ಕ್ಷಯ ರೋಗದ ಪತ್ತೆ ಮಾಡುವಿಕೆ; ಚಿಕಿತ್ಸೆಯ ಹೊಸ ಮಾರ್ಗದರ್ಶಿ
Team Udayavani, Mar 25, 2018, 6:00 AM IST
ನಮ್ಮ ದೇಶದಲ್ಲಿ ಕ್ಷಯ ರೋಗ (Tuberculosis) ವನ್ನು ಸರಿಯಾಗಿ ಪತ್ತೆ ಮಾಡುವುದು (Diagnosis) ಹಾಗೂ ಸೂಕ್ತ ಚಿಕಿತ್ಸೆ ನೀಡುವುದು ಇಂದಿಗೂ ಸಹ ದೊಡ್ಡ ಸವಾಲಾಗಿಯೇ ಉಳಿದಿದೆ. ರೋಗಕಾರಕ ಕ್ರಿಮಿ Mylobacteria Tuberculosis ಬಗ್ಗೆ ಸರಿ ಸುಮಾರು 135 ವರ್ಷಗಳಿಂದ ಅರಿವಿದ್ದರೂ, ಕಳೆದ 40 ವರ್ಷಗಳಿಂದ ಚಿಕಿತ್ಸೆಗೆ ಬೇಕಾದ ಸೂಕ್ತ ಔಷಧಗಳು ಎಲ್ಲೆಡೆ ಲಭ್ಯವಿದ್ದರೂ ಇಂದಿಗೂ ಪ್ರತಿ ವರ್ಷ ನಮ್ಮ ದೇಶದಲ್ಲಿ ಸುಮಾರು 28 ಲಕ್ಷ ರೋಗಿಗಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ 20-25% ರೋಗಿಗಳು ಔಷಧ ನಿರೋಧಕ (Drug Resistant) ಕ್ಷಯ ರೋಗ ಹೊಂದಿದವರಾಗಿದ್ದಾರೆ. ಹಾಗೂ ಪ್ರತಿ ವರ್ಷ 4.5 ಲಕ್ಷ ರೋಗಿಗಳು ಈ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಮುಖ್ಯವಾಗಿ ಸೂಕ್ತ ರೋಗ ಪತ್ತೆ ವಿಧಾನಗಳು ಎಲ್ಲಡೆ ಲಭ್ಯವಿಲ್ಲದೇ ಇರುವುದು, ಕೆಲವು ವೈದ್ಯರು ಸೂಕ್ತ ರೋಗ ಪತ್ತೆ ಮತ್ತು ಚಿಕಿತ್ಸೆ ವಿಧಾನಗಳನ್ನು ಅನುಸರಿಸದೇ ಇರುವುದು ಹಾಗೂ ಕೆಲವು ರೋಗಿಗಳು ಪೂರ್ತಿ ಕಾಲ (ಸರಿ ಸುಮಾರು 6 ತಿಂಗಳಿಂದ 8 ತಿಂಗಳು) ಪೂರ್ತಿ ಚಿಕಿತ್ಸೆಯನ್ನು ತೆಗೆದು ಕೊಳ್ಳದೇ ಇರುವುದು ಕೆಲ ಕಾರಣಗಳಾಗಿವೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ದೇಶದಾದ್ಯಂತ ಒಂದು ತೆರನಾದ ರೋಗ ಪತ್ತೆ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡಲು ಹೊಸ ಮಾರ್ಗದರ್ಶಿಯನ್ನು (technical And Operational Guide Lines – RNTCP 2016) ಬಿಡುಗಡೆ ಮಾಡಿದೆ. ಅದೇ ಪ್ರಕಾರ ಕ್ಷಯ ರೋಗಕ್ಕೆ ಚಿಕಿತ್ಸೆ ನೀಡುವ ಪ್ರತೀ ವರ್ಗದ ರೋಗ ಪತ್ತೆ ಮತ್ತು ಚಿಕಿತ್ಸೆ ಬಿಡುಗಡೆಗೆ ಈ ಮಾರ್ಗದರ್ಶಿ ಪ್ರಕಾರ ರೋಗ ಪತ್ತೆಗಾಗಿ ರೋಗವನ್ನು 4 ಮುಖ್ಯ ವಿಧಗಳಾಗಿ ವಿಂಗಡಿಸಿದೆ. ಅವುಗಳೆಂದರೆ – ಶ್ವಾಸಕೋಶದ ಕ್ಷಯ, ಮಕ್ಕಳಲ್ಲಿ ಕಂಡು ಬರುವ ಕ್ಷಯ, ಶ್ವಾಸಕೋಶೇತರ ಕ್ಷಯ ರೋಗ (Extra Pulmonary) ಹಾಗೂ ಔಷಧ ನಿರೋಧತೆ ಕ್ಷಯ ರೋಗ (DRUG RESISTANT TUBERCULOSIS).
