ಬುದ್ಧಿಜೀವಿಗಳಿಂದ ದೇಶ ಹಾಳು: ಹೆಗಡೆ
Team Udayavani, Mar 26, 2018, 6:55 AM IST
ಯಾದಗಿರಿ: ದೇಶ ಹಾಳು ಮಾಡಿದವರು ವಿದೇಶಿಗರಲ್ಲ, ಎಡಬಿಡಂಗಿಗಳು, ಮಂದ ಬುದ್ಧಿ ಜೀವಿಗಳು ಎಂದು ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಖಾತೆ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ನಗರದಲ್ಲಿ ಹಿಂದೂ ಜಾಗರಣಾ ವೇದಿಕೆ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧಿ ಜೀವಿಗಳು, ವಿಚಾರವಂತರ ಬಲಿಗೆ ಕುರಿಯಾಗಿ ಹಿಂದೂ ಸಮಾಜ ಬೇಕಾಗಿದೆ. ಆದ್ದರಿಂದ ಹಿಂದೂಗಳು ಹುಲಿಯಾಗಿ ಎದ್ದು ನಿಲ್ಲಬೇಕು ಎಂದರು.
ರಾಜ್ಯದಲ್ಲಿ 23 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ. ಆದರೆ ಪಂಜಿನ ಮೆರವಣಿಗೆ ಮಾಡುವ ಗೌರಿ ಸಂತಾನ ಎಲ್ಲಿ ಹೋಗಿದೆ? ಜಾತಿ ಹೆಸರು ಹೇಳಿ ದೇಶ ಒಡೆದ ಕಾಂಗ್ರೆಸ್‌ನವರಿಗೆ ದೇಶ ಕಟ್ಟುವ ಬುದ್ಧಿ ಬರಲಿಲ್ಲ. ಅವರ ದೇಶ ಒಡೆಯುವ ನೀತಿಯನ್ನು ಡಾ| ಬಿ.ಆರ್. ಅಂಬೇಡ್ಕರ್ ವಿರೋ ಧಿಸಿದಾಗ ಅವರನ್ನು ಸಹ ಕಾಂಗ್ರೆಸ್ ಮಟ್ಟ ಹಾಕಿತ್ತು. ದಲಿತರ ಹೆಸರಿನಲ್ಲಿ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಧರ್ಮ ಒಡೆಯಲು ಜಾತಿಗಳನ್ನು ಎತ್ತಿ ಕಟ್ಟಿದ ಕಾಂಗ್ರೆಸ್ ಈಗ ಒಳ ಜಾತಿಗಳನ್ನು ಒಡೆದು ಹಾಕುತ್ತಿರುವುದು ದುರಂತವಾಗಿದೆ. ಇದರ ವಿರುದ್ಧ ಹಿಂದೂ ಕಾರ್ಯಕರ್ತರು ಹೋರಾಟ ನಡೆಸಬೇಕು. ದೇಶ, ಧರ್ಮ ಗೊತ್ತಿಲ್ಲ. ಸೋ ಕಾಲ್ಡ್ ಸಭ್ಯರು ಹಿಂದೂ ಧರ್ಮದ ಕುರಿತು ಮಾತ ನಾಡುತ್ತಿದ್ದಾರೆ ಎಂದು ಗುಡುಗಿದರು.
ಸಮಾಜ ಒಡೆಯುವ ಛಿ(ಸಿ)ದ್ಧರಾಮಯ್ಯ ರಾಜ್ಯಕ್ಕೆ ಕಂಟಕ ವಾಗಿದ್ದು, ಅವರಿಗೆ ಉತ್ತರ ಕೊಡುವ ಕಾಲ ಸನಿಹ ಬಂದಿದೆ. ಸಮಾಜ ಒಡೆಯುವವರು ಯಾರೇ ಆಗಲಿ ಅವರ ಅಪ್ಪ-ಅಮ್ಮ ಕ್ಷಮಿಸುವುದಿಲ್ಲ. ರಜಾಕರ ಆಕ್ರಮಣ, ಲವ್ ಜಿಹಾದ್‌ನಲ್ಲಿ ಬಲಿಯಾದವರ ಆಕ್ರಂದನ ಕೇಳಿಸುತ್ತಿದೆ. ಆದ್ರೆ ಸಭ್ಯರ ಕಿವಿಗೆ ಇದು ಕೇಳಿಸುತ್ತಿಲ್ಲ. ಸಭ್ಯರ ಮುಖ ನೋಡಬಾರದು. ಹಿಂದೂಗಳು ಬದುಕಿದ್ರೆ ದೇಶ ಬದುಕುತ್ತದೆ. ಹಿಂದೂ ಸಮಾಜ ಒಗ್ಗಟ್ಟಾಗಿದ್ದರೆ ಸಭ್ಯರ ಸಮಾಜ, ಮನೆತನಕ್ಕೆ ಗೌರವ ಸಿಗುತ್ತದೆ. ಇತಿಹಾಸ ಮರೆತು ಸಮಾಜ ಬದುಕಲು ಸಾಧ್ಯವಿಲ್ಲ. ಇತಿಹಾಸದ ಘಟನೆಗಳನ್ನು ಪಾಠವೆಂದು ತಿಳಿದುಕೊಂಡು ಹಿಂದೂ ಕಾರ್ಯಕರ್ತರು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ
Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!
Communalization ಜತೆ ಆರೆಸ್ಸೆಸ್ ಆರಂಭ: ಬಿಳಿಮಲೆ ಹೇಳಿದ್ದು ವಿವಾದ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.