ಅದಮಾರು ಮಠದಲ್ಲಿ ಶ್ರೀ ರಾಮ ನವಮಿ ಉತ್ಸವ ಆಚರಣೆ
Team Udayavani, Mar 26, 2018, 5:07 PM IST
ಮುಂಬಯಿ: ಉಡುಪಿಯ ಅಷ್ಟ ಮಠಗಳಲ್ಲೊಂದಾದ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯಲ್ಲಿ 22ನೇ ವಾರ್ಷಿಕ ಶ್ರೀ ರಾಮ ನವಮಿ ಉತ್ಸವವನ್ನು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ. 25 ರಂದು ಆಚರಿಸಲಾಯಿತು.
ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಮಠದಲ್ಲಿ ಪ್ರತಿಷ್ಠಾಪಿತ ಶ್ರೀದೇವರಿಗೆ ಪೂಜೆ ನೆರವೇರಿಸಿ ವಿಧಿವತ್ತಾಗಿ ವಾರ್ಷಿಕ ರಾಮನವಮಿಯನ್ನು ಆಚರಿಸಿ, ಆಶೀರ್ವಚನ ನೀಡಿ, ವಿಶೇಷ ಮಂತ್ರೋಪದೇಶಗೈದು, ಬರುವ ವರ್ಷ ರಾಮ ನವಮಿ ಉತ್ಸವದ ಶುಭವಸರದ ಒಂದು ದಿವಸದಲ್ಲಿ ಈ ಮಂತ್ರವನ್ನು ಭಗವಂತನಿಗೆ ಯಜ್ಞ ಮೂಲಕ ಅರ್ಪಿಸಬೇಕು. ಶ್ರೀ ರಾಮ ನವಮಿಯು ಹೇಮಲಂಬಿನಾಮ ಸಂವತ್ಸರದಲ್ಲಿ ಬರುವಂತಹ ಒಂದು ದೊಡ್ಡ ಆಚರಣೆ. ಗುಡಿಪಾಡ್ವದಿಂದ ರಾಮ ನವಮಿ ತನಕ ಮುಂಬಯಿಗರು ಈ ಉತ್ಸವಕ್ಕೆ ಕಳೆದ ಎಂಟು ದಿನಗಳಿಂದ ಪೂರ್ವಸಿದ್ಧತೆ ನಡೆಸಿ ಇಂದಿಲ್ಲಿ ಅದ್ದೂರಿಯಾಗಿ ಶ್ರೀ ರಾಮ ದೇವರನ್ನು ಆರಾಧಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಿದ್ದಾರೆ. ಈ ಹೊಸ ವರ್ಷದಲ್ಲಿ ಮುಂಬಯಿಗರಿಗೆ ಆಯುರಾರೋಗ್ಯ ಭರಿತ ನೆಮ್ಮದಿಯ ಬಾಳನ್ನು ಶ್ರೀ ರಾಮನು ಪ್ರಾಪ್ತಿಸಲಿ ಎಂದು ಅನುಗ್ರಹಿಸಿ ಶುಭಹಾರೈಸಿದರು.
ರಾಮ ನವಮಿ ನಿಮಿತ್ತ ದಿನಪೂರ್ತಿಯಾಗಿ ಜರಗಿದ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಶ್ರೀನಿವಾಸ ಭಟ್ ಅವರಿಂದ ರಾಮಾಯಣ ಹರಿಕಥೆ, ಪಲ್ಲಕ್ಕಿ ಉತ್ಸವ, ಸುರೇಶ್ ಭಟ್ ಕುಂಟಾಡಿ ಅವರಿಂದ ಉತ್ಸಹ ಬಲಿ ನೆರವೇರಿದ ಬಳಿಕ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಗಜರಥವನ್ನೆಳೆದು ರಥೋತ್ಸವಕ್ಕೆ ಚಾಲನೆ ನೀಡಿದರು. ತದನಂತರ ರಜತ ಪಲ್ಲಕಿ ಉತ್ಸವ, ಸ್ವಾಮೀಜಿ ಅವರಿಂದ ವಿಶೇಷ ಪ್ರವಚನ, ರಾತ್ರಿ ಮಹಾಪೂಜೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಾರೊRàಪ್ ಕನ್ನಡಿಗರ ಬಳಗ ಮತ್ತು ವಿಠಲ ಭಜನ ಮಂಡಳಿಗಳಿಂದ ಹರಿ ಭಜನೆ ಹಾಗೂ ವಾಗೆªàವಿ ಭಜನಾ ಮಂಡಳಿ ದೇವರ ನಾಮ ಪಠನಗೈದರು. ದಿನೇಶ್ ವಿನೋದ್ ಕೋಟ್ಯಾನ್ ಬಳಗದಿಂದ ಸ್ಯಾಕೊÕಫೋನ್ ವಾದನ ನಡೆಯಿತು. ಅಮಿತಾ ಕಲಾ ಮಂದಿರ ಮೀರಾರೊಡ್ ತಂಡ ಮತ್ತು ಅರ್ಪಿತಾ ಪೂಜಾರಿ ಇವರಿಂದ ಭರತನಾಟ್ಯ ಹಾಗೂ ನಾಗೇಶ್ ಮೀರಾರೋಡ್ ತಂಡದಿಂದ ಲವ-ಕುಶ ಯಕ್ಷಗಾನ ಪ್ರದರ್ಶನಗೊಂಡಿತು.
ವಾಸುದೇವ ಉಡುಪ, ಕೃಷ್ಣರಾಜ ಉಪಾಧ್ಯಾಯ ವಾಮಂಜೂರು, ಶಂಕರ ನಾರಾಯಣ ಕಲ್ಯಾಣಿತ್ತಾಯ, ಶ್ರೀಧರ ಭಟ್, ಶ್ರೀಪತಿ ಭಟ್ ಅಂಬೋಲಿ ಸೇರಿದಂತೆ ಅನೇಕ ಪುರೋಹಿತರು, ಭಕ್ತಾಭಿಮಾನಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅದಮಾರು ಮಠ ಮುಂಬಯಿ ಶಾಖೆಯ ದಿವಾಣ ಲಕ್ಷಿ ¾àನಾರಾಯಣ ಮುಚ್ಚಿಂತ್ತಾಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಠದ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ. ರಾಜೇಶ್ ರಾವ್ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.