ತಲಪಾಡಿ: ಮೀನಿನ ಲಾರಿಯಲ್ಲಿ ಮರಳು ಸಾಗಾಟ
Team Udayavani, Mar 25, 2018, 6:00 AM IST
ಉಳ್ಳಾಲ: ಹಸಿ ಮೀನು ಸಾಗಿಸುವ ಲಾರಿಯೊಳಗೆ ಪ್ಲಾಸ್ಟಿಕ್ ಟ್ರೇ ಬಳಸಿ, ಅದರಲ್ಲಿ ಮರಳು ತುಂಬಿಸಿ ಸಾಗಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಉಳ್ಳಾಲ ಪೊಲೀಸರು ಕಂಟೈನರ್ ಲಾರಿ, ಟಿಪ್ಪರ್ ಮತ್ತು ನಾಲ್ಕು ಯುನಿಟ್ ಹೊಗೆ ಸಹಿತ ಒಟ್ಟು 15ಲ. ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಗಡಿಭಾಗ ತಲಪಾಡಿ ಹೊಗೆಹಿತ್ಲು ಬಳಿ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ನಡೆಸುವ ಉದ್ದೇಶದಿಂದ ಟಿಪ್ಪರ್ ಲಾರಿ ಮೂಲಕ ಉಳ್ಳಾಲ ವ್ಯಾಪ್ತಿಯ ವಿವಿಧ ನದಿ ತೀರದ ದಡದಿಂದ ಮರಳು ತಂದು, ತಲಪಾಡಿ ಸಮೀಪ ದಾಸ್ತಾನಿರಿಸುತ್ತಿದ್ದರು. ಅಲ್ಲಿಂದ ಮೀನು ಸಾಗಾಟದ ವಾಹನದಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದರು.
ಕಮಿಷನರ್ ಟಿ. ಆರ್.ಸುರೇಶ್ ನಿರ್ದೇಶನ, ಡಿಸಿಪಿ ಹನುಮಂತ ರಾಯ, ಉಮಾ ಪ್ರಶಾಂತ್ ಅವರ ಮಾರ್ಗದರ್ಶನ, ಎಸಿಪಿ ಕೆ. ರಾಮರಾವ್ ನಿರ್ದೇಶನದಲ್ಲಿ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಕೆ.ಆರ್. ಮತ್ತು ಎಎಸ್‌ಐ ಮಂಜಪ್ಪ, ಸಿಬಂದಿ ಲಿಂಗರಾಜ್, ರಂಜಿತ್, ಪ್ರಶಾಂತ್, ಪೂರ್ವಾಚಾರ್ ನೇತೃತ್ವದ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kotekar Robbery Case: ಮುಂಬಯಿ, ತಮಿಳುನಾಡಿನಲ್ಲಿ ಮತ್ತೆ ನಾಲ್ವರು ವಶಕ್ಕೆ?
Kotekar Robbery: ಮುರುಗೆಂಡಿಗೆ ಚಿನ್ನ ಮತ್ತು ಫಿಯೆಟ್‌ನದ್ದೇ ಮೋಹ !
Mangaluru: ಕೆನರಾ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ
Mangaluru: ವ್ಯವಹಾರ ಮನಸ್ತಾಪ: ಹಣಕ್ಕಾಗಿ ಬೆದರಿಕೆ, ದೂರು ದಾಖಲು
Karnataka Sports Meet: ಈಜು… ಚಿಂತನ್ ಶೆಟ್ಟಿ , ರಚನಾ ಬಂಗಾರ ಬೇಟೆ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್