ವಿಚಿತ್ರ ವ್ಯಕ್ತಿಯ ತಿಕ್ಕಲುತನ
Team Udayavani, Mar 26, 2018, 10:15 AM IST
ಲಾಸ್ ಏಂಜಲೀಸ್: ಭೂಮಿ ಚಪ್ಪಟೆಗಿದೆಯೋ ಗುಂಡಗಿದೆಯೋ ಎಂಬ ಜಿಜ್ಞಾಸೆ ಶತಶತಮಾನಗಳ ಹಿಂದೆಯೇ ಉದಯಿಸಿ, ಅನಂತರದ ವಿಜ್ಞಾನದ ಸಾಕ್ಷ್ಯಾಧಾರಗಳಿಂದ ಅಸ್ತಂಗತವೂ ಆಗಿದೆ. ಆದರೆ, ಅಮೆರಿಕದ ಮೈಕ್ ಹ್ಯೂಗ್ಸ್ ಎಂಬ ಈ ಪುಣ್ಯಾತ್ಮನಿಗೆ ಇದು ಬಗೆಹರಿಯಲಾಗದ ಗೊಂದಲವಾಗಿತ್ತಂತೆ. ತನ್ನೀ ಗೊಂದಲ ಪರಿಹಾರಕ್ಕೆ ಆತ ಮಾಡಿದ್ದೇನು ಗೊತ್ತೇ? ತಾನೇ ರಾಕೆಟ್ ತಯಾರಿಸಿ ಅದರಲ್ಲಿ ಕೂತು ಆಕಾಶದತ್ತ ಹಾರಿದ್ದಾನೆ!
ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ತಕ್ಕಮಟ್ಟಿಗೆ ರಾಕೆಟ್ ಸೈನ್ಸ್ ಕಲಿತಿದ್ದ ಈತ ನಿಜವಾಗಿಯೂ ಆಕಾಶಕ್ಕೆ ಚಿಮ್ಮಿದ್ದಾನೆ. ಲಾಸ್ ಏಂಜಲೀಸ್‌ನಿಂದ 200 ಕಿ.ಮೀ. ದೂರವಿರುವ ಮರಳುಗಾಡು ಪ್ರದೇಶವಾದ ಆ್ಯಂಬೋಯ್ ಪ್ರಾಂತ್ಯದಿಂದ ಗಗನಕ್ಕೆ ಹಾರಿದ ಆತನ ರಾಕೆಟ್ ಕೇವಲ 1,875 ಅಡಿಯಷ್ಟೆತ್ತರಕ್ಕೆ ಮಾತ್ರ ಹಾರಿ ಮತ್ತೆ ಬಂದು ಭೂಮಿಗೆ ಬಿದ್ದಿದೆ. ಪುಣ್ಯಕ್ಕೆ ಆತನಿಗೇನೂ ಆಗಿಲ್ಲ. ಪ್ಯಾರಾಚೂಟ್ ಇದ್ದಿದ್ದರಿಂದ ಬಚಾವಾಗಿದ್ದಾನೆ ಈ ಆಸಾಮಿ. ಅದೇನೇ ಇರಲಿ, ತನ್ನೀ ದುಸ್ಸಾಹಸಕ್ಕಾಗಿ ಭಾರೀ ಸುದ್ದಿಯಾಗಿರುವ ಆತ ಹುಚ್ಚ ಮೈಕ್ ಎಂಬ ಕುಖ್ಯಾತಿಗೂ ಕಾರಣವಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.