-ಶ್ವಾಸಕೋಶದ ಕ್ಷಯ (PULMONARY TUBERCULOSIS) ಇರಬಹುದಾದ ಮುಖ್ಯ ಲಕ್ಷಣ/ ಸಾಧ್ಯತೆಗಳೆಂದರೆ – 2 ವಾರಕ್ಕಿಂತಲೂ ಹೆಚ್ಚು ಕೆಮ್ಮು , ಕಫ ಇರುವುದು. 2 ವಾರಕ್ಕಿಂತಲೂ ಹೆಚ್ಚು ಸಮಯ ಜ್ವರ ಇರುವುದು. ದೇಹದ ತೂಕ ಗಣನೀಯವಾಗಿ ಕಡಿಮೆಯಾಗುವುದು, ಎದೆಗೂಡಿನ ಕ್ಷ-ಕಿರಣ (X-ray) ಮಾಡಿದ್ದಲ್ಲಿ ಅದರಲ್ಲಿ ಕ್ಷಯ ರೋಗಕ್ಕಿದ್ದಂತೆ ಕಂಡು ಬರುವ ಚಿಹ್ನೆಗಳಿರುವುದು.
-ಮಕ್ಕಳಲ್ಲಿ ಕ್ಷಯ ರೋಗವಿರಬಹುದಾದ ಮುಖ್ಯ ಲಕ್ಷಣಗಳು/ ಸಾಧ್ಯತೆಗಳೆಂದರೆ – 2 ವಾರಕ್ಕಿಂತಲೂ ಹೆಚ್ಚಿನ ಜ್ವರ ಅಥವಾ 2 ವಾರಕ್ಕಿಂತಲೂ ಹೆಚ್ಚಿನ ಕೆಮ್ಮು, ದೇಹದ ತೂಕ ವೃದ್ಧಿಯಾಗದೇ ಇರುವುದು ಮತ್ತು ಮಗುವು ಯಾವುದೇ ಕ್ಷಯ ರೋಗಿಯ ಸಂಪರ್ಕದಲ್ಲಿರುವುದು.
-ಶ್ವಾಸಕೋಶೇತರ ಕ್ಷಯ ರೋಗದ ಲಕ್ಷಣಗಳೆಂದರೆ ದುಗ್ಧಗ್ರಂಥಿಗಳು (Lymphnodes) ಮಾಡಿಕೊಳ್ಳುವುದು, ಕುತ್ತಿಗೆಯ ಹಿಡಿತ (NECK STIFFNESS) ಸಂಧುಗಳ ನೋವು, ಸಂಬಂಧಿಸಿದ ಅಂಗಾಂಗಗಳ ಲಕ್ಷಣಗಳೊಂದಿಗೆ ಸಾಮಾನ್ಯ ಚಿಹ್ನೆಗಳಾದ ತೂಕ ಕಡಿಮೆಯಾಗುವುದು ಮತ್ತು ಜ್ವರ ಕಾಣಿಸಿ ಕೊಳ್ಳಬಹುದು.
