ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಶೂಟಿಂಗ್ ಮನು ಭಾಕರ್‌ಗೆ ಚಿನ್ನ
Team Udayavani, Mar 25, 2018, 6:40 AM IST
ಸಿಡ್ನಿ: ಪ್ರಚಂಡ ಫಾರ್ಮ್ನಲ್ಲಿರುವ ಪಿಸ್ತೂಲ್ ತಾರೆ ಮನು ಭಾಕರ್ ಅವರು ಸಿಡ್ನಿಯಲ್ಲಿ ಸಾಗುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಶೂಟಿಂಗ್‌ನ ವನಿತೆಯರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಮೆಕ್ಸಿಕೋದಲ್ಲಿ ಇತ್ತೀಚೆಗೆ ನಡೆದ ಸೀನಿಯರ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಅವಳಿ ಚಿನ್ನ ಗೆದ್ದು ಸುದ್ದಿ ಮಾಡಿದ್ದ 16ರ ಹರೆಯದ ಮನು ಥಾçಲಂಡಿನ ಕನ್ಯಾಕಾರ್ನ್ ಹಿರುಪೋಯಮ್ ಅವರನ್ನು ಸೋಲಿಸಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದರು. ಮನು 235.9 ಅಂಕ ಪಡೆದು ಚಿನ್ನ ತನ್ನದಾಗಿಸಿಕೊಂಡರೆ ಹಿರುಪೋಯಮ್ ಬೆಳ್ಳಿ ಮತ್ತು ಚೀನದ ಕೈಮಾನ್ ಲು ಕಂಚು ಪಡೆದರು. ಮನು ಸ್ಪರ್ಧಿಸಿದ್ದ ವಿಭಾಗದಲ್ಲಿ ಆಡಿದ್ದ ಭಾರತದ ಇನ್ನೋರ್ವ ಶೂಟರ್ ದೇವಾಂಶಿ ರಾಣಾ ಫೈನಲಿಗೆ ಅರ್ಹತೆ ಗಳಿಸಿದ್ದರೂ ಪದಕ ಗೆಲ್ಲಲು ವಿಫಲರಾಗಿ ನಿರಾಶೆ ಅನುಭವಿಸಿದರು.
ಪುರುಷರ 10 ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತದ ಗೌರವ್ ರಾಣ ಬೆಳ್ಳಿ ಗೆದ್ದರೆ ಅನ್ಮೋಲ್ ಜೈನ್ ಕಂಚಿನ ಪದಕ ಪಡೆದರು. ರಾಣ 233.9 ಅಂಕ ಪಡೆದರೆ ಅನ್ಮೋಲ್ 215.1 ಅಂಕ ಪಡೆಯಲಷ್ಟೇ ಶಕ್ತರಾಗಿದ್ದರು. ಚಿನ್ನ ಗೆದ್ದ ಚೀನದ ಝೆಹವೊ ವಾಂಗ್ 242.5 ಅಂಕ ಗಳಿಸಿದ್ದರು.
ಮನು, ರಾಣಾ ಮತ್ತು ಮಹಿಮಾ ಅಗರ್ವಾಲ್ ಅವರನ್ನು ಒಳಗೊಂಡ ಭಾರತೀಯ ತಂಡವು 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಜಯಿಸಿದ್ದರೆ ಚೀನ ಬೆಳ್ಳಿ ಮತ್ತು ಥಾçಲಂಡ್ ಕಂಚು ಜಯಿಸಿತು. ಭಾರತದ ಚೀಮಾ ರಾಣಾ ಮತ್ತು ಅನ್ಮೋಲ್ ಅವರು ತಂಡ ಸ್ಪರ್ಧೆಯಲ್ಲಿ ಚೀನದ ಲಿಯು, ವಾಂಗ್ ಮತ್ತು ತಾಂಗ್ ಅವರನ್ನು ಕೆಡಹಿ ಚಿನ್ನ ಜಯಿಸಿದೆ.ಭಾರತ ಇಷ್ಟರವರೆಗೆ ಈ ಕೂಟದಲ್ಲಿ ಐದು ಚಿನ್ನ ಸಹಿತ 11 ಪದಕ ಪಡೆದಿದೆ. ಚೀನ 13 ಪದಕ ಗೆದ್ದು ಅಗ್ರಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.