ಯಕ್ಷಗಾನದ ಮೇಲಿದ್ದ ಅಪವಾದ ಹೋಗಿದೆ: ಶಾಂತಾರಾಮ ಕುಡ್ವ
Team Udayavani, Mar 25, 2018, 6:45 AM IST
ಕುಂದಾಪುರ: ಒಂದು ಯಕ್ಷಗಾನ ನೋಡಿದರೆ 21 ರಂಗಪೂಜೆ ನೋಡಬೇಕು ಎಂದು ಹಿಂದಿನ ಕಾಲದ ಮೇಲ್ವರ್ಗದವರಿಂದ ನಿಷೇಧಕ್ಕೊಳಗಾಗಿದ್ದ ಯಕ್ಷಗಾನ ಇಂದು ಹರಕೆಯ ರೂಪದಲ್ಲಿ ಪ್ರದರ್ಶನವಾಗುತ್ತಿದೆ. ಯಕ್ಷಗಾನದ ಗೆಜ್ಜೆ ಕಟ್ಟುವುದು ಅವಮಾನ ಎಂಬಂತಹ ಸ್ಥಿತಿ ಕಳೆದಿದ್ದು ಸ್ನಾತಕೋತ್ತರ ಪದವೀಧರರು, ಉದ್ಯೋಗಿಗಳು ನಿತ್ಯವೂ ವೇಷ ಮಾಡುತ್ತಾ ವೃತ್ತಿಪರ ಕಲಾವಿದರಾಗಿದ್ದು ಅಸ್ಪೃಶ್ಯರ ಕಲೆ ಎಂಬ ಅಪವಾದ ತೊಲಗಿ ಶ್ರೇಷ್ಠ ಕಲೆ ಎಂಬ ನೆಗಳೆ ಬಂದಿದೆ ಎಂದು ಯಕ್ಷಗಾನ ವಿಮರ್ಶಕ ಎಂ. ಶಾಂತಾರಾಮ ಕುಡ್ವ ಮೂಡಬಿದಿರೆ ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಸಭಾಭವನದಲ್ಲಿ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ವತಿಯಿಂದ ಕಾಲೇಜಿನ ಸಹಯೋಗದಲ್ಲಿ ನಡೆಯುತ್ತಿರುವ ಮೂರು ದಿನಗಳ 13ನೆ ಅಖೀಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನದಲ್ಲಿ ಪಡುವಲಪಾಯ ಗೋಷ್ಠಿಯಲ್ಲಿ ಮಾತನಾಡಿದರು.
ವಿಸ್ತಾರವಾಗಿದೆ
ಐನೂರು ವರ್ಷಗಳ ಇತಿಹಾಸ ಹೊಂದಿದ ಯಕ್ಷಗಾನ ಕಳೆದ 50 ವರ್ಷಗಳಲ್ಲಿ ಸಾಕಷ್ಟು ಸುಧಾರಿಸಿದ್ದು ಕಲಾವಿದರ ಸಂಪಾದನೆಯಲ್ಲೂ ಏರಿಕೆಯಾಗಿದೆ. ತಿಟ್ಟುಗಳ ಭೇದ ಮರೆತು ಸಾಗರೋತ್ತರ ದೇಶಗಳಲ್ಲಿ ಪ್ರದರ್ಶನ ಕಾಣುತ್ತಾ ಸೀಮೋಲ್ಲಂಘನಗೈದಿದೆ. ತಮ್ಮ ಪಾತ್ರದ ಅವಧಿ ಮುಗಿದ ಬಳಿಕ ಇತರ ಕಲಾವಿದರ ಪಾತ್ರಪೋಷಣೆ ನೋಡಲೇಬೇಕಾದ ಶಿಸ್ತು ಮೊದಲಿದ್ದಂತೆ ಈಗ ಇಲ್ಲ. ಇದು ಕಲಾವಿದರ ಬೆಳವಣಿಗೆಗೆ ತೊಡಕಾಗುತ್ತಿದೆ. ಕಾಲಕ್ಕೆ ಹೊಂದಿಕೊಂಡು ಕಲೆ ಬೆಳೆದು ವಿಸ್ತಾರಗೊಂಡಿದೆ ಎಂದರು.