-ಔಷಧ ನಿರೋಧಕ ಕ್ಷಯ ರೋಗ ಇರುವ ಲಕ್ಷಣ ಹಾಗೂ ಸಾಧ್ಯತೆಗಳೆಂದಿದೆ – ಈ ಮೊದಲೇ ಕ್ಷಯ ರೋಗದ ಚಿಕಿತ್ಸೆ ಪಡೆದಿದ್ದು ಕಾಯಿಲೆ ಲಕ್ಷಣ ಕಡಿಮೆಯಾಗದೇ ಇರುವುದು. ಅಥವಾ ಲಕ್ಷಣಗಳು ಪುನಃ ಮರುಕಳಿಸಿರುವುದು. ಚಿಕಿತ್ಸೆ ಅರ್ಧದಲ್ಲಿ ನಿಲ್ಲಿಸಿರುವುದು. ಚಿಕಿತ್ಸೆ ಪ್ರಾರಂಭಿಸಿದ 2 ತಿಂಗಳ ನಂತರವು ಸಹ ಕಫದಲ್ಲಿರುವ ಕ್ರಿಮಿಗಳು ನಾಶವಾಗದೇ ಇರುವುದು. ವ್ಯಕ್ತಿಯು ಯಾವುದೇ ಔಷಧ ನಿರೋಧಕ ಕ್ಷಯರೋಗಿಯ ಸಂಪರ್ಕದಲ್ಲಿದ್ದಿರುವುದು.
ರೋಗ ಪತ್ತೆ ವಿಧಾನ
ಸಾಮಾನ್ಯ ವ್ಯಕ್ತಿಯೊಬ್ಬನಲ್ಲಿ ಶ್ವಾಸಕೋಶ ಕ್ಷಯ ರೋಗದ ಲಕ್ಷಣಗಳು/ಸಾಧ್ಯತೆಗಳು ಕಂಡು ಬಂದರೆ, ಅಂಥವರಿಗೆ 2 ಬಾರಿ ಸೂಕ್ಷ್ಮದರ್ಶಕ (MICROSCOPS) ದ ಮೂಲಕ ಕಫ ಪರೀಕ್ಷೆ ಮಾಡುವುದು ಅತೀ ಅಗತ್ಯ. ಈ ಪರೀಕ್ಷೆಯನ್ನು ನಿಯೋಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಹಾಗೂ ಪ್ರತೀ ವೈದ್ಯಕೀಯ (ಖಾಸಗಿ ಹಾಗೂ ಸರಕಾರಿ) ಕಾಲೇಜಿನಲ್ಲಿರುವ ಕಫ ಪರೀಕ್ಷಾ ಕೇಂದ್ರಗಳಲ್ಲಿ (DMC) LED FLUORECENT MICROSCOPY ವಿಧಾನದಿಂದ ಉಚಿತವಾಗಿ ಮಾಡಲಾಗುತ್ತದೆ. ರೋಗಿಯ ಕಫವನ್ನು ಮುಖ್ಯವಾಗಿ 2 ಬಾರಿ ಪಡೆದುಕೊಂಡು ಪರೀಕ್ಷೆ ಮಾಡಬೇಕು. ಮೊದಲನೇ ಬಾರಿ ಕಫದ ಮಾದರಿಯನ್ನು ಕಫ ಪರೀಕ್ಷಾ ಕೇಂದ್ರಕ್ಕೆ ಬಂದಾಗ (SPOT) ಹಾಗೂ ಎರಡನೇ ಕಫದ ಮಾದರಿಯನ್ನು ಮರುದಿನ (EARLY MORnING SPUTUM) ಬೆಳಗ್ಗೆ ಸಂಗ್ರಹಿಸಿ ಕಳಿಸುವುದು. ಈ 2 ಪರೀಕ್ಷೆಗಳಲ್ಲಿ ಯಾವುದೇ ಒಂದರಲ್ಲಿ ಸಹ ಕ್ರಿಮಿಗಳು ಕಂಡು ಬಂದಲ್ಲಿ ಅದನ್ನು SPUTUM POSITIVE ಕ್ಷಯ ರೋಗ ಎಂದು ಕರೆಯುತ್ತಾರೆ.
