಿಕೊಳ್ಳುವ ಸಲುವಾಗಿ ವಿಟಮಿನ್‌ ಸಿ ಹೇರಳವಾಗಿರುವ ಕಿತ್ತಳೆ, ಮಾವು, ಕಲ್ಲಂಗಡಿ, ಟೊಮೆಟೊ, ನಿಂಬೆ  ನೀಡಬೇಕು.
– ಮಗುವಿನ ಸಾಮಾನ್ಯ ಬೆಳವಣಿಗೆಗೆ, ದೃಷ್ಟಿ ದೋಷ ಉಂಟಾಗದಂತೆ, ಸಾಮಾನ್ಯ ಕಾಯಿಲೆಯಿಂದ ರಕ್ಷಿಸುವ ಸಲುವಾಗಿ ವಿಟಮಿನ್‌ ಎ ಅಧಿಕವಾಗಿರುವ ಬಸಳೆ ಸೊಪ್ಪು$, ಕ್ಯಾರೆಟ್‌, ಮಾವು, ಪಪ್ಪಾಯ, ಹಾಲು, ಮೊಸರು, ಮೊಟ್ಟೆ ಇವುಗಳನ್ನು ಆಹಾರದಲ್ಲಿ ಸೇರಿಸಬೇಕು.
– ಶಕ್ತಿವರ್ಧನೆಗಾಗಿ ಮಗುವಿನ ಆಹಾರಕ್ಕೆ ತುಪ್ಪ ಅಥವಾ ಎಣ್ಣೆ ಸೇರಿಸುವುದು ಉತ್ತಮ.
– 2 ವರ್ಷದವರೆಗೂ ಮಗುವಿಗೆ ಬೇಕಾದಾಗೆಲ್ಲ ತಾಯಿಯ ಎದೆ ಹಾಲು ನೀಡಬೇಕು.
– ತಿಂಗಳಿಗೆ ಒಂದು ಬಾರಿ ಮಗುವಿನ ತೂಕವನ್ನು ಅಂಗನವಾಡಿ ಅಥವಾ ಆರೋಗ್ಯ ಕೇಂದ್ರದಲ್ಲಿ  ಪರೀಕ್ಷಿಸಬೇಕು. ಇದರಿಂದ ಮಗು ಯಾವ ರೀತಿ ತನ್ನ ತೂಕವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ತಿಳಿಯಬಹುದು.
– ಮಗುವಿಗೆ ಇತರ ಹಾಲು, ನೀರು ಅಥವಾ ಪಾನೀಯ ಕುಡಿಸಲು ತಟ್ಟೆ ಮತ್ತು ಚಮಚವನ್ನೇ ಉಪಯೋಗಿಸಬೇಕು. ಬಾಟಲಿಯನ್ನು ಬಳಸದೇ ಇರುವುದು ಉತ್ತಮ.
– ಮಗುವಿಗೆ ಆಹಾರ ನೀಡುವ ಮೊದಲು ಸ್ವತ್ಛವಾಗಿ ಕೈ ತೊಳೆದುಕೊಳ್ಳಬೇಕು. ಮಗುವಿಗೆ ಉಪಯೋಗಿಸುವ ತಟ್ಟೆ, ಲೋಟವನ್ನು ಕೂಡ ಸ್ವತ್ಛವಾಗಿ ತೊಳೆದಿಡಬೇಕು.
– ಮಗುವಿಗೆ ಪೂರಕ ಆಹಾರವನ್ನು ಪ್ರಾರಂಭಿಸಿದ ಬಳಿಕ ಆಹಾರ ದೊಂದಿಗೆ ಮಗುವಿಗೆ ಮನೆ ಯಲ್ಲಿಯೇ ಕುದಿಸಿ ಆರಿಸಿದ ನೀರನ್ನು ಕೊಡಬೇಕು. ಮಗುವಿಗೆ ಎದೆ ಹಾಲು, ಪೂರಕ ಆಹಾರದೊಂದಿಗೆ ವಯಸ್ಸಿಗನುಗುಣವಾಗಿ ಸರಿಯಾದ ಸಮಯಕ್ಕೆ ನೀಡುವ ಚುಚ್ಚುಮದ್ದು, ಲಸಿಕೆಗಳನ್ನು ತಪ್ಪದೇ ನೀಡಬೇಕು.

ಮಣ್ಣಿ ತಯಾರಿಸುವ ವಿಧಾನ: 
1 ಪಾಲು ಅಕ್ಕಿ/ಗೋಧಿ, 1/2 ಪಾಲು ರಾಗಿ + 1/2 ಪಾಲು ಬೇಳೆ ಹಿಟ್ಟು ಮಾಡಿ ಜರಡಿ ತೆಗೆದು ಹಿಟ್ಟನ್ನು ಹಾಲಿನಲ್ಲಿ/ಬಿಸಿ ನೀರಿನಲ್ಲಿ ಬೇಯಿಸಿ ಬೆಲ್ಲ ಸೇರಿಸಿ ನೀಡುವುದು.

ಪೂರಕ ಆಹಾರದ ಸಲಹೆಗಳು 
– ಮಗುವಿಗೆ 2 ವರ್ಷದ ವರೆಗೆ ಬೆಳಗ್ಗೆ ಎದ್ದ ತತ್‌ಕ್ಷಣ, ರಾತ್ರಿ ಮಲಗುವ ಮುಂಚೆ ಹಾಗೂ ಮಗುವಿಗೆ ಬೇಕೆನಿಸಿದಾಗೆಲ್ಲ ತಾಯಿಯ ಎದೆ ಹಾಲನ್ನು ತಪ್ಪದೇ ನೀಡಬೇಕು.
– ಮಗುವಿನ ಜೀವನಕ್ಕೆ, ಆರೋಗ್ಯಕ್ಕೆ ಹಾಗೂ ಬೆಳವಣಿಗೆಯ ಉತ್ತೇಜನಕ್ಕೆ ಉತ್ತಮವಾದ ಶಿಶು ಆಹಾರ ಅವಶ್ಯ

– ಡಾ| ಚೈತ್ರಾ ಆರ್‌.ರಾವ್‌,
ಸಹ ಪ್ರಾಧ್ಯಾಪಕರು, 
ರಾಘವೇಂದ್ರ ಭಟ್‌ ಎಂ.ಆರೋಗ್ಯ ಸಹಾಯಕರು,
ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ. ಮಣಿಪಾಲ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.