ಮಳೆಗಾಲಕ್ಕೂ ಮುನ್ನ ಶೀಂಬ್ರ-ಕೊಳಲಗಿರಿ ಸೇತುವೆ ಸಿದ್ಧ ?
Team Udayavani, Mar 26, 2018, 6:00 AM IST
ಉಡುಪಿ: ಶೀಂಬ್ರ ಮತ್ತು ಕೊಳಲಗಿರಿಯನ್ನು ಸಂಪರ್ಕಿಸುವ ಸೇತುವೆ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಮೇ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ.
ಸುಮಾರು 393 ಮೀಟರ್ ಉದ್ದ, 5.5 ಮೀ. ಅಗಲದ ಈ ಸೇತುವೆ ಸೇವೆಗೆ ಲಭ್ಯವಾಗಿದ್ದೇ ಆದಲ್ಲಿ ಮಣಿಪಾಲಕ್ಕೆ ಈಗ 20 ಕಿ.ಮೀ. ಸುತ್ತು ಬಳಸಿ ಬರುವ ಬದಲು ಕೇವಲ 2 ಕಿ.ಮೀ.ಯಲ್ಲಿ ತಲುಪಬಹುದಾಗಿದೆ.
ಶೀಂಬ್ರದ ಸ್ವರ್ಣಾನದಿ ದಡದಿಂದ ಸೇತುವೆ ಸಂಪರ್ಕಿಸಲು ನಡೆಯುತ್ತಿರುವ ಕಾಮಗಾರಿ
ಎಂಟು ಸ್ಲ್ಯಾಬ್ ಗಳು ಪೂರ್ಣ
ಸೇತುವೆಗೆ 2016ರಲ್ಲಿ ಶಿಲಾನ್ಯಾಸ ನೆರವೇರಿಸಲಾಗಿದ್ದು ಎಂಟು ಸ್ಲ್ಯಾಬ್ ನಿರ್ಮಾಣ ಮುಕ್ತಾಯಗೊಂಡಿದೆ. ಕಲ್‌ವರ್ಟ್ ಕಾಮಗಾರಿ ಭರದಿಂದ ಸಾಗಿದೆ.ಪ್ಯಾರಾಪಿಟ್ ವಾಲ್ ನಿರ್ಮಾಣ ಆರಂಭ ಗೊಂಡಿದೆ. ಶೀಂಬ್ರ ಸಂಪರ್ಕಿಸುವ ಕೊನೆಯ ಕಾಮಗಾರಿ ಇದೀಗ ಮುಕ್ತಾಯ ಹಂತದಲ್ಲಿದೆ, ಹಣದ ಸಮಸ್ಯೆಯಿಲ್ಲ. ಕೆಲ ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಡಿ.ವಿ. ಹೆಗ್ಡೆ “ಉದಯವಾಣಿ’ಗೆ ತಿಳಿಸಿದ್ದಾರೆ.
ಭೂಸ್ವಾಧೀನ ಸೇತುವೆಯ ಎರಡೂ ಬದಿಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿವೆ. ಕಾಮಗಾರಿ ಆರಂಭದ ಹೊತ್ತಿನಲ್ಲಿ ಸ್ಥಳೀಯರು ಸ್ವಯಂ ಪ್ರೇರಣೆಯಿಂದ ಭೂಮಿ ಬಿಟ್ಟುಕೊಡುತ್ತೇವೆಂದು ಹೇಳಿದ್ದರೂ, ಈಗ ಸರಕಾರದಿಂದ ಬರುವ ಹಣ ಸ್ವೀಕರಿಸಲು ಮುಂದಾಗಿದ್ದಾರೆ. ಭೂಸ್ವಾಧೀನಕ್ಕೆ 50 ಲ.ರೂ. ಕಾಯ್ದಿರಿಸಲಾಗಿದ್ದು, ಈಗ ಅದು 3 ಕೋ.ರೂ. ತಲುಪುವ ಅಂದಾಜಿದೆ.
ಉದ್ಘಾಟನೆಗೆ ಸಚಿವರ ತವಕ
ವಿಧಾನಸಭಾ ಚುನಾವಣೆ ಯಾವುದೇ ಕ್ಷಣದಲ್ಲೂ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತ್ವರಿತವಾಗಿ ಸೇತುವೆ ಉದ್ಘಾಟನೆಗೆ ಉದ್ದೇಶಿಸಿದ್ದಾರೆ. ಈ ಬಗ್ಗೆ ಅವರು ಇತ್ತೀಚೆಗೆ ಉಡುಪಿ ಪಂಚಾಯತ್ ಸಭಾಂಗಣದಲ್ಲಿ ನಡೆದ ಎಂಜಿನಿಯರ್ ಸಭೆಯಲ್ಲಿ ಹೇಳಿದ್ದಾರೆ. ಇನ್ನು , ತ್ವರಿತಗತಿ ಕಾಮಗಾರಿ ನಡೆಸಿದರೂ ಸೇತುವೆ ಕಾಮಗಾರಿ ಮುಕ್ತಾಯಕ್ಕೆ ಮೇ 31ರವರೆಗೆ ಸಮಯ ಬೇಕಾಗುತ್ತದೆ ಎಂದು ಎಂಜಿನಿಯರ್ ತಿಳಿಸಿದ್ದಾರೆ.
– ಆಸ್ಟ್ರೋ ಮೋಹನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.