ಕಲಾವಿದರಿಗೆ ಹೊಣೆಗಾರಿಕೆ ಬೇಕು
ಹಿಂದಿನ ಕಾಲದ ಪ್ರಬುದ್ಧ ಕಲಾವಿದರು ಮಾಡಿದ ತಪ್ಪನ್ನು ಪ್ರೇಕ್ಷಕರು ಹೇಳಿದರೆ ಪ್ರಾಂಜಲಮನಸ್ಸಿನಿಂದ ಒಪ್ಪಿಕೊಂಡು ತಿದ್ದಿಕೊಳ್ಳುತ್ತಿದ್ದರು. ಆದರೆ ಇಂದು ಇಷ್ಟು ಮುಂದುವರಿದ ತಂತ್ರಜ್ಞನ ಇರುವಾಗಲೂ ಕಲಾವಿದ ಮಾಡಿದ ತಪ್ಪು ಕ್ಷಣಾರ್ಧದಲ್ಲಿ ಪ್ರಪಂಚಮುಖ ಕಂಡರೂ ತಿದ್ದಿಕೊಳ್ಳುವ ಗುಣ ಹೊಂದಿರುವಷ್ಟು ಕಲಾವಿದ ಪ್ರಬುದ್ಧನಾಗಿರಬೇಕು. ವಿಮರ್ಶೆ ಸೀÌಕರಿಸುವ ಗುಣ ಹಾಗೂ ಕಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಬೇಕು. ಪ್ರೇಕ್ಷಕರು ಕಲಾವಿದರ ಸಣ್ಣತಪ್ಪನ್ನು ಎಲ್ಲೆಡೆ ಹಾಸ್ಯಾಸ್ಪದ ಎನಿಸುವಂತೆ ಪಸರಿಸುವ ಬದಲು ಕಲಾವಿದರ ಜತೆ ಚರ್ಚಿಸಿ ಪರಿಹಾರ ಕಾಣಿಸಿದರೆ ಯಕ್ಷಗಾನ ಸದಾ ವಿವಾದಕ್ಕೊಳಗಾಗಿ ಯಕ್ಷಗಾನದ ನೋಡುಗರ ದೃಷ್ಟಿಯಲ್ಲಿ ಅಪಮೌಲ್ಯಕ್ಕೊಳಗಾಗುವುದನ್ನು ತಪ್ಪಿಸಬಹುದು ಎಂದರು.
ತುಮಕೂರು ವಿವಿ ಪ್ರಾಧ್ಯಾಪಕ ಸಿಬಂತಿ ಪದ್ಮನಾಭ ಕೆ.ವಿ. ಮಾತನಾಡಿ, ಪ್ರಯೋಗಶೀಲತೆ ಹಾಗೂ ನಮನೀಯತೆಗಳ ಕಾರಣದಿಂದ ಶತಮಾನಗಳ ಕಾಲಕ ಬದುಕುಳಿದಿರುವ ಕಲೆಗಳಿದ್ದರೆ ಅಂತಹ ಕಲೆಗಳ ಪೈಕಿ ಯಕ್ಷಗಾನಕ್ಕೆ ಅಗ್ರಸ್ಥಾನವಿದೆ. ಆಯಾ ಕಾಲಘಟ್ಟ ಬಯಸುವ ಬದಲಾವಣೆಗೆ ತನ್ನನ್ನು ಒಡ್ಡಿಕೊಂಡು ಅಸ್ಮಿತೆ ಕಾಪಾಡಿಕೊಂಡ ಕಲೆಯಾಗಿದೆ. ಯಕ್ಷಗಾನ ಬಾಹ್ಯ ಜಗತ್ತಿನ ಆಗುಹೋಗುಗಳನ್ನು ಗಣಿಸದೇ ಕೇವಲ ಗತಾನುಗತಿಕೆಯಲ್ಲಿ ಮುಳುಗಿರಲು ಸಾಧ್ಯವಿಲ್ಲ. ಆಧುನಿಕ ಪ್ರಸಂಗಗಳಲ್ಲೂ ಯಕ್ಷಗಾನೀಯತೆ ಉಳಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ವಿದ್ವಾಂಸ ಡಾ| ರಾಘವ ನಂಬಿಯಾರ್ ವಹಿಸಿದ್ದರು. ತುಮಕೂರು ವಿವಿ ಸಹಾಯಕ ಪ್ರಾಧ್ಯಾಪಕ ಸತೀಶ್ ಕುಮಾರ್, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎನ್. ಪಂಜಾಜೆ, ಸಮ್ಮೇಳನಾಧ್ಯಕ್ಷ ಕಂದಾವರ ರಘುರಾಮ ಶೆಟ್ಟಿ ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ತಿಟ್ಟುಗಳ ರಂಗು
