ಕಾರ್ಮಿಕರಿಗಾಗಿ ಸಿಪಿಐಎಂ ಸ್ಪರ್ಧೆ


Team Udayavani, Mar 25, 2018, 6:35 AM IST

Suresh-cpm.jpg

ಸಿಪಿಐಎಂ ಬೈಂದೂರು ವಲಯ ಕಾರ್ಯದರ್ಶಿ, ಜಿಲ್ಲಾ  ಕಾರ್ಯದರ್ಶಿ ಮಂಡಳಿ ಸದಸ್ಯ, ಕಟ್ಟಡ ಕಾರ್ಮಿಕರ ಸಂಘಟನೆಯ ರಾಜ್ಯ ಕಾರ್ಯದರ್ಶಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್‌ ಕಲಗಾರ್‌ ಅವರು ಈ ಬಾರಿ ಬೈಂದೂರಿನಲ್ಲಿ ಸಿಪಿಐಎಂನಿಂದ ಸ್ಪರ್ಧಿಸಲಿದ್ದಾರೆ.

ಸ್ಪರ್ಧೆ ಯಾಕಾಗಿ ?
ಬೈಂದೂರು ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಸಮಸ್ಯೆಗಳ ಆಗರವಾಗಿದೆ. ಗಂಗೊಳ್ಳಿ ಬಂದರನ್ನು ವಿಶ್ವದರ್ಜೆಗೆ ಏರಿಸಬಹುದು. ಆದರೆ ಮಲ್ಪೆಯಷ್ಟು ಕೂಡ ಅಭಿವೃದ್ಧಿಯಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಮೇಲ್ದರ್ಜೆಗೇರಿಲ್ಲ. ಸಾಕಷ್ಟು ಸಮಸ್ಯೆಗಳ ಕುರಿತು ಹೋರಾಟ ಮಾಡಿದ್ದೇವೆ. ಆದರೆ ಅಧಿಕಾರಾರೂಢರ ಸ್ಪಂದನೆಯೇ ಇಲ್ಲ. ಮೂಲಸೌಕರ್ಯಗಳೇ ಇಲ್ಲ. ಬೈಂದೂರಿನ ಅದಿರು ಹೊರಭಾಗಕ್ಕೆ ಸಾಗಾಟ ಮಾಡುವ ಬದಲು ಇಲ್ಲೇ ಕಾರ್ಖಾನೆ ಮಾಡಿದರೆ ಉದ್ಯೋಗ, ಉದ್ಯಮ ಎಲ್ಲವೂ ಆಗುತ್ತದೆ. ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್‌ ರೈಲು ನಿಲುಗಡೆ ಮಾಡಿಸುವ ಮೂಲಕ ಆಗಬಹುದಾದ ಪ್ರಯೋಜನಕ್ಕೂ ಜನ ಪ್ರತಿನಿಧಿಗಳು ಸ್ಪಂದಿಸಲಿಲ್ಲ. ಇವರಿಗೆ ಇಚ್ಛಾಶಕ್ತಿಯೇ ಇಲ್ಲ.

ಏನು ಹೋರಾಟ?
ಕುಂದಾಪುರ, ಬೈಂದೂರಿನಲ್ಲಿ ಕಾರ್ಮಿಕರ ಪರ, ರೈತರ ಬದುಕಿಗಾಗಿ ಹೆಚ್ಚು ಹೋರಾಟಗಳನ್ನು ಮಾಡಿದ್ದೇವೆ. ಹಂಚು ಕಾರ್ಖಾನೆಗಳ ಕಾರ್ಮಿಕರು ಅತಂತ್ರರಾಗಿದ್ದಾರೆ. ಉದ್ಯಮ ಕುಸಿದಿದೆ. ಮರಳು ಕಾರ್ಮಿಕರು ಸಮಸ್ಯೆಯಲ್ಲಿದ್ದಾರೆ. ಉಪ್ಪು ನೀರಿನ ಮರಳನ್ನೇ ಉಪಯೋಗಿಸಬೇಕಿದೆ. ಆದರೆ ಸಂಸದರು, ಸಚಿವರು, ಶಾಸಕರು ಈ ಕುರಿತು ಮಾತನಾಡುವುದೇ ಇಲ್ಲ. ನಮ್ಮ ಹೋರಾಟವನ್ನೇ ಗೇಲಿ ಮಾಡುತ್ತಾರೆ. ಆದ್ದರಿಂದ ಇಂತಹ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕೆಂಬ ಆಶಯದಿಂದ ಸ್ಪರ್ಧೆಗೆ ಹೊರಟಿದ್ದೇವೆ. ಕಾರ್ಮಿಕ ಕಲ್ಯಾಣ ಮಂಡಳಿಗಳಲ್ಲಿ ಸಿಬಂದಿ ಕೊರತೆಯಿದೆ. ಕಾರ್ಮಿಕರಿಗೆ ಸೌಲಭ್ಯಗಳು ದೊರೆಯುತ್ತಿಲ್ಲ. ನಿವೇಶನರಹಿತ ಸಾವಿರಾರು ಕಾರ್ಮಿಕರು ಬಾಡಿಗೆ ಮನೆಗಳಲ್ಲಿ ಇದ್ದಾರೆ. ಆದರೆ ಶಾಸಕರು ಇದಾವುದಕ್ಕೂ ಸ್ಪಂದಿಸುವುದಿಲ್ಲ. ಆದ್ದರಿಂದ ನಮ್ಮ ಸ್ಪರ್ಧೆ ಅನಿವಾರ್ಯ.