ಈ SPUTUM +VE ಫಲಿತಾಂಶದಿಂದ ವ್ಯಕ್ತಿಗೆ ಕ್ಷಯ ರೋಗ ಇರುವುದು ಪತ್ತೆಯಾದರೂ ಅಂತಹ ರೋಗಿಗಳಲ್ಲಿ ಈಗ ಸರಿ ಸುಮಾರು 20-25% ರೋಗಿಗಳು ಚಿಕಿತ್ಸೆಗೆ ಕೂಡುವ ಮುಖ್ಯವಾದ RIFAMPICIN ಔಷಧಕ್ಕೆ ಈಗಾಗಲೇ ನಿರೋಧಕ ಶಕ್ತಿ (RESISTANCE) ಹೊಂದಿಕೊಂಡಿರುವ ಸಾಧ್ಯತೆ ಇರುವುದರಿಂದ. ಅಂಥ ರೋಗಿಗಳಿಗೆ ಸದ್ಯಕ್ಕೆ CATACORY I ಚಿಕಿತ್ಸೆ (2HRE2 + 4 HRE) ದಿನಂಪ್ರತಿ ಕಫದ ಮಾದರಿಯನ್ನು ಹೊಸ ಮಾರ್ಗದರ್ಶನದ ಪ್ರಕಾರ CBNAAT (CATRIDGE BASED NULLIC ACID AMPLIFICATION TEST) ಫಲಿತಾಂಶಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಕಳಿಸಿ ಕೊಡುವುದು.
ಸೂಕ್ಷ್ಮದರ್ಶಕದ ಮೂಲಕ (MICROSCOPY) ಮಾಡುವ ರೋಗ ಪತ್ತೆ ವಿಧಾನವು ಉತ್ಕೃಷ್ಟ ವಿಧಾನವಲ್ಲದಿದ್ದರೂ ಸಾಮಾನ್ಯವಾಗಿ ನೂರು ಕ್ಷಯ ರೋಗಿಗಳ ಕಫ ಪರೀಕ್ಷೆ ಮಾಡಿದಾಗ ಕೇವಲ ಶೇಕಡ 50ರಿಂದ 60ರಷ್ಟು ರೋಗಿಗಳ ರೋಗವನ್ನು ಪತ್ತೆ ಹಚ್ಚಬಲ್ಲದು. ಈ ವಿಧಾನದಲ್ಲಿ 2 ಸಲ ಸಹ ಕಫದಲ್ಲಿ ಕ್ರಿಮಿಗಳು ಕಂಡು ಬರದೇ ಇದ್ದರೆ ರೋಗ ಲಕ್ಷಣಗಳಿರುವ ವ್ಯಕ್ತಿಗೆ ಒಂದು ಸುತ್ತು ANTIBIOTIC ಚಿಕಿತ್ಸೆ ನೀಡಿ ತದ ನಂತರ ಸಹ ಕಾಯಿಲೆಯ ಲಕ್ಷಣಗಳು ಮುಂದುವರಿದರೆ ಇತರೇ ಕಾಯಿಲೆ ಇರುವ ಸಾಧ್ಯತೆಗಳನ್ನು ಅಲ್ಲಗಳೆದು Chest X-ray ಹಾಗೂ CBNAAT ಮೂಲಕ ಕ್ಷಯ ರೋಗ ಇರುವುದನ್ನು ಖಚಿತ ಪಡಿಸಿಕೊಳ್ಳಬೇಕು.