ಯಕ್ಷಗಾನ ಸಮ್ಮೇಳನದಲ್ಲಿ ತೆಂಕು ಬಡಗು ಮೂಡಲಪಾಯ ಪಡುವಲಪಾಯ ಎಂಬ ವೈವಿಧ್ಯ ತಿಟ್ಟುಗಳ ಯಕ್ಷಗಾನ ಪ್ರದರ್ಶನ, ಗೊಂಬೆಯಾಟ ಪ್ರದರ್ಶನ ನಡೆಯಿತು. ಆರಂಭದ ದಿನ ಸಾಗರದ ಮಹಮ್ಮಾಯಿ ಮಹಿಳಾ ಯಕ್ಷಗಾನ ಮಂಡಳಿಯವರಿಂದ ಕಂಸವಧೆ ಬಡಗುತಿಟ್ಟು ಯಕ್ಷಗಾನ, ಬಸವೇಶ್ವರ ಸಣ್ಣಾಟ ಸಂಘ ಗೋಕಾಕ ಇವರಿಂದ ಶವಶಕ್ತಿ ಸಣ್ಣಾಟ ಪ್ರದರ್ಶನ, ಉಡುಪಿ ಚೇರ್ಕಾಡಿಯ ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳದಿಂದ ದೀವಟಿಗೆ ಬೆಳಕಿನಲ್ಲಿ ಪುಂಗಿ ಶ್ರುತಿಯಲ್ಲಿ ಯಕ್ಷಗಾನ ಬಯಲಾಟ ಪೂರ್ವರಂಗ ಪ್ರದರ್ಶನ, ಮೈಸೂರಿನ ನಂಜನಗೂಡಿನ ಶ್ರೀರಾಮೇಶ್ವರ ಕೃಪಾಪೋಷಿತ ಯಕ್ಷಗಾನ ಗೊಂಬೆಮೇಳದವರಿಂದ ಸತ್ಯ ಹರಿಶ್ಚಂದ್ರ ಸೂತ್ರದ ಗೊಂಬೆಯಾಟ ಪ್ರದರ್ಶನ, ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರದವರಿಂದ ಬಡಗುತಿಟ್ಟಿನ ಯಕ್ಷಗಾನ ರತಿ ಕಲ್ಯಾಣದ ಪ್ರದರ್ಶನ ನಡೆಯಿತು.
ಇಂದು ಸಮಾರೋಪ
ಮಾ. 25ರ ಸಮಾರೋಪ ಸಮಾರಂಭದಲ್ಲಿ ಮಣಿಪಾಲ ವಿ.ವಿ.ಯ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾಗವಹಿಸಲಿದ್ದಾರೆ. ಆ ದಿನ ಗರುಡ ಗರ್ವಭಂಗ ತಾಳಮದ್ದಳೆ, ಸುದರ್ಶನ ವಿಜಯ ಯಕ್ಷಗಾನ, ದಾಶರಥಿ ದರ್ಶನ, ಕರ್ಣಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಯಕ್ಷಗಾನ ಸಾಧಕರಾದ ಗೋವಿಂದ ನಾಯಕ್ (ತೆಂಕು), ಕೆ. ಸದಾನಂದ ಐತಾಳ (ಬಡಗು), ರವೀಂದ್ರ ತಲಕಾಡು (ಮೂಡಲಪಾಯ- ಮೈಸೂರು), ಎಚ್.ಸಿ. ಶಿವಬುದ್ಧಿ (ಗೊಂಬೆಯಾಟ), ಆನಂದ ಸಿದ್ದವೀರಪ್ಪ ಮಗುದಂ (ಶ್ರೀಕೃಷ್ಣ ಪಾರಿಜಾತ), ಬಸವರಾಜ ಬಾ. ಮದೀಹಳ್ಳಿ (ಸಣ್ಣಾಟ), ವೀರಭದ್ರಪ್ಪ ಶಿವಪುತ್ರಪ್ಪ ಹರ್ತಿ (ದೊಡ್ಡಾಟ- ಗೋಕಾಕ), ನೀಲಪ್ಪ ಹೊನ್ನಪ್ಪ ಜೋಗಿ (ಬಯಲಾಟ), ಸುರೇಂದ್ರ ಪಣಿಯೂರು (ಸಂಘಟನೆ), ಕರ್ಗಲ್ಲು ವಿಶ್ವೇಶ್ವರ ಭಟ್ (ಜೀವಮಾನ ಸಾಧನೆ) ಅವರಿಗೆ ಸಮ್ಮಾನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Teacher: ಟೀ ಫಾರ್ ಟೀಚರ್
US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ…ಟ್ರಂಪ್
Nivin Pauly: ಲೈಂಗಿಕ ದೌರ್ಜನ್ಯ ಪ್ರಕರಣ; ʼಪ್ರೇಮಂʼ ನಟ ನಿವಿನ್ ಪೌಲಿಗೆ ಕ್ಲೀನ್ ಚಿಟ್
Hubballi: ಹೆಸರು ಬೆಳೆಗಾರರ ಸಮಸ್ಯೆ ನಿವಾರಣೆಗೆ ಕೇಂದ್ರದಿಂದ ಸ್ಪಂದನೆ: ಪ್ರಹ್ಲಾದ ಜೋಶಿ
R Ashok ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿರುವುದು ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಅವಮಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.