ಪೈಪೋಟಿ ನೀಡಬಲ್ಲುದೇ?
ಬಿಜೆಪಿ, ಕಾಂಗ್ರೆಸ್‌ ಉಳ್ಳವರ ಪಕ್ಷ. ಜನ ಪ್ರಬುದ್ಧರಾಗಿದ್ದು, ಮತವನ್ನು ಮಾರಿಕೊಳ್ಳಲಾರರು. ಹಣ ಹಂಚುವಿಕೆ ಇಲ್ಲಿ ಯಾವುದೇ ಪ್ರಭಾವ ಬೀಳದು. ಜನರನ್ನು ಮೋಸ ಮಾಡಲಾಗದು. ತ್ರಿಕೋನ ಸ್ಪರ್ಧೆ ಖಡಾಖಡಿ.

ಜೆಡಿಎಸ್‌ ಲೆಕ್ಕಕ್ಕಿಲ್ಲವೇ?
ಜೆಡಿಎಸ್‌ ಇಲ್ಲಿ ಸಂಘಟನೆಯಾಗಿ ಇಲ್ಲ. ಏಕವ್ಯಕ್ತಿ ಕೇಂದ್ರಿತ. ಆದ್ದರಿಂದ ನಮ್ಮ ಸ್ಪರ್ಧೆಗೆ ಪರಿಣಾಮ ಬೀರದು.

ಚುನಾವಣಾ ಸಿದ್ಧತೆ ಹೇಗಿದೆ?
ಕಾರ್ಮಿಕ ಸಂಘಟನೆಗಳಿಗೆ ತಿಳಿಸಿದ್ದೇವೆ. ಸಭೆಗಳನ್ನು ಮಾಡಿ ದ್ದೇವೆ. ಯುವಜನತೆಗೆ ಉದ್ಯೋಗ ಒದಗಿಸುವುದೇ ನಮ್ಮ ಗುರಿ. ಹಾಗಾಗಿ ನಮಗೆ ಇಲ್ಲಿ ತೊಡಕಿಲ್ಲ. ಪ್ರಬಲ ಸ್ಪರ್ಧೆ ಮೂಲಕ ನಮ್ಮ ಶಕ್ತಿ ಪ್ರದರ್ಶನ ಆಗಲಿದೆ.

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Vijayendra (2)

MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

lakshmi hebbalkar

Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್

10

BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್‌ ʼಛಾವಾʼ; ರಿಲೀಸ್‌ ಡೇಟ್‌ ಮುಂದೂಡಿಕೆ?

7-

ಹುಂಡಿ ಒಡೆದು ನಗದು ದೋಚಿ ಪರಾರಿಯಾದ ದುಷ್ಕರ್ಮಿಗಳು; ಎರಡು ಪ್ರತ್ಯೇಕ ಘಟನೆ ದಾಖಲು

1-qwwqewq

Udupi; ಬಜೆ ಡ್ಯಾಂ ಬಳಿ ಶಿಲಾಯುಗದ ನಿಲಿಸುಗಲ್ಲು ಪತ್ತೆ

US Result: ಡೊನಾಲ್ಡ್‌ ಟ್ರಂಪ್  ಗೆ‌ ಮತ್ತೊಮ್ಮೆ‌ ಅಧ್ಯಕ್ಷ ಪಟ್ಟ; ಪ್ರಧಾನಿ ಮೋದಿ ಅಭಿನಂದನೆ

US Result: ಡೊನಾಲ್ಡ್‌ Trumpಗೆ‌ ಮತ್ತೊಮ್ಮೆ‌ ಅಧ್ಯಕ್ಷ ಪಟ್ಟ; ಪ್ರಧಾನಿ ಮೋದಿ ಅಭಿನಂದನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Katpadi: ಅಂಚಿಗೆ ಬ್ಯಾರಿಕೇಡ್‌ ಇರಿಸಿ ರಿಬ್ಬನ್‌ ಅಳವಡಿಕೆ

9

Padubidri: ಹೆಜಮಾಡಿ ಬಂದರು ಮೀನಮೇಷ ಎಣಿಕೆ

8

Malpe: ಮೀನು ಒಣಗಿಸುವ ಜಾಗದ ಪಕ್ಕದಲ್ಲೇ ತ್ಯಾಜ್ಯರಾಶಿ!

7

Udupi: ಶ್ವಾನದಳಕ್ಕೆ ಬೆಲ್ಜಿಯಂ ಮೆಲಿನೋಯಸ್‌!

1-qwwqewq

Udupi; ಬಜೆ ಡ್ಯಾಂ ಬಳಿ ಶಿಲಾಯುಗದ ನಿಲಿಸುಗಲ್ಲು ಪತ್ತೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

10

Katpadi: ಅಂಚಿಗೆ ಬ್ಯಾರಿಕೇಡ್‌ ಇರಿಸಿ ರಿಬ್ಬನ್‌ ಅಳವಡಿಕೆ

Vijayendra (2)

MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ

8-

Kalaburagi: ಕಾರು- ಪಿಕಪ್ ಡಿಕ್ಕಿ: ಇಬ್ಬರು ಸಾವು

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

9

Padubidri: ಹೆಜಮಾಡಿ ಬಂದರು ಮೀನಮೇಷ ಎಣಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.