ಸುಪ್ರೀಂ ತೀರ್ಪನ್ನು ಗೌರವಿಸಿ
Team Udayavani, Mar 25, 2018, 7:00 AM IST
ಜೈಪುರ: ಅಯೋಧ್ಯೆಯ ರಾಮಜನ್ಮಭೂಮಿ- ಬಾಬರಿ ಮಸೀದಿಯಂಥ ಸೂಕ್ಷ್ಮ ವಿವಾದಗಳಿಗೆ ಪರಿಹಾರ ಒದಗಿಸುವುದು ಸುಪ್ರೀಂ ಕೋರ್ಟ್‌ಗೆ ಬಿಟ್ಟಿದ್ದು. ನ್ಯಾಯಾಲಯ ನೀಡುವ ತೀರ್ಪನ್ನು ಎಲ್ಲ ಧಾರ್ಮಿಕ ನಾಯಕರೂ ಗೌರವಿಸಬೇಕು ಎಂದು ರಾಜಸ್ಥಾನದ ಅಜ್ಮಿರ್ ದರ್ಗಾದ ಆಧ್ಯಾತ್ಮಿಕ ಮುಖ್ಯಸ್ಥರಾಗಿರುವ ಜೈನುಲ್ ಆಬಿದೀನ್ ಅಲಿ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂ ಆಗಲಿ, ಮುಸ್ಲಿಮರೇ ಆಗಲಿ, ಮತಾಂಧತೆ ಎನ್ನುವುದು ಯಾವತ್ತೂ ಯಾವುದಕ್ಕೂ ಪರಿಹಾರ ಒದಗಿಸಲಾರದು. ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವ ಯತ್ನವೂ ವಿಫಲವಾಗಿದೆ. ಹಾಗಾಗಿ, ದೇಶದ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲರೂ ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ಗೌರವಿಸಬೇಕು ಎಂದೂ ಖಾನ್ ಹೇಳಿದ್ದಾರೆ.
ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರೂಸ್ ಹಿನ್ನೆಲೆಯಲ್ಲಿ ವಿವಿಧ ಮಸೀದಿಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರತಿನಿಧಿಗಳೂ ಭಾಗಿಯಾಗಿದ್ದರು.
ಯುವಕರಿಗೆ ಬೆಳೆಯಲು ಹಾಗೂ ಏಳಿಗೆಯಾಗುವಂಥ ಅವಕಾಶಗಳನ್ನು ನೀಡಬೇಕು. ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳು ಇಂಥ ವಿಚಾರದಲ್ಲಿ ರಾಜಕೀಯ ಮಾಡಬಾರದು. ಯುವಕರ ಮನಸ್ಸಲ್ಲಿ ಮತಾಂಧತೆ ತುಂಬಬಾರದು. ಏಕೆಂದರೆ, ಇಂಥ ರಾಜಕೀಯವು ಸಮಾಜದಲ್ಲಿ ದ್ವೇಷಕ್ಕೆ ದಾರಿ ಮಾಡಿಕೊಡುತ್ತದೆ ಎಂದೂ ಖಾನ್ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.