ಕೇಂಬ್ರಿಡ್ಜ್ ಅನಾಲಿಟಿಕಾ ಕಚೇರಿಗಳ ಮೇಲೆ ದಾಳಿ
Team Udayavani, Mar 25, 2018, 7:00 AM IST
ಲಂಡನ್: ಬ್ರಿಟನ್‌ನ ಮಾಹಿತಿ ಆಯುಕ್ತರ ಕಚೇರಿಯ ಸುಮಾರು 18 ಅಧಿಕಾರಿಗಳು, ಲಂಡನ್‌ನಲ್ಲಿರುವ ಅನಾಲಿಟಿಕಾ ಸಂಸ್ಥೆಯ ಪ್ರಧಾನ ಮತ್ತು ಅಧೀನ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ನ್ಯಾಯಾಲಯದಿಂದ ಅನುಮತಿ ಪಡೆದ ಅಧಿಕಾರಿಗಳು, ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆಗೆ ಕಚೇರಿಗಳಿಗೆ ತೆರಳಿ, ಮುಂಜಾನೆ 3 ಗಂಟೆಯವರೆಗೂ ತಪಾಸಣೆ ನಡೆಸಿ, ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯಕ್ಕೆ ವಶಪಡಿಸಿಕೊಂಡಿರುವ ದಾಖಲೆಗಳ ಪರಿಶೀಲನೆ ನಂತರ, ಮುಂದಿನ ಕಾರ್ಯ ಯೋಜನೆ ರೂಪಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸಾದ್ ವಿರುದ್ಧ ಮತ್ತೆ ರಾಹುಲ್ ಕಿಡಿ: ಏತನ್ಮಧ್ಯೆ, ಕೇಂಬ್ರಿಡ್ಜ್ ಅನಾಲಿಟಿಕಾ ಜತೆ ತಮ್ಮ ನಂಟಿದೆಯೆಂದು ಆರೋಪಿಸಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿರುದ್ಧ ಪುನಃ ಕಿಡಿ ಕಾರಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಸಾದ್ ಅವರು ತಮ್ಮ ಇಲಾಖೆಯ ಲೋಪ ದೋಷಗಳನ್ನು ಮೊದಲು ತಿದ್ದಿಕೊಳ್ಳಲಿ ಎಂದಿದ್ದಾರೆ. ನ್ಯಾಯಾಧೀಶರ ಕೊರತೆಯಿಂದಾಗಿ ಸುಪ್ರೀಂ ಕೋರ್ಟ್ ಸೇರಿದಂತೆ ದೇಶದ ನಾನಾ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು ಇತ್ಯರ್ಥವಾಗದೇ ವರ್ಷಗಳಿಂದ ಉಳಿದಿದ್ದು, ಸಚಿವರು ಇಂಥ ಗಂಭೀರ ವಿಚಾರಗಳನ್ನು ಮೊದಲು ಸರಿಪಡಿಸಲಿ ಎಂದು ಟೀಕಿಸಿದ್ದಾರೆ.
“ಬುಕ್’ ಹಾಳೆ ಹರಿದ “ಟೆಸ್ಲಾ’ ಮಾಲೀಕ
ಹೆಸರಾಂತ ಆಟೋ ಮೊಬೈಲ್ ಸಂಸ್ಥೆ “ಟೆಸ್ಲಾ’ ಹಾಗೂ ಖಾಸಗಿ ರಾಕೆಟ್ ತಯಾರಿಕಾ ಸಂಸ್ಥೆ “ಸ್ಪೇಸ್ ಎಕ್ಸ್’ ಕಂಪೆನಿಗಳ ಮಾಲೀಕ, ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ತಮ್ಮ ಕಂಪೆನಿಗಳ ಫೇಸ್‌ಬುಕ್ ಪುಟಗಳನ್ನು ರದ್ದು ಮಾಡಿದ್ದಾರೆ. ಅನಾಲಿಟಿಕಾ ಹಗರಣ ಬಯಲಾದ ಬೆನ್ನಲ್ಲೇ, ತಮ್ಮ ಕಂಪೆನಿಗಳ ಅಧಿಕೃತ ಫೇಸ್‌ಬುಕ್ ಪುಟ ರದ್ದು ಪಡಿಸಲು ಯಾರಾದರೂ ಕೋರಿದರೆ ಅದನ್ನು ಸಾಕಾರಗೊಳಿ ಸುವುದಾಗಿ ಹೇಳಿದ್ದರು. ಇತ್ತೀಚೆಗೆ, ವ್ಯಕ್ತಿ ಯೊಬ್ಬ ಪುಟ ರದ್ದುಗೊಳಿಸುವಂತೆ ಮಸ್ಕ್ಗೆ ಟ್ವೀಟ್ ಮಾಡಿದ್ದ. ಹಾಗಾಗಿ, ಕೊಟ್ಟ ಮಾತಿನಂತೆ ಈ ಪುಟಗಳನ್ನು ರದ್ದು ಮಾಡಿದ್ದಾರೆ ಮಸ್ಕ್. ಇದರಿಂದ ಸುಮಾರು 50 ಲಕ್ಷ ಫಾಲೋವರ್‌ಗಳನ್ನು ಅವರು ಕಳೆದುಕೊಂಡಿದ್ದಾರೆ.
28 ಲಕ್ಷ ಕೋಟಿ ನಷ್ಟ: ಕೇಂಬ್ರಿಡ್ಜ್ ಅನಾಲಿಟಿಕಾದಿಂದಾಗಿ, ಫೇಸ್‌ಬುಕ್ ಸಮೂಹ ಸಂಸ್ಥೆಗಳಿಗೆ ಕಳೆದೊಂದು ವಾರದಿಂದ ಈವರೆಗೆ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಬರೋಬ್ಬರಿ 28.33 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.