ಮಿಯಾಮಿ ಮಾಸ್ಟರ್ ಓಪನ್ ಟೆನಿಸ್ ಸೋತ ಫೆಡರರ್
Team Udayavani, Mar 26, 2018, 6:35 AM IST
ಮಿಯಾಮಿ: ಇತ್ತೀಚೆಗಷ್ಟೇ ನಂ. 1 ಸ್ಥಾನಕ್ಕೇರಿದ್ದ ಖ್ಯಾತ ಸ್ವಿಸ್ ಆಟಗಾರ ರೋಜರ್ ಫೆಡರರ್ ಮಿಯಾಮಿ ಮಾಸ್ಟರ್ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಆಸ್ಟ್ರೇಲಿಯದ ಥಾನಸಿ ಕೊಕಿನಕಿಸ್ ಅವರೆದುರು ಸೋತಿದ್ದಾರೆ. ಈ ಸೋಲಿನೊಂದಿಗೆ ಅವರಿಗೆ ನಂಬರ್ ವನ್ ಸ್ಥಾನ ಕಳೆದುಕೊಳ್ಳುವ ಭೀತಿಯೂ ಎದುರಾಗಿದೆ.
ಬಲಾಡ್ಯ ಆಟಗಾರನೆದುರು ಅಂಕಣಕ್ಕಿಳಿದಿದ್ದ ವಿಶ್ವ ರ್ಯಾಂಕಿಂಗ್ನಲ್ಲಿ 175ನೇ ಸ್ಥಾನಿ ಕೊಕಿನಕಿಸ್ ದ್ವಿತೀಯ ಸುತ್ತಿನಲ್ಲಿ ಹೊರಬೀಳುವ ಸಂಕಟದಲ್ಲಿದ್ದರು. ಆದರೆ ಸಂದರ್ಭ ಅವರ ಪರವಾಗಿ ನಿಂತಿತು. ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಅವರು, 20 ಬಾರಿಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ ಟೆನಿಸ್ ದಿಗ್ಗಜ ಫೆಡರರ್ ಅವರನ್ನು 3-6, 6-3, 7-6 (7/4) ಅಂತರದಿಂದ ಸೋಲಿಸಿದರು.
ಪಂದ್ಯದ ಬಳಿಕ ಪ್ರತಿಕ್ರಿಯಿಸಿರುವ ಕೊಕಿನಕಿಸ್, ಆಂತರಿಕವಾಗಿ ನನಗೆ ತುಂಬಾ ಖುಷಿಯಾಗುತ್ತಿದೆ. ನಾನು ನಿಜಕ್ಕೂ ರೋಮಾಂಚನಗೊಂಡಿದ್ದೇನೆ. ಆದರೆ ನಾನಿವತ್ತು ಯೋಚಿಸಿದ್ದಕಿಂತಲೂ ಶಾಂತವಾಗಿದ್ದೇನೆ’ ಎಂದಿದ್ದಾರೆ.
ಆಸ್ಟ್ರೇಲಿಯನ್ ಓಪನ್ನಲ್ಲಿ ತನ್ನ 20ನೇ ಗ್ರ್ಯಾನ್ ಸ್ಲಾಮ್ ಕಿರೀಟ ಮುಡಿಗೇರಿಸಿಕೊಂಡಿದ್ದ ಫೆಡರರ್ ಮರಳಿ ನಂ. 1 ಸ್ಥಾನಕ್ಕೇರಿದ್ದರು. ಕಳೆದ ಫೆಬ್ರವರಿಯಲ್ಲಿ ರೋಟರ್ಡಮ್ನಲ್ಲಿ ಅಸೋಸಿಯೇಶನ್ ಆಫ್ ಟೆನಿಸ್ ಪ್ರೊಫೆಶನಲ್ಸ್ ಪ್ರಶಸ್ತಿ ಗೆದ್ದ ಬಳಿಕ ಅವರಿಗೆ ನಂಬರ್ ವನ್ ರ್ಯಾಂಕ್ ಲಭಿಸಿತ್ತು. ನಂ. 1 ಸ್ಥಾನವನ್ನು ಉಳಿಸಿಕೊಳ್ಳಲು ಫೆಡರರ್ ಈ ಕೂಟದ ಕ್ವಾರ್ಟರ್ ಫೈನಲ್ ಹಂತದವರೆಗೂ ತಲುಪಬೇಕಿತ್ತು. ಆದರೆ ಇದೀಗ ಸೋತಿರುವ ಕಾರಣ ಹೊಸ ರ್ಯಾಂಕಿಂಗ್ ಪಟ್ಟಿ ಪ್ರಕಟವಾದರೆ ಅದರಲ್ಲಿ ಸ್ಪೇನ್ ಬಲಾಡ್ಯ ರಫೆಲ್ ನಡಾಲ್ ನಂ. 1 ರ್ಯಾಂಕ್ಗೆàರುವ ಸಾಧ್ಯತೆಗಳಿವೆ.
“ಈ ಪಂದ್ಯದ ಬಳಿಕ ನಾನು ಸೋಲಿಗೆ ಅರ್ಹನಾಗಿದ್ದೇನೆ. ಹಾಗೆಂದೇ ನನಗನ್ನಿಸುತ್ತಿದೆ. ಒಟ್ಟಾರೆ ಇದು ತುಂಬಾ ಕೆಟ್ಟ ಅನುಭವವಾಗಿದೆ. ಸಂತೋಷ ಪಡುವಷ್ಟು ಯಾವುದೇ ಸಾಧನೆ ಇಂದು ನಾನು ಮಾಡಿಲ್ಲ. ಕೆಲವು ಬಾರಿ ಇಂಥ ಪಂದ್ಯಗಳು ಎದುರಾಗುತ್ತವೆ’ ಎಂದು ಹತಾಶೆಯಿಂದ ನುಡಿದ ಫೆಡರರ್, ಕಳೆದ ಬಾರಿ ಇಂಡಿಯಾನ ವೇಲ್ಸ್ ಮತ್ತು ಮಿಯಾಮಿ ಓಪನ್ ಗೆದ್ದ ಬಳಿಕ ಆವೆಮಣ್ಣಿನಾಂಗಣದಿಂದ ದೂರ ಸರಿದಂತೆ ಈ ಋತುವಿನಿಂದ ದೂರ ಇರುವುದಾಗಿ ಘೋಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.