ಸಣ್ಣ ಮಕ್ಕಳು ಕ್ಷಯರೋಗದ ಲಕ್ಷಣಗಳಿಂದ ಬಳಲುತ್ತಿದ್ದರೆ, ಡಯಾಬಿಟಿಸ್, ಕ್ಯಾನ್ಸರ್, HIV/AIDS ರೋಗಗಳು, ಅಪೌಷ್ಟಿಕಾಂಶದಿಂದ ಬಳಲುತ್ತಿರುವವರಿಗೆ, ಗರ್ಭಿಣಿಯರಿಗೆ DRUG RESISTANT TB ಲಕ್ಷಣಗಳನ್ನು ಹೊಂದಿರುವವರಿಗೆ CBNAAT ಎನ್ನುವ ಆಧುನಿಕ ಪರೀಕ್ಷಾ ವಿಧಾನದಿಂದ ಕಾಯಿಲೆಯ ಮೊದಲಿನ ಹಂತದಲ್ಲಿಯೇ ಪತ್ತೆ ಹಚ್ಚಬಹುದಾಗಿದೆ. ಇದು ಅತೀ ಸೂಕ್ಷ್ಮವಾದ GENO TYPIC ವಿಧಾನವಾಗಿದ್ದು ಈಗ ದೇಶದಾದ್ಯಂತ ಪ್ರತೀ ಜಿಲ್ಲಾ ಕೇಂದ್ರ ಆಸ್ಪತ್ರೆಗಳಲ್ಲಿ ಉಚಿತವಾಗಿ ರೋಗ ಪತ್ತೆಗೆ ಬಳಸಿಕೊಳ್ಳಬಹುದಾಗಿದೆ.
ಈ ಪರೀಕ್ಷೆಯಲ್ಲಿ ಕೇವಲ ಕ್ಷಯ ರೋಗ ಇರುವುದನ್ನು ಪತ್ತೆ ಮಾಡುವುದಲ್ಲದೇ ರೋಗ ಚಿಕಿತ್ಸೆಯ ಅತೀ ಮುಖ್ಯವಾದ RIFAMPICIN ಔಷಧಕ್ಕೆ ಕ್ರಿಮಿಗಳು ನಿರೋಧಕ ಶಕ್ತಿಯನ್ನು (RESISTANNT) ಹೊಂದಿಕೆಯೂ ಅಥವಾ ಇಲ್ಲ ಎನ್ನುವ ಫಲಿತಾಂಶವನ್ನು ಕೇವಲ 3 ಘಂಟೆಗಳಲ್ಲಿ ನೀಡುತ್ತದೆ.
MICROSCOPY ವಿಧಾನದಲ್ಲಿ ಕಫದಲ್ಲಿರುವ ಕ್ರಿಮಿಗಳನ್ನು ಪತ್ತೆ ಹಚ್ಚಲು ಸರಿ ಸುಮಾರು 10,000 ಕ್ರಿಮಿಗಳು 1m1 ಕಫದಲ್ಲಿರುವುದು ಅಗತ್ಯವಾಗಿರುತ್ತದೆ. ಆದರೆ CBNAAT ವಿಧಾನದಲ್ಲಿ ಕೇವಲ 50-100 ಕ್ರಿಮಿಗಳು 1m1 ಕಫದಲ್ಲಿದ್ದರೂ ಸಹ ಪತ್ತೆ ಮಾಡಬಹುದು.
CBNAAT ಉಪಕರಣದಲ್ಲಿ ಬರೀ ಕಫ ಪರೀಕ್ಷೆಯಲ್ಲದೇ, TISSUES, FLUIDS ಮತ್ತು GASTRIC ASPIRATE ನಿಂದ ಸಹ ಕ್ಷಯ ರೋಗವಿರುವುದನ್ನು ಖಾತರಿ ಪಡಿಸಿಕೊಳ್ಳಬಹುದು.
CBNAAT ಫಲಿತಾಂಶವು 3 ಬಗೆಯದಾಗಿರುತ್ತದೆ.
1. ಕ್ರಿಮಿಗಳು ಇದೆ ಅಥವಾ ಇಲ್ಲ.
2. ಕ್ರಿಮಿಗಳಿದ್ದರೆ RIFAMPICIN SENSITIUE ಅಥವಾ RESISTANT.
3. ಅನಿರ್ಧರಿತ ಫಲಿತಾಂಶ
– ಮುಂದಿನ ವಾರಕ್ಕೆ
– ಡಾ| ಅಶ್ವಿನಿ ಕುಮಾರ್ ಗೂಪಾಡಿ,
ನೋಡಲ್ ಅಧಿಕಾರಿ , ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮ,
ಕೆ.ಎಂ.ಸಿ. ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.