“ಮೂಲ ಸೌಕರ್ಯ ನೀಡುವಲ್ಲಿ ಕಾಂಗ್ರೆಸ್‌ ವಿಫಲ’


Team Udayavani, Mar 25, 2018, 7:30 AM IST

15.jpg

ಬೆಳ್ತಂಗಡಿ: ದೀರ್ಘ‌ ಕಾಲ ಕೇಂದ್ರ, ರಾಜ್ಯಗಳಲ್ಲಿ ಕಾಂಗ್ರೆಸ್‌ ಆಡಳಿತ ನಡೆಸಿದ್ದರೂ ಮೂಲ ಸೌಕರ್ಯಗಳನ್ನು ನೀಡಲು ವಿಫಲವಾಗಿದೆ. ವಾಜಪೇಯಿ ಹಾಗೂ ಮೋದಿ ಆಡಳಿತಾವಧಿಯಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದರು.

ಅವರು ಇಲ್ಲಿನ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ವಿಧಾನಸಭಾ ಚುನಾವಣೆ ತಯಾರಿ ಬಗ್ಗೆ ಶನಿವಾರ ನಡೆದ ಕಾರ್ಯಕರ್ತರ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಿಜೆಪಿ ಸದಾ ಸಿದ್ಧವಿದೆ. ಆದರೆ ಕಾಂಗ್ರೆಸ್‌ ಹಿಂದೇಟು ಹಾಕುತ್ತಿದ್ದು ಲೋಕಸಭೆ, ರಾಜ್ಯಸಭೆಗಳಲ್ಲಿ ಕೋಲಾಹಲ ವೆಬ್ಬಿಸುತ್ತಿದೆ. ಹಗರಣಗಳ ಆರಂಭ ಎಲ್ಲಿ ಆಗಿದೆ, ಇದರ ಹಿಂದೆ ಯಾರೆಲ್ಲ ಇದ್ದಾರೆ, ಸಾಲ ಕೊಟ್ಟವರು ಯಾರು, ಅದರ ಫಲಾನುಭವಿಗಳು ಯಾರು, ದೇಶದಿಂದ ಯಾವಾಗ ಪಲಾಯನ ಮಾಡಿದ್ದಾರೆ ಎಂದು ಜನತೆಗೆ ತಿಳಿಸಲು ಸಿದ್ಧ ಎಂದರು. ಕೇಂದ್ರದ ಯೋಜನೆಗಳ ಮಾಹಿತಿಯನ್ನು ಪ್ರತಿಯೊಬ್ಬರ ಮನೆಗೆ ತಲುಪುವಂತೆ ಮಾಡಬೇಕು. ದಿಲ್ಲಿಯಲ್ಲೂ, ಬೆಂಗಳೂರಿನಲ್ಲೂ ಬಿಜೆಪಿ ಸರಕಾರ ಇರಬೇಕು ಎಂದವರು ಹೇಳಿದರು.

ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯ ನೂರು ಮಂಜುನಾಥ್‌ ಮಾತನಾಡಿ, ರಾಜ್ಯದಿಂದ ಕಾಂಗ್ರೆಸ್‌ ನಿರ್ಮೂಲನೆ ಮಾಡಬೇಕು ಎಂದರು. ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಸಮ್ಮಾನಿಸಲಾಯಿತು. ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಪತ್‌ ಬಿ. ಸುವರ್ಣ ಪ್ರಕಟಿಸಿರುವ ಮಾಹಿತಿ ಕೈಪಿಡಿ ನಮೋ ಭಾರತವನ್ನು ಧರ್ಮೇಂದ್ರ ಪ್ರಧಾನ್‌ ಬಿಡುಗಡೆಗೊಳಿಸಿದರು. ಸಂಸದ ನಳಿನ್‌, ಗಂಗಾಧರ ಗೌಡ, ಪ್ರಭಾಕರ ಬಂಗೇರ, ಮೋನಪ್ಪ ಭಂಡಾರಿ, ಕ್ಯಾ| ಬೃಜೇಶ್‌ ಚೌಟ, ಕಸ್ತೂರಿ ಪಂಜ, ಶೈಲಜಾ ಭಟ್‌ ಉಪಸ್ಥಿತರಿದ್ದರು. ರಂಜನ್‌ ಜಿ. ಗೌಡ ಸ್ವಾಗತಿಸಿದರು. ವಿಜಯಗೌಡ, ವಿಜಯ ಗೌಡ ಅತ್ತಾಜೆ ನಿರ್ವಹಿಸಿದರು.

ಪತ್ರಕರ್ತರಿಗೆ ನಿರ್ಬಂಧ
ಕಾರ್ಯಕರ್ತರ ಸಭೆ ಉದ್ಘಾಟನೆ ಬಳಿಕ ಕೇಂದ್ರ ಸಚಿವರು ಮಾತನಾಡಿದರು. ಬಳಿಕ ಪತ್ರಕರ್ತರನ್ನು ಸಭಾಭವನದಿಂದ ಹೊರಗೆ ತೆರಳುವಂತೆ ತಿಳಿಸಲಾಯಿತು. ಬಳಿಕ ಬೂತ್‌ ಸಮಿತಿ ಸದಸ್ಯರು, ಶಕ್ತಿ ಕೇಂದ್ರದ 55, ಮಹಾ ಶಕ್ತಿಕೇಂದ್ರದ 8,241 ಬೂತ್‌ ಸಮಿತಿ ಅಧ್ಯಕ್ಷರು, ಪಂಚಾಯತ್‌ ಸಮಿತಿ ಸದಸ್ಯರಿಗೆ ಸುಮಾರು 2 ತಾಸುಗಳ ಕಾಲ ಕೇಂದ್ರ ಸಚಿವರ ನೇತೃತ್ವದಲ್ಲಿ ಬೈಠಕ್‌ ನಡೆಯಿತು.

ರಾಹುಲ್‌ ವಚನಕ್ಕೆ ಆಯನೂರು ಟೀಕೆ
ರಾಹುಲ್‌ ಗಾಂಧಿ, ಪ್ರಧಾನಿ ಮೋದಿಯವ ರನ್ನು ಅನುಕರಿಸಲು ಹೋಗುತ್ತಾರೆ. ರಾಜ್ಯಕ್ಕೂ ಬಂದಿದ್ದಾರೆ, ಅವರು ಕಾಲಿಟ್ಟ ಕಡೆಯೆಲ್ಲ ಕಾಂಗ್ರೆಸ್‌ಗೆ ಸೋಲಾಗಲಿದೆ. ಮೋದಿ ಕನ್ನಡ ದಲ್ಲಿ ಮಾತನಾಡುತ್ತಿದ್ದಾರೆಂದು ರಾಹುಲ್‌ ಬಸವಣ್ಣನ ವಚನವನ್ನು ಅಸಂಬದ್ಧವಾಗಿ ಉಲ್ಲೇಖೀಸಿದ್ದು ಮೊಬೈಲ್‌ಗ‌ಳಲ್ಲಿ ಹರಿದಾಡು ತ್ತಿದೆ. ರಾಹುಲ್‌ ತಪ್ಪಿದ ವೇಳೆ ಮುಖ್ಯಮಂತ್ರಿ ಗಳೂ ಸರಿಪಡಿಸುವ ಕಾರ್ಯ ನಡೆಸಲಿಲ್ಲ ಎಂದು ಆಯನೂರು ಮಂಜುನಾಥ್‌ ತಿಳಿದರು. 

ಟಾಪ್ ನ್ಯೂಸ್

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

4-uv-fusion

Childhood Times: ಕಳೆದು ಹೋದ ಸಮಯ

Ekanath Shindhe

Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

8

Keerthy Suresh: ಮದುವೆ ಸುದ್ದಿ ಬೆನ್ನಲ್ಲೇ ಆಂಟೋನಿ ಜತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್‌

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

ಕರಾವಳಿಯಲ್ಲಿ ಈ ಬಾರಿ ವಾಡಿಕೆಯಂತೆ ಚಳಿ

Mangaluru: ಕರಾವಳಿಯಲ್ಲಿ ಈ ಬಾರಿ ವಾಡಿಕೆಯಂತೆ ಚಳಿ

ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Fraud Case: ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

5

Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್‌

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

6-

Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ

4